ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಎಷ್ಟು ಗೊತ್ತಾ?
ಮಹೀಂದ್ರಾ ಸಂಸ್ಥೆಯು ಕಾರು ಮಾರಾಟದಲ್ಲಿ ಹೊಸ ಮುನ್ನಡೆ ಬರೆಯುತ್ತಿದ್ದು, ಇದಕ್ಕೆ ಪ್ರತಿಯಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ನಮೂನೆ ಹೊಸ ಉತ್ಪನ್ನಗಳನ್ನು ಸಹ ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಸ್ಯಾಂಗ್‌ಯಾಂಗ್ ಜೊತೆಗೂಡಿ ಅಭಿವೃದ್ಧಿಪಡಿಸಲಾಗಿರುವ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಇದೀಗ ಬಿಡುಗಡೆಗೂ ಮುನ್ನವೇ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಈಗಾಗಲೇ ಮುಂಚೂಣಿ ಸಾಧಿಸಿರುವ ದೇಶದ ಏಕೈಕ ಸಂಸ್ಥೆಯಾದ ಮಹೀಂದ್ರಾ ಸದ್ಯದಲ್ಲೇ ಮತ್ತೊಂದು ವಿನೂತನ ಎಲೆಕ್ಟ್ರಿಕ್ ಕಾರನ್ನು ಹೊರತರುವ ಯೋಜನೆಯಲ್ಲಿದ್ದು, ದಕ್ಷಿಣ ಕೊರಿಯಾದ ಆಟೋ ಉತ್ಪಾದನಾ ಸಂಸ್ಥೆಯಾದ ಸ್ಯಾಂಗ್‌ಯಾಂಗ್ ಜೊತೆಗೂಡಿ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರನ್ನು ಸಿದ್ದಗೊಳಿಸಿದೆ.

2019ರ ಮಾರ್ಚ್ ಹೊತ್ತಿಗೆ ಕೆಯುವಿ100 ಕಂಪ್ಯಾಕ್ಟ್ ಎಸ್‌ಯುವಿ ಎಲೆಕ್ಟ್ರಿಕ್ ಮಾದರಿಯಲ್ಲೇ ಸ್ಯಾಂಗ್‌ಯಾಂಗ್ ಜೊತೆಗೂಡಿ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಟ್ರಿವೊಲಿ ಕಾರಿನ ಆಕಾರವನ್ನೇ ಪಡೆದುಕೊಂಡಿದೆ.

ಮಹೀಂದ್ರಾ ಮತ್ತು ಸ್ಯಾಂಗ್‌ಯಾಂಗ್ ಸಂಸ್ಥೆಯು ಸದ್ಯ ಹೊಸ ಕಾರಿನ ಹೆಸರನ್ನು ಬಹಿರಂಗ ಮಾಡಿಲ್ಲವಾದರೂ ಹೊಸ ಕಾರಿಗೆ ಎಸ್201 ಎನ್ನುವ ಕೋಡ್‍ನೆಮ್ ಆಧಾರ ಮೇಲೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಸದ್ಯ ಮಹೀಂದ್ರಾ ಸಂಸ್ಥೆಯು ಇ ವೆರಿಟೊ ಸೆಡಾನ್ ಮತ್ತು e2o ಪ್ಲಸ್ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದ್ದು, ಮುಂಬರುವ 5 ವರ್ಷಗಳಲ್ಲಿ 10ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಗೊಳಿಸುವ ಯೋಜನೆಯಲ್ಲಿದೆಯೆಂತೆ.

ಇದರಲ್ಲಿ ಮೊದಲ ಬಾರಿಗೆ ಎಸ್‌ಯುವಿ ಆವೃತ್ತಿಯನ್ನು ಎಲೆಕ್ಟ್ರಿಕ್ ಮಾದರಿಯಾಗಿಸಲು ಯೋಜನೆ ರೂಪಿಸಿರುವ ಮಹೀಂದ್ರಾ ಸಂಸ್ಥೆಯು ಕೆಯುವಿ100 ನಂತರ ಸ್ಯಾಂಗ್‌ಯಾಂಗ್ ಎಸ್201 ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗಾಗಿ ಆಯ್ದುಕೊಂಡಿದ್ದು, 5 ಸೀಟರ್ ಮಾದರಿಯಲ್ಲಿ ಹೊಸ ಕಾರಿನ ಕ್ಯಾಬಿನ್ ಅಭಿವೃದ್ಧಿ ಮಾಡಿದೆ.

ಬ್ಯಾಟರಿ ವೈಶಿಷ್ಟ್ಯತೆ
380ವಿ ಎಲೆಕ್ಟ್ರಿಕ್ ಬ್ಯಾಟರಿ ಸೌಲಭ್ಯ ಹೊಂದಿರುವ ಎಸ್201 ಕಾರು ಪ್ರತಿ ಚಾರ್ಜಿಂಗ್‌ಗೆ 250 ಕಿಮಿ ಮೈಲೇಜ್ ಹಿಂದಿರುಗಿಸಬಲ್ಲದು ಎನ್ನಲಾಗಿದ್ದು, ಹ್ಯುಂಡೈ ನಿರ್ಮಾಣದ ಕೊನಾ ಎಲೆಕ್ಟ್ರಿಕ್ ಕಾರುಗಳಿಗೆ ತ್ರೀವ ಪೈಪೋಟಿ ನೀಡುವ ಗುಣಲಕ್ಷಣಗಳನ್ನು ಹೊಂದಿದೆ.

ಜೊತೆಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಡಿಮೆ ಬೆಲೆಯಲ್ಲೂ ಎಸ್201 ಎಲೆಕ್ಟ್ರಿಕ್ ಕಾರುಗಳು ಅಭಿವೃದ್ದಿಯಾಗಲಿದ್ದು, ಇವು ಮೈಲೇಜ್ ಸಾಮರ್ಥ್ಯದಲ್ಲಿ ತುಸು ಕಡಿಮೆ ಉತ್ಪಾದನಾ ಗುಣಪಡೆದಿರುತ್ತವೆ ಎನ್ನಬಹುದು.
MOST READ: ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಕೇಂದ್ರ ಸಾರಿಗೆ ಇಲಾಖೆಯಿಂದ ಮಹತ್ವದ ನಿರ್ಧಾರ

ಕಾರು ಬಿಡುಗಡೆಯ ಅವಧಿ
ಮಹೀಂದ್ರಾ ಸಂಸ್ಥೆಯು ಮುಂಬರುವ 2019ರ ಮಾರ್ಚ್ ಹೊತ್ತಿಗೆ ಕೆಯುವಿ100 ಎಲೆಕ್ಟ್ರಿಕ್ ವರ್ಷನ್ ಬಿಡುಗಡೆಗೊಳಿಸಲು ನಿರ್ಧರಿಸಿದ್ದು, ತದನಂತರವಷ್ಟೇ ಎಸ್201 ಎಲೆಕ್ಟ್ರಿಕ್ ಕಾರುನ್ನು ಅನಾವರಣಗೊಳಿಸಿ 2019ರ ಅಂತ್ಯದಲ್ಲಿ ಬಿಡುಗಡೆ ಮಾಡಬಹುದು ಎನ್ನಲಾಗಿದೆ.

ಕಾರಿನ ಬೆಲೆಗಳು(ಅಂದಾಜು)
ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ 20 ಲಕ್ಷದಿಂದ 22 ಲಕ್ಷ ಬೆಲೆಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದ್ದು, ಅದಕ್ಕಿಂತಲೂ ತುಸು ಕಡಿಮೆ ಮೈಲೇಜ್ ರೇಂಜ್ ಹೊಂದಿರುವ ಮಹೀಂದ್ರಾ ಮತ್ತು ಸ್ಯಾಂಗ್‌ಯಾಂಗ್ ಎಸ್201 ಎಲೆಕ್ಟ್ರಿಕ್ ಕಾರು 16 ಲಕ್ಷದಿಂದ 20 ಲಕ್ಷ ಇರಬಹುದೆಂದು ಅಂದಾಜಿಲಾಗಿದೆ.
MOST READ: 5 ಸಾವಿರಕ್ಕೂ ಗತಿ ಇಲ್ಲ ಎಂದಿದ್ದ ಈ ನಟ ಇವತ್ತು 4 ಕೋಟಿ ಮೌಲ್ಯದ ಬೆಂಟ್ಲಿ ಕಾರಿನ ಒಡೆಯ

ಒಟ್ಟಿನಲ್ಲಿ ಮಹೀಂದ್ರಾ ಮತ್ತು ಸ್ಯಾಂಗ್‌ಯಾಂಗ್ ಸಂಸ್ಥೆಗಳು ಜೊತೆಗೂಡಿ ಭಾರತದಲ್ಲಿ ಗೇಮ್ ಚೆಂಜರ್ ಕಾರು ಮಾದರಿಗಳನ್ನು ಅಭಿವೃದ್ಧಿಗೊಳಿಸಿ ಮಾರಾಟ ಮಾಡುವ ಗುರಿಹೊಂದಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸಿರುವ ಸ್ಯಾಂಗ್‌ಯಾಂಗ್ ನಿರ್ಮಾಣದ ಪ್ರಮುಖ ಎಸ್‌ಯುವಿ ಕಾರುಗಳನ್ನು ಮಹೀಂದ್ರಾ ಸಂಸ್ಥೆಯು ಮರುವಿನ್ಯಾಸಗೊಳಿಸಿ ಮಾರಾಟ ಮಾಡುವ ಯೋಜನೆಗೆ ಚಾಲನೆ ನೀಡಿದೆ.
ಇದೇ ತಿಂಗಳು 26ರಂದು ಬಿಡುಗಡೆಯಾಗಿರುವ ಮಹೀಂದ್ರಾ ಮತ್ತು ಸ್ಯಾಂಗ್‌ಯಾಂಗ್ ನಿರ್ಮಾಣದ ಮೊದಲ ಅಲ್ಟುರಾಸ್ ಜಿ4 ಕಾರಿನ ಫೋಟೋ ಗ್ಯಾಲರಿ..!


Click it and Unblock the Notifications