TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಹೊಸ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನ ಬಿಡುಗಡೆ ದಿನಾಂಕ ಫಿಕ್ಸ್..
ದೇಶಿಯಾ ವಾಹನ ತಯಾರಕ ಸಂಸ್ಥೆಯಾದ ಮಹಿಂದ್ರಾ ಸಂಸ್ಥೆಯು ತಮ್ಮ ಹೊಸ ಎಕ್ಸ್‌ಯುವಿ500 ಕಾರಿನ ಬಿಡುಗಡೆ ದಿನಾಂಕವನ್ನು ಬಹಿರಂಗಗೊಳಿಸಿದ್ದು, ಇದೇ ತಿಂಗಳಿನ 18ನೆ ತಾರೀಖಿನಂದು ಲಗ್ಗೆಯಿಡಲು ತಯಾರಾಗಿದೆ.
ಇದೇ ತಿಂಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಮಹೀಂದ್ರಾ ಎಕ್ಸ್‌ಯುವಿ500 ಫೇಸ್ಲಿಫ್ಟ್ ಕಾರುಗಳು ಈಗಾಗಲೇ ಅಧಿಕೃತ ಕಾರು ಡೀಲರ್ಸ್ ಯಾರ್ಡ್‌ಗಳಿಗೆ ತಲುಪುತ್ತಿದ್ದು, ಹಳೆಯ ಮಾದರಿಗಿಂತ ಹೊಸ ಕಾರುಗಳಲ್ಲಿ ಭಾರೀ ಬದಲಾವಣೆ ಕಂಡುಬಂದಿರುವುದು ಎಸ್‌ಯುವಿ ಪ್ರಿಯರನ್ನು ಗಮನಸೆಳೆದಿವೆ.
ಫೇಸ್ಲಿಫ್ಟ್ ಎಕ್ಸ್‌ಯುವಿ500 ಕಾರುಗಳ ವಿನ್ಯಾಸದಲ್ಲಿ ಗುರುತರ ಬದಲಾವಣೆ ತಂದಿರುವ ಮಹೀಂದ್ರಾ ಸಂಸ್ಥೆಯು ಫ್ರಂಟ್ ಗ್ರಿಲ್‌ಗಳನ್ನು ಸ್ಪೋರ್ಟಿ ಮಾದರಿಯ ರೇಡಿಯೇಟರ್ ಗ್ರಿಲ್‌ನೊಂದಿಗೆ ಮರುವಿನ್ಯಾಸಗೊಳಿಸಿದ್ದು, ಹೆಡ್‌ಲ್ಯಾಂಪ್ ಕ್ಲಸ್ಟರ್ ಮತ್ತು ಫಾಗ್ ದೀಪಗಳು ಪ್ರಸ್ತುತ ಮಾರಾಟವಾಗುತ್ತಿರುವ ಮಾದರಿಗೆ ಹೋಲುತ್ತವೆ.
ಇನ್ನು ಹೊಸ ಕಾರಿನ ಹಿಂಭಾಗವು ಸಹ ಸೂಕ್ಷ್ಮ ಬದಲಾವಣೆಗಳನ್ನು ಹೊಂದುವ ಲಕ್ಷಣಗಳನ್ನು ಹೊಂದಿದ್ದು, ವಿಂಡ್‌ಸ್ಕ್ರೀನ್ ಡಿಸೈನ್ ವಿನ್ಯಾಸದಲ್ಲಿನ ಬದಲಾವಣೆ ಹೊರತುಪಡಿಸಿ ಟೈಲ್ ದೀಪದ ಕ್ಲಸ್ಟರ್ ಬದಲಾಗದೆ ಈ ಹಿಂದಿನ ಮಾದರಿಯಲ್ಲೇ ಮುಂದುವರಿಸಲಾಗಿದೆ.
ಜೊತೆಗೆ ಹೊಸ ಫೇಸ್‌ಲಿಫ್ಟ್ ಎಕ್ಸ್‌ಯುವಿ 500 ಕಾರಿನ ಒಳಭಾಗವು ಕೂಡಾ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಪಡೆದುಕೊಂಡಿದೆ ಎಂಬುದನ್ನು ನಾವು ಈ ಹಿಂದೆ ಬಿಡುಗಡೆಗೊಂಡಿದ್ದ ರಹಸ್ಯ ಚಿತ್ರಗಳಲ್ಲಿ ಗಮನಿಸಿದ್ದೇವೆ.
ಇದರ ಪ್ರಕಾರ, ಒಳಭಾಗವು ಹೊಸ ಇನ್ಸ್ಟ್ರುಮೆಂಟ್ ಕನ್ಸೋಲ್ ಬ್ಯಾಕ್ಲೈಟ್, ಸೆಂಟರ್ ಕನ್ಸೋಲ್ ಮತ್ತು ಸ್ಟೀರಿಂಗ್ ವೀಲ್ ವಿನ್ಯಾಸಗಳಲ್ಲಿ ಕೊಂಚ ಬದಲಾವಣೆ ತರಲಾಗಿದ್ದು, ಆಪಲ್ ಕಾರ್‌ಪ್ಲೇ ಹೊಂದಾಣಿಕೆಯೊಂದಿಗೆ ಇನ್ಫೋಟೈನ್ಮೆಂಟ್ ಸಿಸ್ಟಮ್ ನವೀಕರಣಗೊಂಡಿದೆ.
ಎಂಜಿನ್ ಸಾಮರ್ಥ್ಯ
ಪ್ರಸ್ತುತ ಲಭ್ಯವಿರುವ 2.2-ಲೀಟರ್ ಎಮ್‌ಹ್ವಾಕ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಯೊಂದಿದೆ ಫೇಸ್‌ಲಿಫ್ಟ್ ಎಕ್ಸ್‌ಯುವಿ500 ಕಾರುಗಳು ಬಿಡುಗಡೆಯಾಗಲಿದ್ದು, ಈ ಮೂಲಕ 155 ಬಿಎಚ್‌ಪಿ ಮತ್ತು 360 ಎನ್ಎಂ ಟಾರ್ಕ್ ಉತ್ಪಾದಿಸಲಿವೆ.
ಹಾಗೆಯೇ 2.2 ಲೀಟರ್ ಪೆಟ್ರೋಲ್ ಎಂಜಿನ್ ಸಹ ಲಭ್ಯವಿರಲಿದ್ದು, 140ಬಿಎಚ್‌ಪಿ ಉತ್ಪಾದನೆ ಮೂಲಕ ಪ್ರತಿ ಲೀಟರ್ ಪೆಟ್ರೋಲ್‌ಗೆ 15.4 ಕಿ.ಮಿ ಮೈಲೇಜ್ ಹಿಂದಿರುಗಿಸಲಿವೆ. ಜೊತೆಗೆ ಟಾಪ್ ವೆರೀಯೆಂಟ್‌ಗಳಲ್ಲಿ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಒದಗಿಸುವ ಸಾಧ್ಯತೆಗಳಿವೆ.
ಇನ್ನು ಹೊಸ ಕಾರುಗಳು 6 ಸ್ಪೀಡ್ ಮ್ಯಾನ್ಯುವಲ್ ಅಥವಾ 6 ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್ ಒಳಗೊಂಡಿರುವ ಸಾಧ್ಯತೆ ಇದ್ದು, ಇದರ ಹೊರತಾಗಿ ಯಾವುದೇ ರೀತಿಯ ಪ್ರಮುಖ ಹೊಸ ನವೀಕರಣವನ್ನು ಈ ಮಾದರಿ ಪಡೆಯುವುದಿಲ್ಲ ಎನ್ನಬಹುದು.
ಒಟ್ಟಿನಲ್ಲಿ ಮಹೀಂದ್ರಾ ಎಕ್ಸ್‌ಯುವಿ 500 ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ವಿ ಎಸ್‌ಯುವಿ ಕಾರು ಎನ್ನಿಸಿಕೊಂಡಿದ್ದು, ಇದೀಗ ಈ ಕಾರಿನ ಫೇಸ್‌ಲಿಫ್ಟ್ ಆವೃತಿಯನ್ನು ಇದೇ ತಿಂಗಳು ಮಾರುಕಟ್ಟೆಗೆ ಪರಿಚಯಿಸುತ್ತಿರುವುದು ಮಹೀಂದ್ರಾ ಪ್ರಿಯರಿಗೆ ಡಬಲ್ ಧಮಾಕಾ ಎನ್ನಬಹುದು.
ಹೊಸದಾಗಿ ಬಿದುಗಡೆಗೊಳ್ಳಲಿರುವ ಮಹೀಂದ್ರಾ ಎಕ್ಸ್‌ಯುವಿ 500 ಫೇಸ್ಲಿಫ್ಟ್ ಕಾರುಗಳು ಎಕ್ಸ್ ಶೋರಂ ಪ್ರಕಾರ ರೂ 13 ರಿಂದ 18 ಲಕ್ಷದವರೆಗು ಇರಬಹುದೆಂದು ಅಂದಾಜಿಸಲಾಗಿದ್ದು, ಮಾರುಕಟ್ಟೆಯಲ್ಲಿ ಈಗಾಗಲೆ ಲಭ್ಯವಿರುವ ರೆನಾಲ್ಟ್ ಕ್ಯಾಪ್ಚರ್ ಹಾಗು ಹ್ಯುಂಡೈ ಕ್ರೆಟಾ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಈ ಹೊಸ ಕಾರಿನ ಬೆಲೆ ಮತ್ತು ಮೈಲೇಜ್ ಬಗ್ಗೆ ತಿಳಿದ್ರೆ ಈಗಲೇ ಬುಕ್ ಮಾಡ್ತೀರಾ!
ತಾಂತ್ರಿಕ ದೋಷದಿಂದಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಹೊಸ ಫೋರ್ಡ್ ಎಂಡೀವರ್...
ಇನೋವಾ ಮತ್ತು ಲಾರಿ ನಡುವೆ ಭೀಕರ ಅಪಘಾತ- 7 ಮಂದಿ ದುರ್ಮರಣ
ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...