ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಜನಪ್ರಿಯತೆ ಸಾಧಿಸಿರುವ ಟಾಟಾ ಮೋಟಾರ್ಸ್ ಇದೇ ತಿಂಗಳು 25ಕ್ಕೆ 150ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಈ ಹಿನ್ನೆಲೆ ತನ್ನ ಗ್ರಾಹಕರಿಗೆ ವಿಶೇಷ ಆಫರ್ ಘೋಷಣೆ ಮಾಡಿದ್ದು, ವಿವಿಧ ಕಾರುಗಳ ಆಯ್ಕೆಯ ಆಧಾರ ಮೇಲೆ 1 ಲಕ್ಷದ ತನಕ ಡಿಸ್ಕೌಂಟ್ ನೀಡಲು ಮುಂದಾಗಿದೆ.

ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ಹೊಸ ಆಫರ್‌ಗಳು ಇಂದಿನಿಂದಲೇ ಅನ್ವಯವಾಗಲಿದ್ದು, ನೀವು ಖರೀದಿ ಮಾಡುವ ಕಾರು ಮಾಡೆಲ್‌ ಮೇಲೆ ವಿವಿಧ ಮಾದರಿಯ ಡಿಸ್ಕೌಂಟ್ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇವುಗಳಲ್ಲದೇ ಎಕ್ಸ್‌ಚೆಂಜ್ ಆಫರ್ ಸಹ ಇದ್ದು, ಹೊಸ ಆಫರ್‌ಗಳು ಇದೇ ತಿಂಗಳು 25ರ ತನಕ ಮಾತ್ರ ಲಭ್ಯವಿರಲಿವೆ ಎಂದು ಟಾಟಾ ಹೇಳಿಕೆಕೊಂಡಿದೆ.

ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಸಂಸ್ಥೆಯ ನಿರ್ಮಾಣದ ನ್ಯಾನೋ, ಟಿಯಾಗೊ, ಟಿಗೋರ್, ಬೋಲ್ಟ್, ಜೆಸ್ಟ್, ಹೆಕ್ಸಾ, ಸಫಾರಿ, ನೆಕ್ಸಾನ್, ಸುಮೊ, ನೆಕ್ಸಾನ್ ಎಎಂಟಿ ವರ್ಷನ್ ಸೇರಿದಂತೆ ಕೆಲ ವಾಣಿಜ್ಯ ವಾಹನಗಳ ಆಫರ್ ನೀಡುತ್ತಿದ್ದು, ಉತ್ಪಾದನೆಯಿಂದ ಸ್ಥಗಿತಗೊಂಡಿರುವ ಇಂಡಿಕಾ ಹಾಗೂ ಇಂಡಿಗೊ(ಸ್ಟಾಕ್) ಮೇಲೂ ಆಫರ್ ಅನ್ವಯವಾಗುತ್ತದೆ.

ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ಯಾವುದರ ಮೇಲೆ ಎಷ್ಟು ಆಫರ್?

ಟಾಟಾ ಸಂಸ್ಥೆಯು ತನ್ನ ಹೈ ಎಂಡ್ ಹೆಕ್ಸಾ ಕಾರುಗಳ ಮೇಲೆ ರೂ. 93 ಸಾವಿರ ಹಾಗೂ ಟಿಗೋರ್ ಕಾರುಗಳ ಮೇಲೆ ಗರಿಷ್ಠವಾಗಿ ರೂ. 47 ಸಾವಿರ ಡಿಸ್ಕೌಂಟ್ ನೀಡಲಿದ್ದು, ಟಿಯಾಗೋ ಕಾರುಗಳನ್ನು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ರೂ. 12 ಸಾವಿರ ಆಫರ್ ನೀಡುತ್ತಿದೆ.

ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ಹಾಗೆಯೇ ನೆಕ್ಸಾನ್ ಕಾರುಗಳ ಮೇಲೆ ಗರಿಷ್ಠವಾಗಿ ರೂ. 20 ಸಾವಿರ ಡಿಸ್ಕೌಂಟ್ ಒದಗಿಸುತ್ತಿದ್ದರೇ, ಸುಮೊ, ಸಫಾರಿ ಕಾರುಗಳ ಮೇಲೆ ಗರಿಷ್ಠ ರೂ.30 ಸಾವಿರ ಡಿಸ್ಕೌಂಟ್ ದೊರೆಯಲಿವೆ ಎಂದು ಟಾಟಾ ಸಂಸ್ಥೆಯೇ ಹೇಳಿಕೊಂಡಿದೆ.

ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಮೇಲೆ ನೀಡಲಾಗಿರುವ ಡಿಸ್ಕೌಂಟ್ ದರಗಳ ದೆಹಲಿ ಶೋರಂ ಆಧರಿತ ಬೆಲೆಗಳಾಗಿದ್ದು, ಇದು ಬೇರೆ ಬೇರೆ ನಗರ ಮತ್ತು ಡೀಲರ್ಸ್ ಮೇಲೂ ಕೆಲವೊಮ್ಮೆ ಬದಲಾವಣೆಯಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಆಫರ್ ದರಗಳ ಬಗ್ಗೆ ಕೂಲಂಕುಶವಾಗಿ ಚರ್ಚೆ ಮಾಡಿದ ನಂತರವೇ ವ್ಯವಹಾರ ಮುಂದುವರಿಸಿ.

ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ಇನ್ನು ಪ್ರಸಕ್ತ ವರ್ಷದಲ್ಲಿನ ಕಾರು ಮಾರಾಟ ಪ್ರಮಾಣದಲ್ಲಿ ದಾಖಲೆ ಮಾಡಿರುವ ಟಾಟಾ ಸಂಸ್ಥೆಯು ಶೇ. 7 ರಷ್ಟು ಬೆಳವಣಿಗೆ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಎಲೆಕ್ಟ್ರಿಕ್ ಕಾರುಗಳು ಟಾಟಾ ಸಂಸ್ಥೆಗೆ ಮತ್ತಷ್ಟು ಬಲ ತುಂಬಲಿವೆ.

ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ಇವುಗಳಲ್ಲಿ ಟಿಗೋರ್ ಇವಿ ಕಾರುಗಳು ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಮತ್ತೆರಡು ಹೊಸ ಎಸ್‌ಯುವಿಗಳಾದ ಹೆಚ್5ಎಕ್ಸ್ ಮತ್ತು ಹೆಚ್7ಎಕ್ಸ್ ಕಾರುಗಳ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿವೆ. ಒಟ್ಟಿನಲ್ಲಿ 150ನೇ ಸಂಭ್ರಮಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವ ಟಾಟಾ ಸಂಸ್ಥೆಯು ತನ್ನ ನೆಚ್ಚಿನ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಣೆ ಮಾಡಿರುವುದಂತೂ ಖುಷಿಯ ವಿಚಾರವೇ ಸರಿ.

ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಬಜಾಜ್ ಸಂಸ್ಥೆಯ ಹೊಸ ಕ್ಯೂಟ್ ಕ್ವಾಡ್ರಿ ಸೈಕಲ್‌ಗಳು ಬಿಡುಗಡೆಯಾದ್ರೆ ಆಟೋ ರಿಕ್ಷಾ ಮೂಲೆಗುಂಪಾಗುವುದು ಗ್ಯಾರಂಟಿ...

ಹೆದ್ದಾರಿಗಳಲ್ಲಿ ಡ್ರೈವಿಂಗ್ ಮಾಡುವ ಮುನ್ನ ಈ 11 ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಸಾಮಾನ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಪ್ರತಿ ಚಾರ್ಜ್‌ಗೆ 547 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು....

Article Published On: Saturday, June 9, 2018, 11:16 [IST]
English summary
Read In Kannada:Tata Motors Offering Discounts Up To Rupees 1 Lakh On Nexon Tiago Tigor More Cars In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+