ಬಚ್ಚನ್ ಕುಟುಂಬದ ಸದಸ್ಯರ ಬಳಿಯಿರುವ ಐಷಾರಾಮಿ ಕಾರುಗಳಿವು

ಬಚ್ಚನ್ ಕುಟುಂಬವು ಬಾಲಿವುಡ್‍‍ನ ಅತ್ಯಂತ ಪ್ರಭಾವಶಾಲಿ ಕುಟುಂಬಗಳಲ್ಲಿ ಒಂದಾಗಿದೆ. ಬಚ್ಚನ್ ಅವರ ರಾಯಲ್ ಕುಟುಂಬವು ಓಡಾಡಲು ಹಲವಾರು ದುಬಾರಿ ಮತ್ತು ಐಷಾರಾಮಿ ಕಾರುಗಳನ್ನು ಹೊಂದಿದೆ.

ಬಚ್ಚನ್ ಕುಟುಂಬದ ಸದಸ್ಯರು ಬಳಿಯಿರುವ ಐಷಾರಾಮಿ ಕಾರುಗಳಿವು

ಬಚ್ಚನ್ ಕುಟುಂಬದಲ್ಲಿ ನಾಲ್ಕು ನಟರಿದ್ದಾರೆ. ಜಯ ಬಚ್ಚನ್ ಅವರು ರಾಜಕಾರಣಿಯು ಆಗಿದ್ದಾರೆ. ಬಚ್ಚನ್ ಕುಟುಂಬದ ಸದಸ್ಯರಿಗೆ ಕಾರುಗಳ ಕ್ರೇಜ್ ಹೆಚ್ಚಿದೆ. ಬಚ್ಚನ್ ಕುಟುಂಬದ ಸದಸ್ಯರು ದುಬಾರಿ ಮತ್ತು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಬಚ್ಚನ್ ಕುಟುಂಬದ ಸದ್ಯಸರು ಬಳಸುವ ಐಷಾರಾಮಿ ಮತ್ತು ದುಬಾರಿ ಕಾರುಗಳ ಪಟ್ಟಿ ಇಲ್ಲಿವೆ.

ಬಚ್ಚನ್ ಕುಟುಂಬದ ಸದಸ್ಯರು ಬಳಿಯಿರುವ ಐಷಾರಾಮಿ ಕಾರುಗಳಿವು

ಟೊಯೊಟಾ ಲ್ಯಾಂಡ್ ಕ್ರೂಸರ್

ಬಚ್ಚನ್ ಕುಟುಂಬದ ಗ್ಯಾರೇಜ್‍‍ನಲ್ಲಿ ಹಲವು ಐಷಾರಾಮಿ ಎಸ್‍‍ಯುವಿಗಳಿವೆ. ಇದರಲ್ಲಿ ಒಂದು ಟೊಯೊಟಾ ಲ್ಯಾಂಡ್ ಕ್ರೂಸರ್ ಆಗಿದೆ. ಇದು ಬಚ್ಚನ್ ಕುಟುಂಬದ ಒಡೆತನದ ಹಳೆಯ ವಾಹನಗಳಲ್ಲಿ ಒಂದಾಗಿದೆ. ಈ ಎಸ್‍‍ಯುವಿಯನ್ನು ಹೆಚ್ಚಾಗಿ ಬಿಗ್‍ ಬಿ ಅಮಿತಾಬ್ ಬಚ್ಚನ್ ಅವರು ಹೆಚ್ಚು ಉಪಯೋಗಿಸುತ್ತಾರೆ.

ಬಚ್ಚನ್ ಕುಟುಂಬದ ಸದಸ್ಯರು ಬಳಿಯಿರುವ ಐಷಾರಾಮಿ ಕಾರುಗಳಿವು

ಈ ವಾಹನವನ್ನು ಬಿಗ್ ಬಿ ಅವರು ಹಲವಾರು ಬಾರಿ ಡ್ರೈವ್ ಮಾಡಿದ್ದಾರೆ. ಈ ಎಸ್‍‍ಯುವಿಯು ಎಲ್‍ಸಿ200, 4.7 ಲೀಟರ್ ವಿ8 ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 262 ಬಿ‍‍ಹೆಚ್‍‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಚ್ಚನ್ ಕುಟುಂಬದ ಸದಸ್ಯರು ಬಳಿಯಿರುವ ಐಷಾರಾಮಿ ಕಾರುಗಳಿವು

ರೇಂಜ್ ರೋವರ್

ಅಮಿತಾಬ್ ಬಚ್ಚನ್ ಅವರು ತಮ್ಮ ಹಳೆಯ ರೇಂಜ್ ರೋವರ್ ಎಸ್‍‍ಯುವಿಯನ್ನು ಮಾರಾಟ ಮಾಡಿದ್ದಾರೆ. ಇವರ ಬಳಿ ಇದ್ದ ರೇಂಜ್ ರೋವರ್ ಬೆಲೆಯು ಬರೊಬ್ಬರಿ 2 ಕೋಟಿಗಳಾಗಿದೆ. ಈ ಎಸ್‍‍‍ಯುವಿ 4.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 345 ಬಿಹೆಚ್‍‍ಪಿ ಪವರ್ ಮತ್ತು 740 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಚ್ಚನ್ ಕುಟುಂಬದ ಸದಸ್ಯರು ಬಳಿಯಿರುವ ಐಷಾರಾಮಿ ಕಾರುಗಳಿವು

ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಕಾರ್ ಅನ್ನು ಬಿಗ್ ಬಿ ಅವರು ಹೊಂದಿದ್ದಾರೆ. ಈ ವಾಹನವು ಲಾಂಗ್ ವ್ಹೀಲ್‍‍ಬೇಸ್ ಆವೃತ್ತಿಯಾಗಿದೆ. ಇದರ ಬೆಲೆಯು ಸರಿಸುಮಾರು ರೂ.70 ಲಕ್ಷಗಳಾಗಿದೆ. ಈ ಕಾರು 2.1 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 163 ಬಿ‍‍ಹೆಚ್‍‍ಪಿ ಪವರ್ ಮತ್ತು 380 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಚ್ಚನ್ ಕುಟುಂಬದ ಸದಸ್ಯರು ಬಳಿಯಿರುವ ಐಷಾರಾಮಿ ಕಾರುಗಳಿವು

ಬೆಂಟ್ಲಿ ಕಾಂಟಿನೆಂಟಲ್ ಜಿಟಿ

ಐಷಾರಾಮಿ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರ್ ಅನ್ನು ಅಮಿತಾಬ್ ಬಚ್ಚನ್ ತಮ್ಮ ಮಗ ಅಭಿಷೇಕ್ ಅವರಿಗೆ ಉಡುಗೂರೆಯಾಗಿ ನೀಡಿದ್ದಾರೆ. ಅವರ ಬಳಿ ಇರುವ ಕಾಂಟಿನೆಂಟಲ್ ಜಿಟಿ 6.0 ಲೀಟರ್ ಡಬ್ಲ್ಯು 12 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 626 ಬಿ‍‍ಹೆಚ್‍‍ಪಿ ಪವರ್ ಮತ್ತು 820 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಚ್ಚನ್ ಕುಟುಂಬದ ಸದಸ್ಯರು ಬಳಿಯಿರುವ ಐಷಾರಾಮಿ ಕಾರುಗಳಿವು

ಆಡಿ ಎ8 ಎಲ್

ಜರ್ಮನ್ ಬ್ರ್ಯಾಂಡ್‍ನ ಆಡಿ ಎ8 ಎಲ್ ಅತ್ಯಂತ ದುಬಾರಿ ಸೆಡಾನ್ ಆಗಿದೆ. ಈ ಕಾರ್ ಅನ್ನು ಅನೇಕ ಬಾಲಿವುಡ್ ಸೆಲೆಬ್ರಿಟಿ‍‍ಗಳು ಹೊಂದಿದ್ದಾರೆ. ಈ ಕಾರು 4.2 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 350 ಬಿ‍‍ಹೆಚ್‍‍ಪಿ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಚ್ಚನ್ ಕುಟುಂಬದ ಸದಸ್ಯರು ಬಳಿಯಿರುವ ಐಷಾರಾಮಿ ಕಾರುಗಳಿವು

ಲೆಕ್ಸಸ್ ಎಲ್ಎಕ್ಸ್ 570

ಲೆಕ್ಸಸ್ ಇತ್ತೀಚಿಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಲೆಕ್ಸಸ್ ಎಲ್ಎಕ್ಸ್ 570 ಕಾರ್ ಅನ್ನು ಬಚ್ಚನ್ ಕುಟುಂಬದವರು ಹೊಂದಿದ್ದಾರೆ. ಈ ಎಸ್‍‍ಯುವಿ 5.7 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 362 ಬಿ‍‍ಹೆಚ್‍‍ಪಿ ಪವರ್ ಮತ್ತು 530 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಚ್ಚನ್ ಕುಟುಂಬದ ಸದಸ್ಯರು ಬಳಿಯಿರುವ ಐಷಾರಾಮಿ ಕಾರುಗಳಿವು

ಮರ್ಸಿಡಿಸ್ ಬೆಂಝ್ ಎಸ್500

ಬಿಗ್ ಬಿಯವರ ಸೊಸೆ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರು ಮರ್ಸಿಡಿಸ್ ಎಸ್-ಕ್ಲಾಸ್ ಕಾರ್ ಅನ್ನು ಹೊಂದಿದ್ದಾರೆ. ಇದು ಬೆಂಝ್ ಆವೃತ್ತಿಯಲ್ಲಿ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಮರ್ಸಿಡಿಸ್ ಎಸ್‍-ಕ್ಲಾಸ್ ಎಸ್‍500 ಕಾರು 4.7 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 453 ಬಿ‍‍ಹೆಚ್‍‍ಪಿ ಪವರ್ ಮತ್ತು 700 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಚ್ಚನ್ ಕುಟುಂಬದ ಸದಸ್ಯರು ಬಳಿಯಿರುವ ಐಷಾರಾಮಿ ಕಾರುಗಳಿವು

ಮಿನಿ ಕೂಪರ್

ಆಕರ್ಷಕ ಮಿನಿ ಕೂಪರ್ ಕಾರ್ ಅನ್ನು ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಹೊಂದಿದ್ದಾರೆ. ಈ ಕಾರಿನ ನೋಂದಣಿ ಸಂಖ್ಯೆಯು 2882 ಆಗಿದೆ.

ಬಚ್ಚನ್ ಕುಟುಂಬದ ಸದಸ್ಯರು ಬಳಿಯಿರುವ ಐಷಾರಾಮಿ ಕಾರುಗಳಿವು

ಟೊಯೋಟಾ ಕ್ಯಾಮ್ರಿ

ಟೊಯೊಟಾ ಆವೃತ್ತಿಯಲ್ಲಿ ಕ್ಯಾಮ್ರಿ ಹೆಚ್ಚು ಸುರಕ್ಷಿತ ಆಯ್ಕೆಗಳನ್ನು ಹೊಂದಿರುವ ಕಾರುಗಳಲ್ಲಿ ಒಂದಾಗಿದೆ. ಟೊಯೊಟಾ ಆವೃತ್ತಿಯಲ್ಲಿ ಹೆಚ್ಚು ಕಾಲ ಮಾರಾಟವಾದ ವಾಹನಗಳಲ್ಲಿ ಒಂದಾಗಿದೆ. ಟೊಯೊಟಾ ಕ್ಯಾಮ್ರಿ ಕಾರ್ ಅನ್ನು ಜಯ ಬಚ್ಚನ್ ಅವರು ಸಂಸತ್ತಿಗೆ ತೆರಳಲು ಬಳಸುತ್ತಾರೆ.

Most Read Articles

Kannada
English summary
Amitabh Bachchan family’s range of luxury cars & SUVs; Range Rover to Bentley - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more