ರೇಸಿಂಗ್ ಪ್ರಿಯರ 'ವ್ರೂಮ್ ಡ್ರ್ಯಾಗ್ ರೇಸ್'ಗೆ ದಿನಗಣನೆ ಶುರು..!
ದೇಶಾದ್ಯಂತ ಮೋಟಾರ್‌ಸ್ಪೋರ್ಟ್ ಪ್ರೋತ್ಸಾಹಿಸುವ ಹಲವಾರು ರೇಸಿಂಗ್ ಎಡಿಷನ್‌ಗಳು ಚಾಲ್ತಿಯಲ್ಲಿದ್ದು, ಇವುಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ವ್ರೂಮ್ ಡ್ರ್ಯಾಗ್ ರೇಸ್ ಕೂಡಾ ಒಂದು. ಇತರೆ ಮೋಟಾರ್ ಸ್ಪೋರ್ಟ್ಸ್‌ಗಿಂತಲೂ ವಿಶೇಷ ಎನ್ನಿಸುವ ವ್ರೊಮ್ ಡ್ರ್ಯಾಗ್ ರೇಸ್ ಇದೀಗ ಮತ್ತೆ ಮರಳಿ ಬಂದಿದೆ.

ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ವ್ರೂಮ್ ಡ್ರ್ಯಾಗ್ ರೇಸ್ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಇದೇ ತಿಂಗಳು ಕಾರು ಮತ್ತು ಬೈಕ್ ರೇಸಿಂಗ್ ಪ್ರಿಯರನ್ನು ರಂಜಿಸಲು ಸಜ್ಜಾಗುತ್ತಿದೆ. 26ರಿಂದ 28ರ ತನಕ ನಡೆಯುವ ವ್ರೂಮ್ ಡ್ರ್ಯಾಗ್ ರೇಸ್ ದೇಶದ ವಿವಿಧಡೆಯಿಂದ ಸ್ಪರ್ಧಿಗಳು ಆಗಮಿಸುವುದೇ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರುತ್ತೆ.

ಒಟ್ಟು ಮೂರು ದಿನಗಳ ಕಾಲ ನಡೆಯುವ 4ನೇ ಎಡಿಷನ್ ವ್ರೂಮ್ ಡ್ರ್ಯಾಗ್ ರೇಸ್‌ಗೆ ಈಗಾಗಲೇ ಅಂತಿಮ ಸಿದ್ದತೆಗಳು ನಡೆದಿದ್ದು, ಬೆಂಗಳೂರಿನ ಹೊರವಲಯದಲ್ಲಿ ತನೆಜಾ ಏರೋಡ್ರೊಮ್ ಟ್ರ್ಯಾಕ್‌ನಲ್ಲಿ ಡ್ರ್ಯಾಗ್ ರೇಸ್ ಸದ್ದು ಮೊಳಗಲಿದೆ.

ಕಾರುಗಳು ಮತ್ತು ಬೈಕ್‌ಗಳ ಎಂಜಿನ್ ಸಾಮರ್ಥ್ಯವನ್ನು ಆಧರಿಸಿ ವಿವಿಧ ಹಂತಗಳಲ್ಲಿ ಡ್ರ್ಯಾಗ್ ರೇಸ್ ಸ್ಪರ್ಧೆ ನಡೆಯಿಲಿದ್ದು, 2-ಸ್ಟ್ರೋಕ್ ಮತ್ತು 4-ಸ್ಟೋಕ್ ಎಂಜಿನ್ ಪ್ರೇರಿತ ಬೈಕ್‌ಗಳು ಸೇರಿದಂತೆ ಮಾರ್ಡನ್ ಎಂಜಿನ್ ಪ್ರೇರಿತ ನೂರಾರು ಸೂಪರ್ ಬೈಕ್‌ಗಳು ಮತ್ತು ಸೂಪರ್ ಕಾರುಗಳು ಸಹ ಈ ರೇಸ್‌ನಲ್ಲಿ ಭಾಗಿಯಾಗಲಿವೆ.

ಕಳೆದ ಮೂರು ಎಡಿಷನ್‌ಗಳಲ್ಲೂ ಹಲವು ದಾಖಲೆಗಳಿಗೆ ಸಾಕ್ಷಿಯಾಗಿರುವ ವ್ರೂಮ್ ಡ್ರ್ಯಾಗ್ ರೇಸ್‌ನಲ್ಲಿ ಈ ಬಾರಿಯು ದೇಶದ ವಿವಿಧ ಕಡೆಗಳಿಂದ ಡ್ರ್ಯಾಗ್ ರೇಸ್ ಪ್ರಿಯರು ಭಾಗಿಯಾಗಲಿದ್ದು, ಇದು ಇತರೆ ಮೋಟಾರ್ ಸ್ಪೋರ್ಟ್ ನಡೆಸುವ ಸ್ಪರ್ಧೆಗಳಿಂತಲೂ ತುಸು ಭಿನ್ನವಾಗರಲಿದೆ.

ಸಾಮಾನ್ಯವಾಗಿ ನಡೆಯುವ ಮೋಟಾರ್‌ಸ್ಪೋರ್ಟ್‌ಗಳ ನಿಯಮಕ್ಕೆ ಭಿನ್ನವಾಗಿರುವ ವ್ರೂಮ್ ಡ್ರ್ಯಾಗ್ ರೇಸ್ ಸ್ಪರ್ಧೆಯು ಮೋಟಾರ್ ಸೈಕಲ್ ಪ್ರಿಯರಿಗೆ ಎಲ್ಲಾ ವಿಭಾಗದಲ್ಲೂ ಭಾಗಿಯಾಗುವ ಅವಕಾಶಗಳಿದ್ದು, ಕೇವಲ ಕಡಿಮೆ ಅವಧಿಯಲ್ಲಿ ಗುರಿ ತುಲುಪುದೊಂದೇ ಇಲ್ಲಿ ಪ್ರಮುಖವಾಗಿರುತ್ತೆ.
MOST READ: ಬೈಕ್ ಸ್ಟಂಟ್ ಮಾಡಿದವರಿಗೆ ನಡುರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿತ

ಒಟ್ಟಿನಲ್ಲಿ ಹಲವು ವಿಶೇಷತೆಗಳಿಗೆ ಕಾರಣವಾಗುವ ವ್ರೂಮ್ ಡ್ರ್ಯಾಗ್ ರೇಸ್‌ಗೆ ಈಗಾಗಲೇ ನೋಂದಣಿ ಕೂಡಾ ಆರಂಭಗೊಂಡಿದ್ದು, ಆಸಕ್ತ ರೇಸಿಂಗ್ ಪ್ರಿಯರು ಭಾಗಿಯಾಗಬಹುದಲ್ಲದೇ ನೋಡುಗರರಿಗೂ ಸಹ ವಿಶೇಷ ಸ್ಥಳಾವಕಾಶವನ್ನು ಕಲ್ಪಿಸಿಕೊಡಲಾಗುತ್ತೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಹ್ಯುಂಡೈ ಹೊಸ ಸ್ಯಾಂಟ್ರೋ


Click it and Unblock the Notifications








