ಸೇವೆಗೆ ಮುಕ್ತವಾದ 14 ಪಥಗಳ ಅತ್ಯಾಧುನಿಕ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇ

ಸೇವೆಗೆ ಮುಕ್ತವಾದ 14 ಪಥಗಳ ಅತ್ಯಾಧುನಿಕ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇ

By Praveen Sannamani

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಉತ್ತರ ಪ್ರದೇಶದ ಮೀರಠ್ ನಗರಗಳನ್ನು ಸಂಪರ್ಕಿಸುವ ಅತ್ಯಾಧುನಿಕ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇ ಸೇವೆಗೆ ಮುಕ್ತವಾಗಿದ್ದು, ಹತ್ತಾರು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಯಾಗಿರುವ ಈ ಎಕ್ಸ್‌ಪ್ರೆಸ್ ವೇ ಬಗೆಗಿನ ವಿಶೇಷ ಲೇಖನ ಇಲ್ಲಿದೆ ನೋಡಿ.

ಸೇವೆಗೆ ಮುಕ್ತವಾದ 14 ಪಥಗಳ ಅತ್ಯಾಧುನಿಕ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇ

ಕಳೆದ ತಿಂಗಳು 27ರಂದು ಸೇವೆಗೆ ಮುಕ್ತವಾಗಿರುವ 14 ಪಥಗಳ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇ ಹಲವು ಕಾರಣಗಳಿಂದ ಗಮನಸೆಳೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಗಳಲ್ಲಿ ಒಂದಾಗಿದ್ದ ಈ ವಿನೂತನ ಮಾರ್ಗವು ಇದೀಗ ಸೇವೆಗೆ ಮುಕ್ತವಾಗಿದೆ. ವಿಶ್ವದರ್ಜೆಯ ಸವಲತ್ತುಗಳೊಂದಿಗೆ ಸಿದ್ದವಾಗಿರುವ ಈ ಎಕ್ಸ್‌ಪ್ರೆಸ್ ವೇ ಹಲವು ಕಾರಣಗಳಿಂದ ವಿಶೇಷ ಎನ್ನಿಸಲಿದ್ದು, ಈ ರಸ್ತೆ ನಿರ್ಮಾಣದಲ್ಲಿ ಅಡಕವಾಗಿರುವ ಕೆಲವು ಮಹತ್ವದ ವಿಚಾರಗಳನ್ನು ಇಲ್ಲಿ ಚರ್ಚಿಸುತ್ತಿದ್ದೇವೆ.

ಸೇವೆಗೆ ಮುಕ್ತವಾದ 14 ಪಥಗಳ ಅತ್ಯಾಧುನಿಕ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇ

ತಂತ್ರಜ್ಞಾನ ಮತ್ತು ಸವಲತ್ತುಗಳ ವಿಚಾರದಲ್ಲಿ ಶ್ರೀಮಂತವಾಗಿರುವ ಈ ಎಕ್ಸ್‌ಪ್ರೆಸ್ ವೇ ಮಾರ್ಗವು ದೇಶದಲ್ಲಿ ಇದುವರೆಗೂ ನಿರ್ಮಾಣವಾಗಿರುವ ಎಕ್ಸ್‌ಪ್ರೆಸ್ ವೇಗಳಿಂತಲೂ ವಿಭಿನ್ನವಾಗಿದ್ದು, ಪಿಎಂ ನರೇಂದ್ರ ಮೋದಿ ಈ ಮಾರ್ಗಕ್ಕೆ ಹಸಿರು ನಿಶಾನೆ ತೋರಿದ್ದಾರೆ.

ಸೇವೆಗೆ ಮುಕ್ತವಾದ 14 ಪಥಗಳ ಅತ್ಯಾಧುನಿಕ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇ

11 ಸಾವಿರ ಕೋಟಿ ಖರ್ಚು

ಹೌದು... ಒಟ್ಟು 135 ಕಿ.ಮೀ ಉದ್ದದ ದೆಹಲಿ ಮತ್ತು ಮೀರಠ್ ನಡುವಿನ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೇಸ್ ವೇ ಮಾರ್ಗದ ನಿರ್ಮಾಣಕ್ಕಾಗಿ ಬರೋಬ್ಬರಿ 11 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ.

ಸೇವೆಗೆ ಮುಕ್ತವಾದ 14 ಪಥಗಳ ಅತ್ಯಾಧುನಿಕ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇ

ಅವಧಿಗೂ ಮುನ್ನವೇ ಪೂರ್ಣಗೊಂಡ ಯೋಜನೆ

14 ಪಥಗಳ ಎಕ್ಸ್‌ಪ್ರೆಸ್ ವೇ ಮಾರ್ಗದ ಮೊದಲ ಹಂತದ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು 30 ತಿಂಗಳು ಕಾಲಾವಕಾಶ ನೀಡಿತ್ತು. ಆದ್ರೆ ಕೇಂದ್ರದ ನೀರಿಕ್ಷೆಗಿಂತಲೂ ಮುನ್ನವೇ ಹೊಸ ಮಾರ್ಗವನ್ನು ಸೇವೆಗೆ ಮುಕ್ತಗೊಳಿಸಲಾಗಿದ್ದು, ಕೇವಲ 18 ತಿಂಗಳಲ್ಲಿ ಹೊಸ ಮಾರ್ಗ ಸಿದ್ದವಾಗಿದೆ.

ಸೇವೆಗೆ ಮುಕ್ತವಾದ 14 ಪಥಗಳ ಅತ್ಯಾಧುನಿಕ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇ

ತಗ್ಗಿದ ಪ್ರಯಾಣದ ಅವಧಿ

ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯಿಂದಾಗಿ ಸದ್ಯ ಮೀರಠ್ ಟು ದೆಹಲಿ ಸಂಪರ್ಕಿಸಲು ಕನಿಷ್ಠ ಅಂದ್ರು ನಾಲ್ಕು ಗಂಟೆಗಿಂತಲೂ ಹೆಚ್ಚಿನ ಸಮಯಾವಕಾಶ ಬೇಕಿದ್ದು, ಇದು ಎಕ್ಸ್‌ಪ್ರೆಸ್ ವೇ ನಿರ್ಮಾಣದಿಂದಾಗಿ ಕೇವಲ 45 ನಿಮಿಷಗಳಲ್ಲಿ ಸಾಧ್ಯವಾಗಲಿದೆ.

ಸೇವೆಗೆ ಮುಕ್ತವಾದ 14 ಪಥಗಳ ಅತ್ಯಾಧುನಿಕ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇ

ಅಂದಹಾಗೆ ಸದ್ಯ ಸೇವೆಗೆ ಮುಕ್ತವಾಗಿರುವ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇನಲ್ಲಿ ಮೊದಲ ಹಂತವಷ್ಟೇ ಸೇವೆಗೆ ಲಭ್ಯವಿದ್ದು, ಒಟ್ಟು 135 ಕಿ.ಮೀ ನಲ್ಲಿ 9ಕಿ.ಮೀ ಮಾರ್ಗದಲ್ಲಿ ಮಾತ್ರ ವಾಹನಗಳ ಚಾಲನೆಗೆ ಅವಕಾಶವಿದ್ದು, ಮುಂದಿನ 3 ವರ್ಷಗಳ ಅವಧಿಯಲ್ಲಿ ಈ ಯೋಜನೆಯು ಪೂರ್ಣಗೊಳಲಿದೆ.

ಸೇವೆಗೆ ಮುಕ್ತವಾದ 14 ಪಥಗಳ ಅತ್ಯಾಧುನಿಕ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇ

ವಾಹನ ಚಾಲನೆಗೆ ಲಭ್ಯವಿರುವ 9 ಕಿ.ಮೀ ಮಾರ್ಗವನ್ನು ಕೇವಲ 8 ನಿಮಿಷಗಳಲ್ಲಿ ತಲುಪಬಹುದಾಗಿದ್ದು, ಈ ಮಾರ್ಗದಲ್ಲಿ ಗಂಟೆಗೆ 120 ಕಿ.ಮೀ ವೇಗದಲ್ಲಿ ವಾಹನ ಚಾಲನೆಗೆ ಅವಕಾಶವಿದೆ ಎನ್ನಲಾಗಿದೆ. ಇದಕ್ಕಾಗಿಯೇ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಪಾದಾಚಾರಿ ಮಾರ್ಗಗಳು ಮತ್ತು ಕೆಳ ಹಾಗೂ ಮೇಲುಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ.

ಸೇವೆಗೆ ಮುಕ್ತವಾದ 14 ಪಥಗಳ ಅತ್ಯಾಧುನಿಕ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇ

ಇನ್ನು ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇ ಮಾರ್ಗದಲ್ಲಿ ಒಟ್ಟು 50 ಸೇತುವೆಗಳು, 3 ಮೇಲುಸೇತುವೆಗಳು, 7 ಇಂಟರ್ ಸೆಕ್ಷನ್‌ಗಳು ಮತ್ತು 221 ಕೆಳಸೇತುವೆಗಳನ್ನು ನಿರ್ಮಾಣ ಮಾಡುವ ಗುರಿಹೊಂದಲಾಗಿದ್ದು, ಈ ಯೋಜನೆಯಲ್ಲಿ ಬರೋಬ್ಬರಿ 9,500 ಕಾರ್ಮಿಕರು ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ.

ಸೇವೆಗೆ ಮುಕ್ತವಾದ 14 ಪಥಗಳ ಅತ್ಯಾಧುನಿಕ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇ

ಪರಿಸರ ಸ್ನೇಹಿ ಮಾರ್ಗ

ನೀವು ನಂಬುತ್ತಿರೋ ಇಲ್ವೋ ಗೊತ್ತಿಲ್ಲಾ. ದೆಹಲಿಗೆ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ್, ರಾಜಸ್ತಾನ, ಉತ್ತರಾಖಂಡ್ ಮತ್ತು ಹರಿಯಾಣದ ಮಾರ್ಗದಿಂದ ದಿನನಿತ್ಯ 3 ರಿಂದ 4 ಲಕ್ಷ ವಾಹನಗಳ ಸಂಚಾರ ದಟ್ಟಣೆಯಿದ್ದು, ಮೊದಲ ಹಂತವಾಗಿ ಹೊಸ ಮಾರ್ಗದಲ್ಲಿ 50 ಸಾವಿರ ವಾಹನಗಳು ಸಂಚರಿಸುವ ನೀರಿಕ್ಷೆಯಿದೆ.

ಸೇವೆಗೆ ಮುಕ್ತವಾದ 14 ಪಥಗಳ ಅತ್ಯಾಧುನಿಕ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇ

ಈ ಮೂಲಕ ಶೇ.41 ರಷ್ಟು ಮಾಲಿನ್ಯ ಪ್ರಮಾಣವನ್ನು ತಡೆಯಬಹುದಾಗಿದ್ದು, ಹೊಸ ಎಕ್ಸ್‌ಪ್ರೆಸ್ ವೇ ಮಾರ್ಗದಲ್ಲಿ ನಿರ್ಮಿಸಲಾಗಿರುವ ಸೌರ ವಿದ್ಯುತ್ ಘಟಕಗಳಿಂದ 400 ಮೆ.ಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಎಕ್ಸ್‌ಪ್ರೆಸ್ ವೇ ಬೇಕಾದ ವಿದ್ಯುತ್ ಬೇಡಿಕೆಯನ್ನು ಇಲ್ಲಿಯೇ ಅಭಿವೃದ್ಧಿ ಮಾಡುವ ವ್ಯವಸ್ಥೆಯಿದೆ.

ಸೇವೆಗೆ ಮುಕ್ತವಾದ 14 ಪಥಗಳ ಅತ್ಯಾಧುನಿಕ ಈಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್‌ ವೇ

ಇನ್ನು ಕೊನೆಯದಾಗಿ, ಈ ಮಾರ್ಗದಲ್ಲಿ ಅತ್ಯಾಧುನಿಕ ಹೈವೇ ಟ್ರಾಫಿಕ್ ಮ್ಯಾನೆಜ್‌ಮೆಂಟ್ ಸಿಸ್ಟಂ, ವಿಡಿಯೋ ಇನ್ಸಿಡೆಂಟ್ ಡಿರೇಕ್ಷನ್ ಸಿಸ್ಟಂ ಮತ್ತು ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸೌಲಭ್ಯವನ್ನು ಅಳವಡಿಕೆ ಮಾಡಲಾಗಿದ್ದು, ಯಾವುದೇ ಹಂತದಲ್ಲೂ ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡಿದಲ್ಲಿ ಇ-ಚಲನ್ ಮೂಲಕ ಭಾರೀ ದಂಡ ವಸೂಲಿ ಮಾಡಲಾಗುತ್ತದೆ.

More from DriveSpark

Article Published On: Monday, June 11, 2018, 18:36 [IST]
English summary
Eastern Peripheral Expressway: 5 things you do not know.
Read more on national highway
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+