ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...

By Praveen Sannamani

ಇತ್ತೀಚಿನ ದಿನಗಳಲ್ಲಿ ವಿಮಾನಯಾನವು ಸಾಮಾನ್ಯ ಸಾರಿಗೆ ವ್ಯವಸ್ಥೆಯಾಗಿ ಮಾರ್ಪಡುತ್ತಿದ್ದು, ಎಲ್ಲಾ ವರ್ಗದವರು ಒಂದಿಲ್ಲಾ ಒಂದು ಕಾರಣಕ್ಕೆ ವಿಮಾನಯಾನದತ್ತ ಆಕರ್ಷಿತರಾಗುತ್ತಿದ್ದಾರೆ. ಇದರಿಂದಾಗಿಯೇ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಹೆಚ್ಚುತ್ತಿದ್ದು, ಇದರ ಜೊತೆ ಜೊತೆ ಅವಘಡಗಳ ಸಂಖ್ಯೆ ಕೂಡಾ ಏರಿಕೆಯಾಗುತ್ತಿವೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...

ಇದಲ್ಲದೇ ವಿಮಾನಯಾನ ಕ್ಷೇತ್ರದಲ್ಲಿ ಭಾರತವು ಇಂದು ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಒಟ್ಟು 73 ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಹೊಂದಿದೆ. ಇದರಲ್ಲಿ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್ ಕೂಡಾ ದೇಶದ 3ನೇ ಅತಿದೊಡ್ಡ ವಿಮಾನ ನಿಲ್ದಾಣ ಎಂಬ ಖ್ಯಾತಿಯನ್ನು ಹೊಂದಿದ್ದು, ದಿನ ಒಂದಕ್ಕೆ ಬರೋಬ್ಬರಿ 90 ಸಾವಿರ ಪ್ರಯಾಣಿಕರ ಓಡಾಟದ ಮಾರ್ಗವಾಗಿದೆ. ಹೀಗಿದ್ದಾಗ ಪ್ರಯಾಣಿಕರ ಸುರಕ್ಷತೆ ಕೂಡಾ ಒಂದು ಸವಾಲು ಅಂದ್ರೆ ತಪ್ಪಾಗುವುದಿಲ್ಲ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...

ಕೆಂಪೇಗೌಡ ಏರ್‌ಫೋರ್ಟ್‌ನಲ್ಲಿ ಈಗಾಗಲೇ ತುರ್ತು ಸೇವೆಗಳಿಗಾಗಿ ಹಲವಾರು ಮಾದರಿಯ ಸುರಕ್ಷಾ ಕ್ರಮಗಳು ಸೇವೆಯಲ್ಲಿದ್ದು, ಮೊನ್ನೆಯಷ್ಟೇ ಅಗ್ನಿಶಾಮಕ ದಳ ವಿಭಾಗಕ್ಕೆ ಹೊಸದಾಗಿ ಪರಿಚಯಿಸಲಾದ ಫೈರ್ ಫೈಟಿಂಗ್ ಟ್ರಕ್ ಮಾದರಿಯೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...

ಹೆಚ್ಚು ಇಂಧನ ದಕ್ಷತೆ ಹೊಂದಿರುವ ವಿಮಾನ ಇಂಧನ ಸಂಗ್ರಹ ಸ್ಥಳದಲ್ಲಿ ಭಾರೀ ಪ್ರಮಾಣದ ಸುರಕ್ಷಾ ಸಾಧನಗಳನ್ನು ಒದಗಿಸುವ ಉದ್ದೇಶದಿಂದ ರೋಸೆನ್‌ಬೆಯರ್ ಪ್ಯಾಂತರ್ ಎನ್ನುವ ಫೈರ್ ಫೈಟಿಂಗ್ ಟ್ರಕ್‌ ಮಾದರಿಗಳನ್ನು ಪರಿಚಯಿಸಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...

ಇವು ಅತ್ಯಾಧುನಿಕ ತಂತ್ರಜ್ಞಾನ ಪ್ರೇರಿತ ವಿನ್ಯಾಸಗಳನ್ನು ಹೊಂದಿದ್ದು, ವಿಮಾನ ನಿಲ್ದಾಣದಲ್ಲಿ ಘಟಿಸಬಹುದಾದ ಅಗ್ನಿ ಅವಘಡವನ್ನು ತುರ್ತಾಗಿ ಶಮನಗೊಳಿಸುವ ಕಾರ್ಯಕ್ಕೆ ಬಳಕೆಯಾಗಲಿವೆ. ಇವು ಬರೋಬ್ಬರಿ 40 ಟನ್ ತೂಕ ಹೊಂದಿರುವುದಲ್ಲದೇ 12,500 ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆಯಂತೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...

ಜೊತೆಗೆ 1,500 ಲೀಟರ್ ಫೋಮ್ ಮತ್ತು 350 ಲೀಟರ್ ಇಂಧನ ಟ್ಯಾಂಕ್ ಪಡೆದಿದ್ದು, ಒಂದು ನಿಮಿಷಕ್ಕೆ ಬರೋಬ್ಬರಿ 6 ಸಾವಿರ ಲೀಟರ್ ನೀರನ್ನು ಹೊರಸೂಸುತ್ತದೆ. ಹೀಗಾಗಿ ಭಾರೀ ಪ್ರಮಾಣದ ಬೆಂಕಿ ಕೆನ್ನಾಲಿಗೆಯನ್ನು ಕೆಲವೇ ಸೆಕೇಂಡುಗಳಲ್ಲಿ ಶಮನಮಾಡಬಲ್ಲದು.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...

ಇನ್ನು ಏರ್‌ಫೋರ್ಟ್‌ಗಳಲ್ಲಿ ನಿಲುಗಡೆಯಾದ ಸಂದರ್ಭಗಳಲ್ಲಿ ವಿಮಾನಗಳಲ್ಲಿ ಉಂಟಾಗುವ ಬೆಂಕಿ ಅವಘಡಗಳನ್ನು ಸಹ ತಗ್ಗಿಸಲು ಅನುಕೂಲಕವಾಗುವಂತೆ ಗರಿಷ್ಠಮಟ್ಟದಲ್ಲಿ ಎತ್ತರಕ್ಕೆ ನೀರಿನ ಹೊರಸೂಸುವಿಕೆಯ ಸೌಲಭ್ಯಯು ಇದರಲ್ಲಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...

ಟ್ರಕ್ ವೈಶಿಷ್ಟ್ಯತೆಗಳು

ಹೆಚ್‌ಡಿ ಪಿಟಿಝ್ ಕ್ಯಾಮೆರಾಗಳು, ವೈರ್‌ಲೆಸ್ ರೇಡಿಯೋಗಳು, ಹೆವಿ ಡ್ಯೂಟಿ ಎಲ್ಇಡಿ ಫ್ಲಡ್‌ಲೈಟ್‌ಗಳು, ಸ್ವಯಂ ಟ್ರ್ಯಾಕಿಂಗ್ ಮೊಬೈಲ್ ಡಿಟಿಎಚ್ ಟಿವಿ ಆಂಟೆನಾ, ಪಿಎ ಸಿಸ್ಟಮ್, ನಾಲ್ಕು ಸ್ಪೀಕರ್‌ಗಳು ಮತ್ತು ಇತರ ಉಪಕರಣಗಳಂತಹ ಕಮ್ಯುನಿಕೇಷನ್ಸ್ ಸಾಧನಗಳು ಇದಲ್ಲಿವೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...

ಎಂಜಿನ್ ವೈಶಿಷ್ಟ್ಯತೆ

6x6 ಆಲ್ ವೀಲ್ಹ್ ಡ್ರೈವ್ ಸೌಲಭ್ಯ ಹೊಂದಿರುವ ರೋಸೆನ್‌ಬೆಯರ್ ಪ್ಯಾಂತರ್ ಟ್ರಕ್‌ಗಳು 18,000 ಸಿಸಿ ಎಂಜಿನ್ ಹೊಂದಿದೆ. ಹೀಗಾಗಿಯೇ ಬರೋಬ್ಬರಿ 40 ಟನ್ ತೂಕ ಹೊಂದಿದ್ದರೂ ಕೇವಲ 20 ಸೇಕೆಂಡುಗಳಲ್ಲಿ 120 ಕಿಮಿ ಟಾಪ್ ಸ್ಪೀಡ್ ಪಡೆದುಕೊಂಡಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...

ಟ್ರಕ್ ಬೆಲೆ

ಆಸ್ಟ್ರಿಯಾದಿಂದ ಆಮದು ಮಾಡಿಕೊಳ್ಳಲಾಗಿರುವ ಈ ಟ್ರಕ್ ಬರೋಬ್ಬರಿ 5 ಕೋಟಿ ಬೆಲೆ ಪಡೆದುಕೊಂಡಿದ್ದು, ಒಟ್ಟು ನಾಲ್ಕು ಇದೇ ಮಾದರಿಯ ತುರ್ತು ಸೇವಾ ಟ್ರಕ್‌ಗಳನ್ನು ಖರೀದಿ ಮಾಡಲಾಗಿದೆ. ಇದರಲ್ಲಿ 3 ಟ್ರಕ್‌ಗಳು ಸಕ್ರಿಯ ಸೇವೆಗೆ ಲಭ್ಯವಿದ್ದಲ್ಲಿ ಇನ್ನೊಂದು ಬ್ಯಾಕ್‌ಅಪ್ ವಾಹನವಾಗಿರಲಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...

ಒಟ್ಟಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿನ ಬೆಂಕಿ ಅವಘಡಗಳನ್ನು ಸಮರ್ಥವಾಗಿ ನಿಭಾಯಿಸಲು ಈ ರೀತಿ ವಾಹನಗಳನ್ನು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳು ಸಹ ರೋಸೆನ್‌ಬೆಯರ್ ಪ್ಯಾಂತರ್ ವಾಹನಗಳನ್ನು ಹೊಂದುವುದು ಸರಕ್ಷಾ ದೃಷ್ಟಿಯಿಂದ ಒಳ್ಳೆಯದು.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಟ್ರಕ್...

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್...

ನಿಯಂತ್ರಣ ತಪ್ಪಿ 20 ಅಡಿ ಹಳ್ಳಕ್ಕೆ ಬಿದ್ದ ಟಾಟಾ ನೆಕ್ಸಾನ್- ಕಾರಿನಲ್ಲಿದ್ದವರಿಗೆ ಪರಿಸ್ಥಿತಿ ಏನಾಯ್ತು ಗೊತ್ತಾ?

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ? ಇದು ನೀಜವೇ?

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

Most Read Articles

Kannada
Read more on technology fire off beat
English summary
Bangalore Airport's World Class Fire Fighting Trucks.
Story first published: Sunday, April 29, 2018, 9:00 [IST]

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more