ಸೆಲ್ಪ್ ಡ್ರೈವಿಂಗ್ ಕಾರುಗಳ ಅವಾಂತರ- ರಸ್ತೆ ದಾಟುತ್ತಿದ್ದ ಮಹಿಳೆ ದುರ್ಮರಣ

ಸದ್ಯ ವಾಹನ ಉದ್ಯಮದಲ್ಲಿ ಸೆಲ್ಪ್ ಡ್ರೈವಿಂಗ್ ಕಾರುಗಳನ್ನು ರಸ್ತೆಗಿಳಿಸುವ ನಿಟ್ಟಿನಲ್ಲಿ ಹತ್ತಾರು ಹೊಸ ಹೊಸ ಸಂಶೋಧನೆಗಳು ಅಭಿವೃದ್ಧಿ ಹಂತದಲ್ಲಿದ್ದು, ಈ ಮಧ್ಯೆ ಸೆಲ್ಪ್ ಡ್ರೈವಿಂಗ್ ಕಾರೊಂದು ಟೆಸ್ಟಿಂಗ್ ವೇಳೆ ದುರಂತಕ್ಕೆ ಕಾರಣವಾಗಿದೆ.

By Praveen Sannamani

ಸೆಲ್ಪ್ ಡ್ರೈವಿಂಗ್(ಸ್ವಯಂ ಚಾಲಿತ) ಕಾರುಗಳ ಕಾರ್ಯಕ್ಷಮತೆ ಕುರಿತಾಗಿ ಟೆಸ್ಟಿಂಗ್ ನಡೆಸುತ್ತಿದ್ದಾಗ ರಸ್ತೆ ದಾಟುತ್ತಿದ್ದ 49 ವರ್ಷದ ಮಹಿಳೆಯೊಬ್ಬರ ಮೇಲೆ ಸ್ವಯಂ ಚಾಲಿತ ಕಾರು ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸೆಲ್ಪ್ ಡ್ರೈವಿಂಗ್ ಕಾರುಗಳ ತಾಂತ್ರಿಕ ಅಂಶಗಳು ಬಗೆಗೆ ಹಲವು ಅನುಮಾನಗಳಿಗೆ ಎಡೆಮಾಡಿದೆ.

ಸೆಲ್ಪ್ ಡ್ರೈವಿಂಗ್ ಕಾರುಗಳ ಅವಾಂತರ- ರಸ್ತೆ ದಾಟುತ್ತಿದ್ದ ಮಹಿಳೆ ದುರ್ಮರಣ

ಅಮೆರಿಕದ ಅರಿಜೋನಾದಲ್ಲಿ ಈ ದುರಂತ ನಡೆದಿದ್ದು, ಆಘಾತಕಾರಿ ಸಂಗತಿಯೆಂದರೇ ಸ್ವಯಂ ಚಾಲನಾ ಕಾರುಗಳು ಅಪಘಾತದ ಸಮಯದಲ್ಲಿ ತುರ್ತು ಬ್ಯಾಕಪ್ ಚಾಲಕವನ್ನು ಹೊಂದಿತ್ತು ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಸೆಲ್ಪ್ ಡ್ರೈವಿಂಗ್ ಕಾರುಗಳ ಅವಾಂತರ- ರಸ್ತೆ ದಾಟುತ್ತಿದ್ದ ಮಹಿಳೆ ದುರ್ಮರಣ

ಉಬರ್ ಸಂಸ್ಥೆಯ ವೊಲ್ಪೋ ಎಕ್ಸ್‌ಸಿ 90 ಎಸ್‌ಯುವಿ ಕಾರಿನ ಮೂಲಕ ಸೆಲ್ಪ್ ಡ್ರೈವ್ ತಾಂತ್ರಾಂಶ ಪರೀಕ್ಷಿಸುವ ವೇಳೆ ಈ ಅನಾಹುತ ನಡೆದಿದ್ದು, ಘಟನೆ ನಂತರ ಸ್ಯಾನ್ ಫ್ರಾನ್ಸಿಸ್ಕೊ, ಮತ್ತು ಟೊರೊಂಟೊದಲ್ಲೂ ಇದೇ ಮಾದರಿಯ ಸ್ವನಿಯಂತ್ರಿತ ಕಾರುಗಳ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ.

ಸೆಲ್ಪ್ ಡ್ರೈವಿಂಗ್ ಕಾರುಗಳ ಅವಾಂತರ- ರಸ್ತೆ ದಾಟುತ್ತಿದ್ದ ಮಹಿಳೆ ದುರ್ಮರಣ

ಸಾಮಾನ್ಯವಾಗಿ ಸ್ವಯಂ ಚಾಲನಾ ಕಾರುಗಳನ್ನು ನಿಯಂತ್ರಿತ ಪರಿಸರದಲ್ಲಿ ಪರೀಕ್ಷೆ ನಡೆಸಬೇಕು. ಆದರೆ ಹೆಚ್ಚಿನ ಸಂಸ್ಥೆಗಳು ಜನರನ್ನು ಆಕರ್ಷಿಸಲು ಸಾರ್ವಜನಿಕ ರಸ್ತೆಗಳಲ್ಲಿ ಪರೀಕ್ಷೆ ನಡೆಸುತ್ತಿದ್ದು, ಇದೀಗ ಮಹಿಳೆಯ ಸಾವು ಸೆಲ್ಪ್ ಡ್ರೈವಿಂಗ್ ಕಾರುಗಳ ಕಾರ್ಯಕ್ಷಮತೆಗೆ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ.

ಸೆಲ್ಪ್ ಡ್ರೈವಿಂಗ್ ಕಾರುಗಳ ಅವಾಂತರ- ರಸ್ತೆ ದಾಟುತ್ತಿದ್ದ ಮಹಿಳೆ ದುರ್ಮರಣ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಸೆಲ್ಪ್ ಡ್ರೈವಿಂಗ್ ಕಾರುಗಳು ಅಪಘಾತಗಳನ್ನು ತಡೆಯುವ ಎಲ್ಲಾ ರೀತಿ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಕೆ ಹೊಂದಿದ್ದರು ಈ ರೀತಿ ಘಟನೆ ನಡೆದಿರುವುದು ಆಟೋ ಉತ್ಪಾದಕರಲ್ಲೇ ಹಲವು ಗೊಂದಲಗಳನ್ನು ಹುಟ್ಟುಹಾಕಿದೆ.

ಸೆಲ್ಪ್ ಡ್ರೈವಿಂಗ್ ಕಾರುಗಳ ಅವಾಂತರ- ರಸ್ತೆ ದಾಟುತ್ತಿದ್ದ ಮಹಿಳೆ ದುರ್ಮರಣ

ಈ ಹಿನ್ನೆಲೆ ಸೆಲ್ಪ್ ಡ್ರೈವಿಂಗ್ ಕಾರುಗಳಲ್ಲಿ ಅಳವಡಿಸಲಾಗಿರುವ ತಂತ್ರಜ್ಞಾನಗಳ ಕುರಿತಾಗಿ ತನಿಖೆ ನಡೆಸಲಾಗುತ್ತಿದ್ದು, ಮಹಿಳೆ ಸಾವಿಗೆ ಸಂಬಂಧಪಟ್ಟಂತೆ ಉಬರ್ ವಿರುದ್ದ ಪ್ರಕರಣ ಕೂಡಾ ದಾಖಲಾಗಿದೆ.

ಸೆಲ್ಪ್ ಡ್ರೈವಿಂಗ್ ಕಾರುಗಳ ಅವಾಂತರ- ರಸ್ತೆ ದಾಟುತ್ತಿದ್ದ ಮಹಿಳೆ ದುರ್ಮರಣ

ಉಬರ್ ಕಾರುಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿರುವ ಸೆಲ್ಪ್ ಡ್ರೈವಿಂಗ್ ಟೆಕ್ನಾಲಜಿಯು ಗೂಗಲ್ ಸಂಸ್ಥೆಯ ವೇಮೊ(WAYM0)ಪ್ರೇರಣೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಿ ಸಿದ್ದವಾಗುತ್ತಿರುವ ಬಹುತೇಕ ಸೆಲ್ಪ್ ಡ್ರೈವಿಂಗ್ ಕಾರುಗಳು ಇದೇ ಇದೇ ತಾಂತ್ರಾಂಶ ಹೊಂದಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಸೆಲ್ಪ್ ಡ್ರೈವಿಂಗ್ ಕಾರುಗಳ ಅವಾಂತರ- ರಸ್ತೆ ದಾಟುತ್ತಿದ್ದ ಮಹಿಳೆ ದುರ್ಮರಣ

ಹೀಗಾಗಿ ಭವಿಷ್ಯದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಸುಧಾರಿತ ತಂತ್ರಜ್ಞಾನ ಪ್ರೇರಿತ ಸೆಲ್ಪ್ ಡ್ರೈವ್ ಕಾರುಗಳು ಸಹ ದುರಂತಗಳಿಗೆ ಹೊರತಾಗಿಲ್ಲ ಎನ್ನುವುದು ಸಾಬೀತಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಮತ್ತಷ್ಟು ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ವೇಮೊಗೆ ಇದು ಸರಿಯಾದ ಸಮಯ ಎನ್ನಬಹುದು.

More from DriveSpark

Article Published On: Tuesday, March 20, 2018, 12:43 [IST]
English summary
Self-Driving Uber Car Crashes In Arizona — Kills Pedestrian.
Read more on accident off beat uber
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+