2018ರ ಹ್ಯುಂಡೈ ಎಲೈಟ್ ಐ20 ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು.?

ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಎಲೈಟ್ ಐ20 ಫೇಸ್‍ಲಿಫ್ಟ್ ಕಾರನ್ನು ಫೆಬ್ರವರಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಳಿಸಿದೆ.

By Rahul Ts

ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಎಲೈಟ್ ಐ20 ಫೇಸ್‍ಲಿಫ್ಟ್ ಕಾರನ್ನು ಫೆಬ್ರವರಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ಬೆಲೆಗಳು ರೂ. 5.35 ಲಕ್ಷದಿಂದ ಆರಂಭವಾಗಿ ಟಾಪ್ ವೆರಿಯಂಟ್‌ಗಳು ರೂ. 9.15 ಲಕ್ಷ ಬೆಲೆ ಹೊಂದಿವೆ.

2018ರ ಹ್ಯುಂಡೈ ಎಲೈಟ್ ಐ20 ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು.?

ಎಲೈಟ್ ಫೇಸ್‍ಲಿಪ್ಟ್ ಐ20 ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 83ಬಿಹೆಚ್‍ಪಿ ಮತ್ತು 115ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಅಥವ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

2018ರ ಹ್ಯುಂಡೈ ಎಲೈಟ್ ಐ20 ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು.?

ಇನ್ನು ಎಲೈಟ್ ಫೇಸ್‍ಲಿಪ್ಟ್ ಐ20 ಕಾರಿನ 1.4 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 89ಬೆಹೆಚ್‍ಪಿ ಹಾಗು 219ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

2018ರ ಹ್ಯುಂಡೈ ಎಲೈಟ್ ಐ20 ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು.?

ಪೆಟ್ರೋಲ್ ಆವೃತ್ತಿಯ ಹ್ಯುಂಡೈ ಎಲೈಟ್ ಐ20 ಕಾರು ಗಂಟೆಗೆ 154 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದಿದ್ದು, ಡೀಸೆಲ್ ಆವೃತ್ತಿಗಳು ಗಂಟೆಗೆ 165 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿವೆ.

2018ರ ಹ್ಯುಂಡೈ ಎಲೈಟ್ ಐ20 ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು.?

ಇದಲ್ಲದೇ ಹ್ಯುಂಡೈ ಎಲೈಟ್ ಐ20 ಕಾರಿನ ಪೆಟ್ರೋಲ್ ಮಾದರಿಗಳು ಪ್ರತೀ ಲೀಟರ್‍‍ಗೆ 18.5 ಲೀಟರ್ ಮೈಲೇಜ್ ನೀಡಲಿದ್ದು, ಡೀಸೆಲ್ ಮಾದರಿಗಳು ಪ್ರತೀ ಲೀಟರ್‍‍ಗೆ 22.5 ಕಿಲೋಮೀಟರ್ ಮೈಲೇಜ್ ನೀಡಲಿದೆ.

2018ರ ಹ್ಯುಂಡೈ ಎಲೈಟ್ ಐ20 ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು.?

ಇನ್ನು ಹ್ಯುಂಡೈ ಎಲೈಟ್ ಕಾರಿನ ಸುತ್ತಳತೆಯ ಬಗ್ಗೆ ಹೇಳುವುದಾದರೆ 2570ಎಂಎಂ ವೀಲ್‍ಬೇಸ್, 3985ಎಂಎಂ ಉದ್ದ, 1734 ಎಂಎಂ ಅಗಲ ಹಾಗು 1505 ಎಂಎಂ ಎತ್ತರವನ್ನು ಪಡೆದುಕೊಂಡಿದೆ.

2018ರ ಹ್ಯುಂಡೈ ಎಲೈಟ್ ಐ20 ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು.?

ಹೊಸ ಕಾರುಗಳ ಇಂಟಿರಿಯರ್ ಮತ್ತು ಎಕ್ಸಿಟಿರಿಯರ್ ವಿನ್ಯಾಸಗಳು ಆಕರ್ಷಕವಾಗಿದ್ದು, ಡ್ಯುಯಲ್ ಟೋನ್ ಪೇಂಟ್, ಸ್ಪೋರ್ಟಿ ಇಂಟಿರಿಯರ್ ಡಿಸೈನ್, ಐ ಬ್ಲ್ಯೂ ಸ್ಮಾರ್ಟ್ ಫೋನ್ ಆ್ಯಪ್, ರಿರ್ ಆರ್ಮ್‌ಸ್ಟ್ ಜೊತೆ ಕಪ್ ಹೊಲ್ಡರ್ ಒಳಗೊಂಡಿದೆ.

2018ರ ಹ್ಯುಂಡೈ ಎಲೈಟ್ ಐ20 ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು.?

ಇದರ ವೈಶಿಷ್ಟ್ಯತೆಗಳ ಬಗ್ಗೆ ಹೋಲುವುದಾದರೆ ಹೊಸ ಹ್ಯುಂಡೈ ಎಲೈಟ್ ಐ20 ಕಾರುಗಳು ಸ್ಟೈಲಿಶ್ ಬಂಪರ್, ನ್ಯೂ ಅಲಾಯ್ ಚಕ್ರಗಳು, ದೊಡ್ಡದಾದ ಟೈಲ್‌ಲ್ಯಾಂಪ್, ನ್ಯೂ ಟೈಲ್‌ಗೇಟ್‌ಗಳು 2018ರ ಎಲೈಟ್ ಐ20 ಪ್ರಮುಖಾಂಶಗಳಾಗಿದ್ದು, ಹೊಸ ನಮೂನೆಯ ಇಂಟಿರಿಯರ್ ಮತ್ತು ಇನ್ಪೋಟೈನ್‍‌ಮೆಂಟ್ ಕೂಡ ಪಡೆದುಕೊಂಡಿವೆ.

2018ರ ಹ್ಯುಂಡೈ ಎಲೈಟ್ ಐ20 ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು.?

2018ರ ಹೊಸ ಹ್ಯುಂಡೈ ಎಲೈಟ್ ಐ20 ಕಾರಿನ ಖರೀದಿಗಾಗಿ ನಿಮ್ಮ ಹತ್ತಿರದ ಡೀಲರ್‍‍ಗಳ ಹತ್ತಿರ ಮೊದಲಿಗೆ ರೂ 10,000 ಪಾವತಿ ಮಾಡಬೇಕಾಗಿದ್ದು, ಬುಕ್ಕಿಂಗ್ ಮಾಡಿದ ಏಳು ದಿನಗಳೋಳಗೆ ಹೊಸ ಕಾರು ನಿಮ್ಮ ಕೈ ಸೇರಲಿದೆ.

2018ರ ಹ್ಯುಂಡೈ ಎಲೈಟ್ ಐ20 ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು.?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

2. ಮಂಗಳೂರಿಗೆ ಬಂದ ಭಾರತದ ಮೊದಲ ಕವಾಸಕಿ ಜೆಡ್900ಆರ್‍ಎಸ್ ಬೈಕ್..

3. ಉಡುಪಿಯಲ್ಲಿ ಭೀಕರ ಅಪಘಾತ- ಇನೋವಾ ಗುದ್ದಿದ ರಭಸಕ್ಕೆ ಗಾಳಿಯಲ್ಲಿ ತೂರಿ ಹೋದ ಪಲ್ಸರ್ ಬೈಕ್...

4. ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

5. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

Most Read Articles

Kannada
Read more on hyundai
English summary
New Hyundai Elite i20 2018: Top Things To Know About Hyundai’s Best-Selling Hatchback.
Story first published: Thursday, April 5, 2018, 10:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X