ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಕಪ್ಪು ಬಣ್ಣದ ಟಾಟಾ ಹ್ಯಾರಿಯರ್

ದೇಶಿಯ ಮಾರುಕಟ್ಟೆಯಲ್ಲಿನ ಮಧ್ಯಮ ಗಾತ್ರದ ಎಸ್‍‍ಯು‍‍ವಿ ಸೆಗ್‍‍ಮೆಂಟಿನಲ್ಲಿ ತೀವ್ರ ಪೈಪೋಟಿ ಎದುರಾಗಿದೆ. ಜೂನ್ ತಿಂಗಳಿನಲ್ಲಿ ಈ ಸೆಗ್‍‍ಮೆಂಟಿನಲ್ಲಿ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿರುವ ಎಂಜಿ ಹೆಕ್ಟರ್ ವಾಹನವನ್ನು ಬಿಡುಗಡೆಗೊಳಿಸಲಾಗಿತ್ತು.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಕಪ್ಪು ಬಣ್ಣದ ಟಾಟಾ ಹ್ಯಾರಿಯರ್

ಆಗಸ್ಟ್ 22ರಂದು ಬಹು ನಿರೀಕ್ಷಿತ ಕಿಯಾ ಸೆಲ್ಟೋಸ್ ಬಿಡುಗಡೆಯಾಗಲಿದೆ. ತನ್ನ ಎದುರಾಳಿ ಕಂಪನಿಗಳಿಂದ ತೀವ್ರ ಪೈಪೋಟಿಯನ್ನು ಎದುರಿಸುತ್ತಿರುವ ಟಾಟಾ ಮೋಟಾರ್ಸ್ ಸಹ ಈ ಸೆಗ್‍‍ಮೆಂಟಿನಲ್ಲಿ ತನ್ನದೇ ಆದ ಛಾಪನ್ನು ಒತ್ತಲು ಬಯಸಿದೆ. ಆದ ಕಾರಣ ಹ್ಯಾರಿಯರ್ ಎಸ್‍ಯುವಿಯನ್ನು ಅಭಿವೃದ್ದಿಪಡಿಸುತ್ತಿದೆ. ಹ್ಯಾರಿಯರ್ ಎಸ್‍‍ಯುವಿಯನ್ನು ಅಪ್‍‍‍ಡೇಟ್‍‍ಗೊಳಿಸಿ ಕಪ್ಪು ಬಣ್ಣದ ಥೀಮ್‍‍ನೊಂದಿಗೆ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಕಪ್ಪು ಬಣ್ಣದ ಟಾಟಾ ಹ್ಯಾರಿಯರ್

ಕಪ್ಪು ಬಣ್ಣದ ಟಾಟಾ ಹ್ಯಾರಿಯರ್ ಎಸ್‍‍ಯುವಿಯನ್ನು ಟಾಟಾ ಮೋಟಾರ್ಸ್‍‍ನ ವಾರ್ಷಿಕ ಸಭೆಯಲ್ಲಿ ಪ್ರದರ್ಶಿಸಲಾಗಿತ್ತು. ನೋಡಲು ಆಕರ್ಷಕವಾಗಿ ಕಾಣುವ ಹೊಸ ಹ್ಯಾರಿಯರ್ ಗ್ಲಾಸಿ ಬ್ಲಾಕ್ ಬಣ್ಣವನ್ನು ಹೊಂದಿದೆ.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಕಪ್ಪು ಬಣ್ಣದ ಟಾಟಾ ಹ್ಯಾರಿಯರ್

ಇದರ ಜೊತೆಗೆ ಕಪ್ಪು ಬಣ್ಣದ 17 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಇದರ ಜೊತೆಗೆ ಮುಂಭಾಗದಲ್ಲಿರುವ ಸ್ಕಿಡ್ ಪ್ಲೇಟ್, ಹಿಂಭಾಗದ ಬಂಪರ್‍‍ನಲ್ಲಿರುವ ಮ್ಯಾಟ್ ಸಿಲ್ವರ್ ಎಲಿಮೆಂಟ್‍‍ಗಳು ಸಹ ಕಪ್ಪು ಬಣ್ಣವನ್ನು ಹೊಂದಿವೆ. ವಿಂಡೊ ಲೈನ್‍‍ನಲ್ಲಿರುವ ಕ್ರೋಮ್ ಫಿನಿಶ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಕಪ್ಪು ಬಣ್ಣದ ಟಾಟಾ ಹ್ಯಾರಿಯರ್

ಹೊರಭಾಗದಂತೆಯೇ, ಟಾಟಾ ಹ್ಯಾರಿಯರ್‍‍ನ ಇಂಟಿರಿಯರ್ ಸಹ ಪೂರ್ತಿಯಾಗಿ ಕಪ್ಪು ಬಣ್ಣವನ್ನು ಹೊಂದಿದೆ. ಸ್ಟಾಂಡರ್ಡ್ ಹ್ಯಾರಿಯರ್‍‍ನಲ್ಲಿದ್ದ ಬ್ರೌನ್ ಬಣ್ಣದ ಅಪ್‍‍ಹೊಲೆಸ್ಟರಿಯ ಬದಲಿಗೆ ಹೊಸದಾಗಿ ಕಪ್ಪು ಬಣ್ಣದ ಬ್ಲಾಕ್ ಲೆದರ್ ಅಪ್‍‍ಹೊಲೆಸ್ಟರಿಯನ್ನು ಅಳವಡಿಸಲಾಗಿದೆ.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಕಪ್ಪು ಬಣ್ಣದ ಟಾಟಾ ಹ್ಯಾರಿಯರ್

ಡ್ಯಾಶ್‍‍ಬೋರ್ಡ್ ಮೇಲಿದ್ದ ಫಾಕ್ಸ್ ವುಡ್ ಇನ್ಸರ್ಟ್ ಬದಲಿಗೆ ಟೆಕ್ಚರ್ ಮ್ಯಾಟ್ ಗ್ರೇ ಪ್ಯಾನೆಲ್ ಅಳವಡಿಸಲಾಗಿದೆ. ಈ ಬದಲಾವಣೆಗಳನ್ನು ಹೊರತುಪಡಿಸಿದರೆ, ಹೊಸ ಬ್ಲಾಕ್ ಹ್ಯಾರಿಯರ್ ಸ್ಟಾಂಡರ್ಡ್ ಮಾದರಿಯ ಹ್ಯಾರಿಯರ್‍‍ನಂತೆ ಕಾಣುತ್ತದೆ.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಕಪ್ಪು ಬಣ್ಣದ ಟಾಟಾ ಹ್ಯಾರಿಯರ್

ಕಪ್ಪು ಬಣ್ಣದ ಹ್ಯಾರಿಯರ್ ಸರಣಿಗೆ ಹೊಸ ಸೇರ್ಪಡೆಯಾಗಿದೆ. ಇದನ್ನು ಸದ್ಯ ಲಭ್ಯವಿರುವ ಪೇಂಟ್ ಸ್ಕೀಮ್‌ಗಳ ಜೊತೆಗೆ ಮಾರಾಟ ಮಾಡಲಾಗುವುದು. ಟಾಟಾ ಹ್ಯಾರಿಯರ್ ಎಸ್‍‍ಯುವಿಯನ್ನು ಸದ್ಯಕ್ಕೆ ಕ್ಯಾಲಿಸ್ಟೊ ಕಾಪರ್, ಥರ್ಮಿಸ್ಟೊ ಗೋಲ್ಡ್, ಏರಿಯಲ್ ಸಿಲ್ವರ್, ಟೆಲಿಸ್ಟೊ ಗ್ರೇ, ಓರ್ಕಸ್ ವೈಟ್ ಹಾಗೂ ಇತ್ತೀಚೆಗೆ ಪರಿಚಯಿಸಲಾದ ಡ್ಯುಯಲ್ ಟೋನ್ ಬಣ್ಣಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಕಪ್ಪು ಬಣ್ಣದ ಟಾಟಾ ಹ್ಯಾರಿಯರ್

ಟಾಟಾ ಮೋಟಾರ್ಸ್, ಕಪ್ಪು ಬಣ್ಣದ ಟಾಟಾ ಹ್ಯಾರಿಯರ್ ಎಸ್‍‍ಯುವಿಯನ್ನು ಎಕ್ಸ್ ಶೋರೂಂ ದರದಂತೆ ರೂ.16.76 ಲಕ್ಷ ಬೆಲೆ ಹೊಂದಿರುವ, ಎಕ್ಸ್‌ ಝಡ್ ಡ್ಯುಯಲ್ ಟೋನ್ ಬೆಲೆಯಲ್ಲಿಯೇ ಮಾರಾಟ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಕಪ್ಪು ಬಣ್ಣದ ಟಾಟಾ ಹ್ಯಾರಿಯರ್

ಟಾಟಾ ಹ್ಯಾರಿಯರ್ ಎಸ್‍‍ಯುವಿಯನ್ನು ಮುಂಬರುವ ದಿನಗಳಲ್ಲಿ ವ್ಯಾಪಕವಾಗಿ ನವೀಕರಣಗೊಳಿಸಲಾಗುವುದು. ಇತ್ತೀಚೆಗೆ, ಬಿಎಸ್6 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಅಭಿವೃದ್ದಿಪಡಿಸಲಾಗಿರುವ ಸನ್‌ರೂಫ್‌ ಹೊಂದಿರುವ ಟಾಟಾ ಹ್ಯಾರಿಯರ್ ಎಸ್‍‍ಯುವಿಯ ಚಿತ್ರವನ್ನು ಪ್ರದರ್ಶಿಸಲಾಗಿತ್ತು.

MOST READ: ಬುಗಾಟಿ ಹೈಪರ್ ಕಾರು ಹೊಂದಿರುವ ಭಾರತೀಯರು

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಕಪ್ಪು ಬಣ್ಣದ ಟಾಟಾ ಹ್ಯಾರಿಯರ್

ಈಗ ಈ ಆಟೋಮ್ಯಾಟಿಕ್ ಮಾದರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಜೊತೆಗೆ, 2019ರ ಜಿನೀವಾ ಮೋಟರ್‌ ಶೋದಲ್ಲಿ ಬಜಾರ್ಡ್ ಎಂದು ಪ್ರದರ್ಶಿಸಲಾದ ಏಳು ಸೀಟುಗಳನ್ನು ಹೊಂದಿರುವ ಟಾಟಾ ಹ್ಯಾರಿಯರ್ ಎಸ್‍‍ಯುವಿಯನ್ನು ಸಹ ಬಿಡುಗಡೆಗೊಳಿಸಲಾಗುವುದು.

Article Published On: Wednesday, August 21, 2019, 12:50 [IST]
English summary
All-black Tata Harrier to be launched in August 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+