ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ರೆನಾಲ್ಟ್ ಕ್ವಿಡ್ ಸಾಧನೆ ದೊಡ್ಡ 'ಸೊನ್ನೆ'

By Praveen Sannamani

ಹೌದು, ನೀವಿದನ್ನು ನಂಬಲೇಬೇಕು. ಜನಪ್ರಿಯ ವಾಹನ ಸಂಸ್ಥೆಯಾಗಿರುವ ರೆನಾಲ್ಟ್ ಸದ್ಯ ವಿದೇಶಿ ಮಾರುಕಟ್ಟೆಗಳಲ್ಲಿ ಅಷ್ಟೇ ಅಲ್ಲದೇ ದೇಶಿಯ ಮಾರುಕಟ್ಟೆಯಲ್ಲೂ ಉತ್ತಮ ಕಾರು ಮಾರಾಟ ದಾಖಲಿಸುತ್ತಿದ್ದರೂ ಅದರ ಉತ್ಪನ್ನಗಳ ಮೇಲಿನ ವಿಶ್ವಾಸದ ಕುರಿತು ಪ್ರಶ್ನೆ ಎದುರಾಗಿದೆ. ಇದಕ್ಕೆ ಕಾರಣ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಕ್ವಿಡ್ ಹ್ಯಾಚ್‌ಬ್ಯಾಕ್ ಕಾರುಗಳ ಸುರಕ್ಷಾ ರೇಟಿಂಗ್ ಸೊನ್ನೆ ಅಂದ್ರೆ ನೀವು ನಂಬಲೇಬೇಕು.

ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ರೆನಾಲ್ಟ್ ಕ್ವಿಡ್ ಸಾಧನೆ ದೊಡ್ಡ 'ಸೊನ್ನೆ'

ಹೊಸ ಕಾರು ಖರೀದಿಗೂ ಮುನ್ನ ಅದರ ವಿನ್ಯಾಸ ಮತ್ತು ಬೆಲೆಗಳು ಎಷ್ಟು ಮುಖ್ಯವೋ, ಸುರಕ್ಷಾ ವಿಧಾನಗಳು ಅಷ್ಟೇ ಮುಖ್ಯ. ಆದ್ರೆ ಸುರಕ್ಷಾ ವಿಚಾರದಲ್ಲಿ ರೆನಾಲ್ಟ್ ಕ್ವಿಡ್ ಕಾರು ಮಾದರಿಯು ಸುರಕ್ಷಾ ವಿಭಾಗದ ರೇಟಿಂಗ್‌ನಲ್ಲಿ ಸೊನ್ನೆ ಸುತ್ತಿರುವುದು ಖರೀದಿಗೆ ಯೋಗ್ಯವಲ್ಲದ ಕಾರು ಮಾದರಿಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ರೆನಾಲ್ಟ್ ಕ್ವಿಡ್ ಸಾಧನೆ ದೊಡ್ಡ 'ಸೊನ್ನೆ'

ಏನಿದು ಕ್ರ್ಯಾಶ್ ಟೆಸ್ಟಿಂಗ್

ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿ, ಏಷಿಯನ್ ಎನ್‌ಸಿಎಪಿ ಮತ್ತು ಯುರೋ ಕ್ರ್ಯಾಶ್ ಟೆಸ್ಟಿಂಗ್‌ಗಳು ಕಾರುಗಳಲ್ಲಿನ ಸುರಕ್ಷತೆಗೆ ರೇಟಿಂಗ್ ನೀಡುತ್ತವೆ.

ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ರೆನಾಲ್ಟ್ ಕ್ವಿಡ್ ಸಾಧನೆ ದೊಡ್ಡ 'ಸೊನ್ನೆ'

ಈ ವೇಳೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ.

ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ರೆನಾಲ್ಟ್ ಕ್ವಿಡ್ ಸಾಧನೆ ದೊಡ್ಡ 'ಸೊನ್ನೆ'

ಇದೀಗ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಕೂಡಾ ಏಷಿಯನ್ ಎನ್‌ಸಿಎಪಿ ಟೆಸ್ಟ್‌ನಲ್ಲಿ 0 ಸ್ಟಾರ್ ರೇಟಿಂಗ್ ಪಡೆದಿದ್ದು, ಖರೀದಿಗೆ ಯೊಗ್ಯವಲ್ಲದ ಕಾರು ಮಾದರಿ ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಕಾರಿನ ಬಿಡಿಭಾಗಗಳು ಸಹ ಗುಣಮಟ್ಟದಲ್ಲಿ ಸೊನ್ನೆ ಸುತ್ತಿರುವುದು ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಒತ್ತು ನೀಡಿಲ್ಲ ಎನ್ನುವುದು ಸಾಬೀತಾಗಿದೆ.

ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ರೆನಾಲ್ಟ್ ಕ್ವಿಡ್ ಸಾಧನೆ ದೊಡ್ಡ 'ಸೊನ್ನೆ'

ಇದಲ್ಲದೇ ಪ್ರತಿ ಕಾರು ಮಾದರಿಗಳಿಗೂ ಸುರಕ್ಷಾ ವಿಚಾರವಾಗಿ ಜಾಗತಿಕ ಸುರಕ್ಷಾ ಪ್ರಮಾಣ ಪತ್ರದ ಅವಶ್ಯಕತೆಯಿದ್ದು, ರೆನಾಲ್ಟ್ ಕ್ವಿಡ್ ಬೇಸಿಕ್ ಮಾದರಿಯು ಸುರಕ್ಷಾ ವಿಚಾರದಲ್ಲಿ ಮುಗ್ಗಸಿರುವುದು ಕಾರು ಮಾರಾಟ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನುವುದು ತಂತ್ರಜ್ಞರ ಅಭಿಪ್ರಾಯವಾಗಿದೆ.

ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ರೆನಾಲ್ಟ್ ಕ್ವಿಡ್ ಸಾಧನೆ ದೊಡ್ಡ 'ಸೊನ್ನೆ'

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಇದೇ ಕ್ವಿಡ್ ಹ್ಯಾಚ್‌ಬ್ಯಾಕ್ ಮಾದರಿಗಳು ಕಳೆದ 2016ರಲ್ಲಿ ಲ್ಯಾಟಿನ್ ಎನ್‌ಸಿಎಪಿ ಟೆಸ್ಟ್‌ನಲ್ಲಿ 3 ಸ್ಟಾರ್ ಗಳಿಸಿದ್ದವು. ಆದ್ರೆ, ಭಾರತದಲ್ಲಿ ಮಾತ್ರ ಸೊನ್ನೆ ಸುತ್ತಿರುವ ಕ್ವಿಡ್ ಕಾರುಗಳು ಗುಣಮಟ್ಟ ಮತ್ತು ಸುರಕ್ಷಾ ವಿಚಾರದಲ್ಲಿ ಗ್ರಾಹಕರ ವಿಶ್ವಾಸವನ್ನು ಕಳೆದುಕೊಳ್ಳುತ್ತಿವೆ.

ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ರೆನಾಲ್ಟ್ ಕ್ವಿಡ್ ಸಾಧನೆ ದೊಡ್ಡ 'ಸೊನ್ನೆ'

ಇನ್ನು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಹೊಸ ಮಾದರಿಯ ಕ್ವಿಡ್ ಕಾರುಗಳು 1.0-ಲೀಟರ್ ಎಂಜಿನ್ ಒಳಗೊಂಡಿದ್ದು, ಕಾರಿನ ಬೆಲೆಯು ರೂ. 4.30 ಲಕ್ಷ(ಎಕ್ಸ್ ಷೋ ರೂಂ ದೆಹಲಿ) ನಿಗದಿಪಡಿಸಲಾಗಿದೆ. ಕ್ವಿಡ್ ಕ್ಲೈಂಬರ್ ಹೆಚ್ಚು ಆಫ್ ರೋಡ್ ಸ್ನೇಹಿ ಕಾರು ಎನಿಸಿಕೊಂಡಿದ್ದರೂ ಸುರಕ್ಷಾ ವಿಚಾರದಲ್ಲಿ ಗ್ರಾಹಕರಿಗೆ ಮೋಸಗೊಳಿಸುತ್ತಿರುವುದು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಜಗಜಾಹೀರಾಗಿದೆ.

ಶೇಮ್ ಶೇಮ್; ಅಪಘಾತ ಪರೀಕ್ಷೆಯಲ್ಲಿ ರೆನಾಲ್ಟ್ ಕ್ವಿಡ್ ಸಾಧನೆ ದೊಡ್ಡ 'ಸೊನ್ನೆ'

ಇದರಿಂದ ಅಪಘಾತ ಸಂದರ್ಭಗಳಲ್ಲಿ ಕಾರು ಚಾಲಕನಿಗೆ ಮತ್ತು ಮುಂಭಾಗದ ಸಹ ಪ್ರಯಾಣಿಕರಿಗೆ ಭಾರೀ ಪ್ರಮಾಣದ ಹಾನಿ ಉಂಟಾಗುವ ಸಾಧ್ಯತೆಗಳಿದ್ದು, ರೆನಾಲ್ಟ್ ಕ್ವಿಡ್ ಖರೀದಿಸುವುದು ಉತ್ತಮವೇ ಎಂಬ ಪ್ರಶ್ನೆ ಶುರುವಾಗಿವೆ.

ಏಷಿಯನ್ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟಿಂಗ್ ವೀಡಿಯೋ ಇಲ್ಲಿದೆ ನೋಡಿ.

More from DriveSpark

Article Published On: Thursday, July 12, 2018, 11:08 [IST]
English summary
Renault Kwid ASEAN NCAP Crash Test Results Revealed — Scores Zero-Star Rating.
Read more on crash test renault
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+