ಒಂದು ಮಿಲಿಯನ್ ಉತ್ಪಾದನಾ ಮೈಲಿಗಲ್ಲು ತಲುಪಿದ ಮಹೀಂದ್ರಾ ಘಟಕಗಳು

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಚಕಾನ್, ಜಹೀರಾಬಾದ್ ಹಾಗೂ ಹರಿದ್ವಾರಗಳಲ್ಲಿರುವ ಪ್ರತಿಯೊಂದು ಉತ್ಪಾದನಾ ಘಟಕಗಳು ಒಂದು ಮಿಲಿಯನ್ ಉತ್ಪಾದನೆಯ ಮೈಲಿಗಲ್ಲನ್ನು ತಲುಪಿವೆ. ಈ ಮೈಲಿಗಲ್ಲಿನೊಂದಿಗೆ ಈ ಮೂರು ಘಟಕಗಳು, ಈಗಾಗಲೇ ಒಂದು ಮಿಲಿಯನ್ ವಾಹನ ಉತ್ಪಾದನೆಯ ಮೈಲಿಗಲ್ಲನ್ನು ಸಾಧಿಸಿರುವ ನಾಸಿಕ್ ಹಾಗೂ ಮುಂಬೈನಲ್ಲಿರುವ ಖಾಂಡಿವಲಿ ಘಟಕಗಳ ಸಾಲಿಗೆ ಸೇರಿವೆ.

ಒಂದು ಮಿಲಿಯನ್ ಉತ್ಪಾದನಾ ಮೈಲಿಗಲ್ಲು ತಲುಪಿದ ಮಹೀಂದ್ರಾ ಘಟಕಗಳು

ಈ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿರುವ ಮಹೀಂದ್ರಾ ಆಂಡ್ ಮಹೀಂದ್ರಾ ಆಟೋಮೋಟಿವ್ ವಲಯದ ಅಧ್ಯಕ್ಷ ರಾಜನ್ ವಾಧೇರಾರವರು ಈ ಬಗ್ಗೆ ಮಾತನಾಡಿ ಈ ಸಾಧನೆಯು ಮಹೀಂದ್ರಾ ಕಂಪನಿಯ ವಾಹನ ಉತ್ಪಾದನೆಯ ಪ್ರಯಾಣದಲ್ಲಿ ಮಹತ್ವದ ಕ್ಷಣವಾಗಿದೆ. ಯಾವುದೇ ಸವಾಲುಗಳನ್ನುಎದುರಿಸುವ ನಮ್ಮ ಮನೋಭಾವ ಹಾಗೂ ಮೂರು ಉತ್ಪಾದನಾ ಘಟಕಗಳಲ್ಲಿ ನಮ್ಮ ಪ್ರತಿಯೊಬ್ಬ ಸಿಬ್ಬಂದಿಯ ಬದ್ದತೆಯಿಂದಾಗಿ ಇದು ಸಾಧ್ಯವಾಗಿದೆ.

ಒಂದು ಮಿಲಿಯನ್ ಉತ್ಪಾದನಾ ಮೈಲಿಗಲ್ಲು ತಲುಪಿದ ಮಹೀಂದ್ರಾ ಘಟಕಗಳು

ಮೇಕ್ ಇನ್ ಇಂಡಿಯಾ ಯೋಜನೆಗೆ ನಾವು ಬದ್ಧರಾಗಿದ್ದು ಮೂರು ಬೇರೆ ಬೇರೆ ಘಟಕಗಳಿಂದ ಹೊರ ಬಂದಿರುವ ಈ ಮಿಲಿಯನ್ ವಾಹನಗಳ ಉತ್ಪಾದನೆಯು ನಮ್ಮ ಉತ್ಪಾದನಾ ಘಟಕಗಳ ಶ್ರೇಷ್ಠತೆ ಹಾಗೂ ಕಾರ್ಯಾಚರಣೆಯ ದಕ್ಷತೆಗೆ ಉತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದರು. ಮಹೀಂದ್ರಾ ಆಂಡ್ ಮಹೀಂದ್ರಾ ವಾಹನ ಉತ್ಪಾದನಾ ವಿಭಾಗದ ಮುಖ್ಯಸ್ಥ ವಿಜಯ್ ಕಲ್ರಾ‍‍ರವರು ಮಾತನಾಡಿ, ನಿಗದಿತ ಅವಧಿಯೊಳಗೆ ಈ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸುವಲ್ಲಿ ಚಕಾನ್, ಜಹೀರಾಬಾದ್ ಹಾಗೂ ಹರಿದ್ವಾರ ಘಟಕದಲ್ಲಿರುವ ಅತ್ಯಾಧುನಿಕ ಸೌಲಭ್ಯಗಳು ಪ್ರಮುಖ ಪಾತ್ರ ವಹಿಸಿವೆ.

ಒಂದು ಮಿಲಿಯನ್ ಉತ್ಪಾದನಾ ಮೈಲಿಗಲ್ಲು ತಲುಪಿದ ಮಹೀಂದ್ರಾ ಘಟಕಗಳು

ಈ ಸಾಧನೆಯು ನಮ್ಮ ಎಲ್ಲಾ ಘಟಕಗಳು ಭವಿಷ್ಯದಲ್ಲಿ ಸಾಧಿಸಲಿರುವ ಮೈಲುಗಲ್ಲುಗಳಿಗೆ ಮೆಟ್ಟಿಲಾಗಲಿದೆ ಎಂದು ತಿಳಿಸಿದರು. ಮಹಾರಾಷ್ಟ್ರದ ಚಕಾನ್ ಘಟಕದಲ್ಲಿ ವರ್ಷಕ್ಕೆ 3,20,000 ವಾಹನಗಳನ್ನು ಉತ್ಪಾದಿಸುವ ಗ್ರೀನ್ ಫೀಲ್ಡ್ ಸೌಲಭ್ಯವಿದ್ದು, ಇತ್ತೀಚಿಗೆ ಐಎಸ್ಒ 9001, ಐಎಸ್ಒ 140001 ಹಾಗೂ ಒಹೆಚ್ಎಸ್ಎಎಸ್ ಪ್ರಮಾಣಪತ್ರಗಳನ್ನು ಪಡೆದಿದೆ. ಮಾರ್ಚ್ 2010ರಿಂದ ಕಾರ್ಯನಿರ್ವಹಿಸುತ್ತಿರುವ ಈ ಘಟಕದಲ್ಲಿ ಎಸ್‍‍ಯುವಿ, ಟ್ರಕ್‌ ಹಾಗೂ ನಿರ್ಮಾಣ ಬಿಡಿಭಾಗಗಳನ್ನು ತಯಾರಿಸಲಾಗುತ್ತದೆ.

ಒಂದು ಮಿಲಿಯನ್ ಉತ್ಪಾದನಾ ಮೈಲಿಗಲ್ಲು ತಲುಪಿದ ಮಹೀಂದ್ರಾ ಘಟಕಗಳು

1985ರಲ್ಲಿ ಸ್ಥಾಪನೆಯಾದ ತೆಲಂಗಾಣ ರಾಜ್ಯದಲ್ಲಿರುವ ಜಹೀರಾಬಾದ್ ಘಟಕದಲ್ಲಿ ಯುವಿ, ತ್ರಿಚಕ್ರ ವಾಹನ, ಎಲ್‌ಸಿವಿ ಹಾಗೂ ಜೀಟೊ ಮಿನಿ ಟ್ರಕ್‍‍ಗಳನ್ನು ಉತ್ಪಾದಿಸಲಾಗುತ್ತದೆ. ಈ ಘಟಕವು 2005ರಲ್ಲಿ 1,00,000 ವಾಹನಗಳ ಉತ್ಪಾದನೆಯ ಮೈಲಿಗಲ್ಲನ್ನು ಹಾಗೂ 2013ರಲ್ಲಿ 5,00,000 ವಾಹನಗಳ ಉತ್ಪಾದನೆಯ ಮೈಲಿಗಲ್ಲನ್ನು ದಾಟಿತು. 2015ರಲ್ಲಿ ಜೀಟೊ ವಾಹನ ಬಿಡುಗಡೆಯಾದ ನಂತರ, ಉತ್ಪಾದನೆಯು ವೇಗವಾಗಿದೆ.

ಒಂದು ಮಿಲಿಯನ್ ಉತ್ಪಾದನಾ ಮೈಲಿಗಲ್ಲು ತಲುಪಿದ ಮಹೀಂದ್ರಾ ಘಟಕಗಳು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

2019ರ ಏಪ್ರಿಲ್‌ನಲ್ಲಿ ಈ ಘಟಕವು ಒಂದು ಮಿಲಿಯನ್ ವಾಹನಗಳ ಉತ್ಪಾದನೆಯ ಮೈಲಿಗಲ್ಲನ್ನು ದಾಟಿದೆ. 2005ರ ಡಿಸೆಂಬರ್‍‍ನಿಂದ ಕಾರ್ಯಚರಿಸುತ್ತಿರುವ ಮಹೀಂದ್ರಾದ ಹರಿದ್ವಾರ ಘಟಕದಲ್ಲಿ ನಾಲ್ಕು ಮಾದರಿಗಳನ್ನು ಹಾಗೂ 44 ವೇರಿಯಂಟ್‍‍ಗಳನ್ನು ತಯಾರಿಸಲಾಗುತ್ತದೆ. ಮೊದಲ 5,00,000 ವಾಹನಗಳನ್ನು ಉತ್ಪಾದಿಸಲು ಹರಿದ್ವಾರ ಘಟಕಕ್ಕೆ ಎಂಟು ವರ್ಷಗಳು ಬೇಕಾದವು. ಮುಂದಿನ ಅರ್ಧ ಮಿಲಿಯನ್ ವಾಹನಗಳನ್ನು ಐದು ವರ್ಷಗಳ ಅವಧಿಯಲ್ಲಿ ತಯಾರಿಸಿದೆ.

ಒಂದು ಮಿಲಿಯನ್ ಉತ್ಪಾದನಾ ಮೈಲಿಗಲ್ಲು ತಲುಪಿದ ಮಹೀಂದ್ರಾ ಘಟಕಗಳು

ಮಹೀಂದ್ರಾ ಕಂಪನಿಯು ಎಲ್ಲಾ ರೀತಿಯ ವಾಹನಗಳ ಉತ್ಪಾದನೆಯಲ್ಲಿ ತೊಡಗಿದ್ದು, ವಾಣಿಜ್ಯ ವಾಹನ (ತ್ರಿಚಕ್ರ ವಾಹನ, ಲಘು ವಾಣಿಜ್ಯ ವಾಹನ ಹಾಗೂ ಭಾರೀ ವಾಣಿಜ್ಯ ವಾಹನ), ಯುಟಿಲಿಟಿ ವಾಹನ, ಸ್ಪೋರ್ಟ್ಸ್ ಯುಟಿಲಿಟಿ ವಾಹನ (ಎಂಟ್ರಿ ಲೆವೆಲ್‍‍ನಿಂದ ಪ್ರೀಮಿಯಂ ಎಸ್‍‍ಯುವಿವರೆಗೆ), ಸೆಡಾನ್ ಹಾಗೂ ಎಲೆಕ್ಟ್ರಿಕ್ ವಾಹನಗಳವರೆಗೆ ಎಲ್ಲಾ ಘಟಕಗಳಲ್ಲಿಯೂ ಎಲ್ಲಾ ರೀತಿಯ ವಾಹನಗಳನ್ನು ಉತ್ಪಾದಿಸುತ್ತದೆ.

Most Read Articles

Kannada
English summary
5 Mahindra plants cross the 1 million unit production milestone - Read in kannada
Story first published: Wednesday, July 10, 2019, 18:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X