ಮಹೀಂದ್ರಾ ಎಂಪಿವಿ ಕಾರಿನ ಬಿಡುಗಡೆಯ ಮಾಹಿತಿ ಲೀಕ್..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹಿಂದ್ರ ಕೆಲ ದಿನಗಳ ಹಿಂದಷ್ಟೆ ತಮ್ಮ ಹೊಸ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಕೆಲ ದಿನಗಳ ಹಿಂದಷ್ಟೆ ತಮ್ಮ ಹೊಸ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಇದೀಗ ಸಂಸ್ಥೆಯು ಎಂಪಿವಿ ಕಾರನ್ನು ಇದೇ ವರ್ಷದ ನಾಲ್ಕನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ.

ಮಹೀಂದ್ರಾ ಎಂಪಿವಿ ಕಾರಿನ ಬಿಡುಗಡೆಯ ಮಾಹಿತಿ ಲೀಕ್..

ಮಹೀಂದ್ರಾ ಸಂಸ್ಥೆಯ ಹೊಸ ಯು321 ಎಂಪಿವಿ ಕಾರು ಕೆಲ ದಿನಗಳ ಹಿಂದಷ್ಟೆ ಭಾರತದ ರಸ್ಥೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಇದೀಗ ಮತೊಮ್ಮೆ ಇನ್ನೆರಡು ವೇರಿಯಂಟ್‍‍ಗಳಲ್ಲಿ ಕಾಣಿಸಿಕೊಂಡಿದೆ.

ಮಹಿಂದ್ರಾ ಎಂಪಿವಿ ಕಾರಿನ ಬಿಡುಗಡೆಯ ಮಾಹಿತಿ ಲೀಕ್..

ಇನ್ನು ಹೊಸದಾಗಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕಾರುಗಳಲ್ಲೊಂದು ಯು 081 ಮತ್ತು ಇನ್ನೊಂದು ಕಾರು ಯು-079 ಬ್ಯಾಡ್ಜಿಂಗ್ ಅನ್ನು ಪಡೆದುಕೊಂಡಿದೆ. ಹೊಸ ಯು321 ಎಂಪಿವಿ ಕಾರು ಮಹಿಂದ್ರಾ ಸಂಸ್ಥೆಯ ಮೊದಲ ಮೊನೊಕೊಕ್ಯು ದೇಹ ಹೊಂದಿರುವ ಕಾರಾಗಿದ್ದು, ಪ್ರಸ್ಥುತ ಜೈಲೋ ಕಾರುಗಳಲ್ಲಿ ಬಳಸಲಾಗಿರುವ ಬಾಡಿ ಆನ್ ಫ್ರೇಮ್ ಶೈಲಿಗಿಂತ ವಿಭಿನ್ನವಾಗಿರಲಿದೆ.

ಮಹಿಂದ್ರಾ ಎಂಪಿವಿ ಕಾರಿನ ಬಿಡುಗಡೆಯ ಮಾಹಿತಿ ಲೀಕ್..

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕಾರುಗಳು 6 ಸ್ಪ್ಲಿಟ್ ಸ್ಪೋಕ್ ಎರಡು ಟೋನ್‍‍ಗಳುಳ್ಳ ಅಲಾಯ್ ಚಕ್ರಗಳು, ಕಪ್ಪು ಹೆಡ್‍‍ಲ್ಯಾಂಪ್ ಬೆಜೆಲ್ಸ್ ಮತ್ತು ಮುಂಭಾಗದ ಗ್ರಿಲ್‍‍ನಲ್ಲಿ ಮಹಿಂದ್ರಾ ಸಂಸ್ಥೆಯ ಸಿಗ್ನೇಚರ್‍‍ನಿಂದ ಸಜ್ಜುಗೊಂಡಿದೆ.

ಮಹಿಂದ್ರಾ ಎಂಪಿವಿ ಕಾರಿನ ಬಿಡುಗಡೆಯ ಮಾಹಿತಿ ಲೀಕ್..

ಮಹಿಂದ್ರಾ ಯು321 ಎಂಪಿವಿ ಕಾರು ಏಳು ಲಂಬಾಕಾರದ ಗ್ರಿಲ್, ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಹೊಸ ಬಂಪರ್, ಫಾಗ್ ಲ್ಯಾಂಪ್ಸ್, ಬೂಮರಾಂಗ್ ಆಕಾರದ LED ಡೇಟೈಮ್ ರನ್ನಿಂಗ್ ಲ್ಯಾಂಪ್ಸ್ ವೈಶಿಷ್ಟ್ಯತೆಗಳನ್ನು ಪಡೆದಿದೆ.

ಮಹಿಂದ್ರಾ ಎಂಪಿವಿ ಕಾರಿನ ಬಿಡುಗಡೆಯ ಮಾಹಿತಿ ಲೀಕ್..

ಕಾರಿನ ಒಳವಿನ್ಯಾಸದ ಬಗ್ಗೆ ಹೇಳುವುದಾದರೆ ಎತ್ತರವಾದ ಏಳು ಲೆದರ್ ಸೀಟ್‍‍ಗಳು, ಆಂಡ್ರಾಯ್ಡ್ ಆಟೋ ಆಪ್ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಅನಲಾಗ್ ಡಿಗಿಟಲ್ ಇಂಸ್ಟ್ರೂಮೆಂತ್ ಕ್ಲಸ್ಟರ್ ಅನ್ನು ಪಡೆದಿರಲಿವೆ.

ಮಹಿಂದ್ರಾ ಎಂಪಿವಿ ಕಾರಿನ ಬಿಡುಗಡೆಯ ಮಾಹಿತಿ ಲೀಕ್..

ಪರಿಕ್ಷಾ ವಾಹನದಲ್ಲಿ ಕಾಣಿಸುವಂತೆ ಯು321 ಎಂಪಿವಿ ಕಾರುಗಳು ಸ್ಟ್ರಾಂಗ್ ಬೆಲ್ಟ್ ಲೈನ್‍, 16 ಇಂಚಿನ ವೀಲ್‍‍ಗಳೊಂದಿಗೆ ಐದು ಸ್ಪೋಕ್ ವೀಲ್ ಆರ್ಚೆಸ್ ಅನ್ನು ಪಡೆದುಕೊಂಡಿದೆ. ಹಿಂಭಾಗದಲ್ಲಿ ಲಂಬಾಕಾರದ ಟೈಲ್‍‍ಲೈಟ್ಸ್, ಹಾಗೆಯೆ ಅನ್ನು ಅಳವಡಿಸಲಾಗಿದೆ.

ಮಹಿಂದ್ರಾ ಎಂಪಿವಿ ಕಾರಿನ ಬಿಡುಗಡೆಯ ಮಾಹಿತಿ ಲೀಕ್..

ಆದರೆ ಮಾಹಿತಿಗಳ ಪ್ರಕಾರ ಮಹಿಂದ್ರಾ ಯು321 ಕಾರುಗಳು 2.0 ಲೀಟರ್ ಎಂಜಿನ್ ಸಹಾಯದಿಂದ 140ಬಿಹೆಚ್‍ಪಿ ಮತ್ತು 320ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದ್ದು, 6 ಸ್ಪೀಡ್ ಮ್ಯಾನುವಲ್ ಅಥವ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ ಎನ್ನಲಾಗಿದೆ.

ಮಹಿಂದ್ರಾ ಎಂಪಿವಿ ಕಾರಿನ ಬಿಡುಗಡೆಯ ಮಾಹಿತಿ ಲೀಕ್..

ಇನ್ನು ಮಹಿಂದ್ರಾ ಯು321 ಎಂಪಿವಿ ಬೇಸ್ ಮಾಡಲ್ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಇನ್ನು ಟಾಪ್ ಎಂಡ್ ವೇರಿಯಂಟ್ ಕಾರುಗಳಲ್ಲು ಎರದು ಬದಿಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಮಹಿಂದ್ರಾ ಎಂಪಿವಿ ಕಾರಿನ ಬಿಡುಗಡೆಯ ಮಾಹಿತಿ ಲೀಕ್..

ಇದಲ್ಲದೆ ಎಬಿಎಸ್‍‍ನೊಂದಿಗೆ ಇಬಿಡಿ ಮತ್ತು ಡ್ಯುಯಲ್ ಏರ್‍‍ಬ್ಯಾಗ್‍‍ಗಳನ್ನು ಕಾರಿನ ಎಲ್ಲಾ ವೇರಿಯಂಟ್‍‍ನಲ್ಲಿ ಅಳವಡಿಸಲಾಗಿದ್ದು, ಇನ್ನು ಟಾಪ್ ಎಂಡ್ ವೇರಿಯಂಟ್ ಕಾರುಗಳು ಕರ್ಟೈನ್ ಏರ್‍‍ಬ್ಯಾಗ್‍‍ಗಳನ್ನು ಕೂಡ ಪಡೆದುಕೊಂಡಿರಲಿವೆ. ಇವುಗಳಲ್ಲದೆ ಪಾರ್ಕಿಂಗ್ ಅಸ್ಸಿಸ್ಟ್, ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ಪಾರ್ಕಿಂಗ್ ಕ್ರಾಮೆರಾವನ್ನು ಕೂಡ ಅಳವಡಿಸಲಾಗಿದೆ.

ಮಹಿಂದ್ರಾ ಎಂಪಿವಿ ಕಾರಿನ ಬಿಡುಗಡೆಯ ಮಾಹಿತಿ ಲೀಕ್..

ದೇಶಿಯ ಮಾರುಕಟ್ಟೆಯಲ್ಲಿ ಮಹಿಂದ್ರಾ ಸಂಸ್ಥೆಯ ಎಂಪಿವಿ ಕಾರು ಬಿಡಗಡೆಗೊಂಡಲ್ಲಿ ಮಾರುತಿ ಎರ್ಟಿಗಾ ಮತ್ತು ಟೊಯೊಟಾ ಇನೊವಾ ಕ್ರಿಸ್ಟಾ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ. ಇನ್ನು ಕಾರಿನ ಬೆಲೆಯ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲವಾದರೂ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 10 ರಿಂದ 15 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on mahindra mpv
English summary
New Mahindra MPV (U321) More Launch Details Revealed: To Be Launched This Festive Season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X