ಇನ್ಮುಂದೆ ಕಾರಿನ ಹೊಗೆ ಮೇಲೆ ನಿರ್ಧಾರವಾಗುತ್ತೆ ರೋಡ್ ಟ್ಯಾಕ್ಸ್
ಇಷ್ಟು ದಿನಗಳ ಕಾಲ ಮಿತಿಮಿರಿ ಹೊಗೆ ಉಗುಳುವ ವಾಹನಗಳ ವಿರುದ್ದ ದಂಡ ವಸೂಲಿ ಮಾಡುತ್ತಿದ್ದ ಸಾರಿಗೆ ಇಲಾಖೆಯು(ಆರ್‌ಟಿಒ) ಇದೀಗ ಒಂದು ಹೆಜ್ಜೆ ಮುಂದೆ ಮತ್ತೊಂದು ಕಠಿಣ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ.
ಇಷ್ಟು ದಿನಗಳ ಕಾಲ ಮಿತಿಮಿರಿ ಹೊಗೆ ಉಗುಳುವ ವಾಹನಗಳ ವಿರುದ್ದ ದಂಡ ವಸೂಲಿ ಮಾಡುತ್ತಿದ್ದ ಸಾರಿಗೆ ಇಲಾಖೆಯು(ಆರ್‌ಟಿಒ) ಇದೀಗ ಒಂದು ಹೆಜ್ಜೆ ಮುಂದೆ ಮತ್ತೊಂದು ಕಠಿಣ ನಿಯಮವನ್ನು ಜಾರಿಗೊಳಿಸಲು ಮುಂದಾಗಿದ್ದು, ಪರಿಸರಕ್ಕೆ ಮಾರಕವಾಗಿರುವ ಕಾರುಗಳ ಮಾಲೀಕರಿಗೆ ಇದು ಎಚ್ಚರಿಕೆಯ ಗಂಟೆ ಎಂದು ಹೇಳಬಹುದು.

ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಡೆಯಲು ಕೇಂದ್ರ ಸರ್ಕಾರವು ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ರಸ್ತೆ ತೆರಿಗೆ ವಿಚಾರದಲ್ಲಿ ಇದೀಗ ವಿನೂತನ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಒಂದು ವೇಳೆ ಈ ಹೊಸ ಮಾನದಂಡವು ಅನುಷ್ಠಾನಕ್ಕೆ ಬಂದಲ್ಲಿ ಸಾರಿಗೆ ಇಲಾಖೆ ಬೊಕ್ಕಸಕ್ಕೆ ಭಾರೀ ಪ್ರಮಾಣದ ಆದಾಯ ಹರಿದುಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

ರಸ್ತೆ ನಿಯಮಗಳಿಗೆ ವಿರುದ್ಧವಾಗಿ ಮಿತಿಮಿರಿ ಹೊಗೆ ಉಗುಳುವ(ಸಿಒ2) ವಾಹನಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಹೊಸ ಮಾನದಂಡವನ್ನು ಪ್ರಯೋಗಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಕಾರುಗಳ ಮಾಲಿನ್ಯ ನಿಯಂತ್ರಕ ಸಾಧನದ ಕಾರ್ಯಕ್ಷಮತೆ ಮೇಲೆ ರಸ್ತೆ ತೆರಿಗೆಗಳನ್ನು ವಿಧಿಸುವ ಹೊಸ ಕಾಯ್ದೆ ಅನುಷ್ಠಾನಕ್ಕೆ ಚಿಂತನೆ ನಡೆಸಿದೆ.

ಸದ್ಯದ ನಿಯಮಗಳ ಪ್ರಕಾರ ಕಾರಿನ ವಿಧ, ಕಾರಿನ ಉದ್ದಳತೆ, ಎಂಜಿನ್ ಸಾಮರ್ಥ್ಯ, ಕಾರಿನ ಗ್ರೌಂಡ್ ಕ್ಲಿಯೆರೆನ್ಸ್ ಆಧಾರದ ಮೇಲೆ ರೋಡ್ ಟ್ಯಾಕ್ಸ್‌ಗಳನ್ನು ವಿಧಿಸಲಾಗುತ್ತಿದೆ. ಇದಕ್ಕೆ ಹೊಸದಾಗಿ ಇದೀಗ ಮಿತಿಮಿರಿ ಹೊಗೆ ಉಗುಳುವ ಕಾರುಗಳಿಗೆ ಭಾರೀ ಪ್ರಮಾಣದ ತೆರಿಗೆ ವಿಧಿಸಲು ಯೋಜಿಸಲಾಗಿದೆ.

ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಅನುಷ್ಠಾನಕ್ಕೆ ತರಲಾಗುತ್ತಿರುವ ಹೊಸ ಕಾಯ್ದೆಯು ಸದ್ಯ ಪರಿಸ್ಥಿತಿಗೆ ಪ್ರಸ್ತತ ಎನ್ನಿಸಲಿದ್ದು, ನೀತಿ ಆಯೋಗವು ಸಹ ಕೇಂದ್ರದ ಹೊಸ ಕಾಯ್ದೆಗೆ ಗ್ರೀನ್ ಸಿಗ್ನಲ್ ನೀಡುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ.

ಎಲ್ಲವೂ ಅಂದುಕೊಂಡತೆ ಆದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಹೊಸ ಕಾಯ್ದೆ ಜಾರಿಯಾಗಲಿದ್ದು, ಮಿತಿ ಮಿರಿ ಹೊಗೆ ಉಗುಳುವ ವಾಹನಗಳಿದ್ದಲ್ಲಿ ಅಗತ್ಯ ಎಂಜಿನ್ ಮಾರ್ಪಡು ಮಾಡಿಕೊಂಡು ರಸ್ತೆಗಿಳಿಸುವುದು ಒಳಿತು. ಇಲ್ಲವಾದ್ರೆ ಭಾರೀ ಪ್ರಮಾಣದ ತೆರಿಗೆ ಪಾವತಿಸಲು ಸಜ್ಜಾಗಬೇಕಾಗುತ್ತದೆ.

ಇನ್ನು ವಾಹನಗಳಿಂದ ಇಂಗಾಲದ ಡೈ ಆಕ್ಸೈಡ್ (ಸಿಒ2) ಹೆಚ್ಚಾಗಿ ಬಿಡುಗಡೆಯಾಗುವ ನಗರಗಳ ಪೈಕಿ ಬೆಂಗಳೂರು ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದು, ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ಮಾನದಂಡವು ಸಾವಿರಾರು ಹಳೆ ಕಾರುಗಳಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಲಿದೆ ಎನ್ನಬಹುದು.

ಇದಕ್ಕೆ ಕಾರಣ ಸದ್ಯ ಉತ್ಪಾದನೆಯಾಗುತ್ತಿರುವ ಹೊಸ ಕಾರುಗಳು ಹೊಗೆ ಉಗುಳುವ ವಿಚಾರದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಹತ್ತು ವರ್ಷಕ್ಕಿಂತಲೂ ಹಳೆಯ ಡೀಸೆಲ್ ವಾಹನಗಳಿಗೆ ಈ ಹೊಸ ಕಾಯ್ದೆಯು ಬಿಸಿ ಮುಟ್ಟಿಸಲಿದೆ ಎಂದು ಹೇಳಬಹುದು.

ಒಟ್ಟಿನಲ್ಲಿ ವಾಹನ ಪ್ರಿಯರನ್ನು ಎಲೆಕ್ಟ್ರಿಕ್ ಕಾರುಗಳತ್ತ ಒಲವು ಹೆಚ್ಚಿಸಲು ಮುಂದಾಗಿರುವ ಕೇಂದ್ರವು ಡಿಸೇಲ್ ಮತ್ತು ಪೆಟ್ರೋಲ್ ವಾಹನಗಳ ಬಳಕೆ ಮೇಲೆ ಒಂದೊಂದೇ ನಿರ್ಬಂಧಗಳನ್ನು ವಿಧಿಸುತ್ತಿದ್ದು, ಯುರೋಪ್ ರಾಷ್ಟ್ರಗಳಲ್ಲಿ ಈಗಾಗಲೇ ಈ ಹೊಸ ಕಾಯ್ದೆಯಿಂದ ಲಕ್ಷಾಂತರ ವಾಹನಗಳು ಮೂಲೆಗುಂಪಾಗಿವೆ ಎನ್ನುವುದು ಪ್ರಮುಖ ವಿಚಾರ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಅತ್ಯುತ್ತಮ ರೀ ಸೆಲ್ ಮೌಲ್ಯ ಹೊಂದಿರುವ ಟಾಪ್ 7 ಕಾರುಗಳಿವು..
ಈ ಕಾರಿನ ವೆಚ್ಚ ಒಂದು ಕಿಲೋ ಮೀಟರ್‍ಗೆ ಕೇವಲ ರೂ. 1.15 ಪೈಸೆ ಮಾತ್ರ..!!
ಪ್ರತಿ ಚಾರ್ಜ್‌ಗೆ 547 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು....
ಐಷಾರಾಮಿ ಕಾರುಗಳನ್ನೆ ಟ್ರ್ಯಾಕ್ಟರ್‍ಗಳನ್ನಾಗಿ ಪರಿವರ್ತಿಸಿದ ರೈತರು..!!
10 ಲಕ್ಷದೊಳಗೆ ಖರೀದಿಗೆ ಲಭ್ಯವಾಗಲಿರುವ 7 ಸೀಟರ್ ಎಂಪಿವಿ ಕಾರುಗಳು ಇಲ್ಲಿವೆ ನೋಡಿ...


Click it and Unblock the Notifications