ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಹೊಸ ತಂತ್ರಜ್ಞಾನದ ಆಗಮನದೊಂದಿಗೆ ಮೋಟಾರ್‍ ಸೈಕಲ್‍‍ಗಳು ಹೆಚ್ಚು ಶಕ್ತಿಶಾಲಿ ಮತ್ತು ವೇಗವಾಗಿವೆ. ಈ ಹಿಂದೆ ಬೈಕ್ ಅನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವುದಕ್ಕಾಗಿ ಮಾತ್ರ ಖರೀದಿಸುತ್ತಿದ್ದರು ಆದರೆ ಈಗಿನ್ ಕಾಲದಲ್ಲಿ ಗ್ರಾಹಕರು ಬೈಕ್ ಅನ್ನು ಕೊಳ್ಳುವಾಗ ಅದರ ಫರ್ಫಾರ್ಮೆನ್ಸ್ ಅನ್ನು ಕೂಡ ಗಮನಿಸಿ ಬೈಕ್ ಖರೀದಿ ಮಾಡುವ ಇಂದಿನ ಟ್ರೆಂಡ್. ಹೀಗಾಗಿ ಬೈಕ್‌ಗಳಲ್ಲಿ ಸುರಕ್ಷಾ ಸೌಲಭ್ಯ ಕೂಡಾ ತುಂಬಾ ಮುಖ್ಯವಾದ ವಿಚಾರ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಇದಲ್ಲದೇ ಹೊಸ ಬೈಕ್‍‍ಗಳು ಹೆಚ್ಚು ಶಕ್ತಿಶಾಲಿಯಾಗುತ್ತಿರುವ ಕಾರಣ ಅದರ ಬ್ರೇಕಿಂಗ್ ಸೌಲಭ್ಯ ಕೂಡಾ ಅಪ್‍‍ಗ್ರೇಡ್ ಆಗಬೇಕಿದೆ ಅಲ್ಲವೇ.? ಆದ್ದರಿಂದ ಡ್ರಮ್ ಬ್ರೇಕ್‌ಗಳಿಗೆ ಸವಾಲು ನೀಡುವ ಡಿಸ್ಕ್ ಬ್ರೇಕ್‍ ಸಿಸ್ಟಂಗಳು ಚಾಲನೆ ಬಂದಿವೆ. ಹಾಗಾದ್ರೆ ಡ್ರಮ್ ಬ್ರೇಕ್ ಬಳಕೆಗಿಂತ ಡಿಸ್ಕ್ ಬ್ರೇಕ್ ಬಳಕೆ ಏಕೆ ಉತ್ತಮ ಎನ್ನುವ ಕುರಿತು ಇಲ್ಲಿ ಚರ್ಚಿಸಲಾಗಿದೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಡಿಸ್ಕ್ ಬ್ರೇಕ್‍‍ನ ಇತಿಹಾಸವನ್ನು ನೋಡುವುದಾದರೆ, ಇವುಗಳನ್ನು ಮೊದಲಿಗೆ 1950ರ ಅವಧಿಯಲ್ಲಿ ರೇಸ್‍ ಕಾರುಗಳಲ್ಲಿ ಮಾತ್ರ ಬಳಸಲಾಗಿತ್ತು. ತದನಂತರ 1962ರಲ್ಲಿ ಪ್ರಥಮವಾಗಿ ಡಿಸ್ಕ್ ಬ್ರೇಕ್ ಅನ್ನು ದ್ವಿಚಕ್ರ ವಾಹನಗಳಿಗೂ ಅಳವಡಿಸಲು ಶುರುವಾಗಿತು.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಲ್ಯಾಂಬ್ರೆಟಾ ಟಿವಿ 175 ಸಿರೀಸ್‍‍ನ ಮೂರು ಸ್ಕೂಟರ್‍‍ಗಳಲ್ಲಿ ಇದನ್ನು ಮೊದಲಿಗೆ ಅಳವಡಿಸಲಾಗಿತ್ತು. ತದನಂತರ 1975ರಲ್ಲಿ ಹೋಂಡಾ ಸಿಬಿ750 ಬೈಕ್‌ಗಳಲ್ಲಿ ಡಿಸ್ಕ್ ಬ್ರೇಕ್‍‍ಗಳನ್ನು ಪಡೆಯುವ ಮೊದಲ ಬೈಕ್ ಮಾದರಿ ಎಂಬ ಹೆಗ್ಗಳಿಕೆ ಪಾತ್ರವಾಯಿತು.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಭಾರತದಂತಹ ದೇಶಗಳಲ್ಲಿ ಮೋಟಾರ್‍‍ಸೈಕಲ್ ಅನ್ನು ಚಲಾಯಿಸುವುದು ಸ್ವಲ್ಪ ಕಷ್ಟವೇ ಸರಿ. ಏಕೆಂದರೆ ಇಲ್ಲಿನ ರಸ್ತೆಗಳಲ್ಲಿ ಯಾವ ಸಮಯದಲ್ಲಿ ಏನಾಗುತ್ತೋ ಯಾರಿಗೆ ಗೊತ್ತು. ಆದ್ದರಿಂದ ಡಿಸ್ಕ್ ಬ್ರೇಕ್‍‍ಗಳು ವಾಹನಗಳಲ್ಲಿ ಪ್ರಮುಖವಾಗಿರುತ್ತದೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಮೇಲೆ ಹೇಳಿರುವ ಹಾಗೆ ಹೊಸ ಬೈಕ್‍‍ಗಳು ಹೆಚ್ಚು ಶಕ್ತಿಶಾಲಿ ಮತ್ತು ವೇಗವಾಗಿ ತಯಾರಾಗುತ್ತಿದ್ದು, ಗ್ರಾಹಕರು ಬೈಕ್ ಕೊಳ್ಳುವಾಗ ಡ್ರಮ್ ಬ್ರೇಕ್ ಮತ್ತು ಡಿಸ್ಕ್ ಬ್ರೇಕ್ ಅಳವಡಿಸಲಾಗಿರುವ ಯಾವ ಮೋಟಾರ್‍‍ಸೈಕಲ್ ಅನ್ನು ಕೊಳ್ಳಬೇಕು ಎಂಬ ಗೊಂದಲ್ಲಕ್ಕೀಡಾಗುತ್ತಾರೆ. ಈ ನಿಟ್ಟಿನಲ್ಲಿ ಗ್ರಾಹಕರು ಡಿಸ್ಕ್ ಬ್ರೇಕ್ ಅನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದ್ದು, ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍‍ಗಳು ಏಕೆ ಉತ್ತಮ ಎಂಬ ಕುರಿತು ನಾವಿಲ್ಲಿ ಚರ್ಚಿಸಿದ್ದೇವೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಡಿಸ್ಕ್ ಬ್ರೇಕ್ ಸಿಸ್ಟಮ್ ಚಕ್ರ ಮತ್ತು ಕ್ಯಾಲಿಪರ್‍‍ನ ಎರಡೂ ಬದಿಗಳಲ್ಲಿ ಪ್ಯಾಡಲ್‍‍ಗಳನ್ನು ಹೊಂದಿದ ರೋಟರ್ ಅಥವಾ ಡಿಸ್ಕ್ ಅನ್ನು ಹೊಂದಿರುತ್ತದೆ. ಆಯಿಲ್ ಶೇಖರಣೆಯಿಂದ ಬರುವ ದ್ರವ ರೇಖೆಯೊಂದಿಗೆ ಈ ವ್ಯವಸ್ಥೆಯು ಸಂಪೂರ್ಣ ಕಾರ್ಯನಿರ್ವಹಣೆ ಮಾಡುತ್ತದೆ. ಮತ್ತು ತೈಲ ಶೇಖರಣೆಯು ಬ್ರೇಕ್ ಲಿವರ್ ಪಂಪ್‌ಗೆ ಸಂಪರ್ಕ ಹೊಂದಿರುತ್ತದೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಆದ್ದರಿಂದ, ನೀವು ಬ್ರೇಕ್ ಲಿವರ್ ಅನ್ನು ಎಳೆಯುವಾಗ ಆಯಿಲ್ ಕ್ಯಾಲಿಪರ್ಸ್ ಕಡೆಗೆ ತಳ್ಳಲಾಗುತ್ತದೆ ಮತ್ತು ಪ್ರತಿಯಾಗಿ, ಮೋಟಾರ್‍‍ಸೈಕಲ್ ನಿಧಾನಗೊಳಿಸಲು ಅಥವಾ ನಿಲ್ಲಿಸಲು ಡಿಸ್ಕ್ ನ ಘರ್ಷಣೆಯನ್ನು ರಚಿಸುವ ಪ್ಯಾಡ್‍‍ಗಳ ಮೇಲೆ ಅದು ಒತ್ತಡವನ್ನು ಅನ್ವಯಿಸುತ್ತದೆ. ಡಿಸ್ಕ್ ನಲ್ಲಿನ ಕ್ಯಾಲಿಪ್ಪರ್‍‍ಗಳ ಕಡಿತವು ಪ್ಯಾಡ್‍ಗಳ ಗಾತ್ರ ಅಥವಾ ಡಿಸ್ಕ್ ನ ಪ್ಯಾಡ್‍‍ಗಳ ಸಂಪರ್ಕದ ಪ್ರದೇಶವನ್ನು ಅವಲಂಬಿಸಿರುತ್ತದೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಡಿಸ್ಕ್ ಬ್ರೇಕ್‍ನ ಶಕ್ತಿಯನ್ನು ಹೆಚ್ಚಿಸಲು ಡ್ಯುಯಲ್ ಡಿಸ್ಕ್ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಈಗಿನ ಸೂಪರ್‍‍ಬೈಕ್‍‍ಗಳಲ್ಲಿ ದೊಡ್ದದಾದ ಮತ್ತು ಟ್ವಿನ್ ಡಿಸ್ಕ್ ಹಾಗೂ 4 ಪಾಡ್ ಕ್ಯಾಲಿಪರ್ ಅನ್ನು ಅಳವಡಿಸಲಾಗಿರುತ್ತದೆ. ಮಲ್ಟಿಪಲ್ ಪ್ಯಾಡ್‍‍ಗಳು ಡಿಸ್ಕ್ ನೊಂದಿಗೆ ಸಂಪರ್ಕಿಸುವ ಹಾಗೆ 4 ಪಾಡ್ ಕ್ಯಾಲಿಪರ್ ಅನ್ನು ತಯಾರಿಸಲಾಗುತ್ತದೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಡಿಸ್ಕ್ ಬ್ರೇಕ್‍ನ ಅನುಕೂಲತೆಗಳು

ವಾಹನವನ್ನು ನಿಲ್ಲಿಸುವ ಶಕ್ತಿ

ಡ್ರಮ್ ಬ್ರೇಕ್‍‍ಗೆ ಹೋಲಿಸಿದ್ದಲ್ಲಿ ಡಿಸ್ಕ್ ಬ್ರೇಕ್‍‍ಗಳು ಹೆಚ್ಚು ಸ್ಟಾಪಿಂಗ್ ಪವರ್ ಅನ್ನು ಪಡೆದಿರಲಿದೆ. ಡಿಸ್ಕ್ ಬ್ರೇಕ್‍ನ ಶಕ್ತಿಯನ್ನು ಹೆಚ್ಚಿಸಲು ದೊಡ್ಡದಾದ ಮತ್ತು ಮಲ್ಟಿಪಲ್ ಪ್ಯಾಡ್‍‍ಗಳನ್ನು ಕೂಡಿಸಬಹುದಾಗಿದ್ದು, ನಿಮ್ಮ ಬೈಕ್‍‍ನ ಬ್ರೇಕಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ಡ್ಯುಯಲ್ ಡಿಸ್ಕ್ ಬ್ರೇಕ್ ಅನ್ನು ಬಳಸುವುದು ಉತ್ತಮ.

MOST READ: ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಶಾಖ ಪ್ರಸರಣ (Heat Dissipation)

ಡಿಸ್ಕ್ ಬ್ರೇಕ್ ವ್ಹೀಲ್‍‍ಗಳ ಹೊರಗೆ ಬಳಸಿರುವ ಕಾರಣದಿಂದಾಗಿ ಡ್ರಮ್ ಬ್ರೇಕ್‍‍ಗಳಿಗಿಂತ ಬೇಗನೆ ತಣ್ಣಗಾಗುತ್ತದೆ. ಡ್ರಮ್ ಬ್ರೇಕ್‍‍ಗಳು ವ್ಹೀಲ್ ಒಳಗಡೆ ಇರುವ ಕಾರಣ ಅವು ಬೇಗನೆ ಹೀಟ್ ಆಗಬಲ್ಲ ಅವಕಾಶಗಳಿರುತ್ತದೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ವ್ಹೀಲ್‍‍ಗೆ ಹಾನಿ ಮಾಡುವುದಿಲ್ಲ

ಡ್ರಮ್ ಬ್ರೇಕ್‍ಗಳ ವಿಚಾರದಲ್ಲಿ ಅವು ಸ್ಪ್ರಿಂಗ್‍‍ನೊಂದಿಗೆ ವಿನ್ಯಾಸಗೊಳಿಸಲಾಗಿರುತ್ತದೆ. ಆದ್ದರಿಂದ ಅವುಗಳು ಹೆಚ್ಚು ಹೀಟ್ ಆಗಿ ವ್ಹೀಲ್‍‍ಗಳಿಗೆ ಹೆಚ್ಚು ಹಾನಿಯುಂಟು ಮಾಡುತ್ತದೆ. ಆದರೆ ಈ ತೊಂದರೆಯು ಡಿಸ್ಕ್ ಬ್ರೇಕ್‍‍ಗಳಲ್ಲಿ ಇರುವುದಿಲ್ಲ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ನಿರ್ವಹಣೆ

ಡಿಸ್ಕ್ ಬ್ರೇಕ್‍‍ನ ನಿರ್ವಹಣೆಯ ಕಾರ್ಯದಲ್ಲಿ ಕಡಿಮೆ ಶ್ರಮ ಹಾಕಬೇಕಾಗಿದ್ದು, ಅದನ್ನು ಶುದ್ಧಗೊಳಿಸುವಾಗ ಕೇವಲ ಡಿಸ್ಕ್ ಮತ್ತು ಪ್ಯಾಡ್‍‍ಗಳನ್ನು ಕೇವಲ ಪೇಪರ್‍‍ನಿಂದ ಒರೆಸಬಹುದು. ಆದರೆ ಡ್ರಮ್ ಬ್ರೇಕ್‍‍ನ ನಿರ್ವಹಣೆಯ ಸಮಯದಲ್ಲಿ ಹೆಚ್ಚು ಶ್ರಮ ಹಾಕಬೇಕಾಗಿದ್ದು ಅವುಗಳನ್ನು ಶುಚಿಗೊಳಿಸಲು ಪೂರ್ತಿ ವ್ಹೀಲ್ ಅನ್ನು ತೆಗೆಯಬೇಕಾಗುತ್ತದೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಕೈಗಟ್ಟುವ ಬೆಲೆಯಲ್ಲಿ ಸ್ಪೇರ್ ಪಾರ್ಟ್ಸ್

ಡಿಸ್ಕ್ ಮತ್ತು ಬ್ರೇಕ್ ಪ್ಯಾಡ್‍‍ಗಳು ಖರೀದಿ ಮಾಡಲು ಹೆಚ್ಚು ದುಬಾರಿಯಲ್ಲ, ಆದರೆ ಡ್ರಮ್ ಬ್ರೇಕ್‍‍ನಲ್ಲಿ ದೋಷ ಕಂಡು‍‍ಬಂದಲ್ಲಿ ಅದು ವ್ಹೀಲ್‍‍ಗಳಿಗಳಿಗೂ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಡ್ಯಾಮೇಜ್ ಆದ ವ್ಹೀಲ್ ಅನ್ನು ಬದಲಾಯಿಸಲು ಹೆಚ್ಚು ಖರ್ಚಾಗಬಹುದು.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಡಿಸ್ಕ್ ಬ್ರೇಕ್‍‍ನ ಅನಾನುಕೂಲತೆಗಳು

ವ್ಹೀಲ್ ಲಾಕಪ್

ತುರ್ತು ಪರಿಸ್ಥಿತಿಯಲ್ಲಿ ಹಠಾತನೆ ಬ್ರೇಕ್ ಹಿಡಿದಲ್ಲಿ ಡಿಸ್ಕ್ ಬ್ರೇಕ್‍‍ಗಳಲ್ಲಿ ಎಬಿಎಸ್ ಇಲ್ಲದಿರುವ ಕಾರಣ ಸ್ಕಿಡ್ ಆಗುತ್ತದೆ ಮತ್ತು ಅಪಘಾತಕ್ಕೆ ಕಾರಣವಾಗಬಹುದು.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ದುಬಾರಿ ಬೆಲೆ

ಡಿಸ್ಕ್ ಬ್ರೇಕ್ ಆಧಾರಿತ ಬೈಕ್‍‍ಗಳ ಬೆಲೆಯು ಮಾರುಕಟ್ಟೆಯಲ್ಲಿ ಸದ್ಯ ಡ್ರಮ್ ಬ್ರೇಕ್ ಬೈಕ್‌ಗಳಿಂತಲೂ ತುಸು ದುಬಾರಿ ಎನ್ನಿಸಲಿವೆ.

MOST READ: 23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಬ್ರೇಕ್ ವೈಫಲ್ಯ

ಬ್ರೇಕ್‍‍ನ ಪೈಪ್ ಬಹಿರಂಗಗೊಂಡಲ್ಲಿ ಅಥವಾ ಕೆಟ್ಟು ಹೋದಲ್ಲಿ ಡಿಸ್ಕ್ ಬ್ರೇಕ್‍‍ಗಳು ವೈಫಲ್ಯವಾಗುತ್ತವೆ ಹಾಗೂ ಅಪಘಾತವನ್ನುಂಟು ಮಾಡುವ ಸಾಧ್ಯತೆಗಳಿವೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಬ್ರೇಕ್ ಫ್ಯುಯಲ್ ನಿರ್ವಹಣೆ

ಬ್ರೇಕ್ ಬಹಳ ದಿನಗಳ ವರೆಗು ಬಳಸದಿದ್ದಲ್ಲಿ ಅವು ಬ್ರೇಕ್‍‍ನಲ್ಲಿನ ಫ್ಯುಯಲ್ ಜಿಗುಟು ಕಟ್ಟುತ್ತದೆ ಆದ್ದರಿಂದ ಅದು ಜಿಗುಟು ಕಟ್ಟಿಕೊಳ್ಳದಂತೆ ಅದನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಡಿಸ್ಕ್ ಬ್ರೇಕ್‍‍ನ ಅನಾನುಕೂಲತೆಗಳು ತೀರಾ ಕಡಿಮೆ. ಡ್ರಮ್ ಬ್ರೇಕ್‍‍ಗಳಿಗಿಂತ ಯಾವಾಗಲೂ ಡಿಸ್ಕ್ ಬ್ರೇಕ್‍‍ಗಳು ಉತ್ತಮವಾಗಿರುತ್ತದೆ ಮತ್ತು ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತದೆ. ಡಿಸ್ಕ್ ಬ್ರೇಕ್‍‍ಗಳು ನಿಮಗೆ ಹೆಚ್ಚು ವೆಚ್ಚವಾಗಬಹುದು ಆದರೆ ಅದು ನೀಡುವ ಸಾಮರ್ಥ್ಯಕ್ಕೆ ಹಣವು ಅಷ್ಟೇ ನೀಡಬೇಕಾಗುತ್ತದೆ. ಪ್ಯಾನಿಕ್ ಬ್ರೇಕಿಂಗ್ ಸಂದರ್ಭದಲ್ಲಿ ನಿಮ್ಮನು ನೀವು ಅಪಘಾತದಿಂದ ತಪ್ಪಿಸಿಕೊಳ್ಳಲು ಡಿಸ್ಕ್ ಬ್ರೇಕ್ ಅಥವಾ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಹೊಂದಿರುವ ಬೈಕ್‍‍ಗಳನ್ನು ಖರೀದಿ ಮಾಡಿ.

Most Read Articles

Kannada
Read more on auto tips
English summary
Why Are Disc Brakes Better Than Drum Brakes In Motorcycles.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more