ಮಾರಾಟದಲ್ಲಿ ದಾಖಲೆ ಸೃಷ್ಠಿಸುತ್ತಿರುವ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಸ್ಪೆಷಲ್ ಏನು?
ಮಾರುತಿ ಸುಜುಕಿ ಸಂಸ್ಥೆಯು ತನ್ನ ಉತ್ಪನ್ನಗಳ ಮಾರಾಟದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸುತ್ತಿದ್ದು, ವಿಟಾರಾ ಬ್ರೆಝಾ ಮಾರಾಟದಲ್ಲಿನ ಏರಿಕೆಯು ಹೊಸ ನೀರಿಕ್ಷೆಗಳಿಗೆ ಕಾರಣವಾಗಿದೆ.
ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಉತ್ಪನ್ನಗಳ ಮಾರಾಟದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸುತ್ತಿದ್ದು, ವಿಟಾರಾ ಬ್ರೆಝಾ ಮಾರಾಟದಲ್ಲಿನ ಏರಿಕೆಯು ಹೊಸ ನೀರಿಕ್ಷೆಗಳಿಗೆ ಕಾರಣವಾಗಿದೆ.

ಈ ಹಿಂದೆ 2016ರ ಮಾರ್ಚ್‌ನಲ್ಲಿ ಬಿಡುಗಡೆಗೊಂಡು ಎಸ್‌ಯುವಿ ವಿಭಾಗದಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿರುವ ವಿಟಾರಾ ಬ್ರೆಝಾ ಆವೃತ್ತಿಯು ಸದ್ಯ ಭಾರತೀಯ ಆಟೋ ಉದ್ಯಮದಲ್ಲಿ ತನ್ನದೇ ಛಾಫು ಮೂಡಿಸುತ್ತಿದ್ದು, ಬಿಡುಗಡೆಗೊಂಡ 22 ತಿಂಗಳ ಅವಧಿಯಲ್ಲಿ 2.50 ಲಕ್ಷ ಕಾರುಗಳು ಮಾರಾಟಗೊಂಡಿವೆ.
Recommended Video


ಈ ಮೂಲಕ 2017ರ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವ ವಿಟಾರಾ ಬ್ರೆಝಾ ಕಾರು ಮಾದರಿಯು ಬಿಡುಗಡೆಗೊಂಡ ದಿನದಿಂದಲೂ ಈ ತನಕ ಒಂದೇ ಪ್ರಮಾಣದ ಬೇಡಿಕೆಯನ್ನು ಕಾಯ್ದುಕೊಂಡು ಬಂದಿರುವುದು ಅದರ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ.

ಹೀಗಾಗಿ 2016ರ ಮಾರ್ಚ್‌ನಿಂದ ಇದುವರೆಗೆ ಪ್ರತಿ ತಿಂಗಳು ಸರಾಸರಿ 10 ಸಾವಿರ ಕಾರುಗಳು ಮಾರಾಟಗೊಂಡಿದ್ದು, ಕಳೆದ ಜುಲೈ ಅವಧಿಯಲ್ಲಿ 15,243 ಕಾರುಗಳು ಮಾರಾಟಗೊಳ್ಳುವ ಮೂಲಕ ಹೊಸ ದಾಖಲೆಯನ್ನು ಹುಟ್ಟುಹಾಕಿತ್ತು.

ಇದಕ್ಕೆಲ್ಲಾ ಪ್ರಮುಖ ಕಾರಣ ಏನೆಂದರೆ ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಜನಪ್ರಿಯ ಎಸ್‌ಯುವಿಗಳಲ್ಲಿ ವಿಟಾರಾ ಬ್ರೆಝಾ ಮುಂಚೂಣಿಯಲ್ಲಿದ್ದು, ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗಿರುವ ಕಾರು ಮಾದರಿಯಾಗಿದೆ.
Trending On DriveSpark Kannada:
ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..
ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!
ಭಾರತದಲ್ಲಿ ಇವು ಅಟ್ಟರ್ ಫ್ಲಾಪ್ ಕಾರುಗಳು

ಎಂಜಿನ್ ಸಾಮರ್ಥ್ಯ
1.3-ಲೀಟರ್ ಡಿಡಿಐಎಸ್ 200 ಡೀಸೆಲ್ ಎಂಜಿನ್‌ನಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ವಿಟಾರಾ ಬ್ರೆಝಾ, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 90-ಬಿಎಚ್‌ಪಿ ಹಾಗೂ 200-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ಮೈಲೇಜ್
ಭಾರತೀಯ ಗ್ರಾಹಕರು ನೀರಿಕ್ಷೆ ಮಾಡುವ ಉತ್ತಮ ಮೈಲೇಜ್ ಕಾರುಗಳಲ್ಲಿ ವಿಟಾರಾ ಬ್ರೆಝಾ ಅಗ್ರಸ್ಥಾನದಲ್ಲಿದ್ದು, ಪ್ರತಿ ಲೀಟರ್ ಡೀಸೆಲ್‌ಗೆ 24.3 ಕಿ.ಮಿ ಮೈಲೇಜ್ ನೀಡುತ್ತದೆ.

ವಿಟಾರಾ ಬ್ರೆಝಾ ಬೆಲೆ
ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.7.24 ಲಕ್ಷದಿಂದ ಆರಂಭಗೊಳ್ಳುವ ವಿಟಾರಾ ಬ್ರೆಝಾ ಕಾರಿನ ಬೆಲೆ ಉನ್ನತ ಮಾದರಿಯ ರೂ.9.69 ಲಕ್ಷಕ್ಕೆ ಲಭ್ಯವಿರುತ್ತದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಉತ್ತಮ ಕಾರ್ಯನಿರ್ವಹಣೆ ಹಾಗೂ ಬ್ರ್ಯಾಂಡ್ ಮೌಲ್ಯದೊಂದಿಗೆ ಮಾರುಕಟ್ಟೆಯಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆಯುತ್ತಿರುವ ವಿಟಾರಾ ಬ್ರೆಝಾ ಹಲವು ವಿಶೇಷತೆ ಹೊಂದಿದೆ. ಹೀಗಾಗಿ ಟಾಟಾ ಮೋಟಾರ್ಸ್, ಮಹೀಂದ್ರಾ, ಹ್ಯುಂಡೈ ಎಸ್‌ಯುವಿ ಆವೃತ್ತಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದೆ.
Trending On DriveSpark Kannada:
ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು
ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...
Trending DriveSpark YouTube Videos
Subscribe To DriveSpark Kannada YouTube Channel - Click Here


Click it and Unblock the Notifications