ಕಾಯುವಿಕೆಗೆ ಅಂತ್ಯ- ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಎಕ್ಸ್‌ಯುವಿ300

ಕಳೆದ ತಿಂಗಳ ಹಿಂದಷ್ಟೇ ಅಲ್ಟುರಾಸ್ ಜಿ4 ಎನ್ನುವ ಐಷಾರಾಮಿ ಎಸ್‌ಯುವಿ ಕಾರುನ್ನು ಬಿಡುಗಡೆ ಮಾಡಿರುವ ಮಹೀಂದ್ರಾ ಸಂಸ್ಥೆಯು ಸದ್ಯದಲ್ಲೇ ಮತ್ತೊಂದು ಬಹುನೀರಿಕ್ಷಿತ ಎಕ್ಸ್‌ಯುವಿ300 ಹೆಸರಿನ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡುತ್ತಿರುವುದು ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಕಾಯುವಿಕೆಗೆ ಅಂತ್ಯ- ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಎಕ್ಸ್‌ಯುವಿ300

ಮಹೀಂದ್ರಾ ಸಂಸ್ಥೆಯು ಕಾರು ಮಾರಾಟದಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ನಮೂನೆಯ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿರುವುದು ಗ್ರಾಹಕರ ಆಕರ್ಷಣೆ ಕಾರಣವಾಗಿದೆ. ಸ್ಯಾಂಗ್‌ಯಾಂಗ್ ಜೊತೆಗೂಡಿ ಅಭಿವೃದ್ಧಿ ಪಡಿಸಲಾಗಿರುವ ಎಕ್ಸ್‌ಯುವಿ300 ಕಾರು ಮಾದರಿಯು ಹಲವು ವಿಶೇಷತೆಗಳಿಂದ ಕೂಡಿದ್ದು, 2019ರ ಫೆಬ್ರುವರಿ ಆರಂಭದಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ.

ಕಾಯುವಿಕೆಗೆ ಅಂತ್ಯ- ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಎಕ್ಸ್‌ಯುವಿ300

ಈಗಾಗಲೇ ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ ಹಲವಾರು ಬಾರಿ ದೇಶದ ವಿವಿಧ ನಗರಗಳಲ್ಲಿ ಎಸ್201 ಕೋಡ್ ವರ್ಡ್ ಆಧಾರದ ಮೇಲೆ ಸ್ಪಾಟ್ ಟೆಸ್ಟಿಂಗ್ ನಡೆಸಿರುವ ಮಹೀಂದ್ರಾ ಸಂಸ್ಥೆಯು, ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಕಾರನ್ನು ಅನಾವರಣಗೊಳಿಸುವ ಮೂಲಕ 'ಎಕ್ಸ್‌ಯುವಿ300' ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

ಕಾಯುವಿಕೆಗೆ ಅಂತ್ಯ- ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಎಕ್ಸ್‌ಯುವಿ300

ಮಹೀಂದ್ರಾ ಸಂಸ್ಥೆಯು ದಕ್ಷಿಣ ಕೊರಿಯಾದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಸ್ಯಾಂಗ್‌ಯಾಂಗ್ ಜೊತೆಗೂಡಿ ಹೊಸ ನಮೂನೆಯ ಕಾರು ಉತ್ಪನ್ನಗಳನ್ನು ಅಭಿವೃದ್ಧಿ ಪಡೆಸುತ್ತಿದ್ದು, ಸ್ಯಾಂಗ್‌ಯಾಂಗ್ ನಿರ್ಮಾಣದ ಟಿವೊಲಿ ಕಾರಿನ ಮಾದರಿಯಲ್ಲೇ ಹೊಸ ಎಕ್ಸ್‌ಯುವಿ300 ಕಾರನ್ನು ನಿರ್ಮಾಣ ಮಾಡಲಾಗಿದೆ.

ಕಾಯುವಿಕೆಗೆ ಅಂತ್ಯ- ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಎಕ್ಸ್‌ಯುವಿ300

ಟಿವೊಲಿ ಕಾರಿಗೂ ಮತ್ತು ಎಕ್ಸ್‌ಯುವಿ300 ಕಾರಿನ ಡಿಸೈನ್‌ಗಳಿಗೂ ಸಾಕಷ್ಟು ಹೊಲಿಕೆ ಇದ್ದರೂ ಸಹ ಭಾರತೀಯ ಗ್ರಾಹಕರ ಬೇಡಿಕೆಗೆ ಅಗತ್ಯಕ್ಕೆ ತಕ್ಕಂತೆ ಹೊಸ ಕಾರು ಸಿದ್ದಪಡಿಸಿರುವ ಮಹೀಂದ್ರಾ, ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿ ಎಕ್ಸ್‌ಯುವಿ300 ಹೊರತರುತ್ತಿದೆ.

ಕಾಯುವಿಕೆಗೆ ಅಂತ್ಯ- ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಎಕ್ಸ್‌ಯುವಿ300

ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳನ್ನು ಹೊಂದಿರುವ ಎಕ್ಸ್‌ಯುವಿ300 ಕಾರು 5 ಆಸನವುಳ್ಳ ಕಾರು ಮಾದರಿಯಾಗಿದ್ದು, ಎಸ್‌ಯುವಿ ಕಾರು ಪ್ರಿಯರನ್ನು ಸೆಳೆಯಬಲ್ಲ ಬಹುತೇಕ ಪ್ರೀಮಿಯಂ ಸೌಲಭ್ಯಗಳನ್ನು ಈ ಕಾರಿನಲ್ಲಿವೆ ಎಂದ್ರೆ ತಪ್ಪಾಗುವುದಿಲ್ಲ.

ಕಾಯುವಿಕೆಗೆ ಅಂತ್ಯ- ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಕಾರಿನಲ್ಲಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್ಎಸ್, ವಿಸ್ತರಿತ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ,ಸನ್‌ರೂಫ್, ರೂಫ್ ಮೌಂಟೆಡ್, ಫ್ಲಕ್ಸ್ ಅಲ್ಯುಮಿನಿಯಂ ಪ್ಯಾನೆಲ್, ಸುಧಾರಿತ ಆಡಿಯೋ ಸಿಸ್ಟಂ, ಬ್ಯೂಟೂಥ್ ಕನೆಕ್ಟಿವಿಟಿ, ಮಲ್ಟಿ ಫಂಕ್ಷನಲ್ ಸೆಂಟರ್ ಡಿಸ್‌ಫ್ಲೇ ಸೇರಿದಂತೆ ಅತ್ಯುತ್ತಮ ಲೆದರ್ ಸೀಟುಗಳನ್ನು ನೀಡಲಾಗಿದೆ.

ಕಾಯುವಿಕೆಗೆ ಅಂತ್ಯ- ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಎಕ್ಸ್‌ಯುವಿ300

ಜೊತೆಗೆ ಹೊಸ ಕಾರಿನಲ್ಲಿರುವ ಸುರಕ್ಷಾ ಸೌಲಭ್ಯಗಳನ್ನು ಸಹ ಪ್ರಮುಖ ಆಕರ್ಷಣೆಯಾಗಿದ್ದು, 17-ಇಂಚಿನ ಅಲಾಯ್ ವೀಲ್ಹ್‌ನೊಂದಿಗೆ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಮೊದಲ ಬಾರಿಗೆ ನೀಡಲಾಗಿರುತ್ತಿರುವ 7 ಏರ್‌ಬ್ಯಾಗ್ ಸೌಲಭ್ಯ ಎಕ್ಸ್‌ಯುವಿ300 ಕಾರಿನಲ್ಲಿರಲಿವೆ.

ಕಾಯುವಿಕೆಗೆ ಅಂತ್ಯ- ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಎಕ್ಸ್‌ಯುವಿ300

ಎಂಜಿನ್ ಸಾಮರ್ಥ್ಯ

ಹೊಸ ಎಕ್ಸ್‌ಯುವಿ300 ಕಾರು ಡಿಸೇಲ್ ಮತ್ತು ಪೆಟ್ರೋಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಾಗಲಿದ್ದು, ಡಿಸೇಲ್ ಕಾರುಗಳು 1.5-ಲೀಟರ್( 1,500ಸಿಸಿ) ಎಂಜಿನ್‌ನೊಂದಿಗೆ 121-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿರಲಿವೆ.

ಕಾಯುವಿಕೆಗೆ ಅಂತ್ಯ- ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಎಕ್ಸ್‌ಯುವಿ300

ಹಾಗೆಯೇ ಪೆಟ್ರೋಲ್ ಮಾದರಿಯು ಸಹ 1.2-ಲೀಟರ್ ಎಂಜಿನ್‌ನೊಂದಿಗೆ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಡಿಸೇಲ್ ವರ್ಷನ್ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಪೆಟ್ರೋಲ್ ವರ್ಷನ್‌ ಕಾರುಗಳಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಒದಗಿಸಲಿದೆ.

MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

ಕಾಯುವಿಕೆಗೆ ಅಂತ್ಯ- ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಎಕ್ಸ್‌ಯುವಿ300

ಮಹೀಂದ್ರಾ ಸಂಸ್ಥೆಯು ನೀಡಿರುವ ಮಾಹಿತಿ ಪ್ರಕಾರ, ಸದ್ಯಕ್ಕೆ ಡೀಸೆಲ್ ವರ್ಷನ್‌ಗಳಲ್ಲಿ ಮಾತ್ರ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರನ್ನು ಮೊದಲು ಬಿಡುಗಡೆ ಮಾಡಿ ನಂತರವಷ್ಟೇ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ ಮಾಡುವುದಾಗಿ ಸುಳಿವು ನೀಡಿದೆ.

ಕಾಯುವಿಕೆಗೆ ಅಂತ್ಯ- ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಎಕ್ಸ್‌ಯುವಿ300

ಕಾರಿನ ಬೆಲೆಗಳು(ಅಂದಾಜು)

ಮಾರುಕಟ್ಟೆಯಲ್ಲಿ ಲಭ್ಯವಿರುವ ಕಂಪ್ಯಾಕ್ಟ್ ಎಸ್‌ಯುವಿಗಳಿಂತೂ ತಾಂತ್ರಿಕವಾಗಿ ಬಲಿಷ್ಠವಾಗಿರುವ ಎಕ್ಸ್‌ಯುವಿ300 ಕಾರುಗಳ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.99 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 13 ಲಕ್ಷ ಬೆಲೆ ನಿಗದಿಯಾಗುವ ಸಾಧ್ಯತೆಗಳಿವೆ.

MOST READ: ಬಿಡುಗಡೆಗೂ ಮುನ್ನವೇ ಹಾರುವ ಕಾರಿನ ಬೆಲೆ ಪಟ್ಟಿ ಬಿಡುಗಡೆ ಮಾಡಿದ ಪಿಎಲ್-ವಿ ಲಿಬರ್ಟಿ

ಕಾಯುವಿಕೆಗೆ ಅಂತ್ಯ- ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಎಕ್ಸ್‌ಯುವಿ300

ಪ್ರತಿಸ್ಪರ್ಧಿ ಕಾರುಗಳು

ಎಕ್ಸ್‌ಯುವಿ300 ಕಾರುಗಳು ಉತ್ತಮ ಎಂಜಿನ್ ಜೊತೆಗೆ ತಾಂತ್ರಿಕವಾಗಿಯೂ ಗಮನಸೆಳೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ಕ್ರೆಟಾ, ಟಾಟಾ ನೆಕ್ಸಾನ್, ಫೋರ್ಡ್ ಇಕೋ ಸ್ಪೋರ್ಟ್ ಮತ್ತು ಬಿಡುಗಡೆಯಾಗಲಿರುವ ನಿಸ್ಸಾನ್ ಕಿಕ್ಸ್ ಜೊತೆ ಟಾಟಾ ಹ್ಯಾರಿಯರ್ ಕಾರಿಗೂ ಇದು ಪೈಪೋಟಿ ನೀಡಬಲ್ಲದು.

ಕಾಯುವಿಕೆಗೆ ಅಂತ್ಯ- ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಎಕ್ಸ್‌ಯುವಿ300

ಒಟ್ಟಿನಲ್ಲಿ ಸ್ಯಾಂಗ್‌ಯಾಂಗ್ ಕಾರು ಸಂಸ್ಥೆಯ ಜೊತೆಗೂಡಿ ಹಲವು ಗೇಮ್‌ಚೆಂಜರ್ ಕಾರುಗಳನ್ನು ಬಿಡುಗಡೆ ಮಾಡುತ್ತಿರುವ ಮಹೀಂದ್ರಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆ ಕಾರಣವಾಗುತ್ತಿದ್ದು, ಅಲ್ಟುರಾಸ್ ಜಿ4 ನಂತರ ಎಕ್ಸ್‌ಯುವಿ300 ನಿರ್ಮಾಣ ಮಾಡಿರುವುದು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಕಾರು ಉತ್ಪನ್ನಗಳನ್ನು ಎದುರುನೋಡಬಹುದಾಗಿದೆ.

Most Read Articles

Kannada
English summary
Mahindra XUV 300 Compact-SUV Now Official — Launch In February 2019. Read in Kannada.
Story first published: Wednesday, December 19, 2018, 15:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X