ಉದ್ಯಮಿ ಮುಖೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ..

ದೇಶದ ಅತಿ ಶ್ರೀಮಂತ ಉದ್ಯಮಿಗಳಲ್ಲಿ ಓರ್ವರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕರಾಗಿರುವ ಮುಖೇಶ್ ಅಂಬಾನಿ ಅವರು ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮವಾಗಿ ನಿಂತಿದ್ದಾರೆ. ಹ್ಹಾಂ ಅದೇಗೆ ಅಂತೀರಾ? ಈ ಸ್ಟೋರಿ ತಪ್ಪದೇ ಓದಿ...

By Praveen Sannamani

ಝೆಡ್ ಪ್ಲಸ್ ಸೆಕ್ಯೂರಿಟಿ ಸುರಕ್ಷತೆಯನ್ನು ಪಡೆದುಕೊಂಡ ಕೆಲವೇ ಕೆಲವು ಉದ್ಯಮಿಗಳಲ್ಲಿ ಪ್ರಪಂಚದ ಅತಿ ದೊಡ್ಡ ಉದ್ಯಮ ಸಂಸ್ಥೆಯಾಗಿರುವ ರಿಲಯನ್ಸ್ ಕಂಪನಿಯ ಒಡೆಯ ಮುಖೇಶ್ ಅಂಬಾನಿ ಕೂಡ ಒಬ್ಬರು. ಅವರ ಬೆಂಗಾವಲು ಪಡೆಯು ದೇಶದ ಪ್ರಧಾನಿಗೆ ನೀಡುತ್ತಿರುವ ಭದ್ರತೆಗೆ ಸಮಾನಾಗಿದೆ ಅಂದ್ರೆ ನೀವು ನಂಬಲೇಬೇಕು.

ಉದ್ಯಮಿ ಮುಖೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ..

ಹೌದು, ತಮ್ಮ ಖಾಸಗಿ ಭದ್ರತೆಯ ವಿಚಾರದಲ್ಲಿ ಪ್ರಧಾನಿ ಮೋದಿಯವರಿಗೆ ಸಮವಾಗಿ ನಿಂತಿರುವ ಮುಖೇಶ್ ಅಂಬಾನಿ, ಈ ಹಿಂದೆ ಅತಿ ದುಬಾರಿ ಹಾಗೂ ಅಷ್ಟೇ ಗರಿಷ್ಠ ಭದ್ರತೆಯನ್ನು ನೀಡಲು ಸಮರ್ಥವಾಗಿರುವ ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ ಕಾರು ಖರೀದಿಸಿದ್ದರು. ಇದೀಗ ತಮ್ಮ ಭದ್ರತೆಯಲ್ಲಿ ಬದಲಾವಣೆ ತಂದಿರುವ ಮುಖೇಶ್ ಅಂಬಾನಿಯವರು ಹೈ ಸೆಕ್ಯೂರಿಟಿ ನೀಡಬಲ್ಲ ಕಸ್ಟಮೈಜ್ಡ್ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿಸಿದ್ದಾರೆ.

ಉದ್ಯಮಿ ಮುಖೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ..

ನಮಗೀಗಾಗಲೇ ಗೊತ್ತಿರುವ ಹಾಗೆ ಸುಮಾರು ರೂ 8.5 ಕೋಟಿ ವೆಚ್ಚದ 7 ಸರಣಿಯ ಬಿಎಂಡಬ್ಲ್ಯೂ ವಾಹನ ಈಗಾಗಲೇ ಶಸ್ತ್ರಸಜ್ಜಿತವಾಗಿ ಬೆಂಗಾವಲು ಪಡೆಯಾಗಿ ಅಂಬಾನಿಯ ರೋಲ್ಸ್ ರೊಯ್ಸ್ ಕಾರಿನ ಹಿಂದೆ ಸುತ್ತುತ್ತಿರುತ್ತದೆ. ಆದರೆ ನಾವು ಈಗ ಹೇಳ ಹೊರಟಿರುವ ವಿಚಾರ ಬೆಂಗಾವಲು ಪಡೆಯಲ್ಲಿ ಸೇರ್ಪಡೆಯಾಗಿರುವ ಹೊಸ ಕಸ್ಟಮೈಜ್ಡ್ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬಗೆಗೆ.

ಉದ್ಯಮಿ ಮುಖೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ..

ಹತ್ತು ಹಲವು ಸುಧಾರಿತ ಮಾದರಿಯ ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ ಈ ಕಸ್ಟಮೈಜ್ಡ್ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಮುಖೇಶ್ ಅಂಬಾನಿಯವರು ಬೆಂಗಾವಲು ಪಡೆಯನ್ನು ಹೆಚ್ಚಿಸಲು ಖರೀದಿಸಲಾಗಿದ್ದು, ಬೈಕಿನ ಫ್ಯೂಲ್ ಟ್ಯಾಂಕ್ ಮತ್ತು ಹಿಂಬದಿಯ ಲಗೇಜ್ ಬಾಕ್ಸ್ ಮೇಲೆ ಪೊಲೀಸ್ ಚಿಹ್ನೆ ಇರಿಸಲಾಗಿದೆ.

ಉದ್ಯಮಿ ಮುಖೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ..

ಜೊತೆಗೆ ಬೈಕಿನ ಮುಂಭಾಗದಲ್ಲಿ ವಿಶೇಷ ಮಾದರಿಯ ಡಿಸೈನ್ ಕೂಡಾ ಇದ್ದು, ಅರಾಮದಾಯಕ ಪ್ರಯಾಣಕ್ಕೆ ಅನುಕೂಲಕರವಾಗುವಂತೆ ಸೀಟುಗಳ ವಿನ್ಯಾಸದಲ್ಲೂ ಬದಲಾವಣೆ ತರಲಾಗಿದೆ. ಆದರೇ ಈ ಬೈಕ್‌ಗಳ ಕಸ್ಟಮೈಜ್ಡ್ ವಿನ್ಯಾಸಕ್ಕಾಗಿ ಎಷ್ಟು ಖರ್ಚಾಗಿದೆ ಎಂಬ ಯಾವುದೇ ಮಾಹಿತಿ ದೊರೆತಿಲ್ಲ.

ಉದ್ಯಮಿ ಮುಖೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ..

ಮುಂಬೈ ಮೂಲದ ರೋಡ್ ರೇಜ್ ಕಸ್ಟಮ್ ಬಿಲ್ಡ್ ಎನ್ನುವ ಆಟೋ ಮೊಬೈಲ್ ಸಂಸ್ಥೆಯೊಂದು ಈ ಕಸ್ಟಮೈಜ್ಡ್ ಬೈಕ್‌ಗಳನ್ನು ಸಿದ್ದಪಡಿಸಿದ್ದು, ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಾ ಬೈಕ್‌ಗಳನ್ನೇ ಕಸ್ಟಮೈಜ್ಡ್ ಮಾಡಲಾಗಿದೆ.

ಉದ್ಯಮಿ ಮುಖೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ..

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಮುಖೇಶ್ ಅಂಬಾನಿಯವರೇ ತಮ್ಮ ಸ್ವಂತ ಖರ್ಚಿನಲ್ಲೇ ಈ ರೀತಿಯ ಝೆಡ್ ಪ್ಲಸ್ ಸೆಕ್ಯೂರಿಟಿ ಸೌಲಭ್ಯ ಒದಗಿಸಿಕೊಂಡಿದ್ದು, ಇದಕ್ಕಾಗಿಯೇ ಅವರು ಪ್ರತಿ ತಿಂಗಳಿಗೆ 20 ಲಕ್ಷಕ್ಕಿಂತಲೂ ಹೆಚ್ಚು ಖರ್ಚು ಮಾಡುವ ಮೂಲಕ ಭಾರೀ ಭದ್ರತೆ ನಿಯೋಜಿಸಿಕೊಂಡಿದ್ದಾರೆ.

ಉದ್ಯಮಿ ಮುಖೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ತಾಂತ್ರಿಕ ದೋಷದಿಂದಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಹೊಸ ಫೋರ್ಡ್ ಎಂಡೀವರ್...

ಅಂಬಾನಿ ಮಗನ ಕಾರಿನಲ್ಲಿರುವ ಈ ಗಡಿಯಾರದ ಬೆಲೆ ಕೇವಲ 1.95 ಕೋಟಿ !! ಇನ್ನು ಈ ಕಾರಿನ ಬೆಲೆ ಕೇಳ್ಬೇಡಿ

ರಸ್ತೆ ನಿಯಮ ಉಲ್ಲಂಘಿಸುವರಿಗೆ ಕಾದಿದೆ ಮಾರಿಹಬ್ಬ- ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ಗೊತ್ತಾ?

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

Most Read Articles

Kannada
Read more on mukesh ambani police
English summary
Mukesh Ambani Security Detail — Adds Two Customised Royal Enfield Bikes To His Motorcade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X