ಬಹು ನಿರೀಕ್ಷಿತ ಹ್ಯುಂಡೈ ಕ್ರೆಟಾ ಕಾರಿನ ಖರೀದಿಗಾಗಿ ಬುಕ್ಕಿಂಗ್ ಆರಂಭ..
ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥಯಾದ ಹ್ಯುಂಡೈ ತಮ್ಮ ಕ್ರೆಟಾ ಫೇಸ್‍ಲಿಫ್ಟ್ ಕಾರನ್ನು ಜೂನ್ ತಿಂಗಳನಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದ್ದು, ಇದೀಗ ಹೊಸ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ.
ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥಯಾದ ಹ್ಯುಂಡೈ ತಮ್ಮ ಕ್ರೆಟಾ ಫೇಸ್‍ಲಿಫ್ಟ್ ಕಾರನ್ನು ಜೂನ್ ತಿಂಗಳನಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದ್ದು, ಇದೀಗ ಹೊಸ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ.

ಗ್ರಾಹಕರು ಹೊಸ ಹ್ಯುಂಡೈ ಕ್ರೆಟಾ ಫೇಸ್‍ಲಿಫ್ಟ್ ಕಾರಿನ ಖರೀದಿಗಾಗಿ ರೂ 25,000 ಸಾವಿರದ ಮೊತ್ತವನ್ನು ನೀಡಿ ಬುಕ್ಕಿಂಘ್ ಮಾಡಿಕೊಳ್ಳಬಹುದಾಗಿದೆ. ಇನ್ನು ಹೊಸದಾಗಿ ಬಿಡುಗಡೆಗೊಳ್ಳಲಿರುವ ಕ್ರೆಟಾ ಫೇಸ್‍ಲಿಫ್ಟ್ ಕಾರುಗಳು ತಮ್ಮ ಹಳೆಯ ಮಾದರಿಯ ಕಾರುಗಳಿಗಿಂತ ವಿನೂತನವಾಗಿ ಕಾರಿನ ಒಳಭಾಗದಲ್ಲಿ ಮತ್ತು ಹೊರಭಾಗದಲ್ಲಿ ಅಪ್ಡೇಟ್ ಅನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಬಿಡುಗಡೆಗೊಳ್ಳಲಿರುವ ಹೊಸ ಕ್ರೆಟಾ ಕಾರುಗಳು 1.6-ಲೀಟರ್ ಪೆಟ್ರೋಲ್, 1.4 ಮತ್ತು 1.6-ಲೀಟರ್ ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದೆ ಎನ್ನಲಾಗಿದೆ.1.6 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 121-ಬಿಹೆಚ್‍ಪಿ ಮತ್ತು 154-ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ 1.4 ಲೀಟರ್ ಡೀಸೆಲ್ ಎಂಜಿನ್ ಮಾದರಿಯು 89-ಬಿಹೆಚ್‍ಪಿ ಮತ್ತು 224-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಹಾಗೆಯೇ 1.6 ಲೀಟರ್ ಡೀಸೆಲ್ ಎಂಜಿನ್ ಮಾದರಿಯು 126-ಬಿಹೆಚ್‍ಪಿ ಮತ್ತು 256-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಲ್ಲಾ ಎಂಜಿನ್‍ಗಳನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 1.6-ಡೀಸೆಲ್ ಎಂಜಿನ್ ಮಾದರಿಗಳನ್ನು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿವೆ.

ಇನ್ನು ಹೊಸ ಕ್ರೆಟಾ ಫೇಸ್‍ಲಿಫ್ಟ್ ಕಾರುಗಳು ನವಿಕರಿಸಲಾಗಿರುವ ಹೆಡ್‍ಲ್ಯಾಂಪ್‍ಗಳು, ಹೊಸ ಬಂಪರ್ ಮತ್ತು ಎಲ್ಇಡಿ ಡಿಎಲ್‍ಆರ್ ಗಳನ್ನು ಪಡೆದಿದ್ದು, ರಿಯರ್ ಭಾಗವು ಕೂಡ ಹೊಸ ಬಂಪರ್‍ನೊಂದಿಗೆ ಪರಿಷ್ಕರಿಸಿದ ಟೈಲ್‍ಲೈಟ್ ಗಳನ್ನು ಪಡೆದಿದೆ.

ಇನ್ನುಳಿದಂತೆ ಕಾರಿನ ಒಳಭಾಗದಲ್ಲಿ 8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂನೊಂದಿಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ನೀಡಲಾಗಿದ್ದು, ಇವು ಎಸ್‌ಯುವಿ ಪ್ರಿಯರಿಗೆ ಹೊಸ ಚಾಲನಾ ಅನುಭೂತಿ ನೀಡಲಿವೆ.

ಇದರ ಜೊತೆಗೆ ಹೊಸ ಕಾರು ಸನ್‍ರೂಫ್, ರೈನ್ ಸೆಂಸಿಂಗ್ ವೈಪರ್ಸ್, ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಹೆಡ್‍ಲ್ಯಾಂಪ್ ಗಳನ್ನು ಪಡೆದಿದ್ದು, ಸುರಕ್ಷಾ ವೈಶಿಷ್ಟ್ಯತೆಗಳಿಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಹೊಸ ಕ್ರೆಟಾ ಫೇಸ್‍ಲಿಫ್ಟ್ ಕಾರುಗಳ ಬೆಲೆಯು ಪ್ರಸ್ಥುತ ಮಾದರಿಗಿಂತ ಹೊಂಚ ಹೆಚ್ಚಿರಲಿದ್ದು, ಬಿಡುಗಡೆಯ ನಂತರ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಎಸ್ ಕ್ರಾಸ್, ರೆನಾಲ್ಟ್ ಕ್ಯಾಪ್ಚರ್, ಮತ್ತು ರೆನಾಲ್ಟ್ ಡಸ್ಟರ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...
ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..
ಏಪ್ರಿಲ್ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಕಾರು ಯಾವುದು ಗೊತ್ತಾ?
ವಿದೇಶಿ ಮಾರುಕಟ್ಟೆಗೆ ಭಾರತದಿಂದ ಅತಿಹೆಚ್ಚು ರಫ್ತುಗೊಂಡ ಕಾರ್ ಬ್ರ್ಯಾಂಡ್ ಯಾವುದು?


Click it and Unblock the Notifications