ಇವಿ ವಾಹನಗಳಿಗಾಗಿ ಬರೋಬ್ಬರಿ 900 ಕೋಟಿ ಹೂಡಿಕೆ ಮಾಡಲಿದೆ ಮಹೀಂದ್ರಾ...

ಎಲೆಕ್ಟ್ರಿಕ್ ಕಾರುಗಳಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದ್ದು,ಈ ಹಿನ್ನೆಲೆ ಬೃಹತ್ ಯೋಜನೆ ಸಿದ್ದಗೊಳಿಸಿರುವ ಮಹಿಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯು ಇವಿ ಕಾರುಗಳ ಉತ್ಪಾದನೆ ಮತ್ತು ಸಂಶೋಧನೆಗಾಗಿ ಬರೋಬ್ಬರಿ 900 ಕೋಟಿ ಹೂಡಿಕೆ ಮಾಡುತ್ತಿದೆ.

By Praveen

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಈ ಹಿನ್ನೆಲೆ ಬೃಹತ್ ಯೋಜನೆ ಸಿದ್ದಗೊಳಿಸಿರುವ ಮಹಿಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯು ಇವಿ ಕಾರುಗಳ ಉತ್ಪಾದನೆ ಮತ್ತು ಸಂಶೋಧನೆಗಾಗಿ ಬರೋಬ್ಬರಿ 900 ಕೋಟಿ ಹೂಡಿಕೆ ಮಾಡುತ್ತಿದೆ.

ಇವಿ ವಾಹನಗಳಿಗಾಗಿ ಬರೋಬ್ಬರಿ 900 ಕೋಟಿ ಹೂಡಿಕೆ ಮಾಡಲಿದೆ ಮಹೀಂದ್ರಾ...

ಇ ಮೊಲಿಬಿಟಿಗೆ ಹೆಚ್ಚಿನ ಆಸಕ್ತಿ ವಹಿಸಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಹೊಸ ಉತ್ಪನ್ನಗಳನ್ನು ಪರಿಚಯಿಸುವ ತವಕದಲ್ಲಿದೆ.

ಇವಿ ವಾಹನಗಳಿಗಾಗಿ ಬರೋಬ್ಬರಿ 900 ಕೋಟಿ ಹೂಡಿಕೆ ಮಾಡಲಿದೆ ಮಹೀಂದ್ರಾ...

ಇದಕ್ಕಾಗಿಯೇ ವಿವಿಧ ಹಂತದಲ್ಲಿ ಗ್ರಾಹಕರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿ ಮಾಡಲಿರುವ ಮಹೀಂದ್ರಾ, ಉತ್ಪಾದನೆ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡುತ್ತಿದೆ.

ಇವಿ ವಾಹನಗಳಿಗಾಗಿ ಬರೋಬ್ಬರಿ 900 ಕೋಟಿ ಹೂಡಿಕೆ ಮಾಡಲಿದೆ ಮಹೀಂದ್ರಾ...

ಎಲೆಕ್ಟ್ರಿಕ್ ಕಾರುಗಳಿಗೆ ವಿಶೇಷ ಬೇಡಿಕೆ ಇರುವ ಕರ್ನಾಟಕದಲ್ಲಿ 400 ಕೋಟಿ ಮತ್ತು ಮಹಾರಾಷ್ಟ್ರದಲ್ಲಿ 500 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿರುವ ಮಹೀಂದ್ರಾ ಎಲೆಕ್ಟ್ರಿಕ್ ಸಂಸ್ಥೆಯು ಇ ಮೊಬಿಲಿಟಿಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಉದ್ದೇಶ ಹೊಂದಿದೆ.

ಇವಿ ವಾಹನಗಳಿಗಾಗಿ ಬರೋಬ್ಬರಿ 900 ಕೋಟಿ ಹೂಡಿಕೆ ಮಾಡಲಿದೆ ಮಹೀಂದ್ರಾ...

ಈ ಬಗ್ಗೆ ಮಾತನಾಡಿರುವ ಮಹೀಂದ್ರಾ ನಿರ್ದೇಶಕ ಪವನ್ ಗೋಯಾಂಕ್, ಮಹೀಂದ್ರಾ ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಮೊದಲ ಹಂತವನ್ನು ತಲುಪಿದ್ದು, ಸದ್ಯದ ಮಾರುಕಟ್ಟೆಯ ಸನ್ನಿವೇಶಕ್ಕೆ ತಕ್ಕಂತೆ ಇವಿ ವಾಹನಗಳ ಉತ್ಪಾದನೆಯಲ್ಲಿ ಮೊತ್ತೊಂದು ಹಂತ ತಲುಪುವ ಉದ್ದೇಶದಿಂದ ಬೃಹತ್ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ' ಎಂದಿದ್ದಾರೆ.

ಇವಿ ವಾಹನಗಳಿಗಾಗಿ ಬರೋಬ್ಬರಿ 900 ಕೋಟಿ ಹೂಡಿಕೆ ಮಾಡಲಿದೆ ಮಹೀಂದ್ರಾ...

ಹೀಗಾಗಿ ಸದ್ಯ ಪ್ರತಿ ತಿಂಗಳು ಉತ್ಪಾದನೆಯಾಗುತ್ತಿರುವ 400 ಎಲೆಕ್ಟ್ರಿಕ್ ಕಾರುಗಳ ಸಂಖ್ಯೆ ಮುಂಬರುವ ಸೆಪ್ಟೆಂಬರ್ ಹೊತ್ತಿಗೆ 1500 ಕ್ಕೆ ಏರಿಕೆಯಾಗಲಿದ್ದು, 2019ರ ಮುಕ್ತಾಯಕ್ಕೆ ಇದನ್ನು 4 ಸಾವಿರಕ್ಕೆ ಕೊಂಡ್ಯುವ ಗುರಿ ಹೊಂದಲಾಗಿದೆ.

ಇವಿ ವಾಹನಗಳಿಗಾಗಿ ಬರೋಬ್ಬರಿ 900 ಕೋಟಿ ಹೂಡಿಕೆ ಮಾಡಲಿದೆ ಮಹೀಂದ್ರಾ...

ಇನ್ನು 2018ರ ಆಟೋ ಎಕ್ಸ್ ಪೋದಲ್ಲಿ ತನ್ನ ಭವಿಷ್ಯದ ಎಲೆಕ್ಟ್ರಿಕ್ ಕಾರು ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿಯನ್ನು ಹೊರಹಾಕಿದ್ದ ಮಹೀಂದ್ರಾ ಸಂಸ್ಥೆಯು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಜೊತೆ ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲೂ ಅಧಿಪತ್ಯ ಸಾಧಿಸುವ ಬಗ್ಗೆ ಸುಳಿವು ನೀಡಿದೆ.

ಇವಿ ವಾಹನಗಳಿಗಾಗಿ ಬರೋಬ್ಬರಿ 900 ಕೋಟಿ ಹೂಡಿಕೆ ಮಾಡಲಿದೆ ಮಹೀಂದ್ರಾ...

ಇದಕ್ಕೆ ಪೂರಕ ಎಂಬಂತೆಬೆಂಗಳೂರು ಮೂಲದ ಭಾಗೀರಥಿ ಗ್ರೂಪ್ ಜೊತೆಗೂಡಿರುವ ಮಹೀಂದ್ರಾ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ 50 ವೆರಿಟೊ ಸೆಡಾನ್ ಎಲೆಕ್ಟ್ರಿಕ್ ಕಾರುಗಳನ್ನು ಹಸ್ತಾಂತರಿಸುವ ಮೂಲಕ ಇ ಮೊಲಿಬಿಟಿ ಜಾಗೃತಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೊರಿದೆ.

Trending On DriveSpark Kannada:

ವಯಸ್ಸು 103, ಆದ್ರು ಕಡಿಮೆ ಆಗಿಲ್ಲಾ ಇವರ ಕ್ಯಾಬ್ ಚಾಲನೆಯಲ್ಲಿನ ಹುಮ್ಮಸ್ಸು...

ED ವಶವಾದ ನೀರವ್ ಮೋದಿ ಐಷಾರಾಮಿ ಕಾರ್ ಕಲೆಕ್ಷನ್...

ರೈಲಿನ ಕೊನೆಯ ಬೋಗಿಯ ಹಿಂದಿನ 'X' ಚಿಹ್ನೆಯ ರಹಸ್ಯ ಏನು?

Most Read Articles

Kannada
Read more on mahindra electric cars
English summary
Mahindra Group Takes A Giant Step On Electric Vehicle Technology, Announces Rs 900 Crore Investment.
Story first published: Thursday, February 22, 2018, 18:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X