ಸಾಮಾನ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

By Praveen Sannamani

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಉನ್ನತ ಸ್ಥಾನದಲ್ಲಿರುವ ಭಾರತದಲ್ಲಿ ಹೆಚ್ಚುತ್ತಿರುವ ವಾಹನಗಳ ಪ್ರಮಾಣದಿಂದ ಮಾಲಿನ್ಯ ಪ್ರಮಾಣವು ಕೂಡಾ ಅತಿದೊಡ್ಡ ಸಮಸ್ಯೆಯಾಗಿ ಮಾರ್ಪಡುತ್ತಿದೆ. ಈ ಹಿನ್ನೆಲೆ ಪರಿಸರಕ್ಕೆ ಪೂರಕವಾದ ಇಂಧನ ಬಳಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸಾಮಾನ್ಯ ಡಿಸೇಲ್‌ಗಿಂತಲೂ ಅಧಿಕ ಮೈಲೇಜ್ ನೀಡಬಲ್ಲ ಇನ್ಡಿಜೆಲ್ ಹೊಸ ಭರವಸೆ ಹುಟ್ಟುಹಾಕಿದೆ.

ಸಾಮಾನ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯವಾಗಿ ಪರಿಸರ ಪೂರಕ ಇಂಧನಗಳ ಬಳಕೆಗೆ ಹೆಚ್ಚಿನ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಮುಂಬೈ ಮೂಲದ ಮೈ ಇಕೋ ಎರ್ನಜಿ(ಎಂಇಇ) ಸಂಸ್ಥೆಯು ಉತ್ತಮ ಕಾರ್ಯಕ್ಷಮತೆಯುಳ್ಳ ಇನ್ಡಿಜೆಲ್ ಎಂಬ ಪರ್ಯಾಯ ಇಂಧನ ಮೂಲವನ್ನು ಪರಿಚಯಿಸಿದೆ.

ಸಾಮಾನ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಮಾಲಿನ್ಯ ತಡೆ ಉದ್ದೇಶದಿಂದ ಡೀಸೆಲ್ ಮತ್ತು ಪೆಟ್ರೋಲ್ ಬಳಕೆ ತಗ್ಗಿಸಲು ಈಗಾಗಲೇ ಹಲವಾರು ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗುತ್ತಿದ್ದು, ಈ ನಡುವೆ 'ಮೈ ಇಕೋ ಎರ್ನಜಿ' ಸಂಸ್ಥೆಯು ಪರಿಚಯಿಸಿರುವ ಇನ್ಡಿಜೆಲ್ ಎಂಬ ಹಸಿರು ಇಂಧನವು ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಸಾಮಾನ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಇನ್ಡೆಜೆಲ್ ಇಂಧನವು ಪ್ರಸ್ತುತ ಡೀಸೆಲ್ ಬೆಲೆಗಿಂತಲೂ ಕಡಿಮೆ ದರಕ್ಕೆ ಲಭ್ಯವಿದ್ದು, ಉತ್ತಮ ಇಂಧನ ಕಾರ್ಯಕ್ಷಮತೆಯ ಜೊತೆಗೆ ಶೇ.80ರಷ್ಟು ಮಾಲಿನ್ಯ ಉತ್ಪತ್ತಿಯನ್ನು ತಗ್ಗಿಸಬಹುದಾದ ವೈಶಿಷ್ಟ್ಯತೆಯನ್ನು ಹೊಂದಿದೆ.

ಸಾಮಾನ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಈ ಕುರಿತಂತೆ ಡ್ರೈವ್‌ಸ್ಪಾರ್ಕ್ ತಂಡವು ಹೊಸ ಇಂಧನ ಮಾದರಿಯ ಕಾರ್ಯಕ್ಷಮತೆ ಬಗೆಗೆ ರೆನಾಲ್ಟ್ ಡಸ್ಟರ್ ಡಿಸೇಲ್ ಆವೃತ್ತಿ ಮೂಲಕ ದೀರ್ಘಾವಧಿಯ ರೋಡ್ ಟ್ರಿಪ್ ಕೈಗೊಂಡಿತ್ತು. ಈ ವೇಳೆ ಇನ್ಡಿಜೆಲ್ ಮಾದರಿಯು ಸಾಮಾನ್ಯ ಡಿಸೇಲ್‌ಗಿಂತ ಹೆಚ್ಚಿನ ಮಟ್ಟದ ಮೈಲೇಜ್ ಮತ್ತು ಸ್ಮೂಥ್ ಕಾರು ಚಾಲನೆಗೆ ಸಹಕಾರಿಯಾಗಿರುವುದು ಕಂಡುಬಂದಿತು.

ಸಾಮಾನ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಬೆಂಗಳೂರಿನಿಂದ ಮುಂಬೈ(ಮಂಗಳೂರು, ಗೋವಾ ಮಾರ್ಗದ ಮೂಲಕ) ತನಕ ರೆನಾಲ್ಡ್ ಡಸ್ಟರ್ ಕಾರಿನಲ್ಲಿ ಇನ್ಡಿಜೆಲ್ ಇಂಧನದ ಮೂಲಕವೇ ಪ್ರಯಾಣದ ಆರಂಭಿಸಿದ್ದ ನಮ್ಮ ತಂಡಕ್ಕೆ ಹೊಸ ಅನುಭವ ಆಗಿದ್ದಲ್ಲದೇ, ಸಾಮಾನ್ಯ ಡಿಸೇಲ್‌ಗಿಂತಲೂ ಅತಿ ಕಡಿಮೆ ಪ್ರಮಾಣದಲ್ಲಿ ನಿಗದಿತ ದೂರ ಕ್ರಮಿಸಿದ್ದು ಕಂಡುಬಂತು.

ಸಾಮಾನ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ರೆನಾಲ್ಟ್ ಡಸ್ಟರ್ ಡಿಸೇಲ್ ಮಾದರಿಯು ಸಾಮಾನ್ಯವಾಗಿ ಪ್ರತಿ ಲೀಟರ್‌ಗೆ 15ರಿಂದ 17 ಕಿ.ಮೀ ಮೈಲೇಜ್ ಸಾಮರ್ಥ್ಯ ಹೊಂದಿದ್ದು, ಇದೇ ಕಾರು ಮಾದರಿಯು ಇನ್ಡಿಜೆಲ್ ಬಳಕೆ ಮಾಡಿ ಚಾಲನೆ ಮಾಡಿದಾಗ ಸರಾಸರಿಯಾಗಿ ಪ್ರತಿ ಲೀಟರ್‌ಗೆ 19ರಿಂದ 21 ಕಿ.ಮೀ ಮೈಲೇಜ್ ನೀಡಿದ್ದು ಅಚ್ಚರಿ ತಂದಿತು.

ಸಾಮಾನ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಜೊತೆಗೆ ಎಂಜಿನ್ ಸದ್ದು ಕೂಡಾ ಸಾಮಾನ್ಯ ಡಿಸೇಲ್ ಬಳಕೆ ಮಾಡುತ್ತಿದ್ದಾಗ ಆಗುತ್ತಿದ್ದ ಕರ್ಕಶ ಸಹ ಇನ್ಡಿಜೆಲ್ ಬಳಕೆ ನಂತರ ಉತ್ತಮ ಮಾದರಿಯಲ್ಲಿ ಪರ್ಫಾಮೆನ್ಸ್ ತೊರಿದ್ದಲ್ಲದೇ ಮಾಲಿನ್ಯ ತಡೆಯುವಲ್ಲಿ ಉತ್ತಮ ಕಾರ್ಯನಿರ್ವಹಣೆಯ ಭರವಸೆ ನೀಡಿದವು.

ಸಾಮಾನ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಸದ್ಯ ಇನ್ಡೆಜೆಲ್ ದೇಶದ ಪ್ರಮುಖ ನಗರಗಳಾದ ಹೈದ್ರಾಬಾದ್, ಅಹಮದಾಬಾದ್, ಜೈಪುರ್, ಪುಣೆ, ಮುಂಬೈನಲ್ಲಿ ಈಗಾಗಲೇ ಖರೀದಿಗೆ ಲಭ್ಯವಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಮಾತ್ರ ಹೊಸ ಇಂಧನ ಮಾದರಿಯನ್ನು ಪರಿಚಯಿಸಲಾಗಿದೆ.

ಸಾಮಾನ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಇನ್ಡಿಜೆಲ್ ಬೆಲೆ

ಡೀಸೆಲ್ ಬೆಲೆಗಿಂತಲೂ ಇನ್ಡೆಜೆಲ್ ಬೆಲೆ ರೂ.10 ಕಡಿಮೆಗೆ ಖರೀದಿಸಬಹುದಾಗಿದ್ದು, ಈ ಹಿಂದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಇದೇ ಹಸಿರು ಇಂಧನವನ್ನು ಇದೀಗ ಸುಧಾರಿತ ತಂತ್ರಜ್ಞಾನದೊಂದಿಗೆ ತಯಾರಿಸಲಾಗುತ್ತಿದೆ.

ಸಾಮಾನ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಪ್ರಸ್ತುತವಾಗಿ ಇನ್ಡೆಜೆಲ್ ಇಂಧನವನ್ನು ಸಿಂಗಪುರ್‌‌ನಲ್ಲಿರುವ ಘಟಕಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೇ ಇನ್ಡೆಜೆಲ್ ಇಂಧನ ಉತ್ಪಾದನಾ ಘಟಕಗಳನ್ನು ಹೊಂದುವ ಗುರಿಯನ್ನು ಹೊಂದಲಾಗಿದೆ.

ಸಾಮಾನ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಹೊಸ ಮಾದರಿಯ ಇಂಧನ ಕುರಿತು ಮಾತನಾಡಿರುವ ಮೈ ಇಕೋ ಎರ್ನಜಿ ಸಹ ಸಂಸ್ಥಾಪಕ ಸಂತೋಷ್ ವರ್ಮಾ, ಡೀಸೆಲ್ ಮಾದರಿಗಿಂತಲೂ ಇನ್ಡೆಜೆಲ್ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದ್ದು, ಸುಗಮ ಸಂಚಾರಕ್ಕೆ ಇದೊಂದು ಉತ್ತಮ ಮಾರ್ಗ" ಎಂದಿದ್ದಾರೆ.

ಸಾಮಾನ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಒಟ್ಟಿನಲ್ಲಿ ಡಿಸೇಲ್ ವಾಹನಗಳಿಂದ ಉತ್ಪತ್ತಿಯಾಗುತ್ತಿರುವ ಮಾಲಿನ್ಯದಿಂದ ಕಂಗೆಟ್ಟಿರುವ ನಗರ ಪ್ರದೇಶಗಳಲ್ಲಿ ಇನ್ಡಿಜೆಲ್ ಜನಪ್ರಿಯತೆ ಗಳಿಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಪರಿಸರ ಸ್ನೇಹಿ ವೈಶಿಷ್ಟ್ಯತೆಗಳೇ ಈ ಇಂಧನ ಖರೀದಿಯ ಪ್ಲಸ್ ಪಾಯಿಂಟ್ ಎನ್ನಬಹುದು.

ಸಾಮಾನ್ಯ ಡೀಸೆಲ್‌ಗಿಂತಲೂ ಕಡಿಮೆ ಬೆಲೆ, ಉತ್ತಮ ಮೈಲೇಜ್ ನೀಡುವ ಇನ್ಡಿಜೆಲ್..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಹಿಂದೆಯೇ ಇನ್ಡೆಜೆಲ್ ಮಾದರಿಯನ್ನು ಪರಿಚಯಿಸಲಾಗಿದ್ದರು, ಪೆಟ್ರೋಲಿಯಂ ಕಂಪನಿಗಳ ಹಿತಾಸಕ್ತಿಯಿಂದಾಗಿ ಇದನ್ನು ನಿರ್ಲಕ್ಷ ಮಾಡಲಾಗಿತ್ತು. ಆದ್ರೆ ಬದಲಾದ ಪರಿಸ್ಥಿತಿಗಳಿಂದಾಗಿ ಪರಿಸರ ಪೂಕರ ಇಂಧನಗಳಿಗೆ ಬೇಡಿಕೆ ಬಂದಿರುವುದು ಇನ್ಡೆಜೆಲ್ ಖರೀದಿಗೆ ಉತ್ತಮವಾಗಿದೆ.

ಪರ್ಯಾಯ ಇಂಧನಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್‌ನಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದು.

Kannada
Read more on auto news fuel petrol diesel
English summary
Indizel — Cheaper, Cleaner And More Powerful Than Regular Diesel!
Story first published: Thursday, June 7, 2018, 14:26 [IST]

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more