ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಫಾರ್ಚ್ಯೂನರ್ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹೀಂದ್ರಾದ ಹೊಸ ಕಾರು..

ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯು ತಮ್ಮ ಫ್ಲ್ಯಾಗ್‍‍ಶಿಪ್ ಎಕ್ಸ್‌ಯುವಿ700 ಎಸ್‍‍ಯುವಿ ಕಾರನ್ನು ಪರಿಚಯಿಸಲಿದು, ಮುಂಬರಲಿರುವ ಮೂರು ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

By Rahul Ts

ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯು ತಮ್ಮ ಫ್ಲ್ಯಾಗ್‍‍ಶಿಪ್ ಎಕ್ಸ್‌ಯುವಿ700 ಎಸ್‍‍ಯುವಿ ಕಾರನ್ನು ಪರಿಚಯಿಸಲಿದು, ಮುಂಬರಲಿರುವ ಮೂರು ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ. ಸ್ಯಾಂಗ್‌ಯಾಂಗ್ ರೆಕ್ಸ್ಟಾನ್ ಎಸ್‍‍ಯುವಿ ಕಾರಿನ ಆಧಾರದಿಂದ ವಿನ್ಯಾಸ ಮಾಡಲಾದ ಈ ಕಾರನ್ನು ಮೊದಲ ಬಾರಿಗೆ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಆವಿಷ್ಕರಿಸಲಾಯಿತು.

ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಫಾರ್ಚ್ಯೂನರ್ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹೀಂದ್ರಾದ ಹೊಸ ಕಾರು..

ಮಹೀಂದ್ರಾ ರಿಸರ್ಚ್ ಆಂಡ್ ಡೆವೆಲಪ್ಮೆಂಟ್ ಮತ್ತು ಗ್ಲೋಬಲ್ ಪ್ರಾಡಕ್ಟ್ ಡೆವೆಲಪ್ಮೆಂಟ್ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ರಾಜನ್ ವಾಧೇರಾ ಹೊಸದಾಗಿ ನೀಡಿದ ಒಂದು ಇಂಟರ್ವ್ಯೂನಲ್ಲಿ "ಅತೀ ಶೀಘ್ರದಲ್ಲಿ ಮಹೀಂದ್ರಾ ಬಿಡುಗಡೆ ಮಾಡಲಿರುವ ಉತ್ಪನ್ನಗಳಲ್ಲಿ ರೆಕ್ಟಾನ್‍‍ನ ಜಿ-4 ವರ್ಷನ್‍‍ನ ಮಾಡಲ್ ಕೂಡಾ ಒಂದು. ಸ್ಯಾಂಗ್‌ಯಾಂಗ್ ಭಾಗಸ್ವಾಮ್ಯದಲ್ಲಿ ಒಂದು ನೂತನ ಫ್ಲಾಟ್‍‍ಫಾರ್ಮ್‍‍ನ ಅಡಿಯಲ್ಲಿ ಎಕ್ಸ್‌ಯುವಿ700 ಕಾರನ್ನು ತಯಾರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ"

ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಫಾರ್ಚ್ಯೂನರ್ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹೀಂದ್ರಾದ ಹೊಸ ಕಾರು..

ಪಟ್ಟಿಯಲ್ಲಿ ಮಹೀಂದ್ರಾ ಎಕ್ಸ್‌ಯುವಿ700 ಎಸ್‍‍ಯುವಿ ಕಾರು ಎಕ್ಸ್‌ಯುವಿ 500 ಕಾರಿನ ಮೇಲೆ ಸ್ಥಾನವನ್ನು ಪಡೆದುಕೊಂಡಿರಲಿದ್ದು, ಮತ್ತು ಇದು ಪೂರ್ತಿಯಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಲ್ಲಿ ಸಂಸ್ಥೆಯ ಅತ್ಯಂತ ಖರೀದಾದ ಪ್ರೀಮಿಯಮ್ ಮತ್ತು ಹೈ ಎಂಡ್ ಮಾಡಲ್ ಆಗಿ ಸ್ಥಾನವನ್ನು ಪಡೆಯಲಿದೆ.

ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಫಾರ್ಚ್ಯೂನರ್ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹೀಂದ್ರಾದ ಹೊಸ ಕಾರು..

ಸಂಸ್ಥೆಯು ಎಕ್ಸ್‌ಯುವಿ700 ಎಸ್‍‍ಯುವಿ ಕಾರಿನ ಜೊತೆಗೆ ಇನ್ನೆರಡು ಹೊಸ ಮಾಡಲ್ ಕಾರುಗಳನ್ನು ಕೂಡಾ ಪರಿಚಯಿಸುವ ತವಕದಲ್ಲಿದೆ. ಎಸ್201 ಹೆಸರಿನಲ್ಲಿ ರೂಪಿಸಲಾದ ಕಂಪ್ಯಾಕ್ಟ್ ಎಸ್‍ಯುವಿ ನೂತನವಾಗಿ ಆವಿಷ್ಕರಿಸಲಾದ ಮರಾಜೊ ಎಮ್‍ಪಿವಿ. ಈ ಮೂರು ಮಾಡಲ್‍‍ಗಳನ್ನು ಕೂಡಾ 2018ರೊಳಗೆಯೆ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಫಾರ್ಚ್ಯೂನರ್ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹೀಂದ್ರಾದ ಹೊಸ ಕಾರು..

ಹೊಸ ಎಕ್ಸ್‌ಯುವಿ700 ಎಸ್‍‍ಯುವಿ ಕಾರು ತಾಂತ್ರಿಕವಾಗಿ 2.2 ಲೀಟರ್ ಕೆಪಾಸಿಟಿಯ ಟರ್ಬೋಚಾರ್ಜ್ಡ್ ಬಳಸಲಾಗಿದೆ. 6 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಆಟೋಮ್ಯಾತಿಕ್ ಗೇರ್‍‍ಬಾಕ್ಸ್ ಜೋಡಣೆಯಲ್ಲಿ 180ಬಿಹೆಚ್‍‍ಪಿ ಮತ್ತು 420ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ. ಅಲ್ಲದೇ ಇದರಲ್ಲಿ 4 ವ್ಹೀಲ್ ಡ್ರೈವ್ ಸಿಸ್ಟಮ್ ಅನ್ನು ಕೂಡಾ ಪರಿಚಯಿಸುವ ಅವಕಾಶಗಳಿವೆ.

ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಫಾರ್ಚ್ಯೂನರ್ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹೀಂದ್ರಾದ ಹೊಸ ಕಾರು..

ಮಹೀಂದ್ರಾ ಬಿಡುಗಡೆ ಮಾಡಿರುವ ಟೀಸರ್‌ ಪ್ರಕಾರ ಎಕ್ಸ್‌ಯುವಿ700 ಕಾರು ಮಾದರಿಯು 7 ಸೀಟರ್ ಮಾದರಿಯಾಗಿದ್ದು, ಆಫ್ ರೋಡ್ ಕೌಶಲ್ಯದೊಂದಿಗೆ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, 8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಪ್ರಿಮಿಯಂ ಲೆದರ್ ಸೀಟುಗಳು, 360 ಡಿಗ್ರಿ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.

ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಫಾರ್ಚ್ಯೂನರ್ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹೀಂದ್ರಾದ ಹೊಸ ಕಾರು..

ಇದಷ್ಟೇ ಅಲ್ಲದೇ ಎಲೆಕ್ಟ್ರಿಕ್ ಸನ್ ರೂಫ್, ಪವರ್ಡ್ ಟೈಲ್‌ಗೆಟ್ ಸೇರಿದಂತೆ ಅತ್ಯಾಧುನಿಕ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಲಿದ್ದು, ಎಸ್‌ಯುವಿ ಕಾರು ಮಾದರಿಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎನ್ನಬಹುದು.

ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಫಾರ್ಚ್ಯೂನರ್ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹೀಂದ್ರಾದ ಹೊಸ ಕಾರು..

ಪ್ರಯಾಣಿಕರ ಸುರಕ್ಷತೆಗಾಗಿ ಮಹೀಂದ್ರಾ ಎಕ್ಸ್‌ಯುವಿ700 ಕಾರಿನಲ್ಲಿ 9 ಏರ್‍‍ಬ್ಯಾಗ್ಸ್, ಅಡ್ವಾನ್ಸ್ಡ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್, ಲೇನ್ ಡಿಪಾರ್ಚುರ್ ವಾರ್ನಿಂಗ್, ಲೇನ್ ಚೇಂಜ್ ಅಸ್ಸಿಸ್ಟ್, ಟ್ರಾಫಿಕ್ ಸೇಫ್ಟಿ ಅಸ್ಸಿಸ್ಟ್ ಮತ್ತು ಹೈ ಬೀಮ್ ಅಸ್ಸಿಸ್ಟ್ ಅನ್ನು ಅಳವಡಿಸಲಾಗಿದೆ.

ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಫಾರ್ಚ್ಯೂನರ್ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹೀಂದ್ರಾದ ಹೊಸ ಕಾರು..

7 ಸೀಟರ್ ಎಸ್‍‍ಯುವಿ ಆಕಾರಾದ ಎಕ್ಸ್‌ಯುವಿ700 ಮೂರು ಸಾಲಿನ ಸೀಟಿಂಗ್ ಲೇಔಟ್ ಅನ್ನು ಪಡೆದುಕೊಂಡಿರಲಿದ್ದು, ಬಿಡುಗಡೆಗೊಂಡಲ್ಲಿ ಮಾರುಕಟ್ಟೆಯಲ್ಲಿರುವ ಫೋರ್ಡ್ ಎಂಡೀವರ್, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಇಸುಜು ಎಮ್‍‍ಯು-ಎಕ್ಸ್ ಎಂಬ ಕಾರುಗಳಿಗೆ ಪೈಪೋಟಿ ನೀಡಲಿದೆ.

ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಫಾರ್ಚ್ಯೂನರ್ ಕಾರಿಗೆ ಟಾಂಗ್ ನೀಡಲು ಬರಲಿದೆ ಮಹೀಂದ್ರಾದ ಹೊಸ ಕಾರು..

ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಎಕ್ಸ್‌ಯುವಿ700 ಕಾರುಗಳು ಬೆಲೆಯು22 ಲಕ್ಷದಿಂದ 25 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on mahindra suv
English summary
Mahindra XUV700 India Launch Reportedly Scheduled In The Next Three Months.
Story first published: Thursday, August 2, 2018, 14:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X