ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

2019ರ ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿ ಬಿಡುಗಡೆಯಾಗಿದೆ. ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಾರು ಎಂದಿನಂತೆ ತನ್ನ ಪಾರುಪತ್ಯವನ್ನು ಮುಂದುವರೆಸಿದೆ. ಟಾಪ್ 10 ಪಟ್ಟಿಗಳಲ್ಲಿ 8 ಸ್ಥಾನಗಳನ್ನು ಬಾಚಿಕೊಂಡ ಮಾರುತಿ ಸುಜುಕಿ ಸಂಸ್ಥೆ.

ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಅತಿ ಹೆಚ್ಚು ಮಾರಾಟವಾದ ಆಗಸ್ಟ್ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಡಿಜೈರ್ ಅಗ್ರಗಣ್ಯನಾಗಿ ಪಾರುಪತ್ಯ ಮೆರೆದಿದೆ, ಈ ಜನಪ್ರಿಯ ಕಾಂಪಾಕ್ಟ್ ಸೆಡಾನ್ ಕಳೆದ ತಿಂಗಳು 13,274 ಯುನಿಟ್‍ಗಳು ಮಾರಾಟವಾಗಿದೆ. ನಂತರದ ಸ್ಥಾನವನ್ನು ತನ್ನದೆ ಸೋದರ ಕಾರು ಸ್ವಿಫ್ಟ್ ಎರಡನೇ ಸ್ಥಾನವನ್ನು ವಶಪಡಿಸಿಕೊಂಡಿದೆ.

ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಮೂರಣೇ ಜನರೇಷನ್ ಮಾರುತಿ ಸ್ವಿಫ್ಟ್ ದ್ವಿತೀಯ ಸ್ಥಾನವನ್ನು ಅಲಂಕರಿಸಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಸ್ವಿಫ್ಟ್ 12,444 ಯುನಿಟ್‍‍ಗಳು ಮಾರಾಟವಾಗಿದೆ. ಹ್ಯಾಚ್‍‍ಬ್ಯಾಕ್ ವಿಭಾಗದ ಹೊಸ ಸ್ವಿಫ್ಟ್ ಕಾರು ಕಳೆದ ವರ್ಷ ಆಟೋ ಎಕ್ಸಪೋ ಬಿಡುಗಡೆಯಾಗಿತ್ತು. ಕಾರು ಗುಣಮಟ್ಟದ ಕ್ಷಮೆತೆಯೊಂದಿಗೆ ಉತ್ತಮ ಫರ್ಫಾಮೆನ್ಸ್ ನೀಡುವುದರಿಂದ ಕಳೆದ ತಿಂಗಳು ಉತ್ತಮ ಮಾರಾಟವಾಗಿದೆ.

ಮಾದರಿಗಳು ಆಗಸ್ಟ್ 2019
1 ಮಾರುತಿ ಸುಜುಕಿ ಡಿಜೈರ್ 13,274
2 ಮಾರುತಿ ಸುಜುಕಿ ಸ್ವಿಫ್ಟ್ 12,444
3 ಮಾರುತಿ ಸುಜುಕಿ ವ್ಯಾಗನ್‍ಆರ್ 11,402
4 ಮಾರುತಿ ಸುಜುಕಿ ಬಲೆನೊ 11,067
5 ಮಾರುತಿ ಸುಜುಕಿ ಆಲ್ಟೊ 10,123
6 ಹ್ಯುಂಡೈ ಗ್ರ್ಯಾಂಡ್ ಐ10 9,403
7 ಹ್ಯುಂಡೈ ವೆನ್ಯೂ 9,342
8 ಮಾರುತಿ ಸುಜುಕಿ ಇಕೋ 8,658
9 ಮಾರುತಿ ಸುಜುಕಿ ಎರ್ಟಿಗಾ 8,391
10 ಮಾರುತಿ ಸುಜುಕಿ ಬ್ರೆಝಾ 7,109
ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

3ನೇ ಸ್ಥಾನವನ್ನು ವಶಪಡಿಸಿಕೊಂಡ ಹೊಸ ಜನರೇಷನ್ ಮಾರುತಿ ವ್ಯಾಗನ್‍ಆರ್ ಹ್ಯಾಚ್‍‍ಪ್ಯಾಕ್. ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಬ್ರಾಂಡ್‍‍ಗಳಲ್ಲಿ ಒಂದಾಗಿದೆ. ಈ ಕಾರು ಜುಲೈ ತಿಂಗಳ ಅತಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು. ಆದರೆ ಕಳೆದ ತಿಂಗಳ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಮಾರುತಿ ವ್ಯಾಗನ್‍ಆರ್ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿರುವುದು ಬರೊಬ್ಬರಿ 15,062 ಯುನಿಟ್‍‍ಗಳು, ಆದರೆ ಕಳೆದ ತಿಂಗಳು ಆಗಸ್ಟ್ ನಲ್ಲಿ 11,402 ಯುನಿಟ್‍‍ಗಳು ಮಾರಾಟವಾಗಿದೆ.

ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ನಾಲ್ಕು ಮತ್ತು ಐದನೇ ಸ್ಥಾನವನ್ನು ಕ್ರಮವಾಗಿ ಮಾರುತಿ ಸುಜುಕಿ ವಶಪಡಿಸಿಕೊಂಡಿದೆ. ಮಾರುತಿ ಸುಜುಕಿಯ ಬಲೆನೊ ನಾಲ್ಕನೇ ಸ್ಥಾನ ಪಡೆದರೆ ಆಲ್ಟೋ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ದೇಶಿಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ವಿಭಾಗದಲ್ಲಿ ಮಾರುತಿ ಬಲೆನೊ ಮಾರಾಟದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಮಾರಿತಿ ಬಲೆನೊ ಕಳೆದ ಆಗಸ್ಟ್ ತಿಂಗಳಲ್ಲಿ 11,607 ಯುನಿಟ್‍‍ಗಳು ಮಾರಾಟವಾಗಿದೆ.

ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಆಲ್ಟೋ ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಸ್ಥಿರವಾಗಿ ಅಗ್ರಸ್ಥಾನ ಪಡೆದುಕೊಳ್ಳುತಿತ್ತು, ಆದರೆ ಈಗ ಐದನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಕೇವಲ 10,123 ಯುನಿಟ್‍‍ಗಳು ಮಾರಾಟವಾಗಿದೆ. ಆಲ್ಟೊ ಕಾರು ಮಾರಾಟದಿಂದ ಕೆಲವು ತಿಂಗಳಿಂದ ಕುಸಿತ ಕಾಣುತ್ತಿದೆ.

ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಆಗಸ್ಟ್ ತಿಂಗಳ ಅತಿ ಹೆಚ್ಚು ಕಾರು ಮಾರಾಟಗಳ ಪಟ್ಟಿಯಲ್ಲಿ ಆರನೇ ಮತ್ತು ಏಳನೇ ಸ್ಥಾನವನ್ನು ಮಾರುತಿ ಸುಜುಕಿಯನ್ನು ಬಿಟ್ಟು ಇತರ ಸಂಸ್ಥೆಗಳು ವಶಪಡಿಸಿಕೊಂಡಿದೆ. ಆರನೇ ಸ್ಥಾನವನ್ನು ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಪಡೆದುಕೊಂಡಿದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ನಿಯೋಸ್ 9,403 ಯುನಿಟ್‍‍ಗಳು ಮಾರಾಟವಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಸಣ್ಣ ಹ್ಯಾಚ್‍‍ಬ್ಯಾಕ್ ಹ್ಯುಂಡೈ ತಿಂಗಳುಗಳ ಹಿಂದೆ ಅಷ್ಟೆ ಬಿಡುಗಡೆ ಮಾಡದ್ದರು, ಆಗಲೇ ಅತೀ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದೆ. ಹ್ಯುಂಡೈ ವೆನ್ಯೂ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಆಗಸ್ಟ್ ತಿಂಗಳಲಿ ಹ್ಯುಂಡೈ ವೆನ್ಯೂ 9,342 ಯುನಿಟ್‍‍ಗಳು ಮಾರಾಟವಾಗಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ಅತಿ ಹೆಚ್ಚು ಮಾರಾಟವಾದ ಪಟ್ಟಿಯಲ್ಲಿ ಇನ್ನೂ ಉಳಿದ ಮೂರು ಸ್ಥಾನಗಳನ್ನು ಮಾರುತಿ ಸುಜುಕಿ ವಶಪಡಿಸಿಕೊಂಡಿಸಿದೆ. ಎಂಟನೇ ಸ್ಥಾನವನ್ನು ಮಾರುತಿ ಸುಜುಕಿ ಇಕೋ ಪಡೆದುಕೊಂಡಿದೆ, 8,658 ಯುನಿಟ್‍‍ಗಳು ಮಾರಾಟವಾಗಿದೆ. ಮಾರುತಿ ಸುಜುಕಿ ಎರ್ಟಿಗಾ 9ನೇ ಸ್ಥಾನವನ್ನು ಪಡೆದುಕೊಂಡಿದೆ, ಎರ್ಟಿಗಾ 8,391 ಯುನಿಟ್‍ಗಳು ಮಾರಾಟವಾಗಿದೆ. ಟಾಪ್ 10 ಪಟ್ಟಿಯಲ್ಲಿ ಕೊನೆಯ 10ನೇ ಸ್ಥಾನವನ್ನು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಪಡೆದುಕೊಂಡಿದೆ, ಬ್ರೇಝಾ 7,109 ಯುನಿಟ್‍‍ಗಳು ಮಾರಾಟವಾಗಿದೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಿವು

ದೇಶಿಯ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಕಾರಿನ ಮಾರಾಟವು ಅಮೆ ಗತಿಯಲ್ಲಿ ಸಾಗುತ್ತಿದೆ. ಹಲವು ಜನಪ್ರಿಯ ಕಂಪನಿಗಳ ಕಾರುಗಳ ಮಾರಾಟದಲ್ಲಿ ಕುಸಿತವಾಗಿದ್ದು, ಮಾರುತಿ ಸುಜುಕಿ ಸಂಸ್ಥೆಯು ಇದಕ್ಕೆ ಹೊರತಾಗಿಲ್ಲ. ಮಾರುತಿ ಸುಜುಕಿ ಸಂಸ್ಥೆಯಲ್ಲಿ ಶೇ. 35 ರಷ್ಟು ಕುಸಿತ ಕಂಡಿದೆ. ಆದರೂ ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದಿದೆ.

More from DriveSpark

Article Published On: Tuesday, September 10, 2019, 18:16 [IST]
English summary
Top-Selling Cars In India In August 2019: Maruti Dzire Overtakes Swift & WagonR To Take The Top-Slot - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+