ಕೇವಲ 2.66 ಲಕ್ಷಕ್ಕೆ ಬಿಡುಗಡೆಯಾದ ರೆನಾಲ್ಟ್ ಕ್ವಿಡ್ ಸ್ಪೆಷಲ್ ಎಡಿಷನ್

Written By:
Recommended Video - Watch Now!
Volkswagen Vento Smashed In Suspected Hit And Run In Kerala - DriveSpark

ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಕಾರುಗಳಲ್ಲಿ ರೆನಾಲ್ಟ್ ಕ್ವಿಡ್ ಕೂಡಾ ಉತ್ತಮ ಮಾರಾಟ ದಾಖಲಿಸುತ್ತಿದ್ದು, ಇದೀಗ ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರನ ಬೇಡಿಕೆಗೆ ಅನುಗುಣವಾಗಿ ಕ್ವಿಡ್ ಸ್ಪೆಷಲ್ ಎಡಿಷನ್ ಆವೃತ್ತಿಯನ್ನು ಅಂತ್ಯಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಲಾಗಿದೆ.

ಕೇವಲ 2.66 ಲಕ್ಷಕ್ಕೆ ಬಿಡುಗಡೆಯಾದ ರೆನಾಲ್ಟ್ ಕ್ವಿಡ್ ಸ್ಪೆಷಲ್ ಎಡಿಷನ್

ಈ ಹಿಂದಿನ ಕ್ವಿಡ್ ಆವೃತ್ತಿಗಳು ಉತ್ತಮ ಎಂಜಿನ್ ಕಾರ್ಯಕ್ಷಮತೆ ಪಡೆದಿದ್ದರು ಗ್ರಾಹಕರನ್ನು ನಿಗದಿತ ಮಟ್ಟದಲ್ಲಿ ಸೆಳೆಯುವಲ್ಲಿ ವಿಫಲವಾಗಿದ್ದವು. ಈ ಹಿನ್ನೆಲೆ ಹೊಸ ಯೋಜನೆ ರೂಪಿಸಿರುವ ರೆನಾಲ್ಟ್ ಸಂಸ್ಧೆಯು ಗ್ರಾಹಕರ ಬೇಡಿಕೆ ಮೇರೆಗೆ 'ಲಿವ್ ಫಾರ್ ಮೋರ್' ಅಭಿಯಾನದಡಿ ಕ್ವಿಡ್ ಸ್ಪೆಷಲ್ ಆವೃತ್ತಿಗಳನ್ನು ಪರಿಚಯಿಸಿದೆ.

ಕೇವಲ 2.66 ಲಕ್ಷಕ್ಕೆ ಬಿಡುಗಡೆಯಾದ ರೆನಾಲ್ಟ್ ಕ್ವಿಡ್ ಸ್ಪೆಷಲ್ ಎಡಿಷನ್

ಕ್ವಿಡ್ ಕಾರುಗಳಲ್ಲಿ ಪ್ರಮುಖ ಮೂರು ವಿವಿಧ ಮಾದರಿಗಳನ್ನು ಬಿಡುಗಡೆ ಮಾಡಲಾಗಿದ್ದು, ಮೊದಲ ಮಾದರಿಯು 0.8-ಲೀಟರ್ ಎಂಜಿನ್ ಸಾಮರ್ಥ್ಯ ಹೊಂದಿದ್ದರೆ ಎರಡನೇ ಆವೃತ್ತಿಯು 1.0-ಲೀಟರ್ ಎಂಜಿನ್ ಜೊತೆ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಮೂರನೇ ಆವೃತ್ತಿಯು 1.0-ಲೀಟರ್ ಎಂಜಿನ್ ಜೊತೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ.

ಕೇವಲ 2.66 ಲಕ್ಷಕ್ಕೆ ಬಿಡುಗಡೆಯಾದ ರೆನಾಲ್ಟ್ ಕ್ವಿಡ್ ಸ್ಪೆಷಲ್ ಎಡಿಷನ್

ಹೀಗಾಗಿ ಬಜೆಟ್ ಅನುಗುಣವಾಗಿ ಕ್ವಿಡ್ ಸ್ಪೆಷಲ್ ಎಡಿಷನ್‌ಗಳನ್ನು ಖರೀದಿ ಮಾಡುವ ಅವಕಾಶವನ್ನು ನೀಡಲಾಗಿದ್ದು, ಮೊದಲ ಮಾದರಿಯು ರೂ.2,66,700 ಹೊಂದಿದ್ದರೆ ಟಾಪ್ ಮಾದರಿಯು ರೂ.3,87,900 ಬೆಲೆ ಹೊಂದಿದೆ.

ಕೇವಲ 2.66 ಲಕ್ಷಕ್ಕೆ ಬಿಡುಗಡೆಯಾದ ರೆನಾಲ್ಟ್ ಕ್ವಿಡ್ ಸ್ಪೆಷಲ್ ಎಡಿಷನ್

ರೆನಾಲ್ಟ್ ಕ್ವಿಡ್ ಸ್ಪೆಷಲ್ ಎಡಿಷನ್ ದರ ಪಟ್ಟಿ

ಕಾರು ಮಾದರಿಗಳು -ಬೆಲೆ (ದೆಹಲಿ ಎಕ್ಸ್‌ಶೋಂ ಪ್ರಕಾರ)

ಕ್ವಿಡ್ 0.8-ಲೀಟರ್ ವೆರಿಯಂಟ್ - ರೂ. 2,66,700

ಕ್ಪಿಡ್ 1.0-ಲೀಟರ್ ಎಂಟಿ - ರೂ.3,57,900

ಕ್ವಿಡ್ 1.0-ಲೀಟರ್ ಎಎಂಟಿ - ರೂ.3,87, 900

Trending On DriveSpark Kannada:

ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ 2018ರ ಮಾರುತಿ ಸುಜುಕಿ ಸ್ವಿಫ್ಟ್ ಬೆಲೆ ಎಷ್ಟು ಗೊತ್ತಾ?

ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಕೇವಲ 2.66 ಲಕ್ಷಕ್ಕೆ ಬಿಡುಗಡೆಯಾದ ರೆನಾಲ್ಟ್ ಕ್ವಿಡ್ ಸ್ಪೆಷಲ್ ಎಡಿಷನ್

ಎಂಜಿನ್ ಸಾಮರ್ಥ್ಯ

ಈ ಮೇಲೆ ಹೇಳಿದ ಹಾಗೆ ಕ್ವಿಡ್ ಸ್ಪೆಷಲ್ ಎಡಿಷನ್ ಮೊದಲ ಮಾದರಿಯು 0.8-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಎಂಟಿ ಆವೃತ್ತಿಯು 1.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಎಎಂಟಿ ಆವೃತ್ತಿಯು 1.0-ಲೀಟರ್ ಎಂಜಿನ್ ಪಡೆದುಕೊಂಡಿದೆ.

ಕೇವಲ 2.66 ಲಕ್ಷಕ್ಕೆ ಬಿಡುಗಡೆಯಾದ ರೆನಾಲ್ಟ್ ಕ್ವಿಡ್ ಸ್ಪೆಷಲ್ ಎಡಿಷನ್

ಈ ಮೂಲಕ ಕ್ವಿಡ್ ಸ್ಪೆಷಲ್ ಆವೃತ್ತಿಗಳಿಗೆ ಸ್ಪೋರ್ಟಿ ಲುಕ್ ಒದಗಿಸಿರುವ ರೆನಾಲ್ಟ್ ಸಂಸ್ಥೆಯು ಬ್ಯಾನೆಟ್, ರೂಫ್, ಶೋಡರ್ಸ್ ಲೈನ್‌ಗಳ ಮೇಲೆ ವಿವಿಧ ಕಲರ್ ಕಾಂಬಿನೇಷನ್ ನೀಡಿದ್ದು, ಕಾರಿನ ಹಿಂಭಾಗದಲ್ಲಿ 'ಲಿವ್ ಫಾರ್ ಮೋರ್' ಅಭಿಯಾನದ ಲೋಗೋ ಲಗತ್ತಿಸಿದೆ.

ಕೇವಲ 2.66 ಲಕ್ಷಕ್ಕೆ ಬಿಡುಗಡೆಯಾದ ರೆನಾಲ್ಟ್ ಕ್ವಿಡ್ ಸ್ಪೆಷಲ್ ಎಡಿಷನ್

ಲಭ್ಯವಿರುವ ಬಣ್ಣಗಳು

ಫೈರಿ ರೆಡ್, ಐಸ್ ಕೂಲ್ ವೈಟ್, ಮೊನೊ ಲೈಟ್ ಸಿಲ್ವರ್, ಔಟ್ ಬ್ಲ್ಯಾಕ್ ಬೋನಾಜ್, ಪ್ಲಾನೆಟ್ ಗ್ರೆ ಬಣ್ಣಗಳಲ್ಲಿ ಹೊಸ ಕಾರುಗಳು ಖರೀದಿಗೆ ಲಭ್ಯವಿವೆ.

ಕೇವಲ 2.66 ಲಕ್ಷಕ್ಕೆ ಬಿಡುಗಡೆಯಾದ ರೆನಾಲ್ಟ್ ಕ್ವಿಡ್ ಸ್ಪೆಷಲ್ ಎಡಿಷನ್

ಇದಲ್ಲದೇ ಕಡಿಮೆ ಬೆಲೆಗಳಲ್ಲೇ ಸ್ಪೆಷನ್ ಎಡಿಷನ್ ಕ್ವಿಡ್ ಪರಿಚಯಿಸಿರುವ ರೆನಾಲ್ಟ್ ಸಂಸ್ಥೆಯು ಪಾರ್ಕಿಂಗ್ ಸೆನ್ಸಾರ್, ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಹಲವು ಸುರಕ್ಷಾ ವಿಧಾನಗಳನ್ನು ಪರಿಚಯಿಸಿದ್ದು, ಗ್ರಾಫಿಕ್ಸ್ ವಿನ್ಯಾಸಗಳು ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯಬಲ್ಲವು.

ಕೇವಲ 2.66 ಲಕ್ಷಕ್ಕೆ ಬಿಡುಗಡೆಯಾದ ರೆನಾಲ್ಟ್ ಕ್ವಿಡ್ ಸ್ಪೆಷಲ್ ಎಡಿಷನ್

ಹೀಗಾಗಿ ಕಡಿಮೆ ಅವಧಿಗೆ ಕ್ವಿಡ್ ಸ್ಪೆಷಲ್ ಆವೃತ್ತಿಗಳು ಖರೀದಿಗೆ ಲಭ್ಯವಿರಲಿದ್ದು, ದೇಶದಲ್ಲಿರುವ ಎಲ್ಲಾ ರೆನಾಲ್ಟ್ ಕಾರು ಮಳಿಗೆಗಳಲ್ಲೂ ಹೊಸ ಕಾರುಗಳ ಸಂಗ್ರಹ ನೀಡಲಾಗಿದೆ. ಒಂದು ವೇಳೆ ಹೊಸ ಕಾರು ಖರೀದಿಸುವ ಯೋಜನೆ ಇದಲ್ಲಿ ಈಗಲೇ ನಿಮ್ಮ ಹತ್ತಿರದ ಡೀಲರ್‌ಗಳನ್ನು ಸಂಪರ್ಕಿಸಿ.

ಕೇವಲ 2.66 ಲಕ್ಷಕ್ಕೆ ಬಿಡುಗಡೆಯಾದ ರೆನಾಲ್ಟ್ ಕ್ವಿಡ್ ಸ್ಪೆಷಲ್ ಎಡಿಷನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕ್ವಿಡ್ ಕಾರುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದ್ದರು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಸ್ಪೆಷಲ್ ಎಡಿಷನ್ ಹೊರತರಲಾಗುತ್ತಿದೆ. ಹೀಗಾಗಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆ ಎನ್ನಬಹುದು.

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Renault Kwid Live For More Reloaded 2018 Edition Launched In India.
Story first published: Saturday, January 6, 2018, 13:43 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark