ಬಿಡುಗಡೆಯಾಯ್ತು 2019ರ ಹೊಸ ಜೀಪ್ ವ್ರಾಂಗ್ಲರ್

ಜೀಪ್ ಇಂಡಿಯಾ, ತನ್ನ ಹೊಸ ವಾಹನವಾದ ವ್ರಾಂಗ್ಲರ್ ಎಸ್‍‍ಯು‍‍ವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಜೀಪ್ ವ್ರಾಂಗ್ಲರ್‍‍ನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.63.94 ಲಕ್ಷಗಳಾಗಿದೆ. ವ್ರಾಂಗ್ಲರ್ ಎಸ್‍‍ಯು‍‍ವಿಯನ್ನು 5 ಡೋರ್‍‍ಗಳನ್ನು ಹೊಂದಿರುವ ಅನ್‍‍ಲಿಮಿಟೆಡ್ ಎಂಬ ಏಕೈಕ ಮಾದರಿಯಲ್ಲಿ ಮಾರಾಟ ಮಾಡಲಾಗುವುದು.

ಬಿಡುಗಡೆಯಾಯ್ತು 2019ರ ಹೊಸ ಜೀಪ್ ವ್ರಾಂಗ್ಲರ್

ಹೊಸ ತಲೆಮಾರಿನ ವ್ರಾಂಗ್ಲರ್ ಅನ್ನು ಭಾರತಕ್ಕೆ ಸಿಬಿಯು ಅಂದರೆ ಕಂಪ್ಲೀಟ್ ಬಿಲ್ಟ್ ಯೂನಿಟ್ ಆಗಿ ಆಮದು ಮಾಡಿಕೊಳ್ಳಲಾಗುವುದು. ವ್ರಾಂಗ್ಲರ್ ಎಸ್‍‍ಯುವಿಯ ಬುಕ್ಕಿಂಗ್ ಆರಂಭವಾಗಿದ್ದು, ಶೀಘ್ರದಲ್ಲಿಯೇ ವಿತರಣೆಯನ್ನು ಶುರುಮಾಡಲಾಗುವುದು. ಹೊಸ ತಲೆಮಾರಿನ ಜೀಪ್ ವ್ರಾಂಗ್ಲರ್ ಹಲವಾರು ಆಧುನಿಕ ಸ್ಟೈಲಿಂಗ್‍‍ಗಳನ್ನು ಹೊಂದಿದೆ. ಆದರೂ ಬೋಲ್ಡ್ ಹಾಗೂ ಮಸ್ಕ್ಯೂಲರ್ ಸಿಲ್‍‍ಹೌಟ್‍‍ನಲ್ಲಿರುವ ಹಳೆಯ ಸಿಗ್ನೇಚರ್ ಅನ್ನು ಉಳಿಸಿಕೊಳ್ಳಲಾಗಿದೆ.

ಬಿಡುಗಡೆಯಾಯ್ತು 2019ರ ಹೊಸ ಜೀಪ್ ವ್ರಾಂಗ್ಲರ್

ಹೊಸ ವ್ರಾಂಗ್ಲರ್ ಎಸ್‍‍ಯು‍‍ವಿಯ ಮುಂಭಾಗದಲ್ಲಿರುವ ಗ್ರಿಲ್‍ ಏಳು ವರ್ಟಿಕಲ್ ಸ್ಲ್ಯಾಟ್‌ಗಳನ್ನು ಹೊಂದಿದೆ. ಹೊಸ ಎಸ್‍‍ಯುವಿಯ ಎರಡೂ ತುದಿಯಲ್ಲಿ ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿಂದ ಇಂಟಿಗ್ರೇಟೆಡ್ ಆದ ಎಲ್ಇಡಿ ಡಿಆರ್‌ಎಲ್‌ಗಳು ಅಂದರೆ ಡೇಟೈಮ್ ರನ್ನಿಂಗ್ ಲೈಟ್ಸ್ ಗಳಿವೆ.

ಬಿಡುಗಡೆಯಾಯ್ತು 2019ರ ಹೊಸ ಜೀಪ್ ವ್ರಾಂಗ್ಲರ್

ಎಸ್‍‍ಯುವಿಯ ಸೈಡ್ ಪ್ರೊಫೈಲ್ ಬಾಕ್ಸಿ ಡಿಸೈನ್‍‍ನಲ್ಲಿ ಮುಂದುವರೆದಿದ್ದು, ದೊಡ್ಡ ಡೋರ್‍‍ಗಳು, ವಿಂಡೋ ಹಾಗೂ ಫ್ಲೇರ್ಡ್ ವ್ಹೀಲ್ ಆರ್ಕ್‍‍ಗಳನ್ನು ಹೊಂದಿದೆ. ಹೊಸ ವ್ರಾಂಗ್ಲರ್ ಟೆಕ್ ಗ್ರೇ ಸ್ಪೋಕ್‍‍‍ಗಳಿರುವ 18 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು 2019ರ ಹೊಸ ಜೀಪ್ ವ್ರಾಂಗ್ಲರ್

ಈ ವ್ಹೀಲ್‍‍ಗಳನ್ನು ವ್ರಾಂಗ್ಲರ್ ಎಸ್‍‍ಯು‍‍ವಿಯಲ್ಲಿ ಸ್ಟಾಂಡರ್ಡ್ ಆಗಿ ನೀಡಲಾಗುವುದು. ಹಿಂಭಾಗದ ಪ್ರೊಫೈಲ್ ಪ್ರೀಮಿಯಂ ಲುಕ್ ನೀಡುತ್ತದೆ. ಒರಟಾಗಿ ಕಾಣುವ ಎಲ್‌ಇಡಿ ಟೇಲ್‌ಲೈಟ್‌ಗಳಿವೆ. ಎಸ್‍‍ಯು‍‍ವಿಯ ಹಿಂಭಾಗದಲ್ಲಿದ್ದ ಮೌಂಟೆಡ್ ವ್ಹೀಲ್ ಅನ್ನು ಈಗ ಸ್ವಲ್ಪ ಕೆಳಗಿರಿಸಲಾಗಿದ್ದು, ಹಿಂಭಾಗದ ಗೋಚರತೆಯು ಸ್ಪಷ್ಟವಾಗಿ ಕಾಣಲಿದೆ.

ಬಿಡುಗಡೆಯಾಯ್ತು 2019ರ ಹೊಸ ಜೀಪ್ ವ್ರಾಂಗ್ಲರ್

ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಹೊಸ ಜೀಪ್ ರಾಂಗ್ಲರ್‍‍‍ನ ಒಳಭಾಗವನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ. ಹಿಂದಿನ ಮಾದರಿಯ ಎಸ್‍‍ಯು‍‍ವಿಗಿಂತ ಹೆಚ್ಚು ಆಧುನಿಕವಾಗಿ ವಿನ್ಯಾಸಗೊಳಿಸಲಾಗಿದೆ.

ಬಿಡುಗಡೆಯಾಯ್ತು 2019ರ ಹೊಸ ಜೀಪ್ ವ್ರಾಂಗ್ಲರ್

ಎಸ್‌ಯುವಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ 7.0 ಇಂಚಿನ ಮಲ್ಟಿಇನ್ಫೊ‍‍ಡಿಸ್ಪ್ಲೇ ಹಾಗೂ 8.4 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋವನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿರಲಿದೆ.

MOST READ: ಸಾವಿನಂಚಿನಿಂದ ಬಚಾವ್ ಆದ ಕೆಟಿ‍ಎಂ ಬೈಕ್ ಸವಾರ

ಬಿಡುಗಡೆಯಾಯ್ತು 2019ರ ಹೊಸ ಜೀಪ್ ವ್ರಾಂಗ್ಲರ್

2019 ಜೀಪ್ ವ್ರಾಂಗ್ಲರ್ ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರೇರ್ ಎಸಿ ವೆಂಟ್ಸ್, ಆಂಬಿಯೆಂಟ್ ಲೈಟಿಂಗ್ ಹಾಗೂ ಮಲ್ಟಿಪಲ್ 12 ವೋಲ್ಟ್ ಸಾಕೆಟ್ ಹಾಗೂ ಯುಎಸ್‍‍ಬಿ ಚಾರ್ಜಿಂಗ್ ಪೋರ್ಟ್‌ಗಳನ್ನು ಸಹ ಹೊಂದಿರಲಿದೆ.

MOST READ: ಕಳಪೆ ಕಾಮಗಾರಿ ಮಾಡಿದ ಎಂಜಿನಿಯರ್ ಮೇಲೆ ಕೆಸರು ಸುರಿದ ಶಾಸಕ

ಬಿಡುಗಡೆಯಾಯ್ತು 2019ರ ಹೊಸ ಜೀಪ್ ವ್ರಾಂಗ್ಲರ್

ಹೊಸ ಎಸ್‌ಯುವಿಯಲ್ಲಿ, ಜೀಪ್‌ ಕಂಪನಿಯ ಯುಕನೆಕ್ಟ್ ಸಿಸ್ಟಂ ಅಳವಡಿಸಲಾಗಿದ್ದು, ಇದು ವಿವಿಧ ಕನೆಕ್ಟಿವಿಟಿ ಫೀಚರ್‍‍ಗಳನ್ನು ನೀಡುವುದರ ಜೊತೆಗೆ ಇನ್ಫೋಟೈನ್‌ಮೆಂಟ್ ಸಿಸ್ಟಂ ಒಟ್ಟಾರೆ ಪರ್ಫಾಮೆನ್ಸ್ ಅನ್ನು ಸುಧಾರಿಸುತ್ತದೆ.

MOST READ: ಕಾರಿನೊಳಗೆ ಸಿಲುಕಿದ್ದ ಮಗು- ಕೊನೆಗೂ ಬಚಾವ್ ಆಗಿದ್ದು ಹೇಗೆ ಗೊತ್ತಾ?

ಬಿಡುಗಡೆಯಾಯ್ತು 2019ರ ಹೊಸ ಜೀಪ್ ವ್ರಾಂಗ್ಲರ್

ಹೊಸ ಎಸ್‍‍ಯು‍‍ವಿಯಲ್ಲಿ ಪ್ರೀಮಿಯಂ ಆಲ್‍‍ಪೈನ್ 552 ವ್ಯಾಟ್‍‍ನ 8 ಸ್ಪೀಕರ್ ಸೌಂಡ್ ಸಿಸ್ಟಂ ಅನ್ನು ಪ್ರತ್ಯೇಕವಾದ ಸಬ್ ವೂಫರ್‍‍ನೊಂದಿಗೆ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಸುರಕ್ಷ ಫೀಚರ್‍‍ಗಳ ಬಗ್ಗೆ ಹೇಳುವುದಾದರೆ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಇಎಸ್‌ಸಿ, ಎಲೆಕ್ಟ್ರಾನಿಕ್ ರೋಲ್ ಮಿಟಿಗೇಷನ್, ಹಿಲ್ ಸ್ಟಾರ್ಟ್ ಅಸಿಸ್ಟ್ ಹಾಗೂ ಟ್ರಾಕ್ಷನ್ ಕಂಟ್ರೋಲ್‍‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು 2019ರ ಹೊಸ ಜೀಪ್ ವ್ರಾಂಗ್ಲರ್

2019ರ ಹೊಸ ಜೀಪ್ ವ್ರಾಂಗ್ಲರ್‍‍ನಲ್ಲಿ 2.0-ಲೀಟರಿನ ಟರ್ಬೋಚಾರ್ಜ್ಡ್ ಇನ್ ಲೈನ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 268ಬಿ‍‍ಹೆಚ್‍‍ಪಿ ಹಾಗೂ 400 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 8 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು 2019ರ ಹೊಸ ಜೀಪ್ ವ್ರಾಂಗ್ಲರ್

ಈ ಎಂಜಿನ್ ಸದ್ಯಕ್ಕೆ ಬಿಎಸ್4 ಆಗಿದ್ದು, ಶೀಘ್ರದಲ್ಲೇ ಹೊಸ ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಬಿ‍ಎಸ್6ಗೆ ಅಪ್‌ಗ್ರೇಡ್ ಆಗುವ ನಿರೀಕ್ಷೆಯಿದೆ. ಹೊಸ ಜೀಪ್ ವ್ರಾಂಗ್ಲರ್ ಅನ್ನು ಭಾರತದಲ್ಲಿ ಬ್ರೈಟ್ ವೈಟ್, ಬ್ಲ್ಯಾಕ್, ಗ್ರಾನೈಟ್ ಕ್ರಿಸ್ಟಲ್, ಬಿಲೆಟ್ ಸಿಲ್ವರ್ ಹಾಗೂ ಫೈರ್‌ಕ್ರ್ಯಾಕರ್ ರೆಡ್ ಎಂಬ ಐದು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಬಿಡುಗಡೆಯಾಯ್ತು 2019ರ ಹೊಸ ಜೀಪ್ ವ್ರಾಂಗ್ಲರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಜೀಪ್ ವ್ರಾಂಗ್ಲರ್ ಒಂದು ಲೆಜೆಂಡರಿ ಎಸ್‍‍ಯು‍‍ವಿಯಾಗಿದ್ದು, ತನ್ನ ಆಫ್ ರೋಡಿಂಗ್ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದೆ. ಈ ಎಸ್‍‍ಯು‍‍ವಿ ಆಫ್ ರೋಡ್‍‍ನ ನಿರ್ದಿಷ್ಟ ಸಾಧನಗಳೊಂದಿಗೆ ಬರುತ್ತದೆ. ಜೀಪ್ ವ್ರಾಂಗ್ಲರ್ ಅನ್ನು ಅಮೇರಿಕಾದಲ್ಲಿರುವ ಜೀಪ್ ಕಂಪನಿಯ ಟೊಲೆಡೊ ಘಟಕದಲ್ಲಿ ತಯಾರಿಸಲಾಗುವುದು.

ಬಿಡುಗಡೆಯಾಯ್ತು 2019ರ ಹೊಸ ಜೀಪ್ ವ್ರಾಂಗ್ಲರ್

ಈ ಎಸ್‍‍ಯು‍‍ವಿಯನ್ನು ಸರ್ಕಾರದ ಹೊಸ ನಿಯಮದ ಪ್ರಕಾರ ನೇರವಾಗಿ ಆಮದು ಮಾಡಿಕೊಳ್ಳಲಾಗುವುದು. ಇದರಿಂದಾಗಿ ಏಕರೂಪೀಕರಣದ ಅಗತ್ಯವಿಲ್ಲದೆ ಉತ್ಪಾದಕರಿಗೆ 2,500 ವಾಹನಗಳನ್ನು ಆಮದು ಮಾಡಿಕೊಳ್ಳಲು ಮತ್ತು ಮಾರಾಟ ಮಾಡಲು ಅನುಕೂಲವಾಗಲಿದೆ.

Article Published On: Saturday, August 10, 2019, 17:03 [IST]
English summary
All-New (2019) Jeep Wrangler SUV Launched In India At Rs 63.94 Lakh - Read in kannada
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+