ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ಭಾರತದಲ್ಲಿ ಹೊಸ ಕಾರುಗಳ ಮಾರಾಟ ಜೋರಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಹೊಸ ವೈಶಿಷ್ಟ್ಯತೆಯುಳ್ಳ ಕಾರುಗಳು ಬಿಡುಗಡೆಯಾಗುತ್ತಿವೆ. ಹೀಗಾಗಿ ಕಾರು ಖರೀದಿದಾರರನ್ನು ಸೆಳೆಯಲು ಪೈಪೋಟಿ ನಡೆಸಿರುವ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಹೊಸ ಕಾರುಗಳನ್ನು ಪರಿಚಯಿಸುತ್ತಿವೆ.

ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ಸದ್ಯ ಭಾರತದಲ್ಲಿ ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ ಸಹ ಗ್ರಾಹಕರು ಹೊಸ ಕಾರು ಉತ್ಪಾದನಾ ಸಂಸ್ಥೆಗಳ ಉತ್ಪನ್ನಗಳ ಮೇಲೂ ಹೆಚ್ಚಿನ ಒಲವು ತೋರುತ್ತಿದ್ದು, ಎಂಜಿ ಮೋಟಾರ್ಸ್ ಮತ್ತು ಕಿಯಾ ಮೋಟಾರ್ಸ್ ನಂತಹ ಹೊಸ ಕಾರು ಉತ್ಪಾದನಾ ಸಂಸ್ಥೆಗಳು ಸಹ ತಮ್ಮ ವಿನೂತನ ಉತ್ಪನ್ನಗಳ ಮೂಲಕ ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ. ಹಾಗಾದ್ರೆ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರುಗಳು ಯಾವವು? ಬಿಡುಗಡೆಯ ಅವಧಿ ಮತ್ತು ಬೆಲೆ ಎಷ್ಟು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ಹ್ಯುಂಡೈ ವೆನ್ಯೂ

ಹ್ಯುಂಡೈ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಇದೇ ತಿಂಗಳು 21ರಂದು ಬಿಡುಗಡೆಯಾಗುತ್ತಿದ್ದು, ಅಂತಿಮ ಹಂತದ ಸ್ಪಾಟ್ ಟೆಸ್ಟಿಂಗ್ ಪೂರ್ಣಗೊಳಿಸುತ್ತಿರುವ ವೆನ್ಯೂ ಕಾರು ಕಂಪ್ಯಾಕ್ಟ್ ಎಸ್‌ಯುವಿ ಪ್ರಿಯರ ಬೇಡಿಕೆಯೆಂತೆ ಹಲವಾರು ಹೊಸ ಆಯ್ಕೆಯನ್ನು ಹೊತ್ತು ಬರುವುದು ಬಹುತೇಕ ಖಚಿತವಾಗಿದೆ.

ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ವೆನ್ಯೂ ಕಾರುಗಳು ಒಟ್ಟು ಮೂರು ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಾಗುತ್ತಿದ್ದು, ಎಂಟ್ರಿ ಲೆವಲ್‌ನಲ್ಲಿ 1.0-ಲೀಟರ್ ತ್ರಿ ಸಿಲಿಂಡರ್ ಎಂಜಿನ್ ಮಾರಾಟವಾಗಲಿದ್ದರೆ, ಟಾಪ್ ಎಂಡ್ ಮಾದರಿಯಲ್ಲಿ 1.4 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ಹೊಂದಿರಲಿದೆ.

ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ಈ ಮೂರು ಎಂಜಿನ್ ಮಾದರಿಗಳಲ್ಲಿ ಡೀಸೆಲ್ ಎಂಜಿನ್‌ಗಿಂತ ಪೆಟ್ರೋಲ್ ಆವೃತ್ತಿಗಳ ಮೇಲೆ ಹೆಚ್ಚಿನ ಒತ್ತು ನೀಡಿರುವ ಹ್ಯುಂಡೈ ಸಂಸ್ಥೆಯು ಒಟ್ಟು 13 ವೆರಿಯೆಂಟ್‌ಗಳನ್ನು ಒದಗಿಸಲಿದ್ದು, 7 ಸಾಮಾನ್ಯ ಮಾದರಿಯ ಬಣ್ಣಗಳ ಆಯ್ಕೆ ಹಾಗೂ 3 ಡ್ಯುಯಲ್ ಟೋನ್ ಬಣ್ಣಗಳಲ್ಲಿ ಆಯ್ಕೆಯಲ್ಲಿ ವೆನ್ಯೂ ಲಭ್ಯವಿರಲಿದೆಯೆಂತೆ.

ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ಹೀಗಾಗಿ ಹೊಸ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ, ಆರಂಭಿಕವಾಗಿ ರೂ. 7.50 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.10 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಮಾರುತಿ ಸುಜುಕಿ ಬ್ರೆಝಾ ಮತ್ತು ಮಹೀಂದ್ರಾ ಎಕ್ಸ್‌ಯುವಿ 300 ಕಾರಿಗೆ ಪೈಪೋಟಿಯಾಗಿ ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ವೆನ್ಯೂ ಕಾರಿನಲ್ಲಿ ಒದಗಿಸಿರುವುದು ಈಗಾಗಲೇ ಸ್ಪಾಟ್ ಟೆಸ್ಟಿಂಗ್ ವೇಳೆ ಖಚಿತವಾಗಿದೆ.

ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ಎಂಜಿ ಮೋಟಾರ್ ಹೆಕ್ಟರ್

ಎಸ್‌ಯುವಿ ಪ್ರಿಯರ ಬಹುನೀರಿಕ್ಷಿತ ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ ಮಾದರಿಯು ಜೂನ್ ಆರಂಭದಲ್ಲಿ ಬಿಡುಗಡೆಯಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಹೊಸ ಕಾರು ಖರೀದಿಗಾಗಿ ಇದೇ ತಿಂಗಳು 15ರ ನಂತರ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಲಾಗುತ್ತಿದೆ.

ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಹೆಕ್ಟರ್ ಎಸ್‌ಯುವಿ ಮಾದರಿಯು ಮಾರುಕಟ್ಟೆಯಲ್ಲಿರುವ ಪ್ರಮುಖ ಎಸ್‌ಯುವಿ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಸುಳಿವು ನೀಡಿದ್ದು, ಇ-ಸಿಮ್ ಪ್ರೇರಿತ ಗೂಗಲ್ ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಂ ಪಡೆದುಕೊಂಡ ದೇಶದ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ಹೆಕ್ಟರ್ ಕಾರು ಜೀಪ್ ಕಂಪಾಸ್ ಎಸ್‌ಯುವಿ ಮಾದರಿಯಲ್ಲೇ ಬಾಡಿ ಕಿಟ್ ಹೊಂದಿದ್ದು, ಬಿಎಸ್-6 ಎಂಜಿನ್ ಸೌಲಭ್ಯದೊಂದಿಗೆ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್(ಎಫ್‌ಸಿಎ ಯಿಂದ ಎರವಲು) ಪಡೆದುಕೊಂಡಿದೆ. ಈ ಮೂಲಕ ಪೆಟ್ರೋಲ್ ಆವೃತ್ತಿಯು 160-ಬಿಎಚ್‌ಪಿ, 200-ಎನ್ಎಂ ಉತ್ಪಾದಿಸಿದ್ದಲ್ಲಿ ಡೀಸೆಲ್ ಆವೃತ್ತಿಯು 170-ಬಿಎಚ್‌ಪಿ, 340-ಎನ್ಎಂ ಟಾರ್ಕ್ ಉತ್ಪಾದನೆ ಸಾಮಾರ್ಥ್ಯ ಹೊಂದಿದ್ದು, ಕಾರಿನ ಬೆಲೆಗಳು ಕೂಡಾ ಆಕರ್ಷಕವಾಗಿರಲಿವೆ ಎನ್ನಲಾಗಿದೆ.

ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ಹೆಕ್ಟರ್ ಹೊಸ ಕಾರಿನ ಬೆಲೆಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 19 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಭಾರತದಲ್ಲಿ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಿಗೆ ಪ್ರಬಲ ಪೈಪೋಟಿ ನೀಡಲು ಅಣಿಯಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ಟೊಯೊಟಾ ಗ್ಲಾಂಝಾ

ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಭಾರತದಲ್ಲಿ ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರುಗಳನ್ನು ಉತ್ಪಾದನೆ ಮಾಡುವ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆಯ ಭಾಗವಾಗಿ ಮಾರುತಿ ಸುಜುಕಿ ಜನಪ್ರಿಯ ಬಲೆನೊ ಮತ್ತು ಬ್ರೆಝಾ ಕಾರುಗಳನ್ನು ಟೊಯೊಟಾ ಸಂಸ್ಥೆಯು ರೀ ಬ್ಯಾಡ್ಜ್‌ನೊಂದಿಗೆ ಮರುಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸಲಾಗುತ್ತಿದೆ.

ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೊ ಕಾರನ್ನು ಗ್ಲಾಂಝಾ ಹೆಸರಿನೊಂದಿಗೆ ಉತ್ಪಾದನೆ ಮಾಡಿ ಮಾರಾಟ ಮಾಡುವ ಜವಾಬ್ದಾರಿಯನ್ನು ಪೂರ್ಣಪ್ರಮಾಣದಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿರುವ ಟೊಯೊಟಾ ಸಂಸ್ಥೆಯು ಹೊಸ ಕಾರನ್ನು ಮುಂದಿನ ತಿಂಗಳು ಜೂನ್ ಆರಂಭದಲ್ಲಿ ಬಿಡುಗಡೆಯ ಸುಳಿವು ನೀಡಿದ್ದು, ಗ್ಲಾಂಝ್ ಹೆಸರಿನಲ್ಲಿ ಬಿಡುಗಡೆಯಾಗುವ ಹೊಸ ಕಾರು ಈಗಾಗಲೇ ಡೀಲರ್ಸ್ ಯಾರ್ಡ್ ತಲುಪುವ ಮೂಲಕ ಟೆಸ್ಟ್ ಡ್ರೈವ್ ಪ್ರಕ್ರಿಯೆಗೆ ಸಿದ್ದವಾಗುತ್ತಿವೆ.

MOST READ: ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ಇದಕ್ಕೆ ಪೂರಕ ಎಂಬಂತೆ ಗ್ಲಾಂಝ್ ಹೆಸರಿನಲ್ಲಿ ಬಲೆನೊ ಕಾರನ್ನು ಮರು ಅಭಿವೃದ್ಧಿಪಡಿಸಿ ಟೀಸರ್ ಬಿಡುಗಡೆ ಮಾಡಿದ್ದು, ಹೊಸ ಗ್ಲಾಂಝ್ ಕಾರು ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಕೆಲವು ಗುರುತರ ಬದಲಾವಣೆಗಳನ್ನು ಪಡೆದುಕೊಂಡಿರುವುದು ಸ್ಪಷ್ಟವಾಗಿದೆ.

ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ಮಾಹಿತಿ ಪ್ರಕಾರ, ಹೊಸ ಗ್ಲಾಂಝ್ ಕಾರು ಬಲೆನೊ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಮಾದರಿಯನ್ನೇ ಪಡೆದುಕೊಳ್ಳುವುದರ ಜೊತೆಗೆ ಎಲೆಕ್ಟ್ರಿಕ್ ಆವೃತ್ತಿಯಲ್ಲೂ ಅನಾವರಣಗೊಳ್ಳಲಿದ್ದು, ಹೊಸ ಕಾರು ಬಲೆನೊ ಕಾರಿಗಿಂತ ತುಸು ಹೆಚ್ಚಿನ ಮಟ್ಟದ ಪ್ರೀಮಿಯಂ ಸೌಲಭ್ಯಗಳಿರುವುದರಿಂದ ಕಾರಿನ ಬೆಲೆಯು ರೂ.7 ಲಕ್ಷದಿಂದ 10 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ಟಾಟಾ ಆಲ್‌ಟ್ರೋಜ್

ಟಾಟಾ ಮೋಟಾರ್ಸ್ ವಿನೂತನ ವಿನ್ಯಾಸದ ಆಲ್‌ಟ್ರೋಜ್ ಕಾರು ಸದ್ಯ ಭಾರತೀಯ ಆಟೋ ಉದ್ಯಮದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ಬಿಡುಗಡೆಯ ಉದ್ದೇಶದಿಂದ ದೇಶದ ವಿವಿಧಡೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳ ಜೊತೆಗೆ ಎಲೆಕ್ಟ್ರಿಕ್ ವರ್ಷನ್ ಆಲ್‌ಟ್ರೋಜ್ ಕೂಡಾ ಬಿಡುಗಡೆಯಾಗುತ್ತಿದ್ದು, ಟಾಟಾ ಕಾರು ಉತ್ಪನ್ನಗಳಲ್ಲೇ ಇವು ಅತಿಹೆಚ್ಚು ಸದ್ದು ಮಾಡುತ್ತಿವೆ.

ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಿ ಮಾರುಕಟ್ಟೆಗೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ.

ಕುತೂಹಲ ಹುಟ್ಟುಹಾಕಿವೆ ಬಿಡುಗಡೆಯಾಗಲಿರುವ ಈ 4 ಹೊಸ ಕಾರುಗಳು..!

ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು ಇದೇ ವರ್ಷ ಜೂನ್ ಅಥವಾ ಜುಲೈ ಅಂತ್ಯಕ್ಕೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸಾಮಾನ್ಯ ಆವೃತ್ತಿಗೆ ರೂ.6 ಲಕ್ಷದಿಂದ ರೂ.8 ಲಕ್ಷ ಮತ್ತು ಆಲ್‌ಟ್ರೊಜ್ ಎಲೆಕ್ಟ್ರಿಕ್ ಕಾರಿನ ಬೆಲೆಯನ್ನು ರೂ.10 ಲಕ್ಷದೊಳಗೆ ನಿಗದಿಯಾಗುವ ಸಾಧ್ಯತೆಗಳಿವೆ.

Article Published On: Saturday, May 4, 2019, 17:24 [IST]
English summary
4 cars launching soon in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+