ಮತ್ತಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬರಲಿವೆ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಟೊಯೊಟಾ ಸಂಸ್ಥೆಗೆ ಅತಿ ಹೆಚ್ಚು ಲಾಭ ತಂದುಕೊಡುತ್ತಿರುವ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಸದ್ಯ ಕಾರು ಪ್ರಿಯರ ಹಾಟ್ ಫೆವರಿಟ್‌ಗಳಾಗಿದ್ದು, 2019ರ ಆವೃತ್ತಿಗಳಲ್ಲಿ ಮತ್ತಷ್ಟು ಹೊಸ ಫೀಚರ್ಸ್ ಹೊತ್ತುಬರುವದು ಬಹುತೇಕ ಖಚಿತಲಾಗಿದೆ.

ಮತ್ತಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬರಲಿವೆ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರುಗಳ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ತರದೇ ಇನ್ಪೋಟೈನ್‌ಮೆಂಟ್ ಮತ್ತು ಕಾರುಗಳ ಒಳಾಂಗಣ ವಿನ್ಯಾಸದಲ್ಲಿ ಮಾತ್ರವೇ ಬದಲಾವಣೆ ತರುವುದಾಗಿ ಸುಳಿವು ನೀಡಿರುವ ಟೊಯೊಟಾ ಸಂಸ್ಥೆಯು ಇದೇ ತಿಂಗಳು 8ರಂದು ಹೊಸ ಫೀಚರ್ಸ ಪ್ರೇರಿತ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಮತ್ತಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬರಲಿವೆ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಫಾರ್ಚೂನರ್ ಕಾರು ಮಾದರಿಯು ಸದ್ಯಕ್ಕೆ 4ಡಬ್ಲ್ಯುಡಿ ಮತ್ತು 2ಡಬ್ಲ್ಯೂಡಿ ವೆರಿಯೆಂಟ್‌ಗಳಲ್ಲಿ ಮಾರಾಟವಾಗುತ್ತಿದ್ದು, ಎರಡು ಮಾದರಿಯಲ್ಲೂ ಸುಧಾರಿತ ವಿನ್ಯಾಸದ ಆಸನಗಳು, ಹೀಟ್ ರಿಜೆಕ್ಷನ್ ಗ್ಲಾಸ್, ಸುಧಾರಿತ ಮಾದರಿಯ ಸ್ಪಿಕರ್ಸ್ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಮತ್ತಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬರಲಿವೆ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಹಾಗೆಯೇ ಇನೋವಾ ಕ್ರಿಸ್ಟಾ ಕೂಡಾ ಸುಧಾರಿತ ವಿನ್ಯಾಸದ ಆಸನಗಳು, ಹೀಟ್ ರಿಜೆಕ್ಷನ್ ಗ್ಲಾಸ್, ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್ ಮತ್ತು ಸುಧಾರಿತ ಮಾದರಿಯ ಸ್ಪಿಕರ್ಸ್ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, ಗ್ರಾಹಕರ ಬೇಡಿಕೆಯೆಂತೆ ಜೆಡ್‌ಎಕ್ಸ್ ಎಂಟಿ ಮತ್ತು ಜೆಡ್ಎಕ್ಸ್ ಎಟಿ ಮಾದರಿಗಳಲ್ಲಿ ನ್ಯೂ ಐವೆರಿ ಶೆಡಿಂಗ್ ನೀಡಲಾಗುತ್ತಿದೆ.

ಮತ್ತಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬರಲಿವೆ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಹೀಗಾಗಿ ಹೊಸ ಸೌಲಭ್ಯ ಪ್ರೇರಿತ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಕಾರುಗಳ ಬೆಲೆಗಳು ತುಸು ದುಬಾರಿ ಎನ್ನಿಸಲಿದ್ದು, ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಆರಂಭಿಕವಾಗಿ ರೂ. 12 ಸಾವಿರದಿಂದ ರೂ.18 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದಾಗಿದೆ.

ಮತ್ತಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬರಲಿವೆ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಇನ್ನು ಟೊಯೊಟಾ ಸಂಸ್ಥೆಯು ಕ್ಯಾಬ್ ಆಪರೇಟರ್ಸ್‌ಗಳಿಗಾಗಿ ಕಳೆದ ತಿಂಗಳು ಇನೋವಾ ಕ್ರಿಸ್ಟಾ ಮಾದರಿಯಲ್ಲಿ ಹೊಸದೊಂದು ವೆರಿಯೆಂಟ್ ಬಿಡುಗಡೆ ಮಾಡಿದ್ದು, ಟೂರಿಸ್ಟ್ ವಿಭಾಗದಲ್ಲಿನ ಕಾರ್ಯಾಚರಣೆಯ ಉದ್ದೇಶಕ್ಕಾಗಿ ಜಿ ಪ್ಲಸ್ ಎನ್ನುವ ಹೊಸ ಆವೃತ್ತಿಯನ್ನು ಹೊರತರಲಾಗಿದೆ.

MOST READ: ಎಲೆಕ್ಟ್ರಿಕ್ ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಮತ್ತಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬರಲಿವೆ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಜಿ ಪ್ಲಸ್ ಆವೃತ್ತಿಯು 7 ಆಸನವುಳ್ಳ ಮಾದರಿಗೆ ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.15.57 ಲಕ್ಷ ಹಾಗು ಎಂಟು ಆಸನವುಳ್ಳ ಮಾದರಿಗೆ ರೂ. 15.62 ಲಕ್ಷ ಬೆಲೆ ಹೊಂದಿದ್ದು, ಇಷ್ಟು ದಿನ ಎಂಟ್ರಿ ಲೆವೆಲ್ ಆಗಿ ಮಾರಾಟಗೊಳ್ಳುತ್ತಿದ್ದ ಜಿಎಕ್ಸ್‌ಗಿಂತ ಕೆಳ ಮಾದರಿಯಲ್ಲಿ ಸ್ಥಾನ ಪಡೆದುಕೊಂಡಿರಲಿದೆ.

ಮತ್ತಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬರಲಿವೆ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಎಂಜಿನ್ ಸಾಮರ್ಥ್ಯ

ಟೊಯೊಟಾ ಇನೋವಾ ಕ್ರಿಸ್ಟಾ ಜಿ ಪ್ಲಸ್ ಮಾದರಿಯು 2.4-ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 150 ಬಿಹೆಚ್‍ಪಿ ಮತ್ತು 343ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ಕಾರುಗಳ ಫ್ಯಾಮಿಲಿ ಪ್ಲಾನಿಂಗ್ ಮಾಡಲು ಮುಂದಾದ ಸುಪ್ರೀಂ ಕೋರ್ಟ್

ಮತ್ತಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬರಲಿವೆ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಇದರೊಂದಿಗೆ 2018ರ ಡಿಸೆಂಬರ್ ತಿಂಗಳಿನಲ್ಲಿ ಮಹೀಂದ್ರಾ ಮರಾಜೊ ಮತ್ತು ಎರ್ಟಿಗಾ ಕಾರುಗಳನ್ನು ಹಿಂದಿಕ್ಕಿ ಒಂದೇ ತಿಂಗಳಿನಲ್ಲಿ ಬರೊಬ್ಬರಿ 11,200 ಯೂನಿಟ್ ಕಾರುಗಳ ಬುಕ್ಕಿಂಗ್ ಪಡೆದುಕೊಂಡಿದ್ದ ಇನೋವಾ ಕ್ರಿಸ್ಟಾ ಕಾರು ಟೊಯೊಟಾ ಸಂಸ್ಥೆಗೆ ಬರೊಬ್ಬರಿ ರೂ. 2,200 ಕೋಟಿಯ ಆದಾಯವನ್ನು ತಂದುಕೊಟ್ಟಿತ್ತು.

Most Read Articles

Kannada
Read more on ಟೊಯೊಟಾ toyota
English summary
2019 Toyota fortuner and Innova Crysta India Launch Details. Read in Kannada.
Story first published: Friday, April 5, 2019, 18:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X