ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...

Posted By: Rahul
Recommended Video - Watch Now!
Auto Rickshaw Explodes In Broad Daylight

ಜಪಾನ್ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಟೊಯೊಟಾ ಮೋಟಾರ್ಸ್ ನಾಳೆಯಿಂದ ನಡೆಯಲಿರುವ 2018ರ ಆಟೊ ಎಕ್ಸ್ ಪೋದಲ್ಲಿ ತನ್ನ ಲಗ್ಷುರಿ ಆಲ್ಫಾರ್ಡ್ ಎಮ್‌‌ಪಿವಿ ವ್ಯಾನ್ ಮಾದರಿಯನ್ನು ಪ್ರದರ್ಶಿಸುತ್ತಿದ್ದು, ಹಲವು ಕಾರಣಗಳಿಗಳಿಂದ ಹೊಸ ಮಾದರಿಯ ಎಂಪಿವಿ ವ್ಯಾನ್‌ಗಳು ಚರ್ಚೆಗೆ ಕಾರಣವಾಗಿವೆ.

ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...

ಸದ್ಯ ಯುರೋಪಿನ್ ಮಾರುಕಟ್ಟೆಗಳಲ್ಲಿ ಜನಪ್ರಿಯತೆ ಸಾಧಿಸಿರುವ ಅಲ್ಫಾರ್ಡ್ ವ್ಯಾನ್‌ಗಳು ಮುಂಬರುವ ದಿನಗಳಲ್ಲಿ ಭಾರತದಲ್ಲೂ ಹೊಸ ಟ್ರೆಂಡ್ ಸೃಷ್ಠಿಸಲಿದ್ದು, ಈ ಕಾರಿನಲ್ಲಿ 7 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ.

ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...

ಆಲ್ಫಾರ್ಡ್ ಐಷಾರಾಮಿ ಎಮ್‌ಪಿವಿ ವ್ಯಾನಗಳು ಪ್ರದರ್ಶಿಸುವುದರ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಕುತೂಹಲವನ್ನುಂಟು ಮಾಡಲಿರುವ ಟೊಯೊಟಾ, ಜನಪ್ರಿಯ ಇನೋವಾ ಕ್ರಿಸ್ಟಾ ಕಾರಿಗೆ ಪರ್ಯಾಯ ವಾಹನ ಮಾದರಿಯಾಗಿಸಲಿದೆ.

ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...

ಎಂಜಿನ್ ವೈಶಿಷ್ಟ್ಯತೆ

ಆಲ್ಫಾರ್ಡ್ ಐಷಾರಾಮಿ ಎಮ್‌ಪಿವಿ ವ್ಯಾನ್‌ಗಳು ಪೆಟ್ರೋಲ್ ಮಾದರಿಯಲ್ಲೇ ಎರಡು ವಿಭಾಗಗಳಲ್ಲಿ ಅಭಿವೃದ್ಧಿಯಾಗಿದ್ದು, 2.5- ಲೀಟರ್ 4 ಸಿಲೆಂಡರ್ ಪೆಟ್ರೋಲ್ ಎಂಜಿನ್ ಮಾದರಿಯು 179-ಬಿಹೆಚ್‌ಪಿ ಮತ್ತು 235-ಎನ್ಎಮ್ ಟಾರ್ಕ್ ಉತ್ಪಾದಿಸುವ ಗುಣಹೊಂದಿದೆ.

ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...

ಹಾಗೆಯೇ 3.5-ಲೀಟರ್ ವಿ6 ಎಂಜಿನ್ ಹೊಂದಿರುವ ಮತ್ತೊಂದು ಮಾದರಿಯು 297-ಬಿಎಚ್‌ಪಿ ಮತ್ತು 361-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು ಎಂದು ಟೊಯೊಟಾ ಹೇಳಿಕೊಂಡಿದೆ.

ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...

ಇನ್ನು ಟೊಯೊಟಾ ಆಲ್ಫಾರ್ಡ್ ಐಷಾರಾಮಿ ಎಮ್ ಪಿವಿ ವ್ಯಾನ್ ಮಾದರಿಯ ಹೈಬ್ರಿಡ್ ಆವೃತ್ತಿಯು 2.5 ಲೀಟರ್ 4 ಸಿಲೆಂಡರ್ ಎಂಜಿನನ್ನು ಪಡೆದುಕೊಂಡಿದ್ದು, ಟೊಯೊಟಾ ಸಂಸ್ಥೆಯು 2018 ಆಟೊ ಎಕ್ಸ್ ಪೋ ದಲ್ಲಿ ಹೈಬ್ರಿಡ್ ವರ್ಷನ್ ಪ್ರದರ್ಶಿಸುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...

ಟೊಯೊಟಾ ಆಲ್ಫಾರ್ಡ್ ಐಷಾರಾಮಿ ಎಮ್ ಪಿವಿಯು 8 ಸ್ಪೀಡ್ ಆಟೊಮ್ಯಾಟಿಕ್ ಅಥವಾ ಸಿವಿಟಿ ಟ್ರ್ಯಾನ್ಸ್‌ಮಿಷನ್ ಪಡೆದುಕೊಳ್ಳಲಿದ್ದು, ಹೈಬ್ರೀಡ್ ಆವೃತ್ತಿಯು ಸಿವಿಟಿ ಪವರ್ ಟ್ರೈನ್ ಅನ್ನು ಹೊಂದಿರಲಿದೆ.

ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...

ಕಾರಿನ ಒಳ ವಿನ್ಯಾಸ

ಆಲ್ಫಾರ್ಡ್ ಐಷಾರಾಮಿ ಎಮ್ ಪಿವಿಗಳ ಒಳಭಾಗವು ಲೆದರ್ ಮತ್ತು ಮರದ ಫಲಕಗಳಿಂದ ಒಳಗೊಂಡಿದ್ದು, ಕಾರಿನ ಮಧ್ಯದಲ್ಲಿರುವ ಸೀಟುಗಳು ಹಲವಾರು ಐಷಾರಾಮಿ ಸೌಕರ್ಯಗಳನ್ನು ಪಡೆದುಕೊಂಡಿರುವುದೇ ಈ ಕಾರಿನ ವಿಶೇಷ.

ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...

ಭಾರತೀಯ ರಸ್ತೆಗಳಲ್ಲಿ ಈಗಾಗಲೇ ಟೊಯೊಟಾ ನಿರ್ಮಾಣದ ಆಲ್ಫಾರ್ಡ್ ಮತ್ತು ವೆಲ್ಫೈರ್ ಕಾರುಗಳನ್ನು ಕಾಣಬಹುದಾಗಿದ್ದು, ಆಸಕ್ತ ಗ್ರಾಹಕರು ಯುರೋಪಿನ್ ಮಾರುಕಟ್ಟೆಗಳಿಂದ ಆಮದು ಮಾಡಿಕೊಂಡಿರುವುದು ಹಳೆಯ ವಿಚಾರ.

ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...

ಒಟ್ಟಿನಲ್ಲಿ ಟೊಯೊಟಾದ ಆಲ್ಫಾರ್ಡ್ ಐಷಾರಾಮಿ ಎಮ್ ಪಿವಿ ವ್ಯಾನ್‌ಗಳು ಹಲವು ವಿಶೇಷತೆಗಳೊಂದಿಗೆ ಭಾರತೀಯ ಗ್ರಾಹಕರನ್ನು ಸೆಳೆಯಲು ಸಜ್ಜಾಗಿದ್ದು, ವಾಣಿಜ್ಯ ಬಳಕೆಗಾಗಿ ಮತ್ತು ಕುಟುಂಬ ವರ್ಗದವರು ಒಟ್ಟಾಗಿ ದೂರದ ಪ್ರವಾಸಗಳಿಗೆ ಇದು ಹೇಳಿಮಾಡಿಸಿದಂತಿದೆ.

English summary
Auto Expo 2018: Toyota Alphard Luxury MPV To Be Showcased.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark