ಆಟೋ ಎಕ್ಸ್ ಪೋ 2018: ಅಗ್ಗದ ದರದಲ್ಲಿ ಬಿಡುಗಡೆಯಾಗಲಿವೆ ಟಿಯಾಗೋ, ಟಿಗೋರ್ ಎಲೆಕ್ಟ್ರಿಕ್ ಕಾರುಗಳು
ಮಹತ್ವದ ಯೋಜನೆಯನ್ನು ಅನುಷ್ಠಾನಕ್ಕೆ ತಂದಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಸದ್ಯದಲ್ಲೇ ಸುಧಾರಿತ ತಂತ್ರಜ್ಞಾನ ಹೊಂದಿರುವ ಟಿಯಾಗೋ ಮತ್ತು ಟಿಗೋರ್ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಎಲೆಕ್ಟ್ರಿಕ್ ಕಾರುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಮಹತ್ವದ ಯೋಜನೆಯನ್ನು ಅನುಷ್ಠಾನಕ್ಕೆ ತಂದಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಸದ್ಯದಲ್ಲೇ ಸುಧಾರಿತ ತಂತ್ರಜ್ಞಾನ ಹೊಂದಿರುವ ಟಿಯಾಗೋ ಮತ್ತು ಟಿಗೋರ್ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಈ ಬಗ್ಗೆ 2018ರ ಆಟೋ ಎಕ್ಸ್ ಪೋದಲ್ಲಿ ಹೊಸ ಮಾದರಿಗಳನ್ನು ಪ್ರದರ್ಶಿಸಿದ ಟಾಟಾ ಮೋಟಾರ್ಸ್ ಸಂಸ್ಥೆಯು ಸಬ್ ಕಂಪ್ಯಾಕ್ಟ್ ಸೆಡಾನ್ ಆವೃತ್ತಿಯಾದ ಟಿಗೋರ್ ಮತ್ತು ಹ್ಯಾಚ್‌ಬ್ಯಾಕ್ ಮಾದರಿಯಾದ ಟಿಯಾಗೋ ಕಾರುಗಳನ್ನು ಎಲೆಕ್ಟ್ರಿಕ್ ವರ್ಷನ್‌ಗಳನ್ನು ಪರಿಚಯಿಸುತ್ತಿದೆ.

ಟಾಟಾ ಮೋಟಾರ್ಸ್‌ನ ಯುರೋಪಿನ್ ಟೆಕ್ನಿಕಲ್ ಸೆಂಟರ್(ಟಿಎಂಇಟಿಸಿ) ಕೇಂದ್ರದಲ್ಲಿ ಟಿಗೋರ್ ಮತ್ತು ಟಿಯಾಗೋ ಎಲೆಕ್ಟ್ರಿಕ್ ಆವೃತ್ತಿಗಳನ್ನು ಸಿದ್ಧಗೊಳಿಸಲಾಗಿದ್ದು, ಮುಂಬರುವ ಸೆಪ್ಟೆಂಬರ್ ಅಂತ್ಯಕ್ಕೆ ಖರೀದಿಗೆ ಲಭ್ಯಲಿರಲಿವೆ ಎಂಬ ಮಾಹಿತಿ ಹೊರಬಿದ್ದಿದೆ.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಿಗೋರ್ ಮತ್ತು ಟಿಯಾಗೋ ಆವೃತ್ತಿಗಳನ್ನೇ ಹೋಲುವ ಎಲೆಕ್ಟ್ರಿಕ್ ಆವೃತ್ತಿಗಳು ಕೇವಲ ಎಂಜಿನ್ ವಿಭಾಗದಲ್ಲಿ ಮಾತ್ರ ಬದಲಾವಣೆ ಕಾಣುತ್ತಿವೆ.

ಇನ್ನು ಹೊಸ ಕಾರುಗಳಲ್ಲಿ ತ್ರಿ ಫೇಸ್ ಎಸಿ ಇಂಟ್ರುಡಕ್ಷನ್ ಮೋಟಾರ್ ಒದಗಿಸಲಾಗಿದ್ದು, 40ಬಿಎಚ್‌ಪಿ ಉತ್ಪಾದನೆ ಮಾಡಬಲ್ಲವು. ಆದ್ರೆ ಪೂರ್ಣ ಪ್ರಮಾಣ ಚಾರ್ಜಿಂಗ್ ಮಾಡಲು ಎಷ್ಟು ಸಮಯಾವಕಾಶ ತೆಗೆದುಕೊಳ್ಳುತ್ತದೆ ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಒಟ್ಟಿನಲ್ಲಿ ಹೊಸ ಕಾರುಗಳನ್ನು ರೂ. 8 ಲಕ್ಷದಿಂದ ರೂ. 11 ಲಕ್ಷದವರೆಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ಹೊಸ ಕಾರುಗಳನ್ನು ಇವಿ ಟಿಗೋರ್, ಇವಿ ಟಿಯಾಗೋ ಬ್ಯಾಡ್ಜ್‌ನೊಂದಿಗೆ ರಸ್ತೆಗಿಳಿಯಲಿವೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
2030ರ ವೇಳೆಗೆ ದೇಶದಲ್ಲಿ ಡೀಸೆಲ್, ಪೆಟ್ರೋಲ್ ಕಾರುಗಳ ಮಾರಾಟ ಮತ್ತು ಉತ್ಪಾದನೆ ಸಂಪೂರ್ಣ ತಗ್ಗಲಿದ್ದು, ಈಗಿನಿಂದಲೇ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಟಾಟಾ ಸೇರಿದಂತೆ ಎಲ್ಲಾ ಕಾರು ಉತ್ಪಾದಕರು ಮುಂದಾಗಿರುವುದು ಗಮರ್ನಾಹ ಸಂಗತಿ.
Trending On DriveSpark Kannada:
ಬಿಡುಗಡೆಯಾದ ಹೊಚ್ಚ ಹೊಸ ಮಾರುತಿ ಸುಜುಕಿ ಸ್ಪಿಫ್ಟ್ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು..
ಭಾರತದಲ್ಲಿ ಅತ್ಯುತ್ತಮ ರೀ ಸೇಲ್ ಮೌಲ್ಯ ಹೊಂದಿರುವ ಟಾಪ್ 10 ಕಾರುಗಳು ಯಾವವು ಗೊತ್ತಾ?
ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...


Click it and Unblock the Notifications








