ಆಟೋ ಎಕ್ಸ್ ಪೋ 2018: ಮಾರುತಿ ಸುಜುಕಿ ಕಾನ್ಸೆಪ್ಟ್ ಫ್ಯೂಚರ್ ಎಸ್ ಅನಾವರಣ
ಮಾರುತಿ ಸುಜುಕಿ ಸಂಸ್ಥೆಯು ಮುಂಬರುವ ದಿನಗಳಲ್ಲಿ ವಿನೂತನ ಎಸ್‌ಯುವಿ ಮಾದರಿಯಾದ ಕಾನ್ಸೆಪ್ಟ್ ಫ್ಯೂಚರ್ ಎಸ್ ಮಾದರಿಯು ಹಲವು ವಿಶೇಷತೆಗಳಿಂದ ಕೂಡಿದ್ದು, '2018ರ ಆಟೋ ಎಕ್ಸ್ ಪೋ'ದ ಪ್ರಮುಖ ಆಕರ್ಷಣೆಯಾಗಿದೆ.
ಮಾರುತಿ ಸುಜುಕಿ ಸಂಸ್ಥೆಯು ಮುಂಬರುವ ದಿನಗಳಲ್ಲಿ ವಿನೂತನ ಎಸ್‌ಯುವಿ ಮಾದರಿಯಾದ ಕಾನ್ಸೆಪ್ಟ್ ಫ್ಯೂಚರ್ ಎಸ್ ಮಾದರಿಯು ಹಲವು ವಿಶೇಷತೆಗಳಿಂದ ಕೂಡಿದ್ದು, '2018ರ ಆಟೋ ಎಕ್ಸ್ ಪೋ'ದ ಪ್ರಮುಖ ಆಕರ್ಷಣೆಯಾಗಿದೆ.

2020ರ ವೇಳೆಗೆ ಫ್ಯೂಚರ್ ಎಸ್ ಎಸ್‌ಯುವಿ ಕಾರುಗಳ ಉತ್ಪಾದನೆ ಕೈಗೊಳ್ಳಲಿರುವ ಮಾರುತಿ ಸುಜುಕಿಯ ತ್ರಿ ಡೋರ್ ಮಾದರಿಯಲ್ಲಿ ಹೊಸ ಕಾರನ್ನು ಸಿದ್ಧಗೊಳಿಸಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಅತ್ಯುತ್ತಮ ಬೇಡಿಕೆ ಪಡೆಯುವ ತವಕದಲ್ಲಿವೆ.
Recommended Video


ಇನ್ನು ಮಾರುತಿ ಸುಜುಕಿ ಪರಿಚಯಿಸಲಿರುವ ಕಾನ್ಸೆಪ್ಟ್ ಫ್ಯೂಚರ್ ಎಸ್ ಮಾದರಿಗಳು ಸಿಕ್ ಗ್ರಿಲ್ ಕೂಡಾ ಹೊಂದಿದ್ದು, ಹೊಸ ಕಾರುಗಳು ಎಲ್ಇಡಿ ಹೆಡ್‌ಲೈಟ್ಸ್, ವಿಂಡ್ ಬಾರ್ಡರ್‌ಗಳಲ್ಲಿ ಬಿಳಿ ಬಣ್ಣದ ಪಟ್ಟಿಗಳು ಕಾರಿನ ಲುಕ್ ಮತ್ತಷ್ಟು ಹೆಚ್ಚಿಸಿವೆ.

ಜೊತೆಗೆ ಆಟೋ ಪ್ರದರ್ಶನದಲ್ಲಿ ಆರೇಂಜ್ ಬಣ್ಣದ ಆವೃತ್ತಿಯನ್ನು ಮಾತ್ರ ಅನಾವರಣ ಮಾಡಲಾಗಿದ್ದು, ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, ಸ್ಟಿರಿಂಗ್ ವೀಲ್ಹ್, ಡೋರ್ ಟ್ರಿಮ್ ಮತ್ತು ಕಾರಿನ ಸೀಟುಗಳು ವಿಭಿನ್ನ ವಿನ್ಯಾಸ ಪಡೆದಿವೆ.

ಮಾರುತಿ ಸುಜುಕಿ ಡಿಸೈನ್ ಸ್ಟುಡಿಯೋದಲ್ಲೇ ಕಾನ್ಸೆಪ್ಟ್ ಫ್ಯೂಚರ್ ಎಸ್ ಮಾದರಿಗಳನ್ನು ಸಿದ್ದಗೊಳಿಸಿಲಾಗಿದ್ದು, ತ್ರಿ ಡೋರ್ ಮಾದರಿಯೊಂದಿಗೆ ಆಪ್ ರೋಡ್ ಮತ್ತು ಕ್ರೀಡಾ ಬಳಕೆಯ ಕಾರು ಆವೃತ್ತಿಯಾಗಿ ಹೊರಹೊಮ್ಮಲಿದೆ.

ಎಂಜಿನ್ ವೈಶಿಷ್ಟ್ಯತೆ
ಕಾನ್ಸೆಪ್ಟ್ ಫ್ಯೂಚರ್ ಎಸ್ ಕಾರಿನ ವಿನ್ಯಾಸಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರೂ ಎಂಜಿನ್ ಮಾದರಿಯ ಬಗ್ಗೆ ಗೌಪ್ಯತ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ಬಿಡುಗಡೆಗೆ ಮುನ್ನವಷ್ಟೇ ಮತ್ತಷ್ಟು ಮಾಹಿತಿಯನ್ನು ಹೊರಹಾಕಲಿದೆ ಎನ್ನಬಹುದು.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಪ್ರಯಾಣಿಕ ಕಾರುಗಳನ್ನು ಹೊರತುಪಡಿಸಿ ಪರ್ಫಾಮೆನ್ಸ್ ಕಾರು ಮಾದರಿಗಳಲ್ಲಿ ಅಷ್ಟೇನು ಪ್ರಭುತ್ವ ಸಾಧಿಸಲು ಹಿಂದೆ ಬಿದ್ದಿರುವ ಮಾರುತಿ ಸುಜುಕಿ ಸಂಸ್ಥೆಯು ಹೊಸ ಉತ್ಪನ್ನಗಳ ಮೂಲಕ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಕಾನ್ಸೆಪ್ಟ್ ಫ್ಯೂಚರ್ ಎಸ್ ಅತ್ಯುತ್ತಮ ಆಯ್ಕೆಯಾಗಿರಲಿದೆ.
Trending On DriveSpark Kannada:
ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...
ಅಪಘಾತದ ನಂತರ ಶವವನ್ನು 70 ಕಿಮಿ ಎಳೆದುಕೊಂಡು ಹೊಯ್ತು ಕೆಎಸ್ಆರ್‌ಟಿಸಿ ಬಸ್


Click it and Unblock the Notifications








