2029ಕ್ಕೆ ಟೊಯೊಟಾ ನಿರ್ಮಾಣದ ಜಾಕ್ಸ್ ಲೂನರ್ ರೋವರ್ ಲಾಂಚ್ ಪಕ್ಕಾ..!

ವಿಶ್ವಾದ್ಯಂತ ಆಟೋ ಉದ್ಯಮದಲ್ಲಿ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣದ ಮೇಲೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಜಪಾನ್ ಬ್ರಾಂಡ್ ಟೊಯೊಟಾ ಕೂಡಾ ಈ ನಿಟ್ಟಿನಲ್ಲಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿದೆ. ಕೇವಲ ಗ್ರಾಹಕರ ಬಳಕೆಯ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಮಾತ್ರವಲ್ಲದೇ ಬಾಹ್ಯಕಾಶ ಸಂಶೋಧನೆಗಳಿಗೂ ಪೂರಕವಾಗಿ ಕೆಲವು ವಿಶೇಷ ವಾಹನ ಮಾದರಿಗಳನ್ನು ಸಿದ್ದಪಡಿಸುತ್ತಿರುವ ಟೊಯೊಟಾ ಸಂಸ್ಥೆಯು ವಿಶ್ವ ಆಟೋ ಉದ್ಯಮವನ್ನೇ ತನ್ನತ್ತ ಸೆಳೆಯುವಂತಹ ಮಹತ್ವದ ಯೋಜನೆಯೊಂದಕ್ಕೆ ಕೈ ಹಾಕಿದೆ.

2029ಕ್ಕೆ ಟೊಯೊಟಾ ನಿರ್ಮಾಣದ ಜಾಕ್ಸ್ ಲೂನರ್ ರೋವರ್ ಲಾಂಚ್ ಪಕ್ಕಾ..!

ಹೌದು, ವಿಶ್ವಾದ್ಯಂತ ಪ್ರತಿ ದಿನ ಲಕ್ಷಾಂತರ ಕಾರುಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವ ಟೊಯೊಟಾ ಸಂಸ್ಥೆಯು ಎಲೆಕ್ಟ್ರಿಕ್ ವಾಹನ ನಿರ್ಮಾಣದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದ್ದು, ಬಾಹ್ಯಾಕಾಶ ಸಂಶೋಧನೆಯ ಉದ್ದೇಶಕ್ಕಾಗಿ ವಿಶೇಷ ಎಲೆಕ್ಟ್ರಿಕ್ ವಾಹನವೊಂದನ್ನು ನಿರ್ಮಾಣ ಮಾಡಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಅತಿಹೆಚ್ಚು ಉತ್ಸುಕವಾಗಿರುವ ಜಪಾನ್ ಏರೋಸ್ಪೆಸ್ ಎಕ್ಸ್‌ಪ್ಲೊರೇಷನ್ ಎಜೆನ್ಸಿ(JAXA)ಬೇಡಿಕೆಯ ಮೇರೆಗೆ ಮೂನ್ ರೋವರ್ ಎಲೆಕ್ಟ್ರಿಕ್ ವಾಹನವನ್ನು ಸಿದ್ದಪಡಿಸಲಾಗಿದ್ದು, ಇದರ ಮೈಲೇಜ್ ರೇಂಜ್ ಸದ್ಯ ಆಟೋ ಉದ್ಯಮದಲ್ಲಿ ಭಾರೀ ಚರ್ಚೆಯಾಗುತ್ತಿದೆ.

2029ಕ್ಕೆ ಟೊಯೊಟಾ ನಿರ್ಮಾಣದ ಜಾಕ್ಸ್ ಲೂನರ್ ರೋವರ್ ಲಾಂಚ್ ಪಕ್ಕಾ..!

ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಟೆಕ್ನಾಲಜಿ ಬಳಕೆ ಮಾಡಿಕೊಂಡು ಲೂನರ್ ರೋವರ್ ವಾಹನವನ್ನು ಸಿದ್ದಪಡಿಸಿರುವ ಟೊಯೊಟಾ ಸಂಸ್ಥೆಯು ಪ್ರತಿ ಚಾರ್ಜ್‌ಗೆ ಬರೋಬ್ಬರಿ 10 ಸಾವಿರ ಕಿಲೋ ಮೀಟರ್ ಮೈಲೇಜ್ ನೀಡಬಹುದಾದ ಗುಣವೈಶಿಷ್ಟ್ಯತೆಗಳನ್ನು ಈ ಹೊಸ ವಾಹನದಲ್ಲಿ ಅಳವಡಿಸಲಾಗಿದೆ.

2029ಕ್ಕೆ ಟೊಯೊಟಾ ನಿರ್ಮಾಣದ ಜಾಕ್ಸ್ ಲೂನರ್ ರೋವರ್ ಲಾಂಚ್ ಪಕ್ಕಾ..!

ಜೊತೆಗೆ ಹಲವು ಅತ್ಯಾಧುನಿಕ ಡ್ರೈವ್ ಟೆಕ್ನಾಲಜಿ ಹೊಂದಿರುವ ಈ ವಾಹನವು ಬಾಹ್ಯಾಕಾಶದಲ್ಲಿ ಯಾವುದೇ ಅಡೆತಡೆಯಿಲ್ಲದೇ ಚಲಿಸುವಂತ ಸೌಲಭ್ಯ ಪಡೆದಿದ್ದು, 6.0-ಮೀಟರ್ ಉದ್ದ, 5.2-ಮೀಟರ್ ಅಗಲ ಮತ್ತು 3.8-ಮೀಟರ್ ಎತ್ತರವಾಗಿದೆ. ಹಾಗೆಯೇ ಈ ವಾಹನದ ಮುಂಭಾಗದಲ್ಲಿ ಇಬ್ಬರು ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ ಕೂಡಾ ಇದ್ದು, ಇದು ಸಂಪೂರ್ಣ ರಿಮೋಟ್ ಕಂಟ್ರೋಲ್ ಚಾಲಿತ ವಾಹನವಾಗಿ ಕಾರ್ಯನಿರ್ವಹಿಸಲಿದೆ.

2029ಕ್ಕೆ ಟೊಯೊಟಾ ನಿರ್ಮಾಣದ ಜಾಕ್ಸ್ ಲೂನರ್ ರೋವರ್ ಲಾಂಚ್ ಪಕ್ಕಾ..!

ಸದ್ಯ ವಿಶ್ವದ್ಯಾಂತ ಹಲವು ರಾಷ್ಟ್ರಗಳು ಬಾಹ್ಯಾಕಾಶ ಸಂಶೋಧನೆಗಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆಯೊಂದಿಗೆ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಿದ್ದು, ಜಪಾನ್ ಏರೋಸ್ಪೆಸ್ ಎಕ್ಸ್‌ಪ್ಲೊರೇಷನ್ ಎಜೆನ್ಸಿ ಕೂಡಾ ಇದೇ ನಿಟ್ಟಿನಲ್ಲಿ ಮಹತ್ವದ ಅಧ್ಯಯನಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಇದೀಗ ಟೊಯೊಟಾ ಕೂಡಾ ಕೈ ಜೋಡಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಯ ಬಾಹ್ಯಾಕಾಶ ಸಂಶೋಧನಾ ವಾಹನಗಳನ್ನು ಅಭಿವೃದ್ಧಿಗೊಳಿಸುವ ಸುಳಿವು ನೀಡಿದೆ.

2029ಕ್ಕೆ ಟೊಯೊಟಾ ನಿರ್ಮಾಣದ ಜಾಕ್ಸ್ ಲೂನರ್ ರೋವರ್ ಲಾಂಚ್ ಪಕ್ಕಾ..!

ಈ ಬಗ್ಗೆ ಮಾತನಾಡಿರುವ ಟೊಯೊಟಾ ಅಧ್ಯಕ್ಷ ಅಕಿಯೊ ಟೊಯೊಡಾ ಮತ್ತು ಜಪಾನ್ ಏರೋಸ್ಪೆಸ್ ಎಕ್ಸ್‌ಪ್ಲೊರೇಷನ್ ಎಜೆನ್ಸಿಯ ಮುಖ್ಯಸ್ಥ ಹಿರೋಷಿ ಯಮಕವಾ ಅವರು, ಜಗತ್ತಿನಾದ್ಯಂತ ಬಾಹ್ಯಾಕಾಶ ಸಂಶೋಧನೆಯಲ್ಲಿ ವಿಫುಲ ಅವಕಾಶ ತೆರೆದುಕೊಳ್ಳುತ್ತಿದ್ದು, ಜಪಾನ್ ತಂತ್ರಜ್ಞಾನ ಶಕ್ತಿಯ ಮೂಲಕ ಮುಂಬರುವ ದಿನಗಳಲ್ಲಿ ಮತ್ತಷ್ಟು ಬದಲಾಣೆಗಳಿಗೆ ಈ ಯೋಜನೆಯು ಮಹತ್ವದಾಗಿದೆ ಎಂದಿದ್ದಾರೆ.

2029ಕ್ಕೆ ಟೊಯೊಟಾ ನಿರ್ಮಾಣದ ಜಾಕ್ಸ್ ಲೂನರ್ ರೋವರ್ ಲಾಂಚ್ ಪಕ್ಕಾ..!

ಸದ್ಯ ಲೂನರ್ ರೋವರ್ ನಿರ್ಮಾಣಕ್ಕಾಗಿ ಜಂಟಿಯಾಗಿ ಮೂರು ವರ್ಷಗಳ ಸಂಶೋಧನಾ ಯೋಜನೆ ಚಾಲನೆ ನೀಡಲಾಗಿದ್ದು, ವಾಹನದ ತಾಂತ್ರಿಕ ಅಂಶಗಳ ಕುರಿತಾಗಿ ಟೊಯೊಟಾ ಸಂಸ್ಥೆ ಹಾಗೂ ಬಾಹ್ಯಾಕಾಶ ಅಧ್ಯಯನಕ್ಕೆ ಸಹಕಾರಿಯಾಗಬಲ್ಲ ಗುಣವೈಶಿಷ್ಟ್ಯತೆಗಳ ಅಭಿವೃದ್ಧಿ ಕುರಿತಂತೆ ಜಾಕ್ಸಾ ಸಂಸ್ಥೆಯು ಉಸ್ತುವಾರಿವಹಿಸಲಿದೆ.

2029ಕ್ಕೆ ಟೊಯೊಟಾ ನಿರ್ಮಾಣದ ಜಾಕ್ಸ್ ಲೂನರ್ ರೋವರ್ ಲಾಂಚ್ ಪಕ್ಕಾ..!

ಮೊದಲ ಹಂತವಾಗಿ ನಿರ್ಮಾಣವಾಗುವ ಲೂನರ್ ರೋವರ್ ಮಾದರಿಯನ್ನು 2029ಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಟೊಯೊಟಾ ಮತ್ತು ಜಾಕ್ಸಾ ಸಂಸ್ಥೆಗಳು, ಹೊಸ ಯೋಜನೆಗಾಗಿ ಬರೋಬ್ಬರಿ 20 ಸಾವಿರ ಕೋಟಿಯಷ್ಟು ಖರ್ಚು ಮಾಡುತ್ತಿವೆ.

Most Read Articles

Kannada
English summary
Toyota And Japan Aerospace Exploration Agency Aim To Launch Lunar Rover By 2029.
Story first published: Friday, July 19, 2019, 11:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X