ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಭಾರತೀಯ ಮಾರುಕಟ್ಟೆಯಲ್ಲಿ ತಮ್ಮದೇ ಆದ ಜನಪ್ರಿಯತೆಯೊಂದಿಗೆ ಮುನ್ನುಗ್ಗುತ್ತಿರುವ ಕೆಲವು ವಾಹನ ಉತ್ಪಾದನಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ಕಾಯ್ದೆಗಳಿಂದಾಗಿ ಭಾರೀ ಹೊಡೆತ ನೀಡುತ್ತಿದ್ದು, ಇಷ್ಟುದಿನಗಳ ಕಾಲ ಮಾರುಕಟ್ಟೆಯಲ್ಲಿ ಹಾಟ್ ಚಿಪ್ಸ್‌ನಂತೆ ಮಾರಾಟವಾಗುತ್ತಿದ್ದ ಕೆಲವು ಕಾರುಗಳಿಗೆ ಸಂಕಷ್ಟ ಎದುರಾಗಿದೆ.

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಹೌದು, ದೇಶದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ವಾಹನ ಗುಣಮಟ್ಟದಲ್ಲಿ ಬದಲಾವಣೆ ತರುವ ಸಂಬಂಧ ಆಟೋ ಉದ್ಯಮದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಕೇಂದ್ರದ ಸರ್ಕಾರದ ಹೊಸ ಕಾಯ್ದೆಗೆ ಅನುಗುಣವಾಗಿ ಬದಲಾವಣೆಗೊಳ್ಳಲು ಸಾಧ್ಯವಿರುವ ಸುಮಾರು 9 ಜನಪ್ರಿಯ ಕಾರುಗಳು ಸದ್ಯದಲ್ಲೇ ಮಾರುಕಟ್ಟೆಯಿಂದ ಸ್ಥಗಿತಗೊಳ್ಳುವುದು ಖಚಿತವಾಗಿದೆ.

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

2019ರಿಂದ ಪ್ರತಿ ಕಾರು ಮಾದರಿಯಲ್ಲೂ ನಿರ್ದಿಷ್ಟ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿದ್ದರೇ ಮಾತ್ರವೇ ಕಾರು ಮಾರಾಟಕ್ಕೆ ಅವಕಾಶ ನೀಡುವ ಉದ್ದೇಶದಿಂದ ಇಂಡಿಯನ್ ಕ್ರ್ಯಾಶ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಮಾರುತಿ ಸುಜುಕಿ ಸೇರಿದಂತೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಿಗೆ ಈಗಾಗಲೇ ತಳಮಳ ಶುರುವಾಗಿದೆ.

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಹಾಗಾದ್ರೆ ಸ್ಥಗಿತಗೊಳ್ಳಲಿರುವ ಕಾರುಗಳಲ್ಲಿರುವ ನ್ಯೂನತೆ ಏನು? ಯಾವ ಕಾರಣಕ್ಕಾಗಿ ಸ್ಥಗಿತಗೊಳ್ಳುತ್ತಿವೆ ಎನ್ನುವುದನ್ನು ತಿಳಿದ್ರೆ ನಿಜಕ್ಕೂ ನಿಮಗೆ ಶಾಕ್ ಆಗದೆ ಇರಲಾರದು. ಹೀಗಾಗಿ ನೀವು ಹೊಸ ಕಾರು ಖರೀದಿ ಮಾಡುವ ಪ್ಲ್ಯಾನ್ ಇದ್ದಲ್ಲಿ ಈ ಕೆಳಗಿನ ಕಾರುಗಳನ್ನು ಖರೀದಿಸುವ ಮುನ್ನ ಹತ್ತು ಬಾರಿ ಯೋಚಿಸುವುದು ಒಳಿತು.

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

01. ಮಾರುತಿ ಸುಜುಕಿ ಒಮ್ನಿ

ಕಳೆದ ತಿಂಗಳು ಹಿಂದಷ್ಟೆ ನಡೆದಿದ್ದ ಮಾರುತಿ ಸುಜುಕಿ ನಿರ್ಮಾಣದ 15 ಪ್ರಮುಖ ಕಾರುಗಳು ಈ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹತ್ತಕ್ಕೂ ಹೆಚ್ಚು ಕಾರು ಉತ್ಪನ್ನಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷತೆ ಇಲ್ಲದಿರುವುದು ಖರೀದಿಗೆ ಯೋಗ್ಯವಲ್ಲದ ಎಂಬುವುದು ಸಾಬೀತಾಗಿದೆ.

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ವಾಸ್ತಾವವಾಗಿ ಸೊನ್ನೆ ರೇಟಿಂಗ್ ಹೊಂದಿರುವ ಕಾರುಗಳನ್ನು ಮಾರಾಟ ಮಾಡಲು ವಿದೇಶಿ ಮಾರುಕಟ್ಟೆಗಳಲ್ಲಿ ಅನುಮತಿಯೇ ಇಲ್ಲದಿರುವ ಸಂದರ್ಭದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಮಾತ್ರ ಭಾರತೀಯ ಮಾರುಕಟ್ಟೆಯಲ್ಲಿ ಆಲ್ಟೊ, ವ್ಯಾಗನ್ ಆರ್, ಓಮ್ನಿ ಮತ್ತು ಜಿಪ್ಸಿ ಕಾರುಗಳನ್ನ ಹಾಟ್ ಚಿಪ್ಸ್‌ನಂತೆ ಮಾರಾಟ ಮಾಡುತ್ತಿರುವುದು ಕಳವಳಕಾರಿ ಸಂಗತಿ ಅಂದ್ರೆ ತಪ್ಪಾಗುದಿಲ್ಲ.

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಹೀಗಾಗಿ ಕನಿಷ್ಠ ಮಟ್ಟದ ಸುರಕ್ಷೆತೆಯನ್ನು ಸಹ ನೀಡಲು ಹಿಂದೆ ಮುಂದೆ ನೋಡುವ ಮಾರುತಿ ಸುಜುಕಿಗೆ ಇದೀಗ ಸಂಕಷ್ಟ ಎದುರಾಗಿದ್ದು, 2019ರಿಂದ ಜಾರಿಗೆ ಬರಲಿರುವ ಹೊಸ ಕಾಯ್ದೆಯಿಂದ ಸೊನ್ನೆ ರೇಟಿಂಗ್ ಪಡೆದಿರುವ ಓಮ್ನಿ ಮೂಲೆಗುಂಪಾಬೇಕಾದ ಅನಿವಾರ್ಯತೆಗಳಿವೆ.

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

02. ಮಾರುತಿ ಸುಜುಕಿ ಜಿಪ್ಸಿ

ಮಾರುತಿ ಸುಜುಕಿ ಸಂಸ್ಥೆಯು ಒಮ್ನಿ ಮಾತ್ರವಲ್ಲದೇ ಇದೇ ವರ್ಷ 2018ರ ಡಿಸೆಂಬರ್‌ನಿಂದ ಜಿಪ್ಸಿ ಕಾರುಗಳ ಬುಕ್ಕಿಂಗ್ ಪ್ರಕ್ರಿಯೆಯನ್ನು ಬಂದ್ ಮಾಡಲು ನಿರ್ಧರಿಸಲಾಗಿದ್ದು, 2019ರ ಮಾರ್ಚ್ ಅಂತ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಉತ್ಪಾದನಾ ಚಟುವಟಿಕೆಯನ್ನು ನಿಲ್ಲಿಸುವುದಾಗಿ ಖಚಿತಪಡಿಸಿದೆ.

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ಕನಿಷ್ಠ ಮಟ್ಟದ ಸುರಕ್ಷೆ ಇಲ್ಲದಿರುವ ಕಾರುಗಳಿಂದ ಅಪಘಾತದ ತೀವ್ರತೆ ಮತ್ತಷ್ಟು ಏರಿಕೆಯಾಗಲಿದ್ದು, ಇದೇ ಕಾರಣಕ್ಕೆ ಕಠಿಣ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರವು ಕನಿಷ್ಠ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸಿ ಮಾರಾಟ ಮಾಡಿ ಇಲ್ಲವೇ ಕಳಪೆ ಗುಣಮಟ್ಟದ ಕಾರುಗಳನ್ನು ವಾಪಸ್ ಪಡೆಯಿರಿ ಎಂದು ಕಾರು ಉತ್ಪಾದನಾ ಸಂಸ್ಥೆಗಳಿಗೆ ಖಡಕ್ ವಾರ್ನ್ ಮಾಡಿದೆ.

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

03. ಟಾಟಾ ನ್ಯಾನೋ

ಅಗ್ಗದ ಬೆಲೆಯೊಂದಿಗೆ ಲಕ್ಷಾಂತರ ಮಧ್ಯಮ ವರ್ಗದ ಗ್ರಾಹಕರ ಕಾರು ಖರೀದಿಯ ಕನಸನ್ನು ನನಸು ಮಾಡಿದ್ದ ನ್ಯಾನೋ ಅಷ್ಟೇ ಪ್ರಮಾಣದಲ್ಲಿ ಆತಂಕಕಾರಿಯಾಗಿ ಪರಿಣಮಿಸುತ್ತಿದೆ. ಹೀಗಾಗಿ ನ್ಯಾನೋ ಕಾರುನ್ನು ಸ್ಥಗಿತಗೊಳಿಸುತ್ತಿರುವ ಟಾಟಾ ಸಂಸ್ಥೆಯು ಉತ್ತಮ ಸುರಕ್ಷೆತೆವುಳ್ಳ ಹೊಸ ಕಾರುಗಳ ಉತ್ಪಾದನೆ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.

MOST READ: ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

04. ಹ್ಯುಂಡೈ ಅಯಾನ್

ಸದ್ಯ ಮಾರುತಿ ಸುಜುಕಿ ನಂತರ ಕಾರು ಮಾರಾಟದಲ್ಲಿ 2ನೇ ಸ್ಥಾನದಲ್ಲಿರುವ ಹ್ಯುಂಡೈ ಸಂಸ್ಥೆಯು ಪ್ರಯಾಣಿಕರ ಸುರಕ್ಷತೆಯಲ್ಲಿ ಹಿನ್ನಡೆ ಅನುಭವಿಸಿದೆ. ಇದೇ ಕಾರಣಕ್ಕೆ ಸ್ಯಾಂಟ್ರೋ ಕಾರುಗಳನ್ನು ಹೊಸ ಸುರಕ್ಷಾ ಕಾಯ್ದೆಗೆ ಅನುಗುಣವಾಗಿ ಮರುಬಿಡುಗಡೆ ಮಾಡಿರುವ ಹ್ಯುಂಡೈ ಸಂಸ್ಥೆಯು ಅಯಾನ್ ಕಾರುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

05. ಹೋಂಡಾ ಬ್ರಿಯೋ

ಸಣ್ಣ ಗಾತ್ರದ ಕಾರು ಮಾರಾಟದಲ್ಲಿ ಈ ಹಿಂದೆ ಜನಪ್ರಿಯತೆ ಸಾಧಿಸಿದ್ದ ಹೋಂಡಾ ಬ್ರಿಯೋ ಹ್ಯಾಚ್‌ಬ್ಯಾಕ್ ಕಾರುಗಳು ಕೇಂದ್ರ ಸರ್ಕಾರದ ಹೊಸ ಕಾಯ್ದೆಯಿಂದಾಗಿ ಸ್ಥಗಿತಗೊಳ್ಳುತ್ತಿದ್ದು, ಅದರ ಬದಲಿಗೆ ಉತ್ತಮ ಸುರಕ್ಷತೆಯುಳ್ಳ ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಆವೃತ್ತಿಯನ್ನು ಹೊರತರುವ ಬಗ್ಗೆ ಹೋಂಡಾ ಯೋಜನೆ ರೂಪಿಸುತ್ತಿದೆ.

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

06. ಮಹೀಂದ್ರಾ ವೆರಿಟೋ ಮತ್ತು ವೆರಿಟೋ ವೈಬ್

ಮಹೀಂದ್ರಾ ಸಂಸ್ಥೆಯು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೊಸ ಉತ್ಪನ್ನಗಳನ್ನ ಪರಿಚಯಿಸುತ್ತಿದ್ದು, ತನ್ನ ಜನಪ್ರಿಯ ಸೆಡಾನ್ ಮಾದರಿಯಾಗಿರುವ ವೆರಿಟೋ ಮತ್ತು ವೆರಿಟೋ ವೈಬ್ ಕಾರುಗಳ ಮಾರಾಟ ಬ್ರೇಕ್ ಹಾಕಲು ಮುಂದಾಗಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

2019ರ ಕೊನೆಯಲ್ಲಿ ಬಿಎಸ್ 6 ವೈಶಿಷ್ಟ್ಯತೆಯ ವಾಹನ ಮಾದರಿಗಳ ಮಾರಾಟವು ಕಡ್ಡಾಯವಾಗಿರಲಿದ್ದು, ಬಿಎಸ್ 4 ವಾಹನಗಳು ಸಹ ನಿಷೇಧಗೊಳ್ಳಲಿವೆ. ಹೀಗಾಗಿಯೇ ಭವಿಷ್ಯ ಯೋಜನೆಗಳಿಗಾಗಿ ಮಹೀಂದ್ರಾ ಸಂಸ್ಥೆಯು ತನ್ನ ಕಳಪೆ ಗುಣಮಟ್ಟದ ವೆರಿಟೋ ಉತ್ಪಾದನೆಯನ್ನ ಕೈಬಿಡುವುದು ಅನಿವಾರ್ಯವಾಗಲಿದೆ.

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಒಂದು ವೇಳೆ ವೆರಿಟೋ ಮಾರಾಟ ಮುಂದುವರಿಸುವುದಾದರೇ ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯ ಮತ್ತು ಬಿಎಸ್ 6 ವಿನ್ಯಾಸಗಳನ್ನು ಸೇರಿಸಲೇಬೇಕಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ವೆರಿಟೋ ಉನ್ನತಿಕರಿಸುವ ಬದಲು ಹೊಸ ಉತ್ಪನ್ನಗಳತ್ತ ಗಮನಹರಿಸುವುದೇ ಉತ್ತಮ ನಿರ್ಧಾರ ಎನ್ನಬಹುದು.

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

07. ಟಾಟಾ ಇಂಡಿಕಾ ಹಾಗೂ ಇಂಡಿಗೊ

ಈ ಹಿಂದೆ 1998ರಲ್ಲಿ ಬಿಡುಗಡೆಯಾಗಿದ್ದ ಇಂಡಿಕಾ ಹಾಗೂ 2002ರಲ್ಲಿ ಬಿಡುಗಡೆಯಾಗಿದ್ದ ಇಂಡಿಗೊ ಕಾರುಗಳು ಮೊನ್ನೆಯವರೆಗೂ ಉತ್ತಮ ಬೇಡಿಕೆ ಹೊಂದಿದ್ದಲ್ಲದೇ ಭಾರತೀಯ ಆಟೋ ಉದ್ಯಮದಲ್ಲಿ ತಮ್ಮದೇ ಅಧಿಪತ್ಯ ಸಾಧಿಸಿದ್ದವು. ಆದ್ರೆ ಬದಲಾದ ಮಾರುಕಟ್ಟೆಯಲ್ಲಿ ಸನ್ನಿವೇಶಗಳಿಂದಾಗಿ ಇಂಡಿಕಾ ಮತ್ತು ಇಂಡಿಗೊ ಕಾರುಗಳನ್ನು ಮೂಲೆಗುಂಪಾಗುತ್ತಿವೆ.

MOST READ: ಬಿಡುಗಡೆಗೂ ಮುನ್ನವೇ ಹಾರುವ ಕಾರಿನ ಬೆಲೆ ಪಟ್ಟಿ ಬಿಡುಗಡೆ ಮಾಡಿದ ಪಿಎಲ್-ವಿ ಲಿಬರ್ಟಿ

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಇಂಡಿಕಾ ಮತ್ತು ಇಂಡಿಗೊ ಕಾರುಗಳು ಬಿಡುಗಡೆಯಾದ ನಂತರ ಇದುವರೆಗೆ ಲಕ್ಷಾಂತರ ಕಾರು ಮಾದರಿಗಳು ಮಾರಾಟಗೊಂಡಿದ್ದಲ್ಲದೇ ಪ್ಯಾಸೆಂಜರ್ ಕಾರುಗಳ ವಿಭಾಗದಲ್ಲೂ ಭಾರೀ ಸದ್ದು ಮಾಡಿತ್ತು. ಆದ್ರೆ ಬದಲಾದ ಗ್ರಾಹಕರ ಬೇಡಿಕೆಯಿಂದಾಗಿ ಇಂಡಿಕಾ ಹಾಗೂ ಇಂಡಿಗೊ ಕಾರುಗಳನ್ನು ಕೈಬಿಡಲು ಟಾಟಾ ಮಹತ್ವದ ನಿರ್ಧಾರಕ್ಕೆ ಬಂದಿದೆ.

ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ಬೇಕಾಬಿಟ್ಟಿಯಾಗಿ ಅಗ್ಗದ ಬೆಲೆಗೆ ಕಾರುಗಳನ್ನು ಮಾರಾಟ ಮಾಡಿ ಭಾರೀ ಪ್ರಮಾಣದ ಲಾಭಾಂಶ ಮಾಡಿಕೊಳ್ಳುತ್ತಿದ್ದ ವಾಹನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ತರುತ್ತಿರುವ ಕ್ರ್ಯಾಶ್ ಟೆಸ್ಟಿಂಗ್ ಪ್ರಕ್ರಿಯೆ ಮತ್ತು ಬಿಎಸ್ 6 ಕಾಯ್ದೆಯು ಭಾರತೀಯ ಆಟೋ ಉದ್ಯಮದ ಚಿತ್ರಣವನ್ನೇ ಬದಲಿಸುತ್ತಿರುವುದು ಉತ್ತಮ ಬೆಳವಣಿಗೆ ಎನ್ನಬಹುದು.

More from DriveSpark

Article Published On: Thursday, December 20, 2018, 18:33 [IST]
English summary
Nine cars to get discontinued in 2019. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+