ಪ್ರಯಾಣಿಕರನ್ನು ಸೆಳೆಯಲು ಹೊಸ ಆಫರ್ ಪ್ರಕಟಿಸಿದ ಓಲಾ..!!

ದೇಶದ ಮುಂಚೂಣಿ ಮೊಬೈಲ್‌ ಆ್ಯಪ್‌ ಆಧಾರಿತ ಬಾಡಿಗೆ ಟ್ಯಾಕ್ಸಿ ಸೇವೆಗಳನ್ನ ಒದಗಿಸುವ ಓಲಾ ಸಂಸ್ಥೆಯು ಪ್ರಯಾಣಿಕರನ್ನು ಸೆಳೆಯಲು ಹೊಸ ಆಫರ್ ಪ್ರಕಟಿಸಿದ್ದು, ಪ್ರಯಾಣಿಕರಿಗೆ ಅನುಕೂಲಕರವಾಗುವಂತೆ ಹೊಸ ವಿಮೆ ಘೋಷಿಸಿದೆ.

By Praveen Sannamani

ಓಲಾ ಕ್ಯಾಬ್‌, ಓಲಾ ಆಟೊ ಮತ್ತು ಇ-ರಿಕ್ಷಾ ಸೇವೆಗಳ ಮೇಲೆ ಹೊಸ ವಿಮೆ ಯೋಜನೆಯು ಅನ್ವಯವಾಗಲಿದ್ದು, ನಗರದೊಳಗೆ ಓಲಾ ಸೇವೆ ಬಳಕೆ ಮಾಡುವ ಎಲ್ಲಾ ಪ್ರಯಾಣಿಕರು ಈ ವಿಮೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಪ್ರಯಾಣಿಕರನ್ನು ಸೆಳೆಯಲು ಹೊಸ ಆಫರ್ ಪ್ರಕಟಿಸಿದ ಓಲಾ..!!

ಓಲಾ ಪರಿಚಯಿಸಿರುವ ಹೊಸ ವಿಮಾ ಸೌಲಭ್ಯಕ್ಕೆ "ಚಾಲೋ ಬೆಫಿಕಾರ್" ಎಂದು ಹೆಸರಿಡಲಾಗಿದ್ದು, ಓಲಾ ಟ್ಯಾಕ್ಸಿ ಪ್ರಯಾಣಿಸುವ ಗ್ರಾಹಕರ ಸುರಕ್ಷತೆಯನ್ನು ಹೆಚ್ಚಿಸಲು ಈ ಹೊಸ ವಿಮೆ ಯೋಜನೆ ಜಾರಿಮಾಡಲಾಗಿದೆ.

ಪ್ರಯಾಣಿಕರನ್ನು ಸೆಳೆಯಲು ಹೊಸ ಆಫರ್ ಪ್ರಕಟಿಸಿದ ಓಲಾ..!!

ಏನಿದು ಹೊಸ ವಿಮೆ ಯೋಜನೆ?

ಓಲಾ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಗ್ರಾಹಕರು ಒಂದು ವೇಳೆ ಲಗೇಜ್‌ ಅಥವಾ ಲ್ಯಾಪ್‌ಟಾಪ್ ಕಳೆದುಕೊಂಡಲ್ಲಿ. ಇಲ್ಲವೇ ಟ್ಯಾಕ್ಸಿಗಳು ವಿಳಂಬವಾಗಿ ವಿಮಾನ ತಪ್ಪಿಸಿಕೊಂಡಲ್ಲಿ, ಅದೃಷ್ಟವಶಾತ್ ಅಪಘಾತವಾದಲ್ಲಿ ಈ ಹೊಸ ವಿಮೆ ಯೋಜನೆಯು ನಿಮ್ಮ ಸಹಾಯಕ್ಕೆ ಬರಲಿದೆ.

ಪ್ರಯಾಣಿಕರನ್ನು ಸೆಳೆಯಲು ಹೊಸ ಆಫರ್ ಪ್ರಕಟಿಸಿದ ಓಲಾ..!!

ಈ ಮೂಲಕ ಗ್ರಾಹಕರ ವೈದ್ಯಕೀಯ ವೆಚ್ಚ, ಆಂಬುಲೆನ್ಸ್‌ ವೆಚ್ಚ ಮತ್ತು ಕಳೆದ ವಸ್ತುಗಳ ಮೌಲ್ಯ ಸೇರಿದಂತೆ ಎಲ್ಲಾ ರೀತಿಯ ಪರಿಹಾರವು ಈ ವಿಮೆ ಮೂಲಕ ವಾಪಸ್ ಸಿಗಲಿದ್ದು, ಟ್ಯಾಕ್ಸಿಯಲ್ಲಿ ಇರುವಷ್ಟು ಕಾಲ ನಿಮಗೆ ಪೂರ್ಣ ಪ್ರಮಾಣದ ಸುರಕ್ಷತೆಯು ದೊರೆಯಲಿದೆ.

ಪ್ರಯಾಣಿಕರನ್ನು ಸೆಳೆಯಲು ಹೊಸ ಆಫರ್ ಪ್ರಕಟಿಸಿದ ಓಲಾ..!!

ಕೇವಲ ರೂ.1 ಪಾವತಿಸಿದ್ರೆ ಸಾಕು..!!

ಹೌದು. ಓಲಾ ಸಂಸ್ಥೆಯು ಜಾರಿಗೆ ತಂದಿರುವ ಹೊಸ ವಿಮೆ ಸೌಲಭ್ಯಕ್ಕೆ ಅರ್ಹರಾಗಲು ರೂ.1 ಪ್ರಿಮಿಯಂ ದರ ಪಾವತಿ ಮಾಡಿದಲ್ಲಿ ಗರಿಷ್ಠ ಮೊತ್ತವಾಗಿ ರೂ.5 ಲಕ್ಷ ಪರಿಹಾರ ಪಡೆದುಕೊಳ್ಳಬಹುದು ಎಂದು ಓಲಾ ಹೇಳಿಕೊಂಡಿದೆ.

ಪ್ರಯಾಣಿಕರನ್ನು ಸೆಳೆಯಲು ಹೊಸ ಆಫರ್ ಪ್ರಕಟಿಸಿದ ಓಲಾ..!!

ವಿಮೆ ಮೊತ್ತ ಪಡೆಯುವುದು ಹೇಗೆ?

ಆ್ಯಪ್ ಮೂಲಕ ಓಲಾ ಟ್ಯಾಕ್ಸಿ ಬುಕ್ ಮಾಡುವಾಗಲೇ ಇದಕ್ಕಾಗಿಯೇ ಒಂದು ವಿಮೆ ಬಟನ್ ಲಭ್ಯವಿದ್ದು, ನೀವು ಟ್ಯಾಕ್ಸಿ ದರ ಪಾವತಿಸುವಾಗಲೇ ಟ್ಯಾಕ್ಸಿ ಪ್ರಯಾಣದ ಮೊತ್ತದ ಜೊತೆಯಲ್ಲೇ ಹೆಚ್ಚುವರಿಯಾಗಿ ರೂ.1 ಪಾವತಿಸಿದ್ರೆ ಮುಗಿಯಿತು.

ಪ್ರಯಾಣಿಕರನ್ನು ಸೆಳೆಯಲು ಹೊಸ ಆಫರ್ ಪ್ರಕಟಿಸಿದ ಓಲಾ..!!

ಇದಾದ ನಂತರ ನೀವು ವಿಮೆ ಸೌಲಭ್ಯಕ್ಕೆ ಅರ್ಹರಾಗಿರಲಿದ್ದು, ಓಲಾ ಆ್ಯಪ್‌, ವಿಮೆ ಪೂರೈಸುವ ಸಂಸ್ಥೆಗಳು ಮತ್ತು ಕಾಲ್‌ ಸೆಂಟರ್‌ಗಳ ಮೂಲಕ ನಿಮ್ಮ ವಿಮೆ ಮೊತ್ತವನ್ನು ಪಡೆಯಬಹುದಾಗಿದೆ.

ಪ್ರಯಾಣಿಕರನ್ನು ಸೆಳೆಯಲು ಹೊಸ ಆಫರ್ ಪ್ರಕಟಿಸಿದ ಓಲಾ..!!

ಅಕೊ (Acko) ಜನರಲ್‌ ಇನ್ಶುರನ್ಸ್‌ ಮತ್ತು ಐಸಿಐಸಿಐ ಲೋಂಬಾರ್ಡ್‌ ಜನರಲ್‌ ಇನ್ಶುರನ್ಸ್‌ ಸಹಭಾಗಿತ್ವದಲ್ಲಿ ಓಲಾ ಸಂಸ್ಥೆಯು ಈ ಯೋಜನೆಯನ್ನು ಪರಿಚಯಿಸಿದ್ದು, ದೇಶದ 110 ನಗರಗಳಲ್ಲಿ ಈ ಹೊಸ ಸೌಲಭ್ಯಯು ಲಭ್ಯವಿರಲಿದೆ.

ಪ್ರಯಾಣಿಕರನ್ನು ಸೆಳೆಯಲು ಹೊಸ ಆಫರ್ ಪ್ರಕಟಿಸಿದ ಓಲಾ..!!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಓಲಾ ಟ್ಯಾಕ್ಸಿ ಬಳಕೆ ಮಾಡುವ ಪ್ರತಿ ಟ್ರಿಪ್‌ಗೂ ರೂ.1 ಪಾವತಿಸಬೇಕಾಗಿದ್ದು, ಬಾಡಿಗೆ ಕಾರಿನಲ್ಲಿ ಚಲಿಸುವುದಾದರೇ ರೂ. 10 ಪ್ರಿಮಿಯಂ ದರ ಮತ್ತು ನಗರದಿಂದ ಹೊರ ಹೋಗುವ ಪ್ರಯಾಣಗಳಿಗೆ ರೂ.15 ಪ್ರಿಮಿಯಂ ದರ ಪಾವತಿಸಬೇಕಾಗುತ್ತೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

ವಾಹನಗಳ ನಂಬರ್‌ಪ್ಲೇಟ್ ಮೇಲೆ IND ಎಂದು ಏಕೆ ಬರೆಯುತ್ತಾರೆ ಗೊತ್ತೆ ?

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಫಿದಾ ಆದ ಸೇನೆ...

Most Read Articles

Kannada
Read more on cab taxi bengaluru
English summary
Ola Cabs Offers In-Trip Insurance Covers Of Up To Rs 5 Lakh — Now 'Chalo Befikar' Anywhere.
Story first published: Saturday, April 7, 2018, 19:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X