ಮಹೀಂದ್ರಾ ನಿರ್ಮಾಣದ ಈ ಪ್ರಮುಖ ನಾಲ್ಕು ಕಾರುಗಳನ್ನು ಇನ್ಮುಂದೆ ಖರೀದಿಸಲು ಆಗೋದಿಲ್ಲ...
ಮಹೀಂದ್ರಾ ಸಂಸ್ಥೆಯು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿರುವ ಕೆಲ ಕಾರು ಮಾದರಿಗಳ ಮಾರಾಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದು, ಪ್ರಮುಖ ನಾಲ್ಕು ಕಾರು ಆವೃತ್ತಿಗಳ ಮಾರಾಟಕ್ಕೆ ಸದ್ಯದಲ್ಲೇ ಬ್ರೇಕ್ ಹಾಕಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಮುನ್ನಡೆ ಸಾಧಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿರುವ ಕೆಲ ಕಾರು ಮಾದರಿಗಳ ಮಾರಾಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದು, ಪ್ರಮುಖ ನಾಲ್ಕು ಕಾರು ಆವೃತ್ತಿಗಳ ಮಾರಾಟಕ್ಕೆ ಸದ್ಯದಲ್ಲೇ ಬ್ರೇಕ್ ಹಾಕಲಿದೆ.

ಈ ಹಿಂದೆ ಜನಪ್ರಿಯಗೊಂಡು ಇತ್ತೀಚಿಗೆ ಮಾರುಕಟ್ಟೆಯಲ್ಲಿ ಹಿನ್ನೆಡೆ ಅನುಭವಿಸಿರುವ ವೆರಿಟೊ ಸೆಡಾನ್, ವೆರಿಟೋ ವೈಬ್ ನಾಚ್‌ಬ್ಯಾಕ್, ಜೈಲೊ ಎಂಪಿವಿ, ಸಬ್ ಕಂಪ್ಯಾಕ್ಟ್ ಎಸ್‌ಯುವಿ ನೊವೊಸ್ಪೋರ್ಟ್ ಕಾರುಗಳ ಮಾರಾಟವನ್ನು ನಿಲ್ಲಿಸಲಾಗುತ್ತಿದ್ದು, ಸುರಕ್ಷಾ ದೃಷ್ಠಿಯಲ್ಲೂ ಈ ಕಾರುಗಳು ಗುಣಮಟ್ಟ ಹೊಂದಿಲ್ಲ ಎನ್ನಬಹುದು.
Recommended Video


ಹೀಗಾಗಿಯೇ ಗ್ರಾಹಕರನ್ನು ಸೆಳೆಯಲು ವಿಫಲವಾಗಿರುವ ಈ ನಾಲ್ಕು ಮಾದರಿಗಳನ್ನು ಕೈಬಿಡಲು ಉದ್ದೇಶಿಸಿರುವ ಮಹೀಂದ್ರಾ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಮಾದರಿಯ ಕಾರುಗಳ ಉತ್ಪಾದನೆಯತ್ತ ಮುಖ ಮಾಡಿದೆ.

ಜೊತೆಗೆ ಈ ಹಿಂದೆ ಜಾರಿ ಮಾಡಲಾಗಿರುವ ಬಿಎಸ್ 4 ವೈಶಿಷ್ಟ್ಯತೆಯನ್ನು ಸಹ ಕೈಬಿಡಲಾಗುತ್ತಿರುವ ಕಾರು ಮಾದರಿಗಳಲ್ಲಿ ಅಳವಡಿಸುವಲ್ಲಿ ಹಿಂದೇಟು ಹಾಕುತ್ತಿರುವ ಮಹೀಂದ್ರಾ ಸಂಸ್ಥೆಯು ಜೈಲೊ ಎಂಪಿವಿ ಬದಲಾಗಿ ಟಿಯುವಿ300 ಪ್ಲಸ್ ಕಾರಿನ ಮೇಲೆ ಹೆಚ್ಚಿನ ಒತ್ತು ನೀಡುತ್ತಿದೆ.

ಇನ್ನು ವೆರಿಟೊ ಸೆಡಾನ್ ಬದಲಾಗಿ ಇ ವೆರಿಟೊ ಕಾರುಗಳ ಉತ್ಪಾದನೆ ಮಾಡಲಾಗುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ವಿಶೇಷ ಗಮನಹರಿಸಿರುವುದಲ್ಲದೇ ಬೃಹತ್ ಪ್ರಮಾಣದ ಬಂಡವಾಳವನ್ನು ಕೂಡಾ ಹೂಡಿಕೆ ಮಾಡಿದೆ.

ಇನ್ನೊಂದು ಪ್ರಮುಖ ವಿಚಾರ ಅಂದರೇ ಸದ್ಯ ಮಾರಾಟ ಹಿನ್ನೆಡೆ ಕಂಡಿರುವ ಕಾರುಗಳನ್ನು ಉನ್ನತಿಕರಿಸುವ ಬದಲಾಗಿ ಹೊಸ ಕಾರು ಮಾದರಿಗಳನ್ನೇ ಪರಿಚಯಿಸುವುದು ಉತ್ತಮ ಎಂಬ ಅಭಿಪ್ರಾಯ ಬಂದಿರುವ ಮಹೀಂದ್ರಾ ಎಕ್ಸ್‌ಯುವಿ 500 ಫೇಸ್‌ಲಿಫ್ಟ್, ಎಕ್ಸ್‌ಯುವಿ 700 ಕಾರುಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದೆ.

ಈ ಮೂಲಕ ಭಾರತೀಯ ಗ್ರಾಹಕರಿಗಾಗಿ ಗುಣಮಟ್ಟದ ಕಾರುಗಳು ಮತ್ತು ಹೆಚ್ಚಿನ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ದೃಡ ನಿರ್ಧಾರ ಕೈಗೊಂಡಿರುವ ಮಹೀಂದ್ರಾ ಸಂಸ್ಥೆಯು, ಸದ್ಯದಲ್ಲೇ ಹೊಸ ಮಾದರಿಯ ಮತ್ತಷ್ಟು ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಈ ಹಿಂದೆ ಕಡಿಮೆ ಬೆಲೆಗಳಲ್ಲಿ ಕಾರು ಮಾರಾಟ ಮಾಡುತ್ತಿದ್ದ ಮಹೀಂದ್ರಾ ಸಂಸ್ಥೆಯು ಹೊಸ ಸುರಕ್ಷಾ ಮಾರ್ಗದರ್ಶನ ಹಿನ್ನೆಲೆ ಮಾರಾಟ ಹಿನ್ನಡೆ ಅನುಭವಿಸುತ್ತಿವೆ. ಇದೇ ಉದ್ದೇಶದಿಂದ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೆಲ ಕಾರುಗಳ ಮಾರಾಟಕ್ಕೆ ಗುಡ್ ಬೈ ಹೇಳುತ್ತಿದೆ.
Trending On DriveSpark Kannada:
ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!
ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...


Click it and Unblock the Notifications