ವಿಟಾರಾ ಬ್ರೇಝಾ ಹಿಂದಿಕ್ಕುತ್ತಾ ಬರಲಿರುವ ಜೀಪ್ ನ್ಯೂ ಎಸ್‌ಯುವಿ..?

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹಾಟ್ ಚಿಪ್ಸ್‌ನಂತೆ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಎಸ್‌ಯುವಿ ಕಾರುಗಳನ್ನು ಹಿಂದಿಕ್ಕಲು ಜೀಪ್ ಇಂಡಿಯಾ ಸಂಸ್ಥೆಯು ಮಹತ್ವದ ಯೋಜನೆಯೊಂದನ್ನು ರೂಪಿಸುತ್ತಿದೆ.

By Praveen Sannamani

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹಾಟ್ ಚಿಪ್ಸ್‌ನಂತೆ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಎಸ್‌ಯುವಿ ಕಾರುಗಳನ್ನು ಹಿಂದಿಕ್ಕಲು ಜೀಪ್ ಇಂಡಿಯಾ ಸಂಸ್ಥೆಯು ಮಹತ್ವದ ಯೋಜನೆಯೊಂದನ್ನು ರೂಪಿಸುತ್ತಿದ್ದು, ಕೈಗೆಟುವ ಬೆಲೆಯಲ್ಲಿ ಸಣ್ಣ ಗಾತ್ರದ ಎಸ್‌ಯುವಿ ಕಾರು ಮಾದರಿ ಒಂದನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ವಿಟಾರಾ ಬ್ರೇಝಾ ಹಿಂದಿಕ್ಕುತ್ತಾ ಬರಲಿರುವ ಜೀಪ್ ನ್ಯೂ ಎಸ್‌ಯುವಿ..?

ಹೊಸ ಕಾರಿನ ಬಿಡುಗಡೆಯ ಬಗ್ಗೆ ಈಗಾಗಲೇ ಜೀಪ್ ಸಂಸ್ಥೆಯು ಸುಳಿವು ನೀಡಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆ ಇಂತದೊಂದು ಮಹತ್ವದ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಜೊತೆಗೆ ಹೊಸ ಕಾರುಗಳನ್ನು 4x4 ವೈಶಿಷ್ಟ್ಯತೆಗಳೊಂದಿಗೆ ಪರಿಚಯಿಸಲಿರುವ ಜೀಪ್ ಸಂಸ್ಥೆಯು ಆಪ್ ರೋಡ್ ವಿನ್ಯಾಸಗಳೊಂದಿಗೆ ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.

ವಿಟಾರಾ ಬ್ರೇಝಾ ಹಿಂದಿಕ್ಕುತ್ತಾ ಬರಲಿರುವ ಜೀಪ್ ನ್ಯೂ ಎಸ್‌ಯುವಿ..?

ಹೀಗಾಗಿ ಮೊದಲ ಹಂತದಲ್ಲೇ ಜನಪ್ರಿಯ ವಿಟಾರಾ ಬ್ರೆಝಾ ಕಾರುಗಳನ್ನೇ ಟಾರ್ಗೆಟ್ ಮಾಡಿರುವ ಜೀಪ್ ಸಂಸ್ಥೆಯು, ತನ್ನದೇ ಆದ ಜೀಪ್ ರೆನೆಗ್ರೆಡ್ ಕಾರುಗಳ ತಳಹದಿಯಲ್ಲೇ ಸಣ್ಣ ಗಾತ್ರದ ಎಸ್‌ಯುವಿಗಳನ್ನು ಅಭಿವೃದ್ಧಿ ಮಾಡಲಿದೆಯೆಂತೆ.

ವಿಟಾರಾ ಬ್ರೇಝಾ ಹಿಂದಿಕ್ಕುತ್ತಾ ಬರಲಿರುವ ಜೀಪ್ ನ್ಯೂ ಎಸ್‌ಯುವಿ..?

ಜೊತೆಗೆ ಜೀಪ್ ಸಂಸ್ಥೆಯು ನಿರ್ಮಾಣ ಮಾಡಲಿರುವ ಸಣ್ಣ ಗಾತ್ರ ಎಸ್‌ಯುವಿ ಕಾರುಗಳು ನೆಕ್ಸ್ಟ್ ಜನರೇಷನ್ ಫಿಯೆಟ್ ಪಾಂಡಾ ಕಾರಿನ ವೈಶಿಷ್ಟ್ಯತೆಗಳನ್ನೇ ಪಡೆದುಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ವಿಟಾರಾ ಬ್ರೇಝಾ ಹಿಂದಿಕ್ಕುತ್ತಾ ಬರಲಿರುವ ಜೀಪ್ ನ್ಯೂ ಎಸ್‌ಯುವಿ..?

ಇದಕ್ಕೆ ಕಾರಣ, ಫಿಯೆಟ್ ಪಾಂಡಾ ಕಾರುಗಳು ಈಗಾಗಲೇ ಮುಂದುವರಿದ ಕೆಲ ರಾಷ್ಟ್ರಗಳಲ್ಲಿ ಭಾರೀ ಪ್ರಮಾಣದ ಜನಪ್ರಿಯತೆಯೊಂದಿಗೆ ಮಾರಾಟವಾಗುತ್ತಿದ್ದು, ಅದೇ ತಂತ್ರಗಾರಿಕೆಯನ್ನು ಜೀಪ್ ಸಂಸ್ಥೆಯು ತನ್ನ ಹೊಸ ಎಸ್‌ಯುವಿ ಕಾರಿನಲ್ಲೂ ಅಳವಡಿಸುವ ಇರಾದೆಯಲ್ಲಿದೆ.

ವಿಟಾರಾ ಬ್ರೇಝಾ ಹಿಂದಿಕ್ಕುತ್ತಾ ಬರಲಿರುವ ಜೀಪ್ ನ್ಯೂ ಎಸ್‌ಯುವಿ..?

ಇದಲ್ಲದೇ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಸೇರಿದಂತೆ ಹಲವು ಸುರಕ್ಷಾ ವೈಶಿಷ್ಟ್ಯತೆಗಳನ್ನು ಹೊಂದಿರುವ ಫಿಯೆಟ್ ಪಾಂಡಾ ಕಾರುಗಳು ಅತಿ ಕಡಿಮೆಯಲ್ಲಿ ಮಾರಾಟವಾಗುತ್ತಿದ್ದು, ಈ ಹಿನ್ನೆಲೆ ಭಾರತದಲ್ಲಿ ಜೀಪ್ ಹೊಸ ಕಾರು ಕೂಡಾ ಜನಪ್ರಿಯತೆ ಹೊಂದುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.

ವಿಟಾರಾ ಬ್ರೇಝಾ ಹಿಂದಿಕ್ಕುತ್ತಾ ಬರಲಿರುವ ಜೀಪ್ ನ್ಯೂ ಎಸ್‌ಯುವಿ..?

ಮೂಲಗಳ ಪ್ರಕಾರ 2019ರ ಮೊದಲಾರ್ಧದಲ್ಲೇ ಹೊಸ ಕಾರುನ್ನು ಬಿಡುಗಡೆಗೊಳಿಸುವ ಯೋಜನೆ ರೂಪಿಸಿರುವ ಜೀಪ್, ಹೊಸ ಕಾರುಗಳಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ.

ವಿಟಾರಾ ಬ್ರೇಝಾ ಹಿಂದಿಕ್ಕುತ್ತಾ ಬರಲಿರುವ ಜೀಪ್ ನ್ಯೂ ಎಸ್‌ಯುವಿ..?

ಕಾರಿನ ಬೆಲೆಗಳು(ಅಂದಾಜು)

ಎಕ್ಸ್‌ಶೋರಂ ಪ್ರಕಾರ ಹೊಸ ಕಾರಿನ ಬೆಲೆಗಳು ರೂ. 11 ಲಕ್ಷದಿಂದ ರೂ.14 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ವಿಟಾರಾ ಬ್ರೇಝಾ ಹಿಂದಿಕ್ಕುತ್ತಾ ಬರಲಿರುವ ಜೀಪ್ ನ್ಯೂ ಎಸ್‌ಯುವಿ..?

ಇದರಿಂದಾಗಿ ಸದ್ಯ ಮಾರುಕಟ್ಟೆಯಲ್ಲಿರುವ ವಿಟಾರಾ ಬ್ರೆಝಾ, ಫೋರ್ಡ್ ಇಕೋಸ್ಪೋರ್ಟ್ ಮತ್ತು ನೆಕ್ಸಾನ್ ಕಾರುಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗಲಿದ್ದು, ಹೊಸ ಕಾರುಗಳ ಮೇಲೆ ವಿಧಿಸಲಾಗುವ ಬೆಲೆಗಳ ಆಧಾರದ ಮೇಲೆ ಹೊಸ ಕಾರುಗಳ ಭವಿಷ್ಯವು ನಿರ್ಧಾರವಾಗಲಿದೆ ಎನ್ನಬಹುದು.

ವಿಟಾರಾ ಬ್ರೇಝಾ ಹಿಂದಿಕ್ಕುತ್ತಾ ಬರಲಿರುವ ಜೀಪ್ ನ್ಯೂ ಎಸ್‌ಯುವಿ..?

ಇನ್ನು ಜೀಪ್ ಸಂಸ್ಥೆಯು ಭಾರತದಲ್ಲಿ ಫಿಯೆಟ್ ಕ್ಲೈಸರ್ ಆಟೋ ಮೊಬೈಲ್ ಸಂಸ್ಥೆಯ ಜೊತೆಗೂಡಿ ಸ್ಥಳೀಯ ಮಟ್ಟದ ಬೀಡಿಭಾಗಗಳನ್ನು ಬಳಸಿಕೊಂಡು ಅಗ್ಗದ ಬೆಲೆಯಲ್ಲಿ ಕಾರು ನಿರ್ಮಾಣ ಮಾಡುವ ಯೋಜನೆಗೆ ಚಾಲನೆ ನೀಡಿದ್ದು, 2019ರ ವೇಳೆಗೆ 2.40 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡುವ ಗುರಿಹೊಂದಿದೆ.

Most Read Articles

Kannada
Read more on jeep suv
English summary
Jeep Confirms New Entry-Level Compact SUV For India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X