ಟೊಯೊಟಾ ಯಾರಿಸ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಫುಲ್ ಡಿಟೆಲ್ಸ್ ಇಲ್ಲಿದೆ..

Written By: Rahul TS

2018ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳುವ ಮೂಲಕ ಸೆಡಾನ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿರುವ ಟೊಯೊಟಾ ಯಾರಿಸ್ ಕಾರುಗಳು ಮೆ18 ಕ್ಕೆ ಬಿಡಗಡಗೊಳ್ಳಲ್ಲಿದ್ದು ಇದೀಗ ಯಾರಿಸ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ.

ಟೊಯೊಟಾ ಯಾರಿಸ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಫುಲ್ ಡಿಟೆಲ್ಸ್ ಇಲ್ಲಿದೆ..

ವರದಿಗಳ ಪ್ರಕಾರ ಟೊಯೊಟಾ ಯಾರಿಸ್ ಜೆ,ಜಿ,ವಿ ಹಾಗು ವಿಎಕ್ಸ್ ವೇರಿಯಂಟ್‍‍ಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಎಲ್ಲಾ ವೇರಿಯಂಟ್‍‍ನ ಕಾರುಗಳು 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 108 ಬಿಹೆಚ್‍ಪಿ ಹಾಗು 140ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಟೊಯೊಟಾ ಯಾರಿಸ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಫುಲ್ ಡಿಟೆಲ್ಸ್ ಇಲ್ಲಿದೆ..

ಎಂಜಿನ್‍ಗಳನ್ನು ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಟೊಯೊಟಾ ಕಾರಿನ ಟಾಪ್ ಎಂಡ್ ವೇರಿಯಂಟ್ ಆದ ವಿಎಕ್ಸ್ ಕಾರುಗಳು ಮ್ಯಾನುವಲ್ ಟ್ರಾನ್ಸ್ ಮಿಷನ್ ಅನ್ನು ಪಡೆಯದೆ ಸಿವಿಟಿ ಗೇರ್‍‍ಬಾಕ್ಸ್ ಅನ್ನು ಪಡೆದುಕೊಂಡಿವೆ.

ಟೊಯೊಟಾ ಯಾರಿಸ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಫುಲ್ ಡಿಟೆಲ್ಸ್ ಇಲ್ಲಿದೆ..

ಇದಲ್ಲದೆ ಟೊಯೊಟಾ ಯಾರಿಸ್ ಕಾರುಗಳು ಏಳು ಏರ್‍‍ಬ್ಯಾಗ್ಸ್, ಹಾಗು ಪ್ಯಾಂಥಮ್ ಬ್ರೌನ್, ವೈಲ್ಡ್ ಫೈರ್ ರೆಡ್, ಗ್ರೇ ಮೆಟಾಲಿಕ್, ಸಿಲ್ವರ್ ಮೆಟಾಲಿಕ್, ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ಮತ್ತು ಸೂಪರ್ ವೈಟ್ ಬಳ್ಳಗಳಲ್ಲಿ ಲಭ್ಯವಿರಲಿದೆ.

ಟೊಯೊಟಾ ಯಾರಿಸ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಫುಲ್ ಡಿಟೆಲ್ಸ್ ಇಲ್ಲಿದೆ..

ಟೊಯೊಟಾ 'ಜೆ' ವೇರಿಯಂಟ್‍ ವೈಶಿಷ್ಟ್ಯತೆಗಳು:

ಟೊಯೊಟಾ ಜೆ ವೇರಿಯಂಟ್ ಕಾರುಗಳು ಏಳು ಏರ್‍‍ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್, ಮುಂಭಾಗದಲ್ಲಿ ಹಾಗು ಹಿಂಭಾಗದಲ್ಲಿ ಡಿಸ್ಕ್ ಮತ್ತು ಡ್ರಮ್ ಬ್ರೇಕ್ಸ್, ಎಂಜಿನ್ ಇಮ್ಮೊಬಿಲೈಸರ್, ಸೆಂಟ್ರಲ್ ಲಾಕಿಂಗ್, ಪವರ್ ಸ್ಟೀರಿಂಗ್, ಟಿಲ್ಟ್ ಸ್ಟೀರಿಂಗ್ ಅಡ್ಜಸ್ಟ್ ಮೆಂಟ್, ಕೀಲೆಸ್ ಎಂಟ್ರಿ, ಪವರ್ ವಿಂಡೋ, ವಿದ್ಯುತ್‍‍ನಿಂದ ಅಡ್ಜಸ್ಟ್ ಮಾಡಬಲ್ಲ ಒಆರ್‍‍ವಿಎಂ, ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್, ಡ್ರೈವರ್ ಸೀಟ್ ಹೈಟ್ ಅಡ್ಜಸ್ಟ್ ಮೆಂಟ್, ಕೂಲ್ಡ್ ಗ್ಲೋವ್ ಬಾಕ್ಸ್, ವಿವಿದ ಮಾಹಿತಿಯನ್ನು ತಿಳಿಸಿಕೊಡುವ ಎಲ್ಇಡಿ ಇಂಸ್ಟ್ರೂಮೆಂಟ್ ಕ್ಲಸ್ಟರ್, ರೀರ್ ಆರ್ಮ್‍ರೆಸ್ಟ್, ನಾಲ್ಕು ಸ್ಪೀಕರ್‍‍ಳುಳ್ಳ ಆಡಿಯೊ ಸಿಸ್ಟಂ ಮತ್ತು ಏಸಿಯನ್ನು ಪಡೆದುಕೊಂಡಿವೆ.

ಟೊಯೊಟಾ ಯಾರಿಸ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಫುಲ್ ಡಿಟೆಲ್ಸ್ ಇಲ್ಲಿದೆ..

ಟೊಯೊಟಾ 'ಜಿ' ವೇರಿಯಂಟ್‍ ವೈಶಿಷ್ಟ್ಯತೆಗಳು:

ಟೊಯೊಟಾ ಜಿ ವೇರಿಯಂಟ್‍ ಕಾರುಗಳು ರೀರ್ ಪಾರ್ಕಿಂಗ್ ಸೆನ್ಸಾರ್, ಮುಂಭಾಗ ಹಾಗು ಹಿಂಭಾಗದಲ್ಲಿ ಫಾಗ್ ಲ್ಯಾಂಪ್ಸ್, ಆಟೋ ಡೋರ್ ಲಾಕ್ ಹಾಗು ಅನ್‍‍ಲಾಕ್ ಸೆನ್ಸಾರ್ಸ್, ರೀರ್ ಡೀಫೋಗರ್, 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ, ನಾಲ್ಕು ಸ್ಪೀಕರ್‍‍ಗಳು, ಕ್ರೋಮ್ ಗ್ರಿಲ್, ವಿದ್ಯುತ್‍ ಒಆರ್‍‍ವಿಎಂ, ಸ್ಟೀರಿಂಗ್ ಮೌನ್‍‍ಟೆಡ್ ಆಡಿಯೊ ಕಂಟ್ರೋಲ್ಸ್, ಸ್ಮಾರ್ಟ್ ಎಂಟ್ರಿ ಹಾಗು ಪುಶ್ ಬಟನ್ ಸ್ಟಾರ್ಟ್ ವೈಶಿ ಷ್ಟ್ಯತೆಗಳನ್ನು ಪಡೆದಿದೆ.

ಟೊಯೊಟಾ ಯಾರಿಸ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಫುಲ್ ಡಿಟೆಲ್ಸ್ ಇಲ್ಲಿದೆ..

ಟೊಯೊಟಾ 'ವಿ' ವೇರಿಯಂಟ್‍ ವೈಶಿಷ್ಟ್ಯತೆಗಳು:

ಟೊಯೊಟಾ 'ವಿ' ವೇರಿಯಂಟ್‍ ಕಾರಿನ ನಾಲ್ಕು ಚಕ್ರಗಳಿಗೆ ಡಿಸ್ಕ್ ಬ್ರೇಕ್ಸ್, ಆರು ಸ್ಪೀಕರ್‍‍ಗಳುಳ್ಳ ಏಳು ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ, ಕ್ರೂಸ್ ಕಂಟ್ರೋಲ್, ಎಲ್ಇಡಿ ಟೈಲ್‍‍ಲ್ಯಾಂಪ್ಸ್, ಫಾಲೊ ಮೋ ಫೀಚರ್ ಸೇರಿತ ಆಟೋ ಹೆಡ್‍‍ಲ್ಯಾಂಪ್‍ಗಳು, 15 ಇಂಚಿನ ಅಲಾಯ್ ಚಕ್ರಗಳು, ಮೊಂಭಾಗ ಹಾಗು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್‍‍ಗಳು ಹಾಗು ರೈನ್ ಸೆನ್ಸಿಂಗ್ ವೈಪರ್‍‍ನಂತಹ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಟೊಯೊಟಾ ಯಾರಿಸ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಫುಲ್ ಡಿಟೆಲ್ಸ್ ಇಲ್ಲಿದೆ..

ಟೊಯೊಟಾ ಟಾಪ್ ಎಂಡ್ 'ವಿಎಕ್ಸ್' ವೇರಿಯಂಟ್‍ ವೈಶಿಷ್ಟ್ಯತೆಗಳು:

ಟೊಯೊಟಾ ಟಾಪ್ ಎಂಡ್ 'ವಿಎಕ್ಸ್' ವೇರಿಯಂಟ್‍ ಕಾರುಗಳಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಪ್ಯಾಡಲ್ ಶಿಫ್ಟರ್ಸ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (VSC), ಹಿಲ್ ಸ್ಟಾರ್ಟ್ ಅಸ್ಸಿಸ್ಟ್, ಲೆಧರ್ ಸೀಟ್ಸ್, ಎಂಟು ಮಾದರಿಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್‍, ರೀರ್ ಸನ್‍‍ಶೈನ್, ಎಲ್ಇಡಿ ಡಿಎಲ್‍ಆರ್ ಹಾಗು ಕ್ರೋಮ್ ಡೋರ್ ಹ್ಯಾಂಡಲ್‍‍ನಂತಹ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಟೊಯೊಟಾ ಯಾರಿಸ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಫುಲ್ ಡಿಟೆಲ್ಸ್ ಇಲ್ಲಿದೆ..

ಗ್ರಾಹಕರು ಟೊಯೊಟಾ ಸಂಸ್ಥೆಯ ಯಾರಿಸ್ ಸೆಡಾನ್ ಕಾರುಗಳ ಖರೀದಿಗಾಗಿ ರೂ. 50 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಮಾಡಬಹುದಾಗಿದ್ದು, ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ 10 ರಿಂದ 12 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದೆ.

ಟೊಯೊಟಾ ಯಾರಿಸ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಫುಲ್ ಡಿಟೆಲ್ಸ್ ಇಲ್ಲಿದೆ..

ಸೆಡಾನ್ ಕಾರುಗಳಲ್ಲೇ ವಿಶೇಷ ವಿನ್ಯಾಸಗಳನ್ನು ಹೊಂದಿರುವ ಯಾರಿಸ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಸಿಯಾಜ್, ಸ್ಕೋಡಾ ರ‍್ಯಾಪಿಡ್, ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಇದು ತೀವ್ರ ಪೈಪೋಟಿ ನೀಡಲಿದ್ದು, ಪ್ರಯಾಣಿಕ ಕಾರು ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ವಿಶ್ವಾಸದಲ್ಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಉದ್ಯಮಿ ಮುಖೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ..

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ಪ್ರಪಂಚದಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸುವ ವಿಮಾನಗಳು ಯಾವವು?

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

Read more on toyota sedan
English summary
Toyota Yaris Details Leaked Ahead Of Launch.
Story first published: Wednesday, April 11, 2018, 15:50 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more