ಟೊಯೊಟಾ ಸಂಸ್ಥೆಯ ಮತ್ತೊಂದು ವಿನೂತನ ಕಾರು ಬಿಡುಗಡೆಗೆ ಸಿದ್ದ..!
ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಕಾರುಗಳು ಈಗಾಗಲೇ ಭಾರೀ ಬೇಡಿಕೆಯೊಂದಿಗೆ ಮುನ್ನಡೆ ಸಾಧಿಸುತ್ತಿದ್ದು, ಸದ್ಯದಲ್ಲೇ ಮತ್ತೆರಡು ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಒಂದು ವೇಳೆ ಈ ಹೊಸ ಎಸ್‌ಯುವಿ ಕಾರುಗಳು ನಿಗದಿತ ಅವಧಿಯಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಭಾರತದಲ್ಲಿ ಪ್ರಮುಖ ಎಸ್‌ಯುವಿ ಕಾರುಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ಹೌದು, ಟೊಯೊಟಾ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ವಿನೂತನ ವಿನ್ಯಾಸ ಹೊಂದಿರುವ ಸಿ-ಹೆಚ್ಆರ್ ಕ್ರಾಸ್ ಒವರ್ ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇದೀಗ ಹೊಸ ಕಾರಿನ ಎಂಜಿನ್ ವೈಶಿಷ್ಟ್ಯತೆಗಳ ಕುರಿತಾದ ಮಹತ್ವದ ವಿಚಾರಗಳನ್ನು ಹಂಚಿಕೊಂಡಿರುವ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಇದಲ್ಲದೇ ಕೆಳದ ಜೂನ್‌ದಲ್ಲಿ ಹೊಸ ಕಾರುಗಳ ಬಿಡುಗಡೆ ಬಗ್ಗೆ ಮಾತನಾಡಿದ್ದ ಟೊಯೊಟಾ ಕಿರ್ಲೋಸ್ಕರ್ ಇಂಡಿಯಾ ಎಂಡಿ ಅಕಿತೊ ತಾಚಿಬಾನಾ ಅವರು, 'ವಾಹನ ಉದ್ಯಮದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಗಾಗಿ ಸದ್ಯದಲ್ಲೇ ಎರಡು ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದೇವೆ ಎಂದಿದ್ದರು.

ಜೊತೆಗೆ ಬಿಡುಗಡೆಯಾಗಲಿರುವ ಹೊಸ ಕಾರುಗಳು 12 ರಿಂದ 16 ಲಕ್ಷ ಬೆಲೆ ಅಂತರದಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಕ್ರಾಸ್ ಒವರ್ ಕಾರುಗಳನ್ನು ಬಿಡುಗಡೆಗೊಳಿಸುವುದು ನಮ್ಮ ಮುಂದಿನ ಯೋಜನೆಗಳಾಗಿವೆ ಎಂಬ ಮಾಹಿತಿಯನ್ನು ನೀಡಿದ್ದರು.

ಇದಕ್ಕೆ ಪೂರಕ ಎನ್ನುವಂತೆ ಇದೀಗ ಸಿ-ಹೆಚ್ಆರ್ ಕಾರುಗಳ ಎಂಜಿನ್ ಮಾಹಿತಿಯನ್ನು ಹೊರಹಾಕಿದ್ದು, ಶಾರ್ಪ್ ಮತ್ತು ಎಡ್ಜ್ ಡಿಸೈನ್ ಹೊಂದಿರುವ ಈ ಕಾರು ಸ್ಲಿಕ್ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಪ್ರಿಮಿಯಂ ಸೌಲಭ್ಯಗಳೊಂದಿಗೆ ಹೊಂದಿರುವುದು ಕಾರಿನ ಹೊರಭಾಗದ ನೋಟವನ್ನು ಹೆಚ್ಚಿಸಿದೆ ಎನ್ನಬಹುದು.

ಇದಲ್ಲದೇ ಕಾರಿನಲ್ಲಿ ಸ್ಪೋರ್ಟಿ ವಿನ್ಯಾಸದ ಅಲಾಯ್ ವೀಲ್ಹ್‌ಗಳು, ಸಿ ಸೇಪ್ ಎಲ್ಇಡಿ ಟೈಲ್ ಲೈಟ್ಸ್, ರೂಫ್ ಮೌಂಟೆಡ್ ಸ್ಪಾಯ್ಲರ್ ಮತ್ತು ಮಸ್ಕ್ಯೂಲರ್ ಬಂಪರ್ ಜೊತೆ ಪ್ಲಾಸಿಕ್ಟ್ ಕ್ಯಾಡಿಂಗ್ ಹೊಂದಿದೆ. ಒಟ್ಟಿನಲ್ಲಿ ಕಾರಿನ ವಿನ್ಯಾಸಗಳು ಐಷಾರಾಮಿ ಕಾರಿನ ಹೋಲಿಕೆ ಪಡೆದಿವೆ ಎನ್ನಬಹುದು.
MOST READ: ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ಎಂಜಿನ್ ವೈಶಿಷ್ಟ್ಯತೆಗಳು
ಸದ್ಯ ಯುರೋಪ್ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಿರುವ ಸಿ-ಹೆಚ್ಆರ್ ಕಾರುಗಳ ಮಾದರಿಯಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿರುವ ಸಿ-ಹೆಚ್ಆರ್ ಕಾರುಗಳು 1.8-ಲೀಟರ್(1800 ಸಿಸಿ) ಪೆಟ್ರೋಲ್ ಹೈಬ್ರಿಡ್ ಎಂಜಿನ್‌ನೊಂದಿಗೆ 96.6-ಬಿಎಚ್‌ಪಿ ಮತ್ತು 142-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಇನ್ನು ಪೆಟ್ರೋಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರ್ ಪಡೆಯುವ ಹೈಬ್ರಿಡ್ ಮಾದರಿಯಾಗಿರುವ ಹಿನ್ನೆಲೆಯಲ್ಲಿ ಕಾರಿನ ಹಾರ್ಸ್ ಪವರ್ ಮತ್ತಷ್ಟು ಹೆಚ್ಚಿಸಲಿದ್ದು, 71-ಬಿಎಚ್‌ಪಿ ಮತ್ತು 163-ಬಿಎಚ್‌ಪಿ ಉತ್ಪಾದನೆ ಮಾಡಲಿವೆ ಎಂದು ಟೊಯೊಟಾ ಸಂಸ್ಥೆಯೇ ಹೇಳಿಕೊಂಡಿದೆಯೆಂತೆ.

ಕಾರಿನ ವಿಶೇಷತೆಗಳು
ಸಿ-ಹೆಚ್ಆರ್ ಕ್ರಾಸ್ ಒವರ್ ಕಾರುಗಳಲ್ಲಿ 8-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಕ್ರೂಸ್ ಕಂಟ್ರೋಲರ್ ಮತ್ತು ಲೆದರ್ ಸೀಟುಗಳ ಸೌಲಭ್ಯವಿದ್ದು, ಸುರಕ್ಷತೆಗಾಗಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೆನ್ ಡಿಪಾರ್ಚರ್ ಅಲರ್ಟ್, ಆಟೋಮ್ಯಾಟಿಕ್ ಹೈಬೀಮ್, ಪಾದಾಚಾರಿಗಳ ಬಗೆಗೆ ಮಾಹಿತಿ, ಎಬಿಎಸ್, ಆಲ್ಹ್ ವೀಲ್ಹ್ ಡಿಸ್ಕ್ ಬ್ರೇಕ್ ಹೊಂದಿರಲಿವೆ.

ಹೀಗಾಗಿ ಹೊಸ ಸಿ-ಹೆಚ್ಆರ್ ಕಾರು ಸಾಕಷ್ಟು ಆಕರ್ಷಣಿಯ ಮಾದರಿಯಲ್ಲಿ ಸಿದ್ದವಾಗಿರುವ ಕಾರು ಮಾದರಿಯಾಗಿದ್ದು, ಟೊಯೊಟಾ ಮತ್ತೊಂದು ಬಹುನೀರಿಕ್ಷಿತ ರಷ್ 7 ಸೀಟರ್ ಎಸ್‌ಯುವಿ ಕಾರುಗಳಿಂತ ಇದು ಕಡಿಮೆ ಬೆಲೆಗಳಲ್ಲಿ ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆಗಳಿವೆ.

ಕಾರಿನ ಬೆಲೆ ಮತ್ತು ಬಿಡುಗಡೆ (ಅಂದಾಜು)
ವರದಿಗಳ ಪ್ರಕಾರ ಹೊಸ ಸಿ-ಹೆಚ್ಆರ್ ಕಾರುಗಳು ಭಾರತದಲ್ಲಿ 2019ರ ಮಧ್ಯಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಕಾರಿನ ಬೆಲೆಯು ರೂ. 14 ಲಕ್ಷದಿಂದ ರೂ.18 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.
MOST READ: ಅಟಲ್ ಜೀ ಅವರು ಅಂಬಾಸಿಡರ್ ಬಿಟ್ಟು ಬಿಎಂಡಬ್ಲ್ಯು 7 ಸೀರಿಸ್ ಕಾರು ಏರಿದ್ದೇಕೆ ಗೊತ್ತಾ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಈ ಹಿನ್ನೆಲೆ ಜನಪ್ರಿಯ ಮಾದರಿಗಳಾದ ಹ್ಯುಂಡೈ ಕ್ರೇಟಾ, ರೆನಾಲ್ಟ್ ಕ್ಯಾಪ್ಚರ್, ಫೋರ್ಡ್ ಇಕೋ ಸ್ಪೋರ್ಟ್, ಮಾರುತಿ ಸುಜುಕಿ ವಿಟಾರಾ, ಜೀಪ್ ಕಂಪಾಸ್ ಹಿಂದಿಕ್ಕುವ ಉದ್ದೇಶದೊಂದಿಗೆ ಟೊಯೊಟಾ ಸಂಸ್ಥೆಯು ರಷ್ ಮತ್ತು ಸಿ-ಹೆಚ್‌ಆರ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಎನ್ನಬಹುದು.


Click it and Unblock the Notifications








