ಬಿಡುಗಡೆಗೆ ಸಜ್ಜುಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300

Written By:
Recommended Video - Watch Now!
Bangalore Traffic Police Rides With Illegal Number Plate - DriveSpark

ದೇಶಿಯ ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ಬೈಕ್ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಗುಡ್ ಬೈ ಹೇಳಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಸೂಪರ್ ಬೈಕ್‌ಗಳ ನಿರ್ಮಾಣದತ್ತ ಮಹತ್ವದ ಹೆಜ್ಜೆಯಿರಿಸಿದ್ದು, ಮೊದಲ ಹಂತದಲ್ಲೇ ಅಗ್ಗದ ಬೆಲೆಯ ಮೊಜೊ ಯುಟಿ300 ಬೈಕ್ ಅನ್ನು ಬಿಡುಗಡೆ ಮಾಡುತ್ತಿದೆ.

ಬಿಡುಗಡೆಗೆ ಸಜ್ಜಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300

ಮಹೀಂದ್ರಾ ನಿರ್ಮಾಣ ಮಾಡಿರುವ ಮೊಜೊ ಯುಟಿ300 ಬೈಕ್‌ಗಳು ಈಗಾಗಲೇ ಡೀಲರ್ಸ್ ಯಾರ್ಡ್ ತಲುಪಿದ್ದು, ಇನ್ನು ಕೆಲವೇ ದಿನಗಳಲ್ಲಿ ಗ್ರಾಹಕರ ಕೈ ತಲುಪಲಿದೆ. ಈ ಬಗ್ಗೆ ಮಹೀಂದ್ರಾ ಕೂಡಾ ಮಾಹಿತಿ ಬಿಡುಗಡೆ ಮಾಡಿದ್ದು, ಜನಪ್ರಿಯ ಬಜಾಜ್ ಡೋಮಿನಾರ್ 400 ಹಿಂದಿಕ್ಕುವ ತವಕದಲ್ಲಿದೆ.

ಬಿಡುಗಡೆಗೆ ಸಜ್ಜಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300

ಹೀಗಾಗಿ ಮಹೀಂದ್ರಾ ಬಿಡುಗಡೆ ಮಾಡಲಿರುವ ಮೊಜೊ ಯುಟಿ300 ಮಾದರಿಯು ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದ್ದು, ಈ ಹಿಂದಿನ ಯುಟಿ300 ಮಾದರಿಗಿಂತ ಹೆಚ್ಚುವರಿ ಗುಣಮಟ್ಟದ ಬಾಹ್ಯ ವಿನ್ಯಾಸಗಳನ್ನು ಹೊಂದಿದೆ.

ಬಿಡುಗಡೆಗೆ ಸಜ್ಜಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300

ಸ್ಪಾಟ್ ಟೆಸ್ಟಿಂಗ್ ವೇಳೆ ಮೊಜೊ ಯುಟಿ300 ಬೈಕ್ ವಿನ್ಯಾಸಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದ್ದು, ಬೈಕ್ ಮುಂಭಾಗದಲ್ಲಿ ನೀಡಲಾಗಿರುವ ಕರ್ನವರ್ಷನಲ್ ಟೆಲಿಸ್ಕೋಪಿಕ್ ಪೋರ್ಕ್ಸ್, ಫ್ಯೂಲ್ ಇಂಜಕ್ಷನ್ ಟೆಕ್ನಾಲಜಿ ಜೋಡಣೆ ಮಾಡಲಾಗಿದೆ.

ಬಿಡುಗಡೆಗೆ ಸಜ್ಜಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300

ಇನ್ನು ಮಹೀಂದ್ರಾ ಸಿದ್ದಪಡಿಸಿರುವ ಅಗ್ಗದ ಬೆಲೆಯ ಮೊಜೊ ಯುಟಿ300 ಬೈಕ್ ಮಾದರಿಯು ಈ ಹಿಂದಿನ ಮಾದರಿಗಿಂತಲೂ ಕಡಿಮೆ ದರಕ್ಕೆ ಲಭ್ಯವಾಗಲಿದ್ದು, ಈ ಹಿನ್ನೆಲೆ ಕೆಲವು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳನ್ನು ಕೈ ಬಿಡಲಾಗಿದೆ.

Trending On DriveSpark Kannada:

ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?

ಈ ಹತ್ತು ಸಾಮಾನ್ಯ ಕಾರಣಗಳು ಒಂದು ದುರಂತಕ್ಕೆ ಕಾರಣವಾಗಬಲ್ಲವು...

ಕಾನೂನು ಬಾಹಿರ ಬೈಕ್ ಮಾಡಿಫೈಗೆ ಬ್ರೇಕ್ ಹಾಕಲು ಬೆಂಗಳೂರು ಪೊಲೀಸರಿಂದ ಹೊಸ ಅಸ್ತ್ರ..

ಬಿಡುಗಡೆಗೆ ಸಜ್ಜಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300

ಈ ಮೂಲಕ ಅಗ್ಗದ ಬೆಲೆಯಲ್ಲೇ ಉತ್ತಮ ಬೈಕ್ ಸಿದ್ದಪಡಿಸುವಲ್ಲಿ ವಿನೂತನ ಪ್ರಯತ್ನ ಮಾಡಿರುವ ಮಹೀಂದ್ರಾ ಸಂಸ್ಥೆಯು ಎಂಆರ್‌ಎಫ್ ಟೈರ್, ರಿ ಡಿಸೈನ್ ಸೀಟುಗಳು ಮತ್ತು ರೆಟ್ರೋ ಲುಕ್ ಮಾದರಿಯ ಹೆಡ್ ಲ್ಯಾಂಪ್‌ಗಳು ಸೂಪರ್ ಬೈಕ್ ಸವಾರರನ್ನು ಸೆಳೆಯುವಲ್ಲಿ ಸಹಕಾರಿಯಾಗಲಿವೆ.

ಬಿಡುಗಡೆಗೆ ಸಜ್ಜಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300

ಎಂಜಿನ್ ಸಾಮರ್ಥ್ಯ

295-ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ ಮೊಜೊ ಯುಟಿ300 ಬೈಕ್ ಮಾದರಿಯು 27-ಬಿಎಚ್‌ಪಿ ಮತ್ತು 30-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು ಎಂದು ಮಹೀಂದ್ರಾ ಹೇಳಿಕೊಂಡಿದೆ.

ಬಿಡುಗಡೆಗೆ ಸಜ್ಜಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300

ಬೆಲೆ (ಎಕ್ಸ್ ಶೋರಂ ಪ್ರಕಾರ)

ಮೊಜೊ ಯುಟಿ300 ಬೈಕ್ ಬೆಲೆ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದರೂ ಕೆಲ ಮೂಲಗಳ ಪ್ರಕಾರ ಹೊಸ ಬೈಕ್ ಮಾದರಿಯು ರೂ.1.4 ಲಕ್ಷದಿಂದ ರೂ.1.5 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಬಿಡುಗಡೆಗೆ ಸಜ್ಜಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300

ಡೋಮಿನಾರ್ 400 ಪ್ರತಿಸ್ಪರ್ಧಿಯಾಗುತ್ತಾ?

ಒಂದು ವೇಳೆ ಬೆಲೆ ವಿಚಾರವಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದೇ ಆದಲ್ಲಿ ಮೊಜೊ ಯುಟಿ300 ಮಾದರಿಯು ಡೋಮಿನಾರ್ 400 ಹಿಂದಿಕ್ಕುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ಬಿಡುಗಡೆಗೆ ಸಜ್ಜಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಸಂಪೂರ್ಣ ಮುಗ್ಗರಿಸಿದ್ದ ಮಹೀಂದ್ರಾ ಸದ್ಯ ಮೊಜೊ ಯುಟಿ300 ಮೂಲಕ ಮತ್ತೆ ಹೊಸ ಅಧ್ಯಾಯ ಶುರು ಮಾಡುವ ತವಕದಲ್ಲಿದ್ದು, ಫೆಬ್ರುವರಿ ಮೊದಲ ವಾರ ಇಲ್ಲವೇ ಮಾರ್ಚ್‌ನಲ್ಲಿ ಹೊಸ ಬೈಕ್ ಬಿಡುಗಡೆಯಾಗುವುದು ನಿಶ್ಚಿತವಾಗಿದೆ.

Trending On DriveSpark Kannada:

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Low-Cost Mahindra Mojo UT300 Spotted At Dealership — To Rival Bajaj Dominar 400

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark