ಹೊಸ ಎಂಜಿನ್‌ ಆಯ್ಕೆಯೊಂದಿಗೆ ಬರಲಿದೆ ಮಾರುತಿ ಸುಜುಕಿ ಬಲೆನೊ ಫೇಸ್‌ಲಿಫ್ಟ್..!!

ಮಾರುತಿ ಸುಜುಕಿ ಸಂಸ್ಥೆಯು ಸದ್ಯದಲ್ಲೇ ಬಲೆನೊ ಫೇಸ್‌ಲಿಫ್ಟ್ ಆವೃತ್ತಿಯನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿದ್ದು, ಬರಲಿರುವ ಹೊಸ ಕಾರಿನ ಮತ್ತಷ್ಟು ತಾಂತ್ರಿಕ ಅಂಶಗಳನ್ನು ಇಲ್ಲಿ ನೀಡಲಾಗಿದೆ.

By Praveen Sannamani

ದೇಶಿಯವಾಗಿ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಸದ್ಯದಲ್ಲೇ ಬಲೆನೊ ಫೇಸ್‌ಲಿಫ್ಟ್ ಆವೃತ್ತಿಯನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿದ್ದು, ಬರಲಿರುವ ಹೊಸ ಕಾರಿನ ಮತ್ತಷ್ಟು ತಾಂತ್ರಿಕ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಹೊಸ ಎಂಜಿನ್‌ ಆಯ್ಕೆಯೊಂದಿಗೆ ಬರಲಿದೆ ಮಾರುತಿ ಸುಜುಕಿ ಬಲೆನೊ ಫೇಸ್‌ಲಿಫ್ಟ್..!!

ಸದ್ಯ ದೇಶದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳಲ್ಲಿ ಮಾರುತಿ ಸುಜುಕಿ ನಿರ್ಮಾಣದ 6 ಕಾರುಗಳು ಟಾಪ್ ಲಿಫ್ಟ್‌ನಲ್ಲಿ ಸ್ಥಾನ ಪಡೆದಿದ್ದು, ಇವುಗಳಲ್ಲಿ ಬಲೆನೊ ಕೂಡಾ 5ನೇ ಸ್ಥಾನದಲ್ಲಿದೆ. ವಿಶೇಷ ವಿನ್ಯಾಸ ಮತ್ತು ಎಂಜಿನ್ ವೈಶಿಷ್ಟ್ಯತೆಗಳ ಹಿನ್ನೆಲೆ ಹ್ಯಾಚ್‌ಬ್ಯಾಕ್ ಪ್ರಿಯರ ನೆಚ್ಚಿನ ಆಯ್ಕೆಯಾಗುತ್ತಿದೆ.

ಹೊಸ ಎಂಜಿನ್‌ ಆಯ್ಕೆಯೊಂದಿಗೆ ಬರಲಿದೆ ಮಾರುತಿ ಸುಜುಕಿ ಬಲೆನೊ ಫೇಸ್‌ಲಿಫ್ಟ್..!!

ಇದೇ ಕಾರಣಕ್ಕೆ ಬಲೆನೊ ಮಾದರಿಗಳನ್ನು ಮತ್ತಷ್ಟು ಉನ್ನತ ದರ್ಜೆಯಲ್ಲಿ ಪರಿಚಯಿಸಲು ಯೋಜನೆ ರೂಪಿಸಲಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಫೇಸ್‌ಲಿಫ್ಟ್ ಬಲೆನೊ ಮಾದರಿಯನ್ನು ಸಿದ್ದಗೊಳಿಸಲಾಗುತ್ತಿದೆ.

ಹೊಸ ಎಂಜಿನ್‌ ಆಯ್ಕೆಯೊಂದಿಗೆ ಬರಲಿದೆ ಮಾರುತಿ ಸುಜುಕಿ ಬಲೆನೊ ಫೇಸ್‌ಲಿಫ್ಟ್..!!

ಇನ್ನೊಂದು ಪ್ರಮಖ ವಿಚಾರ ಅಂದ್ರೆ, ಬರಲಿರುವ ಬಲೆನೊ ಮಾದರಿಗಳು ಪೆಟ್ರೋಲ್ ಎಂಜಿನ್ ಅಷ್ಟೇ ಅಲ್ಲದೇ ಹೊಸ ಡೀಸೆಲ್ ಎಂಜಿನ್ ಮಾದರಿಗಳು ಸಹ ಖರೀದಿಗೆ ಲಭ್ಯವಾಗಲಿದ್ದು, 2019ರ ಮೊದಲ ತ್ರೈಮಾಸಿಕ ಅವಧಿಗೆ ಫೇಸ್‌ಲಿಫ್ಟ್ ಆವೃತ್ತಿಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ.

ಹೊಸ ಎಂಜಿನ್‌ ಆಯ್ಕೆಯೊಂದಿಗೆ ಬರಲಿದೆ ಮಾರುತಿ ಸುಜುಕಿ ಬಲೆನೊ ಫೇಸ್‌ಲಿಫ್ಟ್..!!

ಹೀಗಾಗಿ ಫೇಸ್‌ಲಿಫ್ಟ್ ಬಲೆನೊ ಕಾರುಗಳು ಸಾಮಾನ್ಯ ಬಲೆನೊ ಕಾರುಗಳಿಂತ ತಾಂತ್ರಿಕವಾಗಿ ಮತ್ತಷ್ಟು ಬಲಿಷ್ಠವಾಗಿರಲಿದ್ದು, ಹೊಸ ನಿಯಮಾವಳಿಗೆ ಅನುಸಾರವಾಗಿ ಬಿಎಸ್ 6 ವೈಶಿಷ್ಟ್ಯತೆಗಳೊಂದಿಗೆ ಹೊಸ ಕಾರಿನ ಎಂಜಿನ್ ಅಭಿವೃದ್ಧಿ ಮಾಡಲಾಗುತ್ತಿದೆ.

ಹೊಸ ಎಂಜಿನ್‌ ಆಯ್ಕೆಯೊಂದಿಗೆ ಬರಲಿದೆ ಮಾರುತಿ ಸುಜುಕಿ ಬಲೆನೊ ಫೇಸ್‌ಲಿಫ್ಟ್..!!

ಎಂಜಿನ್ ಸಾಮರ್ಥ್ಯ

ಸದ್ಯ ಲಭ್ಯವಿರುವ 1.2-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಮಾದರಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ಹಳೆಯ 1.3-ಲೀಟರ್‌ ಡೀಸೆಲ್ ಎಂಜಿನ್‌ಗೆ ಬದಲಾಗಿ 1.5-ಲೀಟರ್ ಡೀಸೆಲ್ ಎಂಜಿನ್ ಅಳವಡಿಕೆಯನ್ನು ಹೊಂದಿರಲಿವೆ ಎನ್ನಲಾಗಿದೆ.

ಹೊಸ ಎಂಜಿನ್‌ ಆಯ್ಕೆಯೊಂದಿಗೆ ಬರಲಿದೆ ಮಾರುತಿ ಸುಜುಕಿ ಬಲೆನೊ ಫೇಸ್‌ಲಿಫ್ಟ್..!!

ಹೀಗಾಗಿ 83ಬಿಎಚ್‌ಪಿ ಮತ್ತು 115ಎನ್ಎಂ ಟಾರ್ಕ್ ಉತ್ಪಾದಿಸುತ್ತಿದ್ದ 1.3-ಲೀಟರ್ ಡೀಸೆಲ್ ಎಂಜಿನ್‌ಗಳು ಮತ್ತಷ್ಟು ಪವರ್‌ಫುಲ್ ಕಾರು ಮಾದರಿಗಳಾಗಲಿದ್ದು, ಇದು ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ಅತಿಹೆಚ್ಚು ಬಿಎಚ್‌ಪಿ ಉತ್ಪಾದಿಸುವ ಮಾದರಿಯಾಗಲಿದೆ.

ಹೊಸ ಎಂಜಿನ್‌ ಆಯ್ಕೆಯೊಂದಿಗೆ ಬರಲಿದೆ ಮಾರುತಿ ಸುಜುಕಿ ಬಲೆನೊ ಫೇಸ್‌ಲಿಫ್ಟ್..!!

ಬಿಡುಗಡೆ ಯಾವಾಗ?

ಎರ್ಟಿಗಾ ಫೇಸ್‌ಲಿಫ್ಟ್ ಮತ್ತು ಸಿಯಾಜ್ ಫೇಸ್‌ಲಿಫ್ಟ್ ಬಿಡುಗಡೆಯ ತವಕದಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು, ತದನಂತರವಷ್ಟೇ ಬಲೆನೊ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲಿದೆ ಎಂಬ ವರದಿ ಇದೆ.

ಹೊಸ ಎಂಜಿನ್‌ ಆಯ್ಕೆಯೊಂದಿಗೆ ಬರಲಿದೆ ಮಾರುತಿ ಸುಜುಕಿ ಬಲೆನೊ ಫೇಸ್‌ಲಿಫ್ಟ್..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ತನ್ನ ವಿವಿಧ ಕಾರು ಮಾದರಿಗಳ ಮೂಲಕ ಶೇ.50ಕ್ಕಿಂತಲೂ ಹೆಚ್ಚು ಮಾರಾಟ ಪಾಲು ಹೊಂದಿರುವ ಮಾರುತಿ ಸುಜುಕಿ ಸಂಸ್ಥೆಯು ಕಾಲಕ್ಕೆ ಅನುಗುಣವಾಗಿ ಹೊಸ ಹೊಸ ಮಾದರಿಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಬಲೆನೊ ಮಾದರಿಯನ್ನು ಹೊಸ ಎಂಜಿನ್‌ನೊಂದಿಗೆ ಬಿಡುಗಡೆ ಮಾಡುತ್ತಿದ್ದು, 1.5-ಲೀಟ್ ಡೀಸೆಲ್ ಆವೃತ್ತಿಯು ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲೇ ಉತ್ತಮ ಮೈಲೇಜ್ ನೀಡುವ ಕಾರು ಮಾದರಿಯಾಗುವ ನೀರಿಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಫಿದಾ ಆದ ಸೇನೆ...

ಪ್ರಯಾಣಿಕರನ್ನು ಸೆಳೆಯಲು ಹೊಸ ಆಫರ್ ಪ್ರಕಟಿಸಿದ ಓಲಾ..!!

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ..

ಮೋದಿ ಹೆಸರಿನಲ್ಲಿ ಭಾರೀ ಜನಪ್ರಿಯತೆ ಪಡೆಯುತ್ತಿರುವ ಈ ಬೈಕಿನ ಅಸಲಿಯತ್ತು ಏನು?

Most Read Articles

Kannada
English summary
Maruti Baleno Facelift To Get New Diesel Engine — Launch Details Revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X