ಮೊದಲ ನೋಟದಲ್ಲೇ ಸೆಳೆಯಲಿದೆ ಮಹೀಂದ್ರಾ ಹೊಸ ಎಕ್ಸ್‌ಯುವಿ500

ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಕಾರುಗಳು ಈಗಾಗಲೇ ಅಧಿಕೃತ ಕಾರು ಡೀಲರ್ಸ್ ಯಾರ್ಡ್‌ಗಳಿಗೆ ತಲುಪುತ್ತಿದ್ದು, ಹಳೆಯ ಮಾದರಿಗಿಂತ ಹೊಸ ಕಾರುಗಳಲ್ಲಿ ಭಾರೀ ಬದಲಾವಣೆ ಕಂಡುಬಂದಿರುವುದು ಎಸ್‌ಯುವಿ ಪ್ರಿಯರನ್ನು ಗಮನಸೆಳೆದಿವೆ.

By Praveen Sannamani

ಇದೇ ತಿಂಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಕಾರುಗಳು ಈಗಾಗಲೇ ಅಧಿಕೃತ ಕಾರು ಡೀಲರ್ಸ್ ಯಾರ್ಡ್‌ಗಳಿಗೆ ತಲುಪುತ್ತಿದ್ದು, ಹಳೆಯ ಮಾದರಿಗಿಂತ ಹೊಸ ಕಾರುಗಳಲ್ಲಿ ಭಾರೀ ಬದಲಾವಣೆ ಕಂಡುಬಂದಿರುವುದು ಎಸ್‌ಯುವಿ ಪ್ರಿಯರನ್ನು ಗಮನಸೆಳೆದಿವೆ.

ಮೊದಲ ನೋಟದಲ್ಲೇ ಸೆಳೆಯಲಿದೆ ಮಹೀಂದ್ರಾ ಹೊಸ ಎಕ್ಸ್‌ಯುವಿ500

ಫೇಸ್‌ಲಿಫ್ಟ್ ಎಕ್ಸ್‌ಯುವಿ500 ಕಾರುಗಳ ವಿನ್ಯಾಸದಲ್ಲಿ ಗುರುತರ ಬದಲಾವಣೆ ತಂದಿರುವ ಮಹೀಂದ್ರಾ ಸಂಸ್ಥೆಯು ಫ್ರಂಟ್ ಗ್ರಿಲ್‌ಗಳನ್ನು ಸ್ಪೋರ್ಟಿ ಮಾದರಿಯ ರೇಡಿಯೇಟರ್ ಗ್ರಿಲ್‌‌ನೊಂದಿಗೆ ಮರುವಿನ್ಯಾಸಗೊಳಿಸಿದ್ದು, ಹೆಡ್‌ಲ್ಯಾಂಪ್ ಕ್ಲಸ್ಟರ್ ಮತ್ತು ಫಾಗ್ ದೀಪಗಳು ಪ್ರಸ್ತುತ ಮಾರಾಟವಾಗುತ್ತಿರುವ ಮಾದರಿಗೆ ಹೋಲುತ್ತವೆ.

ಮೊದಲ ನೋಟದಲ್ಲೇ ಸೆಳೆಯಲಿದೆ ಮಹೀಂದ್ರಾ ಹೊಸ ಎಕ್ಸ್‌ಯುವಿ500

ಇನ್ನು ಹೊಸ ಕಾರಿನ ಹಿಂಭಾಗವು ಸಹ ಸೂಕ್ಷ್ಮ ಬದಲಾವಣೆಗಳನ್ನು ಹೊಂದುವ ಲಕ್ಷಣಗಳನ್ನು ಹೊಂದಿದ್ದು, ವಿಂಡ್‌ಸ್ಕ್ರೀನ್ ಡಿಸೈನ್ ವಿನ್ಯಾಸದಲ್ಲಿನ ಬದಲಾವಣೆ ಹೊರತುಪಡಿಸಿ ಟೈಲ್ ದೀಪದ ಕ್ಲಸ್ಟರ್ ಬದಲಾಗದೆ ಈ ಹಿಂದಿನ ಮಾದರಿಯಲ್ಲೇ ಮುಂದುವರಿಸಲಾಗಿದೆ.

ಮೊದಲ ನೋಟದಲ್ಲೇ ಸೆಳೆಯಲಿದೆ ಮಹೀಂದ್ರಾ ಹೊಸ ಎಕ್ಸ್‌ಯುವಿ500

ಜೊತೆಗೆ ಹೊಸ ಫೇಸ್‌ಲಿಫ್ಟ್ ಎಕ್ಸ್‌ಯುವಿ 500 ಕಾರಿನ ಒಳಭಾಗವು ಕೂಡಾ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಪಡೆದುಕೊಂಡಿದೆ ಎಂಬುದನ್ನು ನಾವು ಈ ಹಿಂದೆ ಬಿಡುಗಡೆಗೊಂಡಿದ್ದ ರಹಸ್ಯ ಚಿತ್ರಗಳಲ್ಲಿ ಗಮನಿಸಿದ್ದೇವೆ.

ಮೊದಲ ನೋಟದಲ್ಲೇ ಸೆಳೆಯಲಿದೆ ಮಹೀಂದ್ರಾ ಹೊಸ ಎಕ್ಸ್‌ಯುವಿ500

ಇದರ ಪ್ರಕಾರ, ಒಳಭಾಗವು ಹೊಸ ಇನ್ಸ್ಟ್ರುಮೆಂಟ್ ಕನ್ಸೋಲ್ ಬ್ಯಾಕ್ಲೈಟ್, ಸೆಂಟರ್ ಕನ್ಸೋಲ್ ಮತ್ತು ಸ್ಟೀರಿಂಗ್ ವೀಲ್ ವಿನ್ಯಾಸಗಳಲ್ಲಿ ಕೊಂಚ ಬದಲಾವಣೆ ತರಲಾಗಿದ್ದು, ಆಪಲ್ ಕಾರ್‌ಪ್ಲೇ ಹೊಂದಾಣಿಕೆಯೊಂದಿಗೆ ಇನ್ಫೋಟೈನ್ಮೆಂಟ್ ಸಿಸ್ಟಮ್ ನವೀಕರಣಗೊಂಡಿದೆ.

ಮೊದಲ ನೋಟದಲ್ಲೇ ಸೆಳೆಯಲಿದೆ ಮಹೀಂದ್ರಾ ಹೊಸ ಎಕ್ಸ್‌ಯುವಿ500

ಎಂಜಿನ್ ಸಾಮರ್ಥ್ಯ

ಪ್ರಸ್ತುತ ಲಭ್ಯವಿರುವ 2.2-ಲೀಟರ್ ಎಮ್‌ಹ್ವಾಕ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಯೊಂದಿದೆ ಫೇಸ್‌ಲಿಫ್ಟ್ ಎಕ್ಸ್‌ಯುವಿ500 ಕಾರುಗಳು ಬಿಡುಗಡೆಯಾಗಲಿದ್ದು, ಈ ಮೂಲಕ 155 ಬಿಎಚ್‌ಪಿ ಮತ್ತು 360 ಎನ್ಎಂ ಟಾರ್ಕ್ ಉತ್ಪಾದಿಸಲಿವೆ.

ಮೊದಲ ನೋಟದಲ್ಲೇ ಸೆಳೆಯಲಿದೆ ಮಹೀಂದ್ರಾ ಹೊಸ ಎಕ್ಸ್‌ಯುವಿ500

ಹಾಗೆಯೇ 2.2 ಲೀಟರ್ ಪೆಟ್ರೋಲ್ ಎಂಜಿನ್ ಸಹ ಲಭ್ಯವಿರಲಿದ್ದು, 140ಬಿಎಚ್‌ಪಿ ಉತ್ಪಾದನೆ ಮೂಲಕ ಪ್ರತಿ ಲೀಟರ್ ಪೆಟ್ರೋಲ್‌ಗೆ 15.4 ಕಿ.ಮಿ ಮೈಲೇಜ್ ಹಿಂದಿರುಗಿಸಲಿವೆ. ಜೊತೆಗೆ ಟಾಪ್ ವೆರೀಯೆಂಟ್‌ಗಳಲ್ಲಿ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಒದಗಿಸುವ ಸಾಧ್ಯತೆಗಳಿವೆ.

ಮೊದಲ ನೋಟದಲ್ಲೇ ಸೆಳೆಯಲಿದೆ ಮಹೀಂದ್ರಾ ಹೊಸ ಎಕ್ಸ್‌ಯುವಿ500

ಇನ್ನು ಹೊಸ ಕಾರುಗಳು 6 ಸ್ಪೀಡ್ ಮ್ಯಾನ್ಯುವಲ್ ಅಥವಾ 6 ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್ ಒಳಗೊಂಡಿರುವ ಸಾಧ್ಯತೆ ಇದ್ದು, ಇದರ ಹೊರತಾಗಿ ಯಾವುದೇ ರೀತಿಯ ಪ್ರಮುಖ ಹೊಸ ನವೀಕರಣವನ್ನು ಈ ಮಾದರಿ ಪಡೆಯುವುದಿಲ್ಲ ಎನ್ನಬಹುದು.

ಮೊದಲ ನೋಟದಲ್ಲೇ ಸೆಳೆಯಲಿದೆ ಮಹೀಂದ್ರಾ ಹೊಸ ಎಕ್ಸ್‌ಯುವಿ500

ಒಟ್ಟಿನಲ್ಲಿ ಮಹೀಂದ್ರಾ ಎಕ್ಸ್‌ಯುವಿ 500 ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ವಿ ಎಸ್‌ಯುವಿ ಕಾರು ಎನ್ನಿಸಿಕೊಂಡಿದ್ದು, ಇದೀಗ ಈ ಕಾರಿನ ಫೇಸ್‌ಲಿಫ್ಟ್ ಆವೃತಿಯನ್ನು ಮುಂದಿನ ತಿಂಗಳು ಮಾರುಕಟ್ಟೆಗೆ ಪರಿಚಯಿಸುತ್ತಿರುವುದು ಮಹೀಂದ್ರಾ ಪ್ರಿಯರಿಗೆ ಡಬಲ್ ಧಮಾಕಾ ಎನ್ನಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಫಿದಾ ಆದ ಸೇನೆ..

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ಮೋದಿ ಹೆಸರಿನಲ್ಲಿ ಭಾರೀ ಜನಪ್ರಿಯತೆ ಪಡೆಯುತ್ತಿರುವ ಈ ಬೈಕಿನ ಅಸಲಿಯತ್ತು ಏನು?

ವಾಹನ ಸವಾರರ ಜೀವಕ್ಕೆ ಕುತ್ತು ತರುತಂತೆ ಟೈರ್ ಕಿಲ್ಲರ್ ಹಂಪ್?

30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

Most Read Articles

Kannada
Read more on mahindra suv
English summary
2018 Mahindra XUV500 Revealed Ahead Of Launch; Specs, Features, Variants And More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X