ಜಾಗ್ವಾರ್ ಎಫ್-ಟೈಪ್ ಎಸ್‌ವಿಆರ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಆರಂಭ
ಬ್ರಿಟಿಷ್ ಲುಗ್ಷುರಿ ಕಾರು ಉತ್ಪಾದಕ ಸಂಸ್ಥೆಯಾದ ಜಾಗ್ವಾರ್ ಸದ್ಯದಲ್ಲೇ ತನ್ನ ಸೂಪರ್ ಕಾರು ಮಾದರಿಯಾದ ಎಫ್-ಟೈಪ್ ಎಸ್‌ವಿಆರ್ ಬಿಡುಗಡೆ ಮಾಡುತ್ತಿದ್ದು, ಈ ಹಿನ್ನೆಲೆ ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಬ್ರಿಟಿಷ್ ಲುಗ್ಷುರಿ ಕಾರು ಉತ್ಪಾದಕ ಸಂಸ್ಥೆಯಾದ ಜಾಗ್ವಾರ್ ಸದ್ಯದಲ್ಲೇ ತನ್ನ ಸೂಪರ್ ಕಾರು ಮಾದರಿಯಾದ ಎಫ್-ಟೈಪ್ ಎಸ್‌ವಿಆರ್ ಬಿಡುಗಡೆ ಮಾಡುತ್ತಿದ್ದು, ಈ ಹಿನ್ನೆಲೆ ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಜಾಗ್ವಾರ್ ಸಂಸ್ಥೆಯ ಸ್ಪೆಷಲ್ ವೆಹಿಕಲ್ ಆಪರೇಷನ್ ತಂಡದಿಂದ ಸಿದ್ದವಾಗಿರುವ ಎಫ್-ಟೈಪ್ ಎಸ್‌ವಿಆರ್ ಕಾರುಗಳು ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಸೂಪರ್ ಕಾರು ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ. ಕೂಪೆ ಮತ್ತು ಕನ್ವರ್ಟ್‌ಬಲ್ ಎರಡು ಮಾದರಿಯಲ್ಲೂ ಹೊಸ ಕಾರುಗಳು ಲಭ್ಯವಾಗಲಿದ್ದು, ಕಾರಿನ ಬೆಲೆಯನ್ನು ಆರಂಭಿಕವಾಗಿ ರೂ. 2.65 ಕೋಟಿಗೆ ನಿಗದಿಪಡಿಸಲಾಗಿದೆ.

ಜಾಗ್ವಾರ್ ಲ್ಯಾಂಡ್ ರೋವರ್ ಸ್ಪೆಷಲ್ ವೆಹಿಕಲ್ ಆಪರೇಷನ್ ತಂಡದಿಂದ ಸಿದ್ದವಾಗಿರುವ ಎಫ್-ಟೈಪ್ ಎಸ್‌ವಿಆರ್ ಸೂಪರ್ ಕಾರುಗಳು ಬಲಿಷ್ಠ ಎಂಜಿನ್ ಮಾದರಿಯನ್ನು ಪಡೆದುಕೊಂಡಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವಿಶೇಷವಾಗಿ ಅಭಿವೃದ್ಧಿಗೊಳಿಸಲಾಗಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಎಫ್-ಟೈಪ್ ಕಾರುಗಳ ಮುಂದುವರಿದ ಭಾಗವಾಗಿರುವ ಎಫ್-ಟೈಪ್ ಎಸ್‌ವಿಆರ್ ಕಾರುಗಳು ಹಿಂದಿನ ಆವೃತ್ತಿಗಿಂತ ಹೆಡ್‌ಲ್ಯಾಂಪ್ ಕ್ಲಸ್ಟರ್, ಬಂಪರ್ ಮತ್ತು ಟೈಲ್ ಲ್ಯಾಂಪ್ ವಿನ್ಯಾಸದಲ್ಲಿ ಭಾರೀ ಬದಲಾವಣೆ ಪಡೆದುಕೊಂಡಿದೆ.

ಇನ್ನು ಹೊಸ ಕಾರುಗಳ ತೂಕ ಕಡಿತ ಮಾಡಲು ಲೈಟ್‌ವೇಟ್ ಟೈಟಾನಿಯಂ ಬಳಕೆಯ ಎಕ್ಸಾಸ್ಟ್, ಅಲಾಯ್ ವೀಲ್ಹ್, ಕನ್ವರ್ಟ್‌ಬಲ್ ಬಾಗಿಲುಗಳನ್ನು ಬಳಕೆ ಮಾಡಲಾಗಿದ್ದು, ಬ್ರೇಕಿಂಗ್ ಸಿಸ್ಟಂನಲ್ಲೂ ಕೆಲವು ಬದಲಾವಣೆ ತರಲಾಗಿದೆಯೆಂತೆ.

ಎಂಜಿನ್ ಸಾಮರ್ಥ್ಯ
ಎಫ್-ಟೈಪ್ ಎಸ್‌ವಿಆರ್ ಕಾರುಗಳು 5.0-ಲೀಟರ್ ಸೂಪರ್ ಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಹೊಂದಿದ್ದು, 567-ಬಿಎಚ್‌ಪಿ ಮತ್ತು 700-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಜೊತೆಗೆ 8-ಸ್ಪೀಡ್ ಜೆಡ್ಎಫ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದಿದೆ.

ಎಫ್-ಟೈಪ್ ಎಸ್‌ವಿಆರ್‌ನಲ್ಲಿರುವ ಕೂಪೆ ಮತ್ತು ಕನ್ವರ್ಟ್‌ಬಲ್ ಎರಡು ಮಾದರಿಗಳು ಸಹ ಎಂಜಿನ್ ಪರ್ಫಾಮೆನ್ಸ್‌ನಲ್ಲಿ ವಿಭಿನ್ನತೆಯನ್ನು ಹೊಂದಿದ್ದು, ಇದರಲ್ಲಿ ಕೂಪೆ ಕಾರುಗಳೇ ಹೆಚ್ಚು ಬಲಿಷ್ಠವಾಗಿರಲಿವೆ ಎಂದು ಹೇಳಲಾಗಿದೆ.

ಹೀಗಾಗಿ ಕೂಪೆ ಕಾರುಗಳು ಕೇವಲ 3.7 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮಿ ವೇಗ ಸಾಧಿಸಿವುದಲ್ಲದೇ ಪ್ರತಿ ಗಂಟೆಗೆ 322ಕಿ.ಮಿ ಸ್ಪೀಡ್ ಪಡೆದುಕೊಂಡಿದರೇ, ಕನ್ವರ್ಟ್‌ಬಲ್ ಮಾದರಿಯು 3.7 ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮೀ ವೇಗ ಸಾಧಿಸಿದರು ಪ್ರತಿ ಗಂಟೆಗೆ 314 ಕಿ.ಮೀ ಗರಿಷ್ಠ ಸ್ಪೀಡ್ ಹೊಂದಿದೆ.

ಇದಕ್ಕಾಗಿಯೇ ಹೊಸ ಕಾರುಗಳಲ್ಲಿ ಪರ್ಫಾಮೆನ್ಸ್‌ಗೆ ಅನಕೂಲಕರವಾಗುವ ಪೇರೆಲಿ ಪಿ-ಜೀರೋ ಟೈರ್‌ಗಳನ್ನು ಬಳಕೆ ಮಾಡಲಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿರುವ ಪೋರ್ಷೆ 911 ಟರ್ಬೋ, ಆಡಿ ಆ8 ವಿ10 ಪ್ಲಸ್, ನಿಸ್ಸಾನ್ ಜಿಟಿಆರ್ ಮತ್ತು ಮರ್ಸಿಡಿಸ್-ಎಎಂಜಿ ಜಿಟಿ ಆರ್ ಕಾರುಗಳಿಗೆ ತ್ರೀವ ಪೈಪೋಟಿ ನೀಡುವ ತವಕದಲ್ಲಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಜಾಗ್ವಾರ್ ಸಂಸ್ಥೆಯು ಪರಿಚಯಿಸುತ್ತಿರುವ ಎಫ್-ಟೈಪ್ ಸರಣಿಗಳು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಸಿದ್ದವಾಗಿದ್ದು, ಇವು ಪರ್ಫಾಮೆನ್ಸ್, ಸಾಮಾನ್ಯವಾಗಿ ಬಳಕೆ ಮಾಡುವ ಐಷಾರಾಮಿ ಕಾರುಗಳ ಮಧ್ಯದ ಮಾದರಿಯಾಗಿದೆ. ಹೀಗಿರುವಾಗ ಭಾರತೀಯ ಗ್ರಾಹಕರಿಗೆ ಇಂತಹದೇ ಮಾದರಿಗಳು ಹೆಚ್ಚು ಆಕರ್ಷಣೆಯಾಗಲಿದ್ದು, ಬಿಡುಗಡೆ ನಂತರ ಹೊಸ ಕಾರಿನ ಮತ್ತಷ್ಟು ತಾಂತ್ರಿಕ ಅಂಶಗಳನ್ನು ನಿಮ್ಮ ಡ್ರೈವ್‌ಸ್ಪಾರ್ಕ್ ನೀಡಲಿದೆ.


Click it and Unblock the Notifications








