ವೊಲ್ವೊ ಎಕ್ಸ್‌ಸಿ40 ಎಸ್‌ಯುವಿಗಳಲ್ಲಿ ಮತ್ತೆರಡು ಹೊಸ ವೆರಿಯೆಂಟ್ ಬಿಡುಗಡೆ

ವೊಲ್ವೊ ಎಕ್ಸ್‌ಸಿ40 ಎಸ್‌ಯುವಿಗಳಲ್ಲಿ ಮತ್ತೆರಡು ಹೊಸ ವೆರಿಯೆಂಟ್ ಬಿಡುಗಡೆ

By Praveen Sannamani

ಕಳೆದ ವಾರವಷ್ಟೇ ವೊಲ್ಪೊ ಸಂಸ್ಥೆಯು ತನ್ನ ಬಹುನೀರಿಕ್ಷಿತ ಎಕ್ಸ್‌ಸಿ40 ಎಸ್‌ಯುವಿಯನ್ನ ಬಿಡುಗಡೆ ಮಾಡಿದ್ದು, ಇದೀಗ ಆರ್ ಡಿಸೈನ್ ವೆರಿಯೆಂಟ್‌ನೊಂದಿಗೆ ಹೊಸದಾಗಿ ಮುಮೆಂಟಮ್ ಮತ್ತು ಇನ್‌ಸ್ಕ್ರೀಷನ್ ಎಂಬ ಎರಡು ಹೊಸ ಆವೃತ್ತಿಗಳನ್ನ ಪರಿಚಯಿಸಿದೆ.

ವೊಲ್ವೊ ಎಕ್ಸ್‌ಸಿ40 ಎಸ್‌ಯುವಿಗಳಲ್ಲಿ ಮತ್ತೆರಡು ಹೊಸ ವೆರಿಯೆಂಟ್ ಬಿಡುಗಡೆ

ವೊಲ್ಪೊ ಸಂಸ್ಥೆಯು ಮೊದಲಿಗೆ ಬಿಡುಗಡೆ ಮಾಡಿದ್ದ ಆರ್ ಡಿಸೈನ್ ಬೆಲೆಯಲ್ಲೇ ಬಿಡುಗಡೆಯಾಗಿರುವ ಮುಮೆಂಟಮ್ ಆವೃತ್ತಿಯು ದೆಹಲಿ ಎಕ್ಸ್‌ಶೋರಂ ರೂ. 39.90 ಲಕ್ಷ ಬೆಲೆ ಹೊಂದಿದ್ದು, ಟಾಪ್ ಎಂಡ್ ಮಾದರಿಯಾಗಿರುವ ಇನ್‌ಸ್ಕ್ರೀಷನ್ ಮಾದರಿಯು ಎಕ್ಸ್‌ಶೋರಂ ಪ್ರಕಾರ ರೂ. 43.90 ಲಕ್ಷ ಬೆಲೆ ಪಡೆದುಕೊಂಡಿವೆ.

ವೊಲ್ವೊ ಎಕ್ಸ್‌ಸಿ40 ಎಸ್‌ಯುವಿಗಳಲ್ಲಿ ಮತ್ತೆರಡು ಹೊಸ ವೆರಿಯೆಂಟ್ ಬಿಡುಗಡೆ

ಹೀಗಾಗಿ ಆರಂಭಿಕ ಆವೃತ್ತಿಯಾಗಿ ಆರ್ ಡಿಸೈನ್ ಮತ್ತು ಮುಮೆಂಟಮ್ ಆವೃತ್ತಿಗಳು ಗ್ರಾಹಕರನ್ನು ಸೆಳೆಯಲಿದ್ದು, ಇನ್‌ಸ್ಕ್ರೀಷನ್ ಮಾದರಿಯು ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ವೊಲ್ವೊ ಎಕ್ಸ್‌ಸಿ40 ಎಸ್‌ಯುವಿಗಳಲ್ಲಿ ಮತ್ತೆರಡು ಹೊಸ ವೆರಿಯೆಂಟ್ ಬಿಡುಗಡೆ

ವೋಲ್ವೋ ಎಕ್ಸ್‌ಸಿ40 ಕಾರುಗಳು ಸುಧಾರಿತ ಮಾದರಿ ಕಂಪ್ಯಾಕ್ಟ್ ಮಾಡ್ಯುಲರ್ ಆರ್ಕಿಟೆಕ್ಚರ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿ ಅಭಿವೃದ್ಧಿಗೊಂಡಿದ್ದು, ಮಾರುಕಟ್ಟೆಯಲ್ಲಿ ಯುವ ಸಮುದಾಯದ ಹಾಟ್ ಫೆವರಿಟ್ ಆಗಿ ಹೊರಹೊಮ್ಮುತ್ತಿದೆ.

ವೊಲ್ವೊ ಎಕ್ಸ್‌ಸಿ40 ಎಸ್‌ಯುವಿಗಳಲ್ಲಿ ಮತ್ತೆರಡು ಹೊಸ ವೆರಿಯೆಂಟ್ ಬಿಡುಗಡೆ

ಇದಕ್ಕೆ ಉದಾಹರಣೆ ಅಂದ್ರೆ, ಬಿಡುಗಡೆಯಾಗಿ ಒಂದು ವಾರದಲ್ಲೇ ಬರೋಬ್ಬರಿ 200 ಹೊಸ ಕಾರುಗಳಿಗೆ ಬುಕ್ಕಿಂಗ್ ಸಲ್ಲಿಕೆಯಾಗಿದ್ದು, ನಮ್ಮ ಬೆಂಗಳೂರಿನ ಕೊರಮಂಗಲ ಮಾರ್ಷಿಯಲ್ ಡೀಲರ್ಸ್‌ನಲ್ಲಿ ಒಂದೇ ದಿನ 12 ಕಾರುಗಳು ಹೊಸ ಕಾರುಗಳು ಮಾರಾಟಗೊಂಡಿರುವುದು ಭಾರೀ ಬೇಡಿಕೆಯ ಸುಳಿವು ನೀಡಿದೆ.

ವೊಲ್ವೊ ಎಕ್ಸ್‌ಸಿ40 ಎಸ್‌ಯುವಿಗಳಲ್ಲಿ ಮತ್ತೆರಡು ಹೊಸ ವೆರಿಯೆಂಟ್ ಬಿಡುಗಡೆ

ಎಕ್ಸ್‌ಸಿ40 ಆರ್ ಡಿಸೈನ್, ಮುಮೆಂಟಮ್ ಮತ್ತು ಇನ್‌ಸ್ಕ್ರೀಷನ್ ಆವೃತ್ತಿಗಳು ಎಂಜಿನ್ ಸಾಮರ್ಥ್ಯದಲ್ಲಿ ಒಂದೇ ಮಾದರಿಯ ಪವರ್ ಯುನಿಟ್ ಪಡೆದುಕೊಂಡಿದ್ದರೂ ತಾಂತ್ರಿಕವಾಗಿ ಉನ್ನತ ವೈಶಿಷ್ಟ್ಯತೆಗಳನ್ನು ಹೊಂದಿರುವ ಇನ್‌ಸ್ಕ್ರೀಷನ್ ಆವೃತ್ತಿಗಳಲ್ಲಿ ಹೊಸ ವಿನ್ಯಾಸದ ಫ್ರಂಟ್ ಗ್ರೀಲ್, ಸಿಕ್ಸ್ ಸ್ಪೋಕ್ ಡೈಮಂಡ್ ಕಟ್ ಅಲಾಯ್ ವೀಲ್ಹ್, ವುಡ್ ಇಂಟಿರಿಯರ್, ಕ್ರಿಸ್ಟಲ್ ಗೇರ್ ನಾಬ್ ಮತ್ತು ಎಲೆಕ್ಟ್ರಿಕ್ ಫೋಲ್ಡೆಬಲ್ ರಿಯರ್ ಸೀಟ್ ಹೆಡ್‌ರೆಸ್ಟ್ ಬಳಕೆ ಮಾಡಲಾಗಿದೆ.

ವೊಲ್ವೊ ಎಕ್ಸ್‌ಸಿ40 ಎಸ್‌ಯುವಿಗಳಲ್ಲಿ ಮತ್ತೆರಡು ಹೊಸ ವೆರಿಯೆಂಟ್ ಬಿಡುಗಡೆ

ಇನ್ನು ಬೆಸ್ ವೆರಿಯೆಂಟ್‌ ಕಾರುಗಳು ಎಕ್ಸ್‌ಸಿ60 ಕಾರಿನಂತೆಯೇ ಅಪ್‍‍ರೈಟ್ ಫ್ರಂಟ್ ಗ್ರಿಲ್ ಅನ್ನು ಹೊಂದಿದ್ದು, ಜೊತೆಗೆ 'ಥಾರ್ ಹಾಮರ್' ಎಲ್ಇಡಿ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದಿದೆ. ಈ ವಿನ್ಯಾಸವು ಭಾರತದಲ್ಲಿ ಮಾರಾಟವಾದ ಇತರೆ ವೊಲ್ವೊ ಮಾದರಿಗಳಿಗೆ ಹೋಲಿಕೆ ಇದೆ ಎನ್ನಬಹುದು.

ವೊಲ್ವೊ ಎಕ್ಸ್‌ಸಿ40 ಎಸ್‌ಯುವಿಗಳಲ್ಲಿ ಮತ್ತೆರಡು ಹೊಸ ವೆರಿಯೆಂಟ್ ಬಿಡುಗಡೆ

ಕಾರಿನ ಹಿಂಭಾಗದಲ್ಲಿ ರೇಕ್ಡ್ ವಿಂಡ್‍‍ಶೀಲ್ಡ್ ಮತ್ತು ಇಂಟಿಗ್ರೇಟೆಡ್ ರೂಫ್ ಸ್ಪಾಯ್ಲರ್, ಟ್ವಿನ್ ಕ್ರೋಮ್ ಎಕ್ಸಾಸ್ಟ್, ಬ್ಲೆಕ್ಡ್ ಔಟ್ ರೂಫ್, ಎಲ್ ಆಕಾರದಲ್ಲಿರುವ ಎಲ್ಇಡಿ ಟೈಲ್‍‍ಲ್ಯಾಂಪ್ಸ್ ಬಳಸಿರುವುದು 5 ಆಸನವುಳ್ಳ ಈ ಕಾರಿಗೆ ಹೊಸ ಆಕರ್ಷಕ ರೂಪವನ್ನು ನೀಡುತ್ತದೆ.

ವೊಲ್ವೊ ಎಕ್ಸ್‌ಸಿ40 ಎಸ್‌ಯುವಿಗಳಲ್ಲಿ ಮತ್ತೆರಡು ಹೊಸ ವೆರಿಯೆಂಟ್ ಬಿಡುಗಡೆ

ಕಾರಿನ ಒಳವಿನ್ಯಾಸ

ವೊಲ್ವೊ ಎಕ್ಸ್‌ಸಿ40 ಕಾರಿನ ಒಳಭಾಗವು ಪೂರ್ಣ ಕಪ್ಪು ಅಥವಾ ಬ್ಲಾಕ್ ಆಂಡ್ ಆರೆಂಜ್ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಸಜ್ಜುಗೊಂಡಿದ್ದು, 3 ಸ್ಪೋಕ್ ವಿವಿಧ ಆಯ್ಕೆಯುಳ್ಳ ಸ್ಟೀರಿಂಗ್ ವ್ಹೀಲ್ಸ್, ಟ್ವಿನ್ ಡೈಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 9 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಲಂಬಾಕಾರದ ಎಸಿ ವೆಂಟ್ಸ್ ಅನ್ನು ಪಡೆದುಕೊಂಡಿದೆ.

ವೊಲ್ವೊ ಎಕ್ಸ್‌ಸಿ40 ಎಸ್‌ಯುವಿಗಳಲ್ಲಿ ಮತ್ತೆರಡು ಹೊಸ ವೆರಿಯೆಂಟ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ವೊಲ್ವೊ ಎಕ್ಸ್‌ಸಿ40 ಕಾರುಗಳು 190 ಬಿಹೆಚ್‍‍ಪಿ ಮತ್ತು 400ಎನ್ಎಮ್ ಟಾರ್ಕ್ ಉತ್ಪಾದಿಸಬಲ್ಲ 2.0 ಲೀಟರ್, 4 ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಪಡೆದಿದ್ದು, ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಕಾರಿನ ಪೆಟ್ರೋಲ್ ಮಾದರಿಗಳು ಭವಿಷ್ಯದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಹೊಸ ಕಾರುಗಳು ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಸಹ ಪಡೆದುಕೊಂಡಿವೆ.

ವೊಲ್ವೊ ಎಕ್ಸ್‌ಸಿ40 ಎಸ್‌ಯುವಿಗಳಲ್ಲಿ ಮತ್ತೆರಡು ಹೊಸ ವೆರಿಯೆಂಟ್ ಬಿಡುಗಡೆ

ಒಟ್ಟಿನಲ್ಲಿ ಹೊಸತನಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ವೊಲ್ವೊ ಎಕ್ಸ್‌ಸಿ40 ಕಾರುಗಳು ಭರ್ಜರಿಯಾಗಿಯೇ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಬಿಎಂ‍ಡಬ್ಲ್ಯು ಎಕ್ಸ್1, ಆಡಿ ಕ್ಯೂ3, ಮರ್ಸಿಡಿಸ್-ಬೆಂಝ್ ಜಿಎಲ್ಎ ಪ್ರಿಮಿಯಂ ಎಸ್‍‍ಯುವಿ ಕಾರುಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Article Published On: Tuesday, July 17, 2018, 19:36 [IST]
English summary
Volvo XC40 Momentum & Inscription Variants Launched In India; Prices Start At Rs 39.90 Lakh.
Read more on new launches volvo suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+