ಗಸ್ತು ವಾಹನವಾಗಿ ಆಯ್ಕೆಯಾದ ಮಹೀಂದ್ರಾ ಟಿಯುವಿ300 ಎಸ್‌ಯುವಿ

ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಈಗಾಗಲೇ ಪೊಲೀಸ್ ಇಲಾಖೆಯ ಗಸ್ತು ವಾಹನ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದು, ಇದೀಗ ಮತ್ತೊಂದು ಎಸ್‌ಯುವಿ ಮಾದರಿ ಕೂಡಾ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

By Praveen Sannamani

ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಯಲ್ಲಿ ಮಹೀಂದ್ರಾ ನಿರ್ಮಾಣದ ಸ್ಕಾರ್ಪಿಯೋ ಎಸ್‌ಯುವಿ ಕಾರುಗಳು ಈಗಾಗಲೇ ಭಾರೀ ಜನಪ್ರಿಯತೆ ಸಾಧಿಸಿದ್ದು, ಇದೀಗ ಟಿಯುವಿ300 ಎಸ್‌ಯುವಿ ಕೂಡಾ ಗಸ್ತು ವಾಹನಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುತ್ತಿರುವುದು ಮಹೀಂದ್ರಾ ನಿರ್ಮಾಣದ ಎಸ್‌ಯುವಿ ಕಾರುಗಳ ಗತ್ತು ಮತ್ತಷ್ಟು ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಗಸ್ತು ವಾಹನವಾಗಿ ಆಯ್ಕೆಯಾದ ಮಹೀಂದ್ರಾ ಟಿಯುವಿ300 ಎಸ್‌ಯುವಿ

ಸದ್ಯ ಮಹಾರಾಷ್ಟ್ರ ಪೊಲೀಸ್ ಇಲಾಖೆಯು ಸಹ ಮಹೀಂದ್ರಾ ಟಿಯುವಿ300 ಎಸ್‌ಯುವಿ ಖರೀದಿಗೆ ಮುಂದಾಗಿದ್ದು, ಗಸ್ತು ನಿರ್ವಹಣೆಗಾಗಿ ವಿಶೇಷ ಸೌಲಭ್ಯಗಳನ್ನು ಹೊಂದಿರುವ ಕಾರು ಮಾದರಿಗಳನ್ನು ಒದಗಿಸಲು ಸಿದ್ದತೆ ನಡೆಸಿದೆ.

ಗಸ್ತು ವಾಹನವಾಗಿ ಆಯ್ಕೆಯಾದ ಮಹೀಂದ್ರಾ ಟಿಯುವಿ300 ಎಸ್‌ಯುವಿ

ವರದಿಗಳ ಪ್ರಕಾರ, ಮಹಾರಾಷ್ಟ್ರ ಪೊಲೀಸ್ ಇಲಾಖೆಯು 100 ಟಿಯುವಿ300 ಎಸ್‌ಯುವಿ ಕಾರುಗಳಿಗೆ ಬಿಡ್ ನೀಡಿದ್ದು, ನಿಗದಿತ ಅವಧಿಯಲ್ಲಿ ಗಸ್ತು ನಿರ್ವಹಣೆ ಬೇಕಾದ ರೀತಿಯಲ್ಲಿ ಹೊಸ ಕಾರುಗಳನ್ನು ಸಿದ್ದಪಡಿಸಿ ಕೊಡುವ ಬಗ್ಗೆ ಮಹೀಂದ್ರಾ ಒಪ್ಪಿಗೆ ಸೂಚಿಸಿದೆ.

ಗಸ್ತು ವಾಹನವಾಗಿ ಆಯ್ಕೆಯಾದ ಮಹೀಂದ್ರಾ ಟಿಯುವಿ300 ಎಸ್‌ಯುವಿ

ಇದಕ್ಕೂ ಮುನ್ನ ಗಸ್ತು ವಾಹನಗಳಿಗಾಗಿ ಬಿಡ್ ನಡೆಸಿದ್ದ ಮಹಾರಾಷ್ಟ್ರ ಪೊಲೀಸ್ ಇಲಾಖೆಯು ಕಡಿಮೆ ದರಗಳಲ್ಲಿ ಉತ್ತಮ ಸೌಲಭ್ಯವುಳ್ಳ ಎಸ್‌ಯುವಿ ಒದಗಿಸಲು ಮಹೀಂದ್ರಾ, ಫೋರ್ಡ್, ಟಾಟಾ ಮತ್ತು ಮಾರುತಿ ಸುಜುಕಿ ಜೊತೆ ಮಾತುಕತೆ ನಡೆಸಿದ್ದು, ಅಂತಿಮವಾಗಿ ಟಿಯುವಿ300 ಕಾರುಗಳನ್ನೇ ಮಾಡಲಾಗಿದೆ.

ಗಸ್ತು ವಾಹನವಾಗಿ ಆಯ್ಕೆಯಾದ ಮಹೀಂದ್ರಾ ಟಿಯುವಿ300 ಎಸ್‌ಯುವಿ

ಗಸ್ತು ವಾಹನ ವಿಭಾಗಕ್ಕೆ ಒದಗಿಸಲಾಗುತ್ತಿರುವ ಮಹೀಂದ್ರಾ ಟಿಯುವಿ300 ಎಸ್‌ಯುವಿ ಕಾರುಗಳು ಟಿ4ಪ್ಲಸ್ ಟ್ರಿಮ್ ಮಾದರಿಯಾಗಿದ್ದು, 1.5-ಲೀಟರ್ ಟರ್ಬೋಚಾಜ್ಡ್ ಡೀಸೆಲ್ ಎಂಜಿನ್‌ನೊಂದಿಗೆ 84-ಬಿಎಚ್‌ಪಿ ಮತ್ತು 230-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದಿವೆ.

ಗಸ್ತು ವಾಹನವಾಗಿ ಆಯ್ಕೆಯಾದ ಮಹೀಂದ್ರಾ ಟಿಯುವಿ300 ಎಸ್‌ಯುವಿ

ಜೊತೆಗೆ ಟಿಯುವಿ300 ಕಾರುಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರಲಿದ್ದು, ಗಸ್ತು ನಿರ್ವಹಣೆ ಬೇಕಿರುವ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಹೆಚ್ಚುವರಿ ಪಡೆದಿರಲಿವೆ. ಹೀಗಾಗಿ ಸಾಮಾನ್ಯ ಮಾದರಿಗಿಂತ ಗಸ್ತು ವಾಹನಗಳು ಸಂಪೂರ್ಣ ವಿಭಿನ್ನವಾಗಿರಲಿವೆ ಎನ್ನಬಹುದು.

ಗಸ್ತು ವಾಹನವಾಗಿ ಆಯ್ಕೆಯಾದ ಮಹೀಂದ್ರಾ ಟಿಯುವಿ300 ಎಸ್‌ಯುವಿ

ಇನ್ನು ಟಿಯುವಿ300 ಕಾರುಗಳಲ್ಲಿ ಸುರಕ್ಷೆತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಇಕೋ ಮೂಡ್ ಡ್ರೈವಿಂಗ್ ಸಿಸ್ಟಂ, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ISOFIX ಮೌಂಟ್ಸ್, ಟಿಲ್ಟ್ ಅಡ್ಜೆಮೆಂಟ್ ಮತ್ತು ಪವರ್ ಸ್ಟಿರಿಂಗ್ ಸೌಲಭ್ಯ ಇದರಲ್ಲಿವೆ.

ಗಸ್ತು ವಾಹನವಾಗಿ ಆಯ್ಕೆಯಾದ ಮಹೀಂದ್ರಾ ಟಿಯುವಿ300 ಎಸ್‌ಯುವಿ

ಗ್ರಾಹಕರ ಬೇಡಿಕೆಗೆ ತಕ್ಕಂತೆ ವೈಟ್ ಮತ್ತು ರೆಡ್ ಬಣ್ಣಗಳಲ್ಲಿ ಲಭ್ಯವಿರುವ ಟಿಯುವಿ300 ಕಾರುಗಳು ಪೊಲೀಸ್ ಗಸ್ತು ನಿರ್ವಹಣೆಯ ಉದ್ದೇಶಕ್ಕಾಗಿ ವಿನೂತನ ಬಣ್ಣದ ಆಯ್ಕೆಯನ್ನು ಪಡೆದಿದ್ದು, ರೆಡ್, ಯೆಲ್ಲೋ ಮತ್ತು ಬ್ಲ್ಯೂ ಪೇಟಿಂಗ್ ಸ್ಕೀಮ್ ಪಡೆಯುವ ಮೂಲಕ ಪೊಲೀಸ್ ಇಲಾಖೆಯ ಗಸ್ತುನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಲ್ಲಿದೆ.

ಗಸ್ತು ವಾಹನವಾಗಿ ಆಯ್ಕೆಯಾದ ಮಹೀಂದ್ರಾ ಟಿಯುವಿ300 ಎಸ್‌ಯುವಿ

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ಲಾಭ ಇಲ್ಲದೇ ಇದ್ರು ಸಿಟಿ 100 ಬೈಕ್ ಅನ್ನು ಬಜಾಜ್ ಮಾರಾಟ ಮಾಡ್ತಾ ಇರೋದ್ಯಾಕೆ ಗೊತ್ತಾ?

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ನಿಯಂತ್ರಣ ತಪ್ಪಿ 20 ಅಡಿ ಹಳ್ಳಕ್ಕೆ ಬಿದ್ದ ಟಾಟಾ ನೆಕ್ಸಾನ್- ಕಾರಿನಲ್ಲಿದ್ದವರಿಗೆ ಪರಿಸ್ಥಿತಿ ಏನಾಯ್ತು ಗೊತ್ತಾ?

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಅತಿ ದುಬಾರಿ ಬೆಲೆಯ ಫೈರ್ ಫೈಟಿಂಗ್ ಟ್ರಕ್...

Article Published On: Thursday, May 24, 2018, 12:04 [IST]
English summary
Maharashtra Police To Use Mahindra TUV300 SUV For Patrol Duties.
Read more on mahindra suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+