ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ಅಭಿವೃದ್ಧಿಗೊಳಿಸಲಿದೆ ಹೋಂಡಾ...

By Praveen

ಸದ್ಯ ದೇಶಿಯ ಮಾರುಕಟ್ಟೆಯ ಕಾರು ಮಾರಾಟದಲ್ಲಿ ಯಶಸ್ಸು ಸಾಧಿಸುತ್ತಿರುವ ಹೋಂಡಾ ಇಂಡಿಯಾ ಸಂಸ್ಥೆಯು ಸದ್ಯದಲ್ಲೇ ಅಮೇಜ್ ಫ್ಯಾಟ್‌ಫಾರ್ಮ್ ಆಧರಿತ ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳನ್ನು ಹೊರತರಲು ಮುಂದಾಗಿದ್ದು, ಮಾರುತಿ ಸುಜುಕಿ ಬ್ರೇಝಾ, ಟಾಟಾ ನೆಕ್ಸಾನ್ ಮತ್ತು ಫೋರ್ಡ್ ಇಕೋ ಸ್ಪೋರ್ಟ್‌ಗೆ ಪ್ರತಿಸ್ಪರ್ಧಿಯಾಗುವ ಸುಳಿವು ನೀಡಿದೆ.

ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ಅಭಿವೃದ್ಧಿಗೊಳಿಸಲಿದೆ ಹೋಂಡಾ...

ಈ ಹಿಂದೆ ಎಂಟ್ರಿ ಲೆವಲ್ ಬ್ರಿಯೋ ಹ್ಯಾಚ್‌ಬ್ಯಾಕ್ಯ್ ಮೂಲಕ ಗ್ರಾಹಕರ ಗಮನ ಸೆಳೆದಿದ್ದ ಹೋಂಡಾ ಸಂಸ್ಥೆಯು ಕಳೆದ ವರ್ಷದಿಂದ ಗಣನೀಯ ಪ್ರಮಾಣದಲ್ಲಿ ಬ್ರಿಯೋ ಮಾರಾಟದಲ್ಲಿ ಕುಸಿತ ಅನುಭವಿಸಿದೆ. ಹೀಗಾಗಿ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ಹೊರತರಲು ಮುಂದಾಗಿದೆ.

Recommended Video - Watch Now!
New Maruti Swift Launch: Price; Mileage; Specifications; Features; Changes
ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ಅಭಿವೃದ್ಧಿಗೊಳಿಸಲಿದೆ ಹೋಂಡಾ...

ಸದ್ಯ ಮಾರುಕಟ್ಟೆಯಲ್ಲಿರುವ WR-V ಮಾದರಿಗಿಂತ ಕೆಳದರ್ಜೆಯ ಮತ್ತು ಬ್ರಿಯೋಗಿಂತ ಹೆಚ್ಚಿನ ಗುಣಮಟ್ಟದ ಮಾದರಿಯಾಗಲಿರುವ ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ಕಾರು, 2ಯುಎ ಎಂಬ ಕೋಡ್‌ನೆಮ್ ಅಡಿ ಅಧ್ಯಯನ ಹಂತದಲ್ಲಿದೆ.

ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ಅಭಿವೃದ್ಧಿಗೊಳಿಸಲಿದೆ ಹೋಂಡಾ...

ಒಂದು ವೇಳೆ ಹೋಂಡಾ ತಂಡವು ಕೈಗೊಂಡಿರುವ ಅಧ್ಯಯನವು ಮಾರುಕಟ್ಟೆಯಲ್ಲಿ ಸರಾತ್ಮಕ ಪ್ರಕ್ರಿಯೆ ಸಿಕ್ಕಲ್ಲಿ ಮುಂದಿನ ವರ್ಷವೇ ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ರಸ್ತೆಗಿಳಿಯಲಿದ್ದು, 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡಿಸೇಲ್ ಎಂಜಿನ್ ಪಡೆದುಕೊಳ್ಳಲಿವೆ.

ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ಅಭಿವೃದ್ಧಿಗೊಳಿಸಲಿದೆ ಹೋಂಡಾ...

ಜೊತೆಗೆ ಸ್ಟ್ಯಾಂಡರ್ಡ್ ಇಂಟಿರಿಯರ್ ಮತ್ತು ವಿಶೇಷ ಹೊರ ವಿನ್ಯಾಸಗಳನ್ನು ಪಡೆದುಕೊಳ್ಳಲಿರುವ ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿಯು ಮಧ್ಯಮ ಗಾತ್ರದ ಕಾರುಗಳನ್ನು ಇಷ್ಟಪಡುವ ಭಾರತೀಯ ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ಅಭಿವೃದ್ಧಿಗೊಳಿಸಲಿದೆ ಹೋಂಡಾ...

ಇನ್ನು ಕಳೆದ ಡಿಸೆಂಬರ್‌ನಿಂದಲೇ ಮೊಬಿಲಿಯೊ ಎಂಪಿವಿ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಹೋಂಡಾ ಸಂಸ್ಥೆಯು ಸಿಟಿ ಸೆಡಾನ್, ಡಬ್ಲ್ಯುಆರ್-ವಿ, ಝಾ, ನ್ಯೂ ಅಮೇಜ್ ಸೆಮಿ ಸೆಡಾನ್, ಸಿಆರ್-ವಿ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದು, ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ನಿರ್ಮಾಣದ ಮೇಲೂ ವಿಶೇಷ ಆಸಕ್ತಿ ತೊರಿದೆ.

ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ಅಭಿವೃದ್ಧಿಗೊಳಿಸಲಿದೆ ಹೋಂಡಾ...

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ನಂತರ ಎಸ್‌ಯುವಿ ಕಾರು ವಿಭಾಗದಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಹೋಂಡಾ ಸಂಸ್ಥೆಯು ಬಲವಾದ ಎಂಟ್ರಿ ಲೆವೆಲ್ ಕಾರು ಮಾದರಿಯಲ್ಲಿ ಹಿಂದೆ ಬಿದ್ದಿದ್ದು, ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

Trending On DriveSpark Kannada:

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

ಆ ಸೂಪರ್ ಬೈಕಿನಲ್ಲಿ ಎಬಿಎಸ್ ಇಲ್ಲಾ ಅಂದಿದ್ರೆ ಕಥೆ ಅಷ್ಟೇ...

Kannada
Read more on honda ಹೋಂಡಾ
English summary
New Honda Amaze Platform-Based Compact SUV Being Considered — To Rival Maruti Brezza & Tata Nexon.
Story first published: Friday, February 16, 2018, 20:04 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more