ಅನಾವರಣಗೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರು..

ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ವಾಹನಗಳಿಂದ ಜನಪ್ರಿಯತೆಯನ್ನು ಪಡೆದ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಮುಂದಿನ ತಲೆಮಾರಿನ ಎರ್ಟಿಗಾ ಎಮ್‍ಪಿವಿ ಕಾರ್‍ಅನ್ನು 2018ರ ಇಂಡೊನೇಷಿಯಾ ಇಂಟರ್‍‍ನ್ಯಾಷನಲ್ ಮೋಟಾರ್ ಶೋ ನಲ್ಲಿ ಅನಾವರಣಗೊಳಿಸಿದೆ.

By Rahul Ts

ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ವಾಹನಗಳಿಂದ ಜನಪ್ರಿಯತೆಯನ್ನು ಪಡೆದ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಮುಂದಿನ ತಲೆಮಾರಿನ ಎರ್ಟಿಗಾ ಎಮ್‍ಪಿವಿ ಕಾರ್‍ಅನ್ನು 2018ರ ಇಂಡೊನೇಷಿಯಾ ಇಂಟರ್‍‍ನ್ಯಾಷನಲ್ ಮೋಟಾರ್ ಶೋ ನಲ್ಲಿ ಅನಾವರಣಗೊಳಿಸಿದ್ದು, ತಮ್ಮ ಹಿಂದಿನ ತಲೆಮಾರಿನ ಕಾರುಗಳಿಗಿಂತ ಹೊಸ ವಿನ್ಯಾಸ ಹಾಗು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿವೆ.

ಅನಾವರಣಗೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರು..

ಹೊಸ ಮಾರುತಿ ಸುಜುಕಿ ಎರ್ಟಿಗಾ ಎಮ್‍‍ಪಿವಿ ಕಾರು 4395ಎಂಎಂ ಉದ್ದ, 1735 ಎಂಎಂ ಅಗಲ ಹಾಗು 1690ಎಂಎಂ ಎತ್ತರವನ್ನು ಪಡೆದಿದ್ದು, ಸುಜುಕಿಯ ಹಾರ್ಟ್‍‍ಟೆಕ್ಟ್ ಪ್ಲಾಟ್‍‍ಫಾರ್ಮ್ ಅನ್ನು ಆದರಿಸಿದೆ.

ಅನಾವರಣಗೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರು..

ಮಾರುತಿ ಸುಜುಕಿ ಎರ್ಟಿಗಾ ಕಾರಿನ ಮುಂಭಾಗದ ವಿನ್ಯಸಾವು ಕ್ರೋಮ್ ಸ್ಟಡೆಡ್ ಗ್ರಿಲ್, ಅಗಲವಾದ ಹೆಡ್‍‍ಲ್ಯಾಂಪ್‍‍ಗಳು, ತ್ರಿಕೋನಾಕಾರದ ಬಂಪರ್‍‍ಗಳು, ಫಾಗ್ ಲ್ಯಾಂಪ್ಸ್, ಸೆಂಟ್ರಲ್ ಏರ್ ಡ್ಯಾಮ್ ಅನ್ನು ಪಡೆದಿದ್ದು, ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾಗಿರುವ ಎಲ್ ಆಕರದಲ್ಲಿರುವ ಟೈಲ್ ಲೈಟ್‍‍ಗಳನ್ನು ಪಡೆದಿರಲಿವೆ.

ಅನಾವರಣಗೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರು..

ಹಿಸ ಎರ್ಟಿಗಾ ಎಂಪಿವಿ ಕಾರುಗಳು ಫೌಕ್ಸ್ ವುಡ್‍‍ನಿಂದ ಸಜ್ಜುಗೊಂಡಿದ್ದು, ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ರೂಫ್ ಮೌಂಟೆಡ್ ಎಸಿ ವೆಂಟ್ಸ್, 60:40 ಸ್ಪ್ಲಿಟ್ ಎರಡನೆಯ ರೋ ಸೀಟ್‍‍ಗಳು ಮತ್ತು 50:50 ಮೂರನೆಯ ಸಾಲಿನಲ್ಲಿ ಅಳವಡಿಸಲಾಗಿದೆ.

ಅನಾವರಣಗೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರು..

ಇದಲ್ಲದೆ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಕಾರು ಬ್ಲೂಟೂತ್ ಮತ್ತು ಸ್ಮಾರ್ಟ್‍‍ಫೋನ್ ಕನೆಕ್ಟಿವಿಟಿ ಆಯ್ಕೆಗಳನ್ನು ಪಡೆದಿರುವ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಲೆದರ್‍‍ನೊಂದಿಗೆ ಸಜ್ಜುಗೊಂಡ ಸ್ಟೀರಿಂಗ್ ವೀಲ್‍‍ಗಳು, ಟಿಲ್ಟ್ ಫಂಕ್ಷನ್, ಇಂಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಸೀಟ್ ಹೈಟ್ ಅಡ್ಜಸ್ಟ್ಮೆಂಟ್ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಅನಾವರಣಗೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರು..

ಎರ್ಟಿಗಾ ಎಂಪಿವಿ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‍‍ಬ್ಯಾಗ್ಸ್, ಎಬಿಎಸ್‍‍ನೊಂದಿಗೆ ಇಬಿಡಿ, ಐಎಸ್ಒಫಿಕ್ಸ್ ಚೈಲ್ಡ್ ಆಂಕರ್ಸ್ ಮತ್ತು ಸ್ಟೆಬಿಲಿಟಿ ಪ್ರೋಗ್ರಾಮ್ ನಂತಹ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಅನಾವರಣಗೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರು..

ಎಂಜಿನ್ ಸಾಮರ್ಥ್ಯ

ಎರ್ಟಿಗಾ ಎಮ್‍‍ಪಿವಿ ಕಾರುಗಳು ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್‍ ಆಯ್ಕೆಗಳಲ್ಲಿ ಬರಲಿವೆ. ಪೆಟ್ರೋಲ್ ಮಾದರಿಯ ಕಾರು 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಸಹಾಯದಿಂದ 102ಬಿಹೆಚ್‍‍ಪಿ ಮತ್ತು 138ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, 4 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಅನಾವರಣಗೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರು..

ಇನ್ನು ಭಾರತಕ್ಕೆ ಬರಲಿರುವ ಎರ್ಟಿಗಾ ಡೀಸೆಲ್ ಮಾದರಿಯ ಕಾರುಗಳು 1.3 ಲೀಟರ್ ಡೀಸೆಲ್ ಎಂಜಿನ್ ಅನ್ನು ಪದೆದಿದ್ದು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿದೆ ಜೋಡಿಸಲಾಗಿದೆ ಎನ್ನಲಾಗಿದೆ.

ಅನಾವರಣಗೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರು..

ಈಗಾಗಲೆ ಭಾರತದ ರಸ್ಥೆಗಳಲ್ಲಿ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಕಾರು, ಇದೀಗ ಅಧಿಕೃತವಾಗಿ ಇಂಡೊನೇಷಿಯಾದ ಮೋಟಾರ್ ಶೋನಲ್ಲಿ ಅನಾವರಣಗೊಂಡಿದೆ. ಇನ್ನು ಸಂಸ್ಥೆಯು ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ ಹೊರಹಾಕಲಿಲ್ಲವಾದರೂ ಶೀಗ್ರದಲ್ಲೆ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎಂದು ಊಹಿಸಲಾಗಿದೆ.

ಅನಾವರಣಗೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರು..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಹರ್ದಿಕ್ ಪಾಂಡ್ಯರವರು ಖರೀದಿಸಿದ ಹೊಸ ಆಡಿ ಕಾರು ಹೇಗಿದೆ ನೀವೆ ನೋಡಿ..

ರಸ್ಥೆ ಅಪಘಾತದಿಂದ ಪಾರಾದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ..

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ಭಾರತದಲ್ಲಿ ನಡೆದ ಭೀಕರ 10 ರೈಲು ದುರಂತಗಳಿವು...

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

More from DriveSpark

Article Published On: Friday, April 20, 2018, 9:44 [IST]
English summary
New Maruti Ertiga 2018 Unveiled; Expected Launch Date, Specifications, Features & Images.
Read more on maruti suzuki mpv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+