TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ರೇಂಜ್ ರೋವರ್ ಇವೋಕ್ ಲ್ಯಾಂಡ್ ಮಾರ್ಕ್ ಎಡಿಷನ್ ಬಿಡುಗಡೆ- ಬೆಲೆ ರೂ. 50.20 ಲಕ್ಷ

ಐಷಾರಾಮಿ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮಹತ್ವದ ಮುನ್ನಡೆ ಸಾಧಿಸುತ್ತಿರುವ ಜೆಎಲ್‌ಆರ್ ಸಂಸ್ಥೆಯು ಸದ್ಯ ರೇಂಜ್ ರೋವರ್ ಇವೋಕ್ ಆರನೇ ವರ್ಷದ ವಿಶೇಷತೆಗಾಗಿ ಲ್ಯಾಂಡ್ ಮಾರ್ಕ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ.50.20 ಲಕ್ಷಕ್ಕೆ ನಿಗದಿ ಮಾಡಲಾಗಿದೆ.
ಭಾರತೀಯ ಗ್ರಾಹಕನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ರೇಂಜ್ ರೋವರ್ ಸಂಸ್ಥೆಯು ಇದುವರೆಗೆ ವಿವಿಧ ಕಾರು ಮಾದರಿಗಳನ್ನು ಪರಿಚಯಿಸುವ ಮೂಲಕ ತನ್ನದೇ ಜನಪ್ರಿಯತೆ ಕಾಯ್ದುಕೊಂಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಇವೋಕ್ ಲ್ಯಾಂಡ್ ಮಾರ್ಕ್ ಎಡಿಷನ್ ಸಿದ್ಧಗೊಳಿಸಿದೆ.
ರೇಂಜ್ ರೋವರ್ ಪರಿಚಯಿಸಿರುವ ಇವೋಕ್ ಲ್ಯಾಂಡ್ ಮಾರ್ಕ್ ಎಡಿಷನ್ ಆವೃತ್ತಿಯು ಹಲವು ವಿಶೇಷತೆಗಳಿಂದ ಕೂಡಿದ್ದು, ಕಾರಿನ ಹೊರಮೈಯಲ್ಲಿ ಅಡಾಪ್ಟಿವ್ ಎಲ್ ಇಡಿ ಹೆಡ್ ಲೈಟ್ ಜೊತೆಗೆ ಎಲ್ ಇಡಿ ಸಿಗ್ನೇಚರ್ ಲೈಟಿಂಗ್ ಸೇವೆಗಳು ಇರಲಿದೆ. ಇನ್ನು ಆಕ್ಸ್ ಫ್ರಡ್ ಲೆಥರ್ ಸೀಟುಗಳು ಕೂಡಾ ಇರಲಿದೆ.
ಹೊಸ ತಲೆಮಾರಿನ ಎಂಜಿನ್ ಹಿಂದಿನ ಮಾದರಿಗಿಂತಲೂ 20 ಕೆ.ಜಿಗಳಷ್ಟು ಹಗುರವಾಗಿದ್ದು, ನೂತನ ಇವೋಕ್ ಲ್ಯಾಂಡ್ ಮಾರ್ಕ್ ಎಡಿಷನ್ 2.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೂ ಲಭ್ಯವಾಗಲಿದೆ.
ಹೀಗಾಗಿ ಹೊಸ ಎಂಜಿನ್ ಮಾದರಿಯಲ್ಲಿ 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆಗೆ ಫೋರ್ ವೀಲ್ ಚಾಲನಾ ವ್ಯವಸ್ಥೆಯನ್ನು ಒದಗಿಸಲಾಗಿದ್ದು, ಮೋರಾಯಿನ್ ಬ್ಯೂ ಮತ್ತು ಗ್ರೇ ಬಣ್ಣಗಳಲ್ಲಿ ಆಯ್ಕೆ ಮಾಡಬಹುದಾಗಿದೆ.
Trending On DriveSpark Kannada:
ನಟ ದರ್ಶನ್ ಖರೀದಿಸಿದ ಲಂಬೋರ್ಗಿನಿ ಅವೆಂಟಡೊರ್ ಸ್ಪೆಷಲ್ ಏನು?
ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..
ಬಿಡುಗಡೆಗೆ ಸಜ್ಜುಗೊಂಡ ಅಗ್ಗದ ಬೆಲೆಯ ಮಹೀಂದ್ರಾ ಮೊಜೊ ಯುಟಿ300
ಜೊತೆಗೆ ಕಾರಿನೊಳಗೆ 10 ಇಂಚುಗಳ ಟಚ್ ಸ್ಕ್ರೀನ್, ಹೊಸತಾದ ಇನ್ ಕಂಟ್ರೋಲ್ ಟಚ್ ಪ್ರೊ ಇನ್ಪೋಟೈನ್ಮೆಂಟ್ ಸಿಸ್ಟಂ ಇರಲಿದೆ.
ಇನ್ನುಳಿದಂತೆ ಹೊಸತಾದ 825 ಡಬ್ಲ್ಯು ಮೆರಿಡಿಯನ್ ಸೌರಂಡ್ ಸೌಂಡ್ ಸಿಸ್ಟಂ, ಹೆಡ್ ಅಪ್ ಡಿಸ್ ಪ್ಲೇ, ಇನ್ ಕಂಟ್ರೋಲ್ ಆಪ್ ಮತ್ತು ಪವರ್ ಗೆಸ್ಟರ್ ಟೈಲ್ ಗೇಟ್ ಸೇವೆಗಳು ಇರಲಿದೆ.
ಮತ್ತೊಂದು ವಿಶೇಷತೆ ಏನೆಂದರೇ ಕೀ ಲೆಸ್ ಎಂಟ್ರಿ ಟೆಕ್ನಾಲಜಿ ಅನ್ನು ಅಳವಡಿಕೆ ಮಾಡಲಾಗಿದ್ದು, ಆಧುನಿಕ ಮಾದರಿಯ ಎಲ್ಲಾ ಸುರಕ್ಷಾ ಸೌಲಭ್ಯಗಳನ್ನು ರೋಂಜ್ ರೋವರ್ ಇವೋಕ್ ಲ್ಯಾಂಡ್ ಮಾರ್ಕ್ ಎಡಿಷನ್‌ನಲ್ಲಿ ಇರಿಸಲಾಗಿದೆ ಎನ್ನಬಹುದು.
Trending DriveSpark YouTube Videos
Subscribe To DriveSpark Kannada YouTube Channel - Click Here