ದಟ್ಸನ್ ಕಾರುಗಳ ಖರೀದಿ ಮೇಲೆ 'ಪೀಸ್ ಆಫ್ ಮೈಂಡ್' ಪ್ಯಾಕೇಜ್ ಘೋಷಣೆ
ಭಾರತದಲ್ಲಿ ದಟ್ಸನ್ ಕಾರುಗಳ ಮಾರಾಟ ಪ್ರಕ್ರಿಯೆಯು ಆರಂಭವಾಗಿ 5 ವರ್ಷಗಳಾಗುತ್ತಿದ್ದು, ಈ ಹಿನ್ನೆಲೆ ತನ್ನ ನೆಚ್ಚಿನ ಗ್ರಾಹಕರಿಗಾಗಿ ಹೊಸ ಆಫರ್ ಘೋಷಣೆ ಮಾಡಿರುವ ದಟ್ಸನ್ ಸಂಸ್ಥೆಯು ಪೀಸ್ ಆಫ್ ಮೈಂಡ್ ಪ್ಯಾಕೇಜ್ ಘೋಷಣೆ ಮಾಡಿದೆ.
ಭಾರತದಲ್ಲಿ ದಟ್ಸನ್ ಕಾರುಗಳ ಮಾರಾಟ ಪ್ರಕ್ರಿಯೆಯು ಆರಂಭವಾಗಿ 5 ವರ್ಷಗಳಾಗುತ್ತಿದ್ದು, ಈ ಹಿನ್ನೆಲೆ ತನ್ನ ನೆಚ್ಚಿನ ಗ್ರಾಹಕರಿಗಾಗಿ ಹೊಸ ಆಫರ್ ಘೋಷಣೆ ಮಾಡಿರುವ ದಟ್ಸನ್ ಸಂಸ್ಥೆಯು ಪೀಸ್ ಆಫ್ ಮೈಂಡ್ ಎನ್ನುವ ವಿನೂತನ ಪ್ಯಾಕೇಜ್ ನೀಡುತ್ತಿರುವ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ದಟ್ಸನ್ ಸಂಸ್ಥೆಯು ಈಗಾಗಲೇ ಹಲವಾರು ಕಾರು ಮಾದರಿಗಳ ಮಾರಾಟ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು, ತನ್ನ ಜನಪ್ರಿಯ ಕಾರು ಮಾದರಿಗಳಾದ ರೆಡಿ ಗೋ, ಗೋ ಮತ್ತು ಗೋ ಪ್ಲಸ್ ಕಾರುಗಳ ಖರೀದಿ ಮೇಲೆ ಎಕ್ಸ್‌ಕ್ಲೂಸಿವ್ ಆಫರ್‌ಗಳನ್ನು ಘೋಷಣೆ ಮಾಡಿ ಗ್ರಾಹಕರನ್ನು ಸೆಳೆಯುತ್ತಿದೆ.

ದಟ್ಸನ್ ಆಫರ್‌ಗಳು
5 ವರ್ಷಗಳ ಕಾಲ ವಾರಂಟಿ
ದಟ್ಸನ್ ಸಂಸ್ಥೆಯು ಘೋಷಣೆ ಮಾಡಿರುವ ಆಫರ್‌ಗಳಲ್ಲಿ ಇದು ಪ್ರಮುಖವಾಗಿದ್ದು, ಹೊಸ ಕಾರುಗಳ ಖರೀದಿ ಮೇಲೆ 5 ವರ್ಷಗಳ ಕಾಲ ವಾರಂಟಿ ಜೊತೆ ಜೊತೆ ಅನಿಯಮಿತ ಕಿ.ಮೀ ಆಫರ್ ನೀಡುತ್ತಿದೆ. ಹೀಗಾಗಿ ಹೊಸ ಕಾರು 5 ವರ್ಷಗಳ ಕಾಲ ಎಷ್ಟು ರನ್ ಆಗುತ್ತೊ ಅಲ್ಲಿಯ ತನಕವು ವಾರಂಟಿ ಅನ್ವಯವಾಗುತ್ತೆ.

ಉಚಿತ ವಿಮಾ
ಹೊಸ ಕಾರು ಖರೀದಿಸುವ ಸಾಮಾನ್ಯವಾಗಿ ಪ್ರತಿಯೊಂದು ಕಾರು ಸಂಸ್ಥೆಗಳು ಸಹ ಮೊದಲನೇ ವರ್ಷದ ಕಾರು ವಿಮೆ ಆಫರ್ ನೀಡುವುದು ಕಾಮನ್. ಹಾಗೆಯೇ ದಟ್ಸನ್ ಸಂಸ್ಥೆಯು ಸಹ ತನ್ನ ಹೊಸ ಕಾರುಗಳ ಮೇಲೆ ಮೊದಲನೇ ವರ್ಷದ ವಿಮೆಯನ್ನ ಉಚಿತವಾಗಿ ನೀಡುತ್ತಿದೆ.

ಸ್ಪೆಷಲ್ ಆಫರ್
ಅರೇ! ಇದು ಯಾವ ಥರಹದ ಆಫರ್ ಅಂದುಕೊಳ್ಳಬೇಡಿ. ದಟ್ಸನ್ ಸಂಸ್ಥೆಯು ಸರ್ಕಾರಿ ಉದ್ಯೋಗಿಗಳಿಗೆ ಕೆಲವು ಸ್ಪೆಷಲ್ ಆಫರ್‌ಗಳನ್ನು ನೀಡುತ್ತಿದ್ದು, ಕಾರಿನ ಕಂತುಗಳಲ್ಲಿ ಮತ್ತು ಬೆಲೆಗಳಲ್ಲಿ ಕೆಲವು ವಿನಾಯ್ತಿಗಳು ದೊರೆಯಲಿವೆ.

ಮತ್ತೊಂದು ಪ್ರಮುಖ ವಿಚಾರ ಅಂದ್ರೆ ಸ್ಪೆಷಲ್ ಆಫರ್‌ಗಳು ಸೇವೆಯಲ್ಲಿರುವ ಸರ್ಕಾರಿ ಉದ್ಯೋಗಸ್ಥರಿಗೆ ಮಾತ್ರವಲ್ಲದೇ ನಿವೃತ್ತಿ ಹೊಂದಿರುವ ಸರ್ಕಾರಿ ಅಧಿಕಾರಿಗಳಿಗೂ ಆಫರ್ ನೀಡುತ್ತಿದ್ದು, ಆಯ್ಕೆ ಮಾಡುವ ಕಾರು ಮಾದರಿ ಮೇಲೆ ವಿವಿಧ ರೀತಿಯ ಆಫರ್ ಲಭ್ಯವಾಗುತ್ತವೆ.

ರೋಡ್ ಸೈಡ್ ಅಸಿಸ್ಟಂಟ್
ಕಾರು ಖರೀದಿಯ ನಂತರ ತಾಂತ್ರಿಕವಾಗಿ ಸಮಸ್ಯೆ ಕಂಡುಬರುವುದು ಸಾಮಾನ್ಯ ವಿಚಾರ. ಇದಕ್ಕಾಗಿಯೇ ವಿಶೇಷ ಯೋಜನೆ ರೂಪಿಸಿರುವ ದಟ್ಸನ್ ಮತ್ತು ನಿಸ್ಸಾನ್ ಸಂಸ್ಥೆಯು 24x7 ಗ್ರಾಹಕರ ಸೇವೆಗಳನ್ನು ಒದಗಿಸಲು ಮುಂದಾಗಿದೆ.

ಕಾರಿನ ಎಂಜಿನ್ ಸಮಸ್ಯೆ ಕಂಡುಬಂದಲ್ಲಿ ಅಥವಾ ಕೀ ಕಳೆದು ಹೊದಲ್ಲಿ ಇಲ್ಲವೇ ಬ್ಯಾಟರಿ ಜಂಪ್ ಸಮಸ್ಯೆ ಕಂಡುಬಂದಲ್ಲಿ ತುರ್ತು ಸೇವೆಗಳ ಮೂಲಕ ಸಮಸ್ಯೆ ಬಗೆಹರಿಸಲಿರುವ ದಟ್ಸನ್ ಮತ್ತು ನಿಸ್ಸಾನ್ ವರ್ಕ್ ಶಾಪ್ ತಂಡವು ಗ್ರಾಹಕರ ಸಂಪೂರ್ಣ ವಿಶ್ವಾಸ ಗಳಿಸಲಿವೆ.

ಉಚಿತ ಪಿಕ್ ಆ್ಯಂಡ್ ಡ್ರಾಪ್
ಹೊಸ ಕಾರುಗಳಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡುಬಂದಾಗ ತಮ್ಮ ನೆಚ್ಚಿನ ಗ್ರಾಹಕರಿಗೆ ಪರ್ಯಾಯ ವ್ಯವಸ್ಥೆಯನ್ನು ಸಹ ಒದಗಿಸುವ ದಟ್ಸನ್ ಸಂಸ್ಥೆಯು ಉಚಿತವಾಗಿ ಪರ್ಯಾಯ ಕಾರಿನ ವ್ಯವಸ್ಥೆ ಮತ್ತು ಅಗತ್ಯ ಸಂದರ್ಭಗಳಲ್ಲಿ ಹೋಟೆಲ್ ಸೇವೆಗಳನ್ನು ಒದಗಿಸುವ ಯೋಜನೆ ಹೊಂದಿದೆ.

ಹೀಗಾಗಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಆಫರ್ ಎನ್ನಬಹುದು. ಒಂದು ವೇಳೆ ನೀವು ಕೂಡಾ ದಟ್ಸನ್ ಖರೀದಿ ಯೋಜನೆಯಲ್ಲಿದ್ದರೇ ಈ ಕೂಡಲೇ ಹೊಸ ಆಫರ್ ಬಗೆಗೆ ಅಧಿಕೃತ ಡೀಲರ್ಸ್‌ಗಳ ಬಳಿ ಮತ್ತಷ್ಟು ಮಾಹಿತಿ ಪಡೆಯಬಹುದಾಗಿದ್ದು, ಈ ಹೊಸ ಆಫರ್‌ಗಳು ನಿಗದಿತ ಅವಧಿಗೆ ಮಾತ್ರ ಲಭ್ಯವಿರಲಿವೆ.


Click it and Unblock the Notifications








