ಅಗ್ನಿಶಾಮಕ ದಳ ವಾಹನಗಳು ಏಕೆ ಕೆಂಪು ಬಣ್ಣವನ್ನೇ ಹೊಂದಿರುತ್ತವೆ?

By Manoj Bk

ನಾವು ನೀವೆಲ್ಲಾ ನೋಡಿರುವ ಹಾಗೆ ಅಗ್ನಿಶಾಮಕ ದಳದ ವಾಹನಗಳು ಸಾಮಾನ್ಯವಾಗಿ ಕೆಂಪು ಬಣ್ಣವನ್ನೇ ಹೊಂದಿರುವುದು ನಮಗೆಲ್ಲಾ ತಿಳಿದಿರುವ ವಿಚಾರ. ಆದ್ರೆ ಅಗ್ನಿಶಾಮಕ ದಳ ವಾಹನಗಳಲ್ಲಿ ಕೆಂಪು ಬಣ್ಣವನ್ನೇ ಏಕೆ ಉಪಯೋಗ ಮಾಡುತ್ತಾರೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಹಾಗಾದ್ರೆ ಕೆಂಪು ಬಣ್ಣದ ಬಳಕೆಯ ಹಿಂದಿನ ಅಸಲಿ ಕಾರಣ ಏನು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ.

ಅಗ್ನಿಶಾಮಕ ದಳ ವಾಹನಗಳು ಏಕೆ ಕೆಂಪು ಬಣ್ಣವನ್ನೇ ಹೊಂದಿರುತ್ತವೆ?

ಅಗ್ನಿಶಾಮಕ ದಳ ವಾಹನಗಳಲ್ಲಿ ಕೆಂಪು ಬಣ್ಣವನ್ನೇ ಯಾಕೆ ಉಪಯೋಗಿಸಲಾಗುತ್ತೆ ಎನ್ನುವುದಕ್ಕೆ ಹಲವು ವೈಜ್ಞಾನಿಕ ಕಾರಣಗಳಿದ್ದು, ಅದಕ್ಕೆ ತನ್ನದೇ ಆದ ಹಿನ್ನೆಲೆಯನ್ನು ಕೂಡಾ ಹೊಂದಿದೆ ಎಂದ್ರೆ ನೀವು ನಂಬಲೇಬೇಕು. ಹೌದು, ಹಲವು ವೈಜ್ಞಾನಿಕ ಕಾರಣಗಳಿಂದ ಬಳಕೆಯಾಗುತ್ತಿರುವ ಕೆಂಪು ಬಣ್ಣದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ವಿಚಾರ ಇದು.

ಅಗ್ನಿಶಾಮಕ ದಳ ವಾಹನಗಳು ಏಕೆ ಕೆಂಪು ಬಣ್ಣವನ್ನೇ ಹೊಂದಿರುತ್ತವೆ?

ಅಂದಹಾಗೆ, ಅಗ್ನಿಶಾಮಕ ದಳದ ವಾಹನಗಳಲ್ಲಿ ಉಪಯೋಗಿಸುವ ಕೆಂಪು ಬಣ್ಣಕ್ಕೆ ಅನೇಕ ಸಿದ್ದಾಂತಗಳಿವೆ. ಜೊತೆಗೆ ಕೆಂಪು ಬಣ್ಣವಷ್ಟೇ ಅಲ್ಲದೇ ಹಳದಿ, ನೀಲಿ, ನೇರಳೆ, ಗುಲಾಬಿ ಮತ್ತು ಕಪ್ಪು ಬಣ್ಣದ ಅಗ್ನಿಶಾಮಕ ವಾಹನಗಳು ಸಹ ಬಳಕೆಯಲ್ಲಿದ್ದು, ಇವುಗಳಲ್ಲಿ ಕೆಂಪು ಬಣ್ಣಕ್ಕೆ ಹೆಚ್ಚಿನ ಆದ್ಯತೆ ಇದೆ.

ಅಗ್ನಿಶಾಮಕ ದಳ ವಾಹನಗಳು ಏಕೆ ಕೆಂಪು ಬಣ್ಣವನ್ನೇ ಹೊಂದಿರುತ್ತವೆ?

ಕೆಂಪು ಬಣ್ಣವನ್ನೇ ಏಕೆ ಬಳಸುತ್ತಾರೆ?

ಆಟೋ ಉದ್ಯಮದ ಆರಂಭದ ದಿನಗಳಲ್ಲಿ ಹೊಸ ವಾಹನಗಳನ್ನು ಬಹುತೇಕ ಕಪ್ಪು ಬಣ್ಣದಲ್ಲೇ ಉತ್ಪಾದನೆಯಾಗುತ್ತಿದ್ದವು. ಅಲ್ಲದೇ 1900ರ ಅವಧಿಯಲ್ಲಿ ಹೆನ್ರಿ ಫೋರ್ಡ್ ದೀರ್ಘಬಾಳಿಕೆಯ ಮತ್ತು ಕಡಿಮೆ ಖರ್ಚಿನ ಕಾರಣಕ್ಕಾಗಿ ತನ್ನ ಫೋರ್ಡ್ ಟಿ ಮಾದರಿಗಳಿಗಾಗಿ ಕಪ್ಪು ಬಣ್ಣವನ್ನೇ ಬಳಸಲು ಹೆಚ್ಚು ಉತ್ತೇಜಿಸಲಾಗಿತ್ತು.

ಅಗ್ನಿಶಾಮಕ ದಳ ವಾಹನಗಳು ಏಕೆ ಕೆಂಪು ಬಣ್ಣವನ್ನೇ ಹೊಂದಿರುತ್ತವೆ?

ಹೀಗಾಗಿ ಅಗ್ನಿಶಾಮಕ ದಳದ ವಾಹನಗಳು ಕಪ್ಪು ವಾಹನಗಳ ನಡುವೆ ತಮ್ಮ ವಿಭಿನ್ನವಾಗಿ ಕಾಣುವಂತೆ ವಿರುದ್ದ ಬಣ್ಣದ ಬಳಕೆಯು ಆರಂಭವಾಯ್ತು. ಆ ಸಮಯಕ್ಕೆ ಕೆಂಪು ಬಣ್ಣದತ್ತ ಹೆಚ್ಚಿನ ಒತ್ತು ನೀಡಿದ್ದರಿಂದ ಅದೊಂದು ಪರಿಪಾಠವೇ ಆಗಿದೆ.

ಅಗ್ನಿಶಾಮಕ ದಳ ವಾಹನಗಳು ಏಕೆ ಕೆಂಪು ಬಣ್ಣವನ್ನೇ ಹೊಂದಿರುತ್ತವೆ?

ಬಣ್ಣ ಮತ್ತು ವೈಜ್ಞಾನಿಕ ಹಿನ್ನೆಲೆ

ಫ್ಲೋರಿಡಾ ಹೆದ್ದಾರಿ ಕಾವಲು ದಳದ ಲೆಫ್ಟಿನೆಂಟ್ ಜೇಮ್ಸ್ ಡಿ ವೆಲ್ಸ್ ಜೂನಿಯರ್ 2004ರಲ್ಲಿ ಬಿಡುಗಡೆ ಮಾಡಿದ ಅಧ್ಯಯನದ ಪ್ರಕಾರ, ತುರ್ತು ವಾಹನದ ದೀಪವು ಕೆಂಪು ಅಥವಾ ನೀಲಿ ಆದಲ್ಲಿ ಗೋಚರ ಸುಲಭ ಎಂದು ವಾದಿಸಲಾಗಿದೆ.

ಆದರೆ ಸಂಕ್ಷಿಪ್ತವಾಗಿ ನಾವು ಇಲ್ಲಿ ನೋಡುವುದಾದರೇ, ಕೆಂಪು ದೀಪದ ಗೋಚರತೆಯು ಹಗಲಿನಲ್ಲಿ ಸುಲಭ ಹಾಗೂ ರಾತ್ರಿಯಲ್ಲಿನ ಗೋಚರವು ಕಷ್ಟದಾಯಕ ಎಂಬುವುದನ್ನು ಸಹ ಕೆಲ ಅಧ್ಯಯನಗಳು ಕಂಡುಕೊಂಡಿವೆ.

ಅಗ್ನಿಶಾಮಕ ದಳ ವಾಹನಗಳು ಏಕೆ ಕೆಂಪು ಬಣ್ಣವನ್ನೇ ಹೊಂದಿರುತ್ತವೆ?

ಇನ್ನು ವೆಲ್ಸ್‌ನ ಸಂಶೋಧನೆಗಳನ್ನು ಅಗ್ನಿಶಾಮಕ ವಾಹನದ ಬಣ್ಣಗಳೊಂದಿಗೆ ತಾಳೆ ಮಾಡಿ ನೋಡುವುದಾದರೆ, ನಾವು ಇನ್ನೂ ಏಕೆ ಅಗ್ನಿಶಾಮಕ ವಾಹನದಲ್ಲಿ ಕೆಂಪು ಬಣ್ಣವನ್ನೇ ಬಳಸುತ್ತಿದ್ದೇವೆ? ಎಂಬ ಪ್ರಶ್ನೆ ಮೂಡುವುದೇ ಇರಲಾರದು.

ಅಗ್ನಿಶಾಮಕ ದಳ ವಾಹನಗಳು ಏಕೆ ಕೆಂಪು ಬಣ್ಣವನ್ನೇ ಹೊಂದಿರುತ್ತವೆ?

1965ರಲ್ಲಿ ಇಂಗ್ಲೆಂಡ್‌ನ ಲ್ಯಾಂಚೆಸ್ಟರ್ ಕಾಲೇಜ್ ಆಫ್ ಟೆಕ್ನಾಲಜಿ ಮತ್ತು ಕೋವೆಂಟ್ರಿ ಅಗ್ನಿಶಾಮಕ ದಳವು ನಡೆಸಿದ ಸಂಶೋಧನೆಯಲ್ಲಿ ನಿಂಬೆ ಅಥವಾ ಹಳದಿ ಬಣ್ಣವನ್ನು ಬೆಳಕಿನ ಬದಲಾವಣೆಯಲ್ಲಿ ರಾತ್ರಿಯೂ ಸುಲಭವಾಗಿ ಗುರುತಿಸಬಹುದು ಎನ್ನುತ್ತದೆ.

ಅಗ್ನಿಶಾಮಕ ದಳ ವಾಹನಗಳು ಏಕೆ ಕೆಂಪು ಬಣ್ಣವನ್ನೇ ಹೊಂದಿರುತ್ತವೆ?

ಪ್ರತಿಕೂಲ ಹವಾಮಾನದಲ್ಲಿಯೂ ಈ ಬಣ್ಣಗಳು ಹೆಚ್ಚು ಸ್ಪಷ್ಟವಾಗಿ ಗೋಚರವಾಗುವುದಾಗಿಯೂ ಸಂಶೋಧನೆಗಳು ಸೂಚಿಸಿವೆ. ಈ ಕಾರಣಗಳಿಂದಲೇ ಯುಕೆಯಲ್ಲಿ ಹೆಚ್ಚಿನ ಅಗ್ನಿಶಾಮಕ ದಳದ ವಾಹನಗಳು ಕೆಂಪು ಬದಲಾಗಿ ಹಳದಿ ಗುರುತುಗಳನ್ನು ಬಳಸಲು ಪ್ರಾರಂಭವಾಯ್ತು.

ಇದಲ್ಲದೇ ಮುಂದುವರಿದ ರಾಷ್ಟ್ರಗಳಾದ ಯುಎಸ್ಎ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ನಿಂಬೆ ಅಥವಾ ಘಾಡವಾದ ಹಳದಿ ಬಣ್ಣದ ಬಳಕೆಯನ್ನು ನೋಡುತ್ತಿದ್ದೇವೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಅಗ್ನಿಶಾಮಕ ದಳ ವಾಹನಗಳು ಏಕೆ ಕೆಂಪು ಬಣ್ಣವನ್ನೇ ಹೊಂದಿರುತ್ತವೆ?

ಕೆಂಪು ಬಣ್ಣ ಕಂಟಕವೇ?

1955ರಲ್ಲಿ ಪ್ರಕಟವಾಗಿದ್ದ ನಾಲ್ಕು ವರ್ಷದ ಅಧ್ಯಯನದ ಪ್ರಕಾರ, ಅಗ್ನಿಶಾಮಕ ಉಪಕರಣದಲ್ಲಿ ಸಾಂಪ್ರದಾಯಿಕ ಕೆಂಪು ಬಣ್ಣದ ಬದಲಾಗಿ ನಿಂಬೆ ಹಳದಿ ಬಣ್ಣದ ಬಳಕೆಯನ್ನು ನ್ಯೂಯಾರ್ಕ್ ನೇತ್ರ ತಜ್ಞ ಸ್ಟೀಫನ್ ಸೊಲೊಮನ್ ಮತ್ತು ಜೇಮ್ಸ್ ಕಿಂಗ್ ಉತ್ತೇಜಿಸಿದರು. ಹಾಗೂ ಕೆಂಪು ಬಣ್ಣವು ನಿಖರವಾಗಿ ಪತ್ತೆಹಚ್ಚಲಾರದ ಬಣ್ಣವೆಂಬ ಅಭಿಪ್ರಾಯ ಮಂಡಿಸಿದ್ದರು.

ಅಗ್ನಿಶಾಮಕ ದಳ ವಾಹನಗಳು ಏಕೆ ಕೆಂಪು ಬಣ್ಣವನ್ನೇ ಹೊಂದಿರುತ್ತವೆ?

ಇದರ ಪರಿಣಾಮವೇ 1970 ಮತ್ತು 1980ರ ದಶಕದ ಆರಂಭದಲ್ಲಿ ಡಲ್ಲಾಸ್ ಅಗ್ನಿಶಾಮಕ ದಳ ಇಲಾಖೆಯು ತಮ್ಮ ಕೆಂಪುಬಣ್ಣದ ಉಪಕರಣಗಳನ್ನು ನಿಂಬೆ ಹಳದಿ ಬಣ್ಣಕ್ಕೆ ಬದಲಾಯಿಸಲು ಆರಂಭಿಸಿದ್ದು ಇದೀಗ ಇತಿಹಾಸ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಅಗ್ನಿಶಾಮಕ ದಳ ವಾಹನಗಳು ಏಕೆ ಕೆಂಪು ಬಣ್ಣವನ್ನೇ ಹೊಂದಿರುತ್ತವೆ?

ಬಣ್ಣ ಇಲ್ಲಿ ವಿಷಯವಲ್ಲ..!

ಹೌದು.. 2009ರಲ್ಲಿ ಯುಎಸ್ಎ ಅಗ್ನಿಶಾಮಕ ದಳದ ಆಡಳಿತ ಅಧ್ಯಯನ ಸಂಸ್ಥೆಯು ಯುಎಸ್ಎ ರಸ್ತೆಗಳಲ್ಲಿನ ಅಪಘಾತ ಮತ್ತು ಸಾವಿನ ಸಂಖ್ಯೆ ಕಡಿಮೆ ಮಾಡುವ ಬಗ್ಗೆ ನಡೆಸಲಾದ ಸಂಶೋಧನೆಯೊಂದ ಪ್ರಕಾರ, ಅಗ್ನಿಶಾಮಕ ದಳದ ವಾಹನಗಳಲ್ಲಿ ಬಣ್ಣಗಳ ವಿಚಾರ ಮುಖ್ಯವೇ ಅಲ್ಲ ಎಂಬ ವಾದ ಮಂಡಿಸಲಾಗಿದೆ.

ಅಗ್ನಿಶಾಮಕ ದಳ ವಾಹನಗಳು ಏಕೆ ಕೆಂಪು ಬಣ್ಣವನ್ನೇ ಹೊಂದಿರುತ್ತವೆ?

ಕಾರಣ, ವಾಹನ ಸವಾರರು ಹತ್ತಾರು ವಾಹನಗಳಲ್ಲಿ ಇದು ಅಗ್ನಿಶಾಮಕ ದಳ ವಾಹನ ಎಂದು ಪತ್ತೆ ಹಚ್ಚಲು ಸಹಕಾರಿಯಾಗಲು ಅಷ್ಟೇ ಮುಖ್ಯ ಎನ್ನುವ ಸಂಗತಿಯನ್ನು ಬಿಚ್ಚಿಟ್ಟಿದ್ದರು. ಹೀಗಾಗಿ ಅಗ್ನಿಶಾಮಕ ದಳ ವಾಹನಗಳು ಇತರೆ ವಾಹನಗಳ ಬಣ್ಣಕ್ಕಿಂತ ವಿಭಿನ್ನವಾಗಿ ಗುರುತಿಸಿಕೊಳ್ಳುವುದು ಅಷ್ಟೇ ಮುಖ್ಯ ಎಂದಿದ್ದಾರೆ.

ಹಾಗಾದ್ರೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು? ತಪ್ಪದೇ ಹಂಚಿಕೊಳ್ಳಿ..

 

Most Read Articles

Kannada
English summary
Why are fire trucks red?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X