ಆ ಸೂಪರ್ ಬೈಕಿನಲ್ಲಿ ಎಬಿಎಸ್ ಇಲ್ಲಾ ಅಂದಿದ್ರೆ ಕಥೆ ಅಷ್ಟೇ...

Written By:

ಇತ್ತೀಚೆಗೆ ಹೆದ್ದಾರಿಗಳ ಬಳಿಯ ಹಳ್ಳಿಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ರಸ್ತೆ ನಿಯಮಗಳನ್ನು ಪಾಲಿಸದೇ ಇರುವುದು ಮುಖ್ಯ ಕಾರಣವಾಗುತ್ತಿದೆ. ಅದರಲ್ಲೂ ಸೂಪರ್ ಬೈಕ್‌ ಮತ್ತು ಸೂಪರ್ ಕಾರುಗಳ ಹಾವಳಿಯಂತೂ ಹೆದ್ದಾರಿ ಬಳಿಯ ಜನರನ್ನು ನಿದ್ದೆಗೆಡಿಸುತ್ತಿದ್ದು, ಆಗಬಹುದಾದ ದುರಂತಗಳಿಗೆ ಕಡಿವಾಣ ಹಾಕಲು ಎಬಿಎಸ್ ತಂತ್ರಜ್ಞಾನವು ವರವಾಗಿ ಪರಿಣಮಿಸುತ್ತಿದೆ.

ಆ ಸೂಪರ್ ಬೈಕಿನಲ್ಲಿ ಎಬಿಎಸ್ ಇಲ್ಲಾ ಅಂದಿದ್ರೆ ಕಥೆ ಅಷ್ಟೇ...

ಅಂದಹಾಗೆ ನಾವು ಇಷ್ಟೆಲ್ಲಾ ಯಾಕೆ ಹೇಳ್ತಾ ಇದೀವಿ ಅಂದುಕೊಂಡ್ರೆ ಅದಕ್ಕೂ ಕಾರಣವಿದೆ. ಮೊನ್ನೆಯಷ್ಟೇ ನಡೆದ ಘಟನೆಯೊಂದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೂಪರ್ ಬೈಕ್ ರೈಡರ್ ಒಬ್ಬ ಬೈಕ್ ಚಾಲನೆ ವೇಳೆ ಎಬಿಎಸ್ ತಂತ್ರಜ್ಞಾನದ ನೆರವಿನೊಂದಿಗೆ ಆಗಬಹುದಾದ ದುರಂತಗಳನ್ನು ತಡೆದಿರುವುದು ಚರ್ಚೆಗೆ ಕಾರಣವಾಗಿದೆ.

ಆ ಸೂಪರ್ ಬೈಕಿನಲ್ಲಿ ಎಬಿಎಸ್ ಇಲ್ಲಾ ಅಂದಿದ್ರೆ ಕಥೆ ಅಷ್ಟೇ...

ಸೂಪರ್ ಬೈಕ್‌ಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಅಪಘಾತಗಳ ಸಂಖ್ಯೆಯು ಕೂಡಾ ಹೆಚ್ಚುತ್ತಲೇ ಇದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ(ಎಬಿಎಸ್) ತಂತ್ರಜ್ಞಾನವು ಆಗಬುಹುದಾದ ಭೀಕರ ಅಪಘಾತಗಳ ತೀವ್ರತೆಯನ್ನು ತಗ್ಗಿಸಲು ನೆರವಾಗಲಿದೆ ಎಂಬುವುದನ್ನು ಇಲ್ಲಿ ಚರ್ಚಿಸುತ್ತಿದ್ದೇವೆ.

ಆ ಸೂಪರ್ ಬೈಕಿನಲ್ಲಿ ಎಬಿಎಸ್ ಇಲ್ಲಾ ಅಂದಿದ್ರೆ ಕಥೆ ಅಷ್ಟೇ...

ಮೊನ್ನೆಯಷ್ಟೇ ಬಜಾಜ್ ಡೋಮಿನಾರ್ 400 ಬೈಕ್ ಸವಾರನೊಬ್ಬ 140 ವೇಗದಲ್ಲಿ ರಾ.ಹೆದ್ದಾರಿಯೊಂದರಲ್ಲಿ ಬೈಕ್ ಚಾಲನೆ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬನ ಅಡ್ಡ ಬಂದಿದ್ದಾನೆ. ಅದೃಷ್ಟವಶಾತ್ ಕೇವಲ 2 ಸೇಕೆಂಡ್‌ಗಳಲ್ಲಿ ಆ ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಿರುವುದು ಬೈಕಿನಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆ ಸೂಪರ್ ಬೈಕಿನಲ್ಲಿ ಎಬಿಎಸ್ ಇಲ್ಲಾ ಅಂದಿದ್ರೆ ಕಥೆ ಅಷ್ಟೇ...

ಒಂದು ವೇಳೆ ಆ ಬೈಕಿನಲ್ಲಿ ಎಬಿಎಸ್ ಇಲ್ಲವಾದ್ರೆ ನಡೆಯಬಹುದಾಗಿದ್ದ ದುರಂತವನ್ನು ಆ ದೇವರು ತಪ್ಪಿಸಲು ಆಗುತ್ತಿರಲಿಲ್ಲ ಎಂಬುವುದು ಆ ಬೈಕ್‌ರ್ ಅಭಿಪ್ರಾಯವಾಗಿದ್ದು, ಹೆದ್ದಾರಿ ಬಳಿಯಲ್ಲಿನ ಗ್ರಾಮಸ್ಥರು ಎಚ್ಚರಿಕೆ ವಹಿಸಿ ಎಂಬ ಸಂದೇಹ ನೀಡಿದ್ದಾನೆ.

ಆ ಸೂಪರ್ ಬೈಕಿನಲ್ಲಿ ಎಬಿಎಸ್ ಇಲ್ಲಾ ಅಂದಿದ್ರೆ ಕಥೆ ಅಷ್ಟೇ...

ಹಾಗಾದ್ರೆ ಎಬಿಎಸ್‌ನಿಂದ ಏನು ಲಾಭ?

ಹೌದು. ಇದು ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡಬಹುದಾದ ಸಹಜ ಪ್ರಶ್ನೆ. ಒಂದು ವೇಳೆ ಬೈಕ್‌ಗಳಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಇದ್ದಲ್ಲಿ ಅಪಘಾತಗಳ ತೀವ್ರತೆಯನ್ನು ತಡೆಯಬಹುದಾಗಿದ್ದು, ಜೊತೆಗೆ ಬ್ರೇಕಿಂಗ್ ವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿದ ಸಾಧಿಸಬಹುದಾಗಿದೆ.

ಆ ಸೂಪರ್ ಬೈಕಿನಲ್ಲಿ ಎಬಿಎಸ್ ಇಲ್ಲಾ ಅಂದಿದ್ರೆ ಕಥೆ ಅಷ್ಟೇ...

ಮತ್ತೊಂದು ಮುಖ್ಯ ವಿಚಾರ ಏನೆಂದರೆ ಎಬಿಎಸ್ ತಂತ್ರಜ್ಞಾನವು ಸವಾರಿಗೆ ಸಂಪೂರ್ಣ ಸುರಕ್ಷತೆಯನ್ನು ನೀಡಲಿದ್ದು, ಹೊಸ ನಿಮಯದಿಂದ ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ಕೂಡಾ ತಡೆಯಬಹುದಾಗಿದೆ.

ಆ ಸೂಪರ್ ಬೈಕಿನಲ್ಲಿ ಎಬಿಎಸ್ ಇಲ್ಲಾ ಅಂದಿದ್ರೆ ಕಥೆ ಅಷ್ಟೇ...

ಈ ಹಿನ್ನೆಲೆಯಲ್ಲಿ ವಾಹನಗಳಲ್ಲಿನ ಕೆಲವು ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರವು ಮುಂಬರುವ ದಿನಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಎಬಿಎಸ್ ತಂತ್ರಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ಜಾರಿಗೆ ತರುತ್ತಿದೆ.

ಆ ಸೂಪರ್ ಬೈಕಿನಲ್ಲಿ ಎಬಿಎಸ್ ಇಲ್ಲಾ ಅಂದಿದ್ರೆ ಕಥೆ ಅಷ್ಟೇ...

ಹೀಗಾಗಿ ಎಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಮಾದರಿಗಳಿಗೂ ಸಾಕಷ್ಟು ವ್ಯತ್ಯಾಸವಿಲ್ಲದಿದ್ದರೂ, ಸಾಮಾನ್ಯ ಬೈಕ್ ಮಾದರಿಗಳಿಗಿಂತ 5 ರಿಂದ 8 ಸಾವಿರ ರೂಪಾಯಿ ಹೆಚ್ಚುವರಿ ದರಗಳು ಮಾತ್ರ ನಿಗದಿಯಾಗಿರುತ್ತವೆ.

ಬಜಾಜ್ ಡೋಮಿನಾರ್ 400 ಬೈಕ್ ಸವಾರ ಕೂಡಾ ಇದೇ ಉದ್ದೇಶದಿಂದ ಎಬಿಎಸ್ ತಂತ್ರಜ್ಞಾನದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಹೆಲ್ಮೆಟ್‌ ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋ ಇಲ್ಲಿದೆ ನೋಡಿ.

ಆ ಸೂಪರ್ ಬೈಕಿನಲ್ಲಿ ಎಬಿಎಸ್ ಇಲ್ಲಾ ಅಂದಿದ್ರೆ ಕಥೆ ಅಷ್ಟೇ...

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೊಸ ನಿಯಮವು ದ್ವಿಚಕ್ರ ವಾಹನ ಸವಾರರಿಗೆ ಅನುಕೂಲಕರವಾಗಲಿದ್ದು, 2018ರ ಏಪ್ರಿಲ್ 1ರಿಂದ ಎಬಿಎಸ್ ಕಡ್ಡಾಯವಾಗಿ ಜಾರಿಗೆ ಬರುತ್ತಿರುವ ಹಿನ್ನೆಲೆ ಇನ್ಮುಂದೆ ಹೊಸ ಬೈಕ್ ಖರೀದಿದಾರರು ಪ್ರಸ್ತುತ ಮಾರುಕಟ್ಟೆಯಲ್ಲಿ ನಿಯಮಗಳಿಗೆ ಅನುಗುಣವಾಗಿ ಬೈಕ್ ಆಯ್ಕೆ ಮಾಡುವುದು ಸುರಕ್ಷೆ ದೃಷ್ಠಿಯಿಂದ ಒಳ್ಳೆಯದು.

Read more on accident video
English summary
Dominar 400 rider barely escapes nasty accident at high speed, caught on video.
Story first published: Wednesday, February 14, 2018, 19:20 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark