Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮುಖೇಶ್ ಅಂಬಾನಿ ಬಳಿಯಿರುವ ದುಬಾರಿ ಕಾರುಗಳಿವು
ಭಾರತದ ಅತಿ ದೊಡ್ಡ ಶ್ರೀಮಂತರಾದ ಮುಖೇಶ್ ಅಂಬಾನಿಯವರ ಬಳಿ ಅನೇಕ ದುಬಾರಿ ಬೆಲೆಯ ಕಾರುಗಳಿವೆ. ಅಂಬಾನಿ ಕುಟುಂಬದವರ ಬಳಿ ಅನೇಕ ಕಾರುಗಳಿದ್ದು, ಅವುಗಳ ಪೈಕಿ ಹಲವು ಕಾರುಗಳ ಬಗ್ಗೆ ಬಹುತೇಕ ಜನರಿಗೆ ಗೊತ್ತಿಲ್ಲ.

ಬೇರೆ ಬೇರೆ ಕಾರುಗಳ ಜೊತೆಗೆ ಅಂಬಾನಿ ಕುಟುಂಬ ಅನೇಕ ಬಾರಿ ಕಾಣಿಸಿಕೊಂಡಿದೆ. ಭಾರತದ ಅತಿ ದೊಡ್ಡ ಶ್ರೀಮಂತ ಕುಟುಂಬವಾದ ಅಂಬಾನಿ ಕುಟುಂಬದವರ ಬಳಿ ಇರುವ ಕಾರುಗಳ ಪಟ್ಟಿಯನ್ನು ನಿಮಗಾಗಿ ನೀಡುತ್ತಿದ್ದೇವೆ.

ಮರ್ಸಿಡಿಸ್ ಬೆಂಝ್ ಎಸ್ ಗಾರ್ಡ್
ಬೆಲೆ ಸುಮಾರು ರೂ.9 ಕೋಟಿ
ಮುಖೇಶ್ ಅಂಬಾನಿರವರು ಹೆಚ್ಚಾಗಿ ಶಸ್ತ್ರ ಸಜ್ಜಿತವಾದ ಕಾರುಗಳೊಂದಿಗೆ ಓಡಾಡುತ್ತಾರೆ. ಬಹುತೇಕ ಜನರು ಶಸ್ತ್ರ ಸಜ್ಜಿತವಾದ ಕಾರನ್ನು ಹೊಂದುವಾಗ ಒಂದೇ ಕಾರಿಗೆ ಆದ್ಯತೆ ನೀಡುತ್ತಾರೆ. ಆದರೆ ಮುಖೇಶ್ ಅಂಬಾನಿಯವರ ಬಳಿ ಈ ರೀತಿಯ ಮೂರು ಕಾರುಗಳಿದ್ದು, ಹೆಚ್ಚಾಗಿ ಎರಡು ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ವೀಡಿಯೊದಲ್ಲಿ ತೋರಿಸಿರುವ ಕಾರು ಹೊಸದಾಗಿ ಖರೀದಿಸಿರುವ ಕಾರ್ ಆಗಿದ್ದು, ಈ ಕಾರು ಮರ್ಸಿಡಿಸ್ ಬೆಂಝ್ ಡಬ್ಲ್ಯು221 ಎಸ್600 ಸೆಡಾನ್ ಕಾರಿನ ಮೇಲೆ ಆಧಾರವಾಗಿದೆ.
ಈ ಕಾರು ಅಂಬಾನಿಯವರ ಗ್ಯಾರೇಜ್‍ನಲ್ಲಿರುವ ಅತಿ ದುಬಾರಿಯಾದ ಕಾರ್ ಆಗಿದ್ದು, ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗಿದೆ. ಈ ಕಾರಿನಲ್ಲಿ ವಿಆರ್9 ಲೆವೆಲ್‍ನ ಭದ್ರತೆ ಒದಗಿಸಲಾಗಿದ್ದು, ಈ ಕಾರಿನ ಮೇಲೆ ಯಾವುದೇ ರೀತಿಯ ದಾಳಿ ನಡೆದರೂ ಎದುರಿಸಲು ಸಮರ್ಥವಾಗಿದೆ. ಈ ಕಾರಿನ ಮೇಲೆ ಬಾಂಬ್ ಬ್ಲಾಸ್ಟ್ ಆದರೂ, ಗ್ರೆನೇಡ್ ದಾಳಿ ನಡೆದರೂ ಒಳಗಿರುವವರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಈ ಕಾರಿನಲ್ಲಿ 12 ಸಿಲಿಂಡರ್‍ನ ಬೈ ಟರ್ಬೊಚಾರ್ಜ್ಡ್ ಎಂಜಿನ್‍ಯಿದ್ದು, 517 ಬಿಹೆಚ್‍ಪಿ ಹಾಗೂ 830 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನ ನಿರ್ದಿಷ್ಟವಾದ ಬೆಲೆಯು ಇದರಲ್ಲಿ ಅಳವಡಿಸಲಾಗುವ ಫೀಚರ್‍ಗಳ ಮೇಲೆ ಅವಲಂಬಿಸಿದೆ. ಆದ ಕಾರಣ ಈ ಕಾರಿನ ನಿರ್ದಿಷ್ಟ ಬೆಲೆಯು ತಿಳಿದಿಲ್ಲ.

ರೋಲ್ಸ್ ರಾಯ್ಸ್ ಫಾಂಟಮ್ ಡ್ರಾಪ್ ಹೆಡ್ ಕೂಪೆ
ಬೆಲೆ ಅಂದಾಜು: ರೂ.8.84 ಕೋಟಿ
ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿಯವರು ಅತಿ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಫಾಂಟಮ್ ಡಿಹೆಚ್‍ಸಿ ಕಾರನ್ನು ಖರೀದಿಸಿದ್ದಾರೆ. ಈ ಕಾರು ಭಾರತದಲ್ಲಿ ಅಪರೂಪವಾಗಿ ಕಾಣುವ ಕಾರ್ ಆಗಿದ್ದು, ಭಾರತದಲ್ಲಿ ಈ ಮಾದರಿಯ ಕೇವಲ ಆರು ಕಾರುಗಳಿವೆ. ಅಂಬಾನಿಯವರ ಬಳಿಯಿರುವ ಈ ಕಾರಿನ ಬಾಡಿಯು ಬಿಳಿ ಬಣ್ಣದಲ್ಲಿದ್ದು, ಕೆಂಪು ರೂಫ್ ಹೊಂದಿದೆ. ಇದು ಮಾಡಿಫೈಡ್ ಮಾಡಿರುವ ಕಾರ್ ಆಗಿದೆ.
ಈ ಕಾರಿನಲ್ಲಿ 6.8 ಲೀಟರಿನ ವಿ12 ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್‍ಯಿದ್ದು, 460 ಬಿಹೆಚ್‍ಪಿ ಹಾಗೂ 720 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಭಾರತದಲ್ಲಿರುವ ದುಬಾರಿಯಾದ ಕನ್ವರ್ಟಬಲ್ ಕಾರ್ ಆಗಿದೆ.

ಬಿಎಂಡಬ್ಲ್ಯು 7 ಸೀರಿಸ್ ಹೈ ಸೆಕ್ಯೂರಿಟಿ
ಅಂದಾಜು ಬೆಲೆ ರೂ.8.5 ಕೋಟಿ
ಬಿಎಂಡಬ್ಲ್ಯು 7 ಸೀರಿಸ್‍ನ ಹೈ ಸೆಕ್ಯೂರಿಟಿ ಕಾರು, ನಮ್ಮ ದೇಶದ ಪ್ರಧಾನ ಮಂತ್ರಿಗಳು ಓಡಾಡುವ ಕಾರ್ ಆಗಿದೆ. ಈ ಕಾರು ಸಹ ಅತಿ ಹೆಚ್ಚಿನ ಭದ್ರತೆಯನ್ನು ಹೊಂದಿದೆ. ಈ ಕಾರಿನಲ್ಲಿರುವ ಟೆಕ್ನಾಲಜಿಯು ಹೈ ಸೆಕ್ಯೂರಿಟಿ 760 ಎಲ್‍ಐ ಟಾಪ್ ಮಾದರಿಯ ಕಾರಿನ ಮೇಲೆ ಅವಲಂಬಿತವಾಗಿದೆ. ಬಿಎಂಡಬ್ಲ್ಯು ಕಂಪನಿಯು ಈ ಕಾರಿನಲ್ಲಿ ಯಾವ ರೀತಿಯಲ್ಲಿ ಭದ್ರತೆ ಅಳವಡಿಸಿಯೆಂದರೆ, ಈ ಕಾರು ಮಾಮೂಲಿಯಾಗಿರುವ ರೆಗ್ಯುಲರ್ 7 ಸೀರಿಸ್‍ನ ಕಾರಿನಂತೆಯೇ ಕಾಣುತ್ತದೆ. ಯಾವುದೇ ರೀತಿಯ ವ್ಯತ್ಯಾಸವು ಕಾಣಿಸುವುದಿಲ್ಲ.
ಬಿಎಂಡಬ್ಲ್ಯು 7 ಸೀರಿಸ್ ಕಾರಿನಲ್ಲಿ ವಿಆರ್7 ಬ್ಯಾಲಿಸ್ಟಿಕ್ ಭದ್ರತೆಯನ್ನು ಅಳವಡಿಸಲಾಗಿದ್ದು, ಹೆಚ್ಚು ತೀವ್ರತೆಯಿರುವ 17 ಕೆ.ಜಿ ತೂಕದ ಟಿಎನ್‍ಟಿ ಬಾಂಬ್‍ಗಳು ಸಿಡಿದರೂ ಕಾರಿಗೆ ಯಾವುದೇ ಹಾನಿಯಾಗುವುದಿಲ್ಲ. ಈ ಕಾರಿನಲ್ಲಿರುವ ಪ್ರತಿಯೊಂದು ಬಾಗಿಲುಗಳು ಸುಮಾರು 150 ಕೆ.ಜಿಯಷ್ಟು ತೂಕ ಹೊಂದಿವೆ. ಈ ಕಾರಿನಲ್ಲಿ ಹೊಸ ಬಗೆಯ ಫ್ಯೂಯಲ್ ಟ್ಯಾಂಕ್‍ಯಿದ್ದು, ಈ ಕಾರು ಫ್ಲಾಟ್ ಟಯರ್‍ಗಳಲ್ಲೂ ಸಹ ಚಲಿಸುತ್ತದೆ.

ರೋಲ್ಸ್ ರಾಯ್ಸ್ ಕಲಿನನ್
ಅಂದಾಜು ಬೆಲೆ: ರೂ 6.95 ಕೋಟಿ
ರೋಲ್ಸ್ ರಾಯ್ಸ್ ಕಲಿನನ್ ಕಾರು ಅಂಬಾನಿಯವರ ಗ್ಯಾರೇಜ್‍ನಲ್ಲಿ ಬಂದಿಳಿದ, ಭಾರತದ ಮೊದಲ ಕಲಿನನ್ ಕಾರ್ ಆಗಿದೆ. ಈ ಕಾರಿನಲ್ಲಿ ಅಂಬಾನಿ ಕುಟುಂಬವು ಹೆಚ್ಚು ಓಡಾಡದೇ ಇದ್ದರೂ, ಅಂಬಾನಿ ಕುಟುಂಬದವರ ಬಳಿಯಿರುವ ಲ್ಯಾಂಡ್ ರೋವರ್ ಡಿಸ್ಕವರಿ, ಬಿಎಂಡಬ್ಲ್ಯು ಎಕ್ಸ್ 5 ಕಾರುಗಳು ಈ ಕಾರಿಗೆ ಭದ್ರತಾ ವಾಹನಗಳಾಗಿ ಓಡಾಡುತ್ತವೆ. ಕಲಿನನ್ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.6.95 ಕೋಟಿಗಳಾಗಿದೆ.
ಈ ಕಾರು ಭಾರತದ ಮಾರುಕಟ್ಟೆಯಲ್ಲಿರುವ ಅತಿ ದುಬಾರಿ ಬೆಲೆಯ ಎಸ್‍ಯುವಿ ಕಾರ್ ಆಗಿದೆ. ಈ ಕಾರಿಗೆ ಇನ್ನೂ ಹೆಚ್ಚಿನ ಲಗ್ಷುರಿ ಫೀಚರ್ಸ್ ಹಾಗೂ ಅನೇಕ ಆಕ್ಸೆಸರೀಸ್‍ಗಳನ್ನು ಅಳವಡಿಸಿದ ನಂತರ ಬೆಲೆಯು ಇನ್ನೂ ಹೆಚ್ಚಾಗಲಿದೆ. ಈ ಕಾರಿನಲ್ಲಿ 6.8 ಲೀಟರಿನ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್‍ಯಿದ್ದು, 560 ಬಿಹೆಚ್‍ಪಿ ಹಾಗೂ 850 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 8 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹಾಗೂ 4x4 ಸಿಸ್ಟಂ ಹೊಂದಿದೆ.

ಬೆಂಟ್ಲಿ ಬೆಂಟಾಯ್ಗ
ಅಂದಾಜು ಬೆಲೆ ರೂ 4.42 ಕೋಟಿ
ಮುಖೇಶ್ ಅಂಬಾನಿಯವರ ಕುಟುಂಬವು ಭಾರತದಲ್ಲಿ ಮೊದಲ ಬಾರಿಗೆ ಬಂದಿಳಿದ ಅದ್ಭುತವೆನಿಸುವಂತಹ ಬ್ರಿಟಿಷ್ ರೇಸಿಂಗ್‍ನ ಗ್ರೀನ್ ಬಣ್ಣವನ್ನು ಹೊಂದಿರುವ ಬೆಂಟ್ಲಿ ಬೆಂಟಾಯ್ಗ ಕಾರ್ ಅನ್ನು ಹೊಂದಿದೆ. ಆಕಾಶ್ ಅಂಬಾನಿಯವರು ಅನೇಕ ಬಾರಿ ಈ ಕಾರ್ ಅನ್ನು ಚಲಾಯಿಸುವುದನ್ನು ನೋಡಲಾಗಿದೆ. ಈ ಕಾರಿನಲ್ಲಿ 6.0 ಲೀಟರಿನ ಡಬ್ಲ್ಯು12 ಎಂಜಿನ್‍ಯಿದ್ದು, 600 ಬೆಹೆಚ್‍ಪಿ ಹಾಗೂ 900 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.
ಈ ಕಾರು 0-100 ಕಿ.ಮೀ ವೇಗವನ್ನು ಕೇವಲ 4.1 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಅಂಬಾನಿಯವರ ಕುಟುಂಬವು ವಿ12 ಎಂಜಿನ್ ಹೊಂದಿರುವ ಬೆಂಟ್ಲಿ ಬೆಂಟಾಯ್ಗ ಕಾರ್ ಅನ್ನು ಸಹ ಹೊಂದಿದೆ. ಈ ಕಾರಿನ ಬೆಲೆಯು ಸುಮಾರು ರೂ. 3.8 ಕೋಟಿಗಳಾಗಿದೆ.

ಲ್ಯಾಂಬೊರ್ಗಿನಿ ಉರುಸ್
ಅಂದಾಜು ಬೆಲೆ ರೂ. 3 ಕೋಟಿ
ಅಂಬಾನಿಯವರ ಮಕ್ಕಳ ಬಳಿಯಿರುವ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‍ವಿಆರ್ ಎಸ್‍ಯುವಿಯ ಬೆಲೆಯು ರೂ 3.5 ಕೋಟಿಗಳವರೆಗೆ ಇದೆ. ಅಂಬಾನಿಯವರ ಬಳಿಯಿರುವ ಲ್ಯಾಂಬೊರ್ಗಿನಿ ಉರುಸ್ ಕಾರಿನ ಮಾದರಿ ಯಾವುದು ಎಂದು ನಿರ್ದಿಷ್ಟವಾಗಿ ತಿಳಿಯದೇ ಇರುವ ಕಾರಣ ಬೆಲೆಯನ್ನು ಅಂದಾಜು ರೂ.3 ಕೋಟಿಯಿರಬಹುದೆಂದು ಅಂದಾಜಿಸಲಾಗಿದೆ. ಈ ಕಾರು ಭಾರತಕ್ಕೆ ಕಾಲಿಟ್ಟ ಮೊದಲ ಎಸ್‍ಯುವಿ ಉರುಸ್ ಕಾರ್ ಆಗಿದೆ.
ಈ ಕಾರು ಅಂಬಾನಿಯವರಿಗೆ ಝಡ್ ಪ್ಲಸ್ ಭದ್ರತಾ ಪಡೆಯ ಜೊತೆಗೆ ಕಾಣಿಸಿಕೊಂಡಿತ್ತು. ಕೆಲ ದಿನಗಳ ಹಿಂದೆ ರಣ್‍ಬೀರ್ ಕಪೂರ್ ರವರು ಆಕಾಶ್ ಅಂಬಾನಿಯವರ ಪಕ್ಕದಲ್ಲಿ ಕುಳಿತು ಈ ಕಾರ್ ಅನ್ನು ಚಲಾಯಿಸುತ್ತಿರುವುದನ್ನು ಕಾಣಲಾಗಿತ್ತು. ಇದು ಹೊಸ ತಲೆಮಾರಿನ ಮೊದಲ ಲ್ಯಾಂಬೊರ್ಗಿನಿ ಎಸ್‍ಯುವಿ ಕಾರ್ ಆಗಿದ್ದು, ಈ ಕಾರಿನಲ್ಲಿ 4.0 ಲೀಟರಿನ ಟ್ವಿನ್ ಟರ್ಬೊಜಾರ್ಜ್ಡ್ ಎಂಜಿನ್‍ಯಿದ್ದು, 641 ಬಿಹೆಚ್‍ಪಿ ಹಾಗೂ 850 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.